News

ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ರಾಜ್ಯದ ಜನತೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಶಾಕ್
ಆರೋಗ್ಯ

ಈ ಕಾರಣಗಳಿಂದ ಮೈಗ್ರೇನ್‌ ತಲೆನೋವು ಬರುತ್ತದೆ..!ಇದರ ನಿವಾರಣೆ ಹೇಗೆ?ತಿಳಿಯಲು ಈ ಲೇಖನ ಓದಿ…

2906

ಮೈಗ್ರೇನ್‌ ಅನ್ನುವುದು ಒಂದು ಸಾಮಾನ್ಯ ರೀತಿಯ ತಲೆನೋವು. ವಾಕರಿಕೆ, ವಾಂತಿ ಅಥವಾ ಬೆಳಕಿಗೆ ಸಂವೇದನಾಶೀಲತೆ ಇರುವುದು ಇತ್ಯಾದಿ ರೋಗಲಕ್ಷಣಗಳ ಜತೆಗೆ ಇದು ಕಾಣಿಸಿಕೊಳ್ಳಬಹುದು. ಅನೇಕ ಜನರಲ್ಲಿ  ತಲೆಯ ಒಂದೇ ಬದಿಯಲ್ಲಿ ಇರಿಯುವಂತಹ ನೋವು ಕಾಣಿಸಿಕೊಳ್ಳಬಹುದು.

ಹಾಗೆಂದು ಎಲ್ಲಾ ತಲೆನೋವುಗಳೂ ಮೈಗ್ರೇನ್ ಅಲ್ಲ. ದೃಷ್ಟಿದೋಷ, ನೆಗಡಿಗೆ ಸಂಬಂಧಿಸಿದ ತೊಂದರೆಗಳು, ಜ್ವರ ಇತ್ಯಾದಿ ಕಾರಣಗಳಿಂದಲೂ ತಲೆನೋವು ಬರುತ್ತದೆ. ಆದರೆ ಅದು ಮೈಗ್ರೇನ್ ಅಲ್ಲ. ಆದರೆ ಮೈಗ್ರೇನ್ ತಲೆನೋವು ಅತ್ಯಂತ ಸಾಮಾನ್ಯವಾದದ್ದು.

ಮೈಗ್ರೇನ್ ಎಂದರೇನು ?

ಕೆಲವು ಕಾರಣಗಳಿಂದ ಒಂದು ವ್ಯಕ್ತಿಯ ತಲೆಯೊಳಗಿನ ರಕ್ತನಾಳಗಳ ಗಾತ್ರದಲ್ಲಿ ಅಸ್ತಿರತೆಯುಂಟಾಗಿ, ಅವು ಮೊದಲು ಸಂಕುಚಿತವಾಗಿ ನಂತರ ವಿಕಸಿತವಾಗುತ್ತದೆ.ಆಗ ರಕ್ತನಾಳಗಳಿಗೆ ಸಂಬಂಧಿಸಿದ ಸೂಕ್ಷ್ಮ ನರಗಳು ಉದ್ರೇಕಗೊಂಡು ತಲೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ, ಅದೇ ಮೈಗ್ರೇನ್.

ಕಾರಣಗಳು, ಸಂದರ್ಭ ಮತ್ತು ಅಪಾಯಕಾರಿ ಅಂಶಗಳು:

ಸಾಮಾನ್ಯವಾಗಿ ಮೈಗ್ರೇನ್‌ ತಲೆನೋವು 10 ರಿಂದ 45 ವಯಸ್ಸಿನ ನಡುವೆ ಕಾಣಿಸಿಕೊಳ್ಳುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಜೀವನದ ಅಂತಿಮ ಹಂತಗಳಲ್ಲಿಯೂ ಸಹ ಕಾಣಿಸಿಕೊಳ್ಳಬಹುದು.ಮೈಗ್ರೇನ್‌ ಪುರುಷರಿಗಿಂತಲೂ ಮಹಿಳೆಯರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಮೈಗ್ರೇನ್‌ ತಲೆನೋವು ವಂಶಪರಂಪರಾಗತವಾಗಿ ಬರಬಹುದು. ಕೆಲವು ಮಹಿಳೆಯರಲ್ಲಿ , ಎಲ್ಲರಲ್ಲಿಯೂ ಅಲ್ಲ , ಅವರು ಗರ್ಭಿಣಿ ಆಗಿರುವಾಗ ಮೈಗ್ರೇನ್‌ ಕಾಣಿಸಿಕೊಳ್ಳಬಹುದು.

ಇದಕ್ಕೆ ನಿರ್ಧಿಷ್ಟ ಕಾರಣವನ್ನು ಹೇಳಲಾಗದಿದ್ದರೂ ಈ ಕೆಲವು ಸಾಮಾನ್ಯ ಕಾರಣಗಳನ್ನು ಹೇಳಬಹುದು.
1  ಹೆಚ್ಚು ಕೆಲಸದಿಂದಾಗಿ ಮಾನಸಿಕ ಒತ್ತಡ ಇರುವ ಸಾಫ್ಟ್ವೇರ್ ಎಂಜಿನಿಯರುಗಳಿಗೆ ಇದು ಸಾಮಾನ್ಯ. ಅವರಿಗೆ ದಿನದ ಹೆಚ್ಚುಕಾಲ  ಒತ್ತಡದ ಕೆಲಸ ಮತ್ತು ನಿದ್ರೆ ಕಡಿಮೆ, ಅನಿಯಮಿತ ಆಹಾರದ ಸೇವನೆ ಇರುತ್ತದೆ.

2 . ಮಾನಸಿಕ ಒತ್ತಡಗಳಾದ ಕೋಪ,ಚಿಂತೆ, ಖಿನ್ನತೆ,ಗಾಬರಿಗಳಿಂದ ತಲೆನೋವು ಉದ್ರೇಕವಾಗಬಹುದು.

3 .ಆಹಾರ ಸೇವನೆಯಿಂದ ವ್ಯತ್ಯಾಸವಾದ ಹಸಿವೆ, ಮದ್ಯ ಸೇವನೆ, ಕಡಿಮೆ ನೀರು ಕುಡಿಯುವುದರಿನ್ದಲೂ ತಲೆನೋವು ಉದ್ರೇಕವಾಗುತ್ತದೆ.

4 . ನಿದ್ರೆ ಮಾತ್ರೆ ಸೇವನೆ,  ಬಿ. ಪಿ.,  ಹಲ್ಲು ನೋವು, ಕಣ್ಣಿನ ತೊಂದರೆ, ತಂಬಾಕು ಅಥವಾ ಸಿಗರೇಟು ಸೇವನೆ, ಗರ್ಭನಿರೋಧಕ ಮಾತ್ರೆ, ಮೂಗಿನ ಉಸಿರಾಟದ ತೊಂದರೆ, ಸಂಸ್ಕರಿಸದ ಆಹಾರ ಸೇವನೆ, ಅತಿ ಮುಖ್ಯವಾಗಿ ನಿದ್ರಾಹೀನತೆ ಮುಂತಾದುವುಗಳಿಂದ ಸಹ ತಲೆನೋವು ಉದ್ರೇಕಗೊಳ್ಳಬಹುದು.

5 . ಹೆಚ್ಚು ಕಾಲ ಬಿಸಿಲಿನಲ್ಲಿ ಇರುವುದು, ದೀರ್ಘಕಾಲ ಪ್ರಯಾಣ ಮಾಡುವುದು, ಮದುವೆ ಅಥವಾ ಇತರೆ ಗಲಾಟೆ ಇರುವ ಸಮಾರಂಭದಲ್ಲಿ ಹೆಚ್ಚು ಹೊತ್ತು ಭಾಗವಹಿಸುವುದು, ಕೆಲವರಿಗೆ  ಹೆಚ್ಚಾಗಿ ಓದುವುದು, ಹೆಚ್ಚು ಕಾಲ ಸಿನೆಮಾ / ಟಿ. ವಿ, ನೋಡುವುದು ಇವುಗಳಿಂದ ತಲೆನೋವು ಉದ್ರೇಕಗೊಳಬಹುದು.

6 . ಕೆಲವು ಸ್ತ್ರೀಯರಿಗೆ ಋತುಚಕ್ರದ ಏರುಪೇರುಗಳಿಂದ ತಲೆನೋವು ಉದ್ರೇಕಗೊಳ್ಳಬಹುದು.

ಮೈಗ್ರೇನ್  ರೋಗಲಕ್ಷಣಗಳು:

ದೃಷ್ಟಿ ಅಸ್ತವ್ಯಸ್ತಗೊಳ್ಳುವುದು, ಅಥವಾ ಕಣ್ಣಿನ ಬದಿಗಳಲ್ಲಿ ಬೆಳಕಿನ ಬಿಂಬಗಳು ಅಥವಾ ಪ್ರಭಾವಳಿ ಸುತ್ತುತ್ತಿರುವಂತೆ ಅನ್ನಿಸುವುದನ್ನು  ಮೈಗ್ರೇನ್‌ ಬರುತ್ತಿದೆ ಎನ್ನುವುದರ ಎಚ್ಚರಿಕೆಯ ಸೂಚನೆ ಎಂಬುದಾಗಿ ಪರಿಗಣಿಸಲಾಗುತ್ತದೆ. ಬೆಳಕಿನ ಬಿಂಬಗಳು ಒಂದು ಅಥವಾ ಎರಡೂ ಕಣ್ಣಿನ ಬದಿಗಳಲ್ಲಿ ಕಾಣಿಸಿಕೊಳ್ಳಬಹುದು ಮತ್ತು ಕೆಳಗೆ ಹೇಳುವ ಒಂದು ಅಥವಾ ಎಲ್ಲ ರೋಗಲಕ್ಷಣಗಳ ಜತೆಗೆ ಕಾಣಿಸಿಕೊಳ್ಳಬಹುದು.

ಕಣ್ಣಿನಲ್ಲಿ ತಾತ್ಕಾಲಿಕವಾಗಿ ಆಂಶಿಕ ಕುರುಡುತನ ಅಥವಾ ಕಣ್ಣಿನ ಎದುರು ಕಪ್ಪು ಚುಕ್ಕೆಗಳು ಗೋಚರಿಸುವುದು,ದೃಷ್ಟಿ  ಮಬ್ಟಾಗುವುದು,ಕಣ್ಣು ನೋವು,ಕಣ್ಣಿನ ಸುತ್ತಲೂ ನಕ್ಷತ್ರಗಳು ಅಥವಾ ಅಂಕುಡೊಂಕಾದ ಗೆರೆಗಳು ಗೋಚರಿಸುವುದು

ಕೊಳವೆಯೊಳಗಿನಿಂದ ನೋಡಿದಂತೆ ದೃಶ್ಯಗಳು ಅರೆಬರೆ ಕಾಣಿಸುವುದು (ಟನೆಲ್‌ಷನ್‌-ಕಣ್ಣಿನ ಮುಂಭಾಗದ ದೃಶ್ಯಗಳು ಮಾತ್ರವೇ ಗೋಚರಿಸಿ ಬದಿಗಳಲ್ಲಿನ ದೃಶ್ಯ ಕಾಣಿಸದೆಯೇ ಇರುವುದು)

ಮೈಗ್ರೇನ್‌ ಇರುವ ಎಲ್ಲ ವ್ಯಕ್ತಿಗಳಿಗೂ ಬೆಳಕಿನ ಪುಂಜ ಕಾಣಿಸದೆ ಇರಬಹುದು. ಇಂತಹ ಬೆಳಕಿನ ಪುಂಜ ಕಾಣಿಸಿಕೊಳ್ಳುವವರಲ್ಲಿ ತಲೆನೋವು ಕಾಣಿಸಿಕೊಳ್ಳುವುದಕ್ಕೆ ಸುಮಾರು 10-15 ನಿಮಿಷ ಮೊದಲು ಇದು ಕಾಣಿಸಿಕೊಳ್ಳಬಹುದು.  ಹಾಗಿದ್ದರೂ ಸಹ ಅದು ಕೆಲವೇ ನಿಮಿಷಗಳಿಗೆ ಮೊದಲು ಅಥವಾ 24 ಗಂಟೆಗಳಿಗೂ ಮೊದಲು ಕಾಣಿಸಿಕೊಳ್ಳಬಹುದು. ಬೆಳಕಿನ ಪುಂಜ ಕಾಣಿಸಿಕೊಂಡ ಅನಂತರ ಯಾವಾಗಲೂ ತಲೆನೋವು ಬಂದೇ ಬರುತ್ತದೆ ಎಂದು ಹೇಳುವಂತಿಲ್ಲ.

ಮೈಗ್ರೇನ್‌ ತಲೆನೋವು ಬಹಳ ಸಣ್ಣದಾಗಿ ಇರಬಹುದು ಅಥವಾ ತೀವ್ರ ರೂಪದಲ್ಲಿಯೂ ಬಾಧಿಸಬಹುದು. ನೋವು ಕಣ್ಣಿನ ಹಿಂಭಾಗದಲ್ಲಿ ಅಥವಾ ಕತ್ತು ಮತ್ತು ತಲೆಯ ಹಿಂಭಾಗದಲ್ಲಿ ಕಾಣಿಸಿಕೊಳ್ಳಬಹುದು. ಕೆಲವು ರೋಗಿಗಳಲ್ಲಿ  ಪ್ರತಿಯೊಂದು ಬಾರಿಯೂ ತಲೆನೋವು ಒಂದೇ ಭಾಗದಲ್ಲಿ ಕಾಣಿಸಿಕೊಳ್ಳಬಹುದು. ತಲೆನೋವು ಸಾಮಾನ್ಯವಾಗಿ ಈ ರೀತಿಯಲ್ಲಿ ಇರಬಹುದು.

 

ಬಹಳ ಸಣ್ಣದಾಗಿ ಆರಂಭವಾದ ನೋವು ಕೆಲವೇ ನಿಮಿಷಗಳಲ್ಲಿ ಅಥವಾ ಗಂಟೆಗಳಲ್ಲಿ ತೀವ್ರಗೊಳ್ಳಬಹುದು. 6 ರಿಂದ 48 ಗಂಟೆಗಳ ವರೆಗೂ ಇರಬಹುದು.

ಮೈಗ್ರೇನ್ ನ ನಿವಾರಣೆ :-

1 . ಮೈಗ್ರೇನ್ ತಲೆನೋವು ಬಂದಾಗ ಕೆಲವರಿಗೆ ಯಾವುದಾದರೂ ನೋವು ನಿವಾರಕ ಮಾತ್ರೆಯನ್ನು [ Pain killer ] ತೆಗೆದುಕೊಂಡರೆ ಸ್ವಲ್ಪ ಸಮಯದ ನಂತರ ನೋವು ಕಡಿಮೆಯಾಗುತ್ತದೆ.

2 . ಇನ್ನು ಕೆಲವರಿಗೆ ಏನನ್ನೂ ಉಪಯೋಗಿಸದೆ ನಿಷ್ಯಬ್ದವಾದ ಕೊಠಡಿಯಲ್ಲಿ ಕೆಲವು ಕಾಲ ವಿಶ್ರಾಂತಿ ತೆಗೆದುಕೊಳ್ಳುವುದರಿಂದಲೇ ತಲೆನೋವು ಕಡಿಮೆಯಾಗುತ್ತದೆ.

3 . ಇದಲ್ಲದೆ ಜೀವನ ಶೈಲಿಯನ್ನ್ನು ಬದಲಾಯಿಸಿಕೊಳ್ಳುವುದರಿಂದ ಈ ತೆರನ ತಲೆನೋವನ್ನು ನಿಯಂತ್ರಿಸಿಕೊಳ್ಳಬಹುದು.

  • ಸರಿಯಾದ ಸಮಯಕ್ಕೆ ನಿದ್ರೆ ಮಾಡುವುದು.
  • ನಿತ್ಯ ವ್ಯಾಯಾಮ.
  • ಸರಿಯಾದ ಊಟದ ಕ್ರಮ. ಪೌಷ್ಟಿಕ ಆಹಾರದ ಸೇವನೆ.
  • ತಂಬಾಕು, ಮದ್ಯ ಸೇವನೆಯಿಂದ ದೂರ ಇರುವುದು. ಕಾಫಿ ಕುಡಿಯುವುದನ್ನು ಕಡಿಮೆ ಮಾಡುವುದು.
  • ಜೀವನದ ಬಗ್ಯೆ ಸಕಾರಾತ್ಮಕ ಮನೋಭಾವ.

ಮುನ್ಸೂಚನೆಗಳು:
ಚಿಕಿತ್ಸೆಗೆ ಪ್ರತಿಯೊಬ್ಬನೂ ಸ್ಪಂದಿಸುವ ರೀತಿ ಹಾಗೂ ಪ್ರಮಾಣ ಭಿನ್ನ-ಭಿನ್ನವಾಗಿರುತ್ತವೆ. ಕೆಲವರಿಗೆ ಸ್ವಲ್ಪಮಟ್ಟಿನ ಚಿಕಿತ್ಸೆಯಿಂದ ಅಥವಾ ಚಿಕಿತ್ಸೆಯೇ ಇಲ್ಲದೆ ತಲೆನೋವು ಕಡಿಮೆ ಆಗಬಹುದು, ಇನ್ನು ಕೆಲವರಿಗೆ ಅನೇಕ ಔಷಧಿಗಳನ್ನು ಉಪಯೋಗಿಸಬೇಕಾಗಿ ಬರಬಹುದು ಅಥವಾ ಆಸ್ಪತ್ರೆಗೂ ಸೇರಬೇಕಾಗಬಹುದು.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ರಾಯಲ್ ಆಗಿದೆ ‘Bigg Boss House’; ಇದನ್ನೊಮ್ಮೆ ನೋಡಿ,.!

    ನವದೆಹಲಿ: ಸಲ್ಮಾನ್ ಖಾನ್ ಅವರ ಅತ್ಯಂತ ವಿವಾದಾತ್ಮಕ ರಿಯಾಲಿಟಿ ಶೋ ‘ಬಿಗ್ ಬಾಸ್ 13’ ಪ್ರಾರಂಭಿಸಲು ಕೇವಲ ಒಂದು ವಾರ ಬಾಕಿ ಇದೆ. ಈ ಬಾರಿ ಮೊದಲ ಬಾರಿಗೆ ಪ್ರದರ್ಶನವು ಮುಂಬೈಗೆ ಸ್ಥಳಾಂತರಗೊಂಡಿದೆ. ಆದರೆ ಈ ಬಾರಿ ಸೆಟ್ ಸಂಪೂರ್ಣವಾಗಿ ವಿಭಿನ್ನವಾಗಿದೆ ಮತ್ತು ಕಳೆದ 12 ಋತುಗಳಿಗಿಂತ ರಾಯಲ್ ಆಗಿದೆ. ಅಂದಹಾಗೆ, ‘ಬಿಗ್ ಬಾಸ್’ ತಯಾರಕರು ಪ್ರದರ್ಶನ ಪ್ರಾರಂಭವಾಗುವವರೆಗೂ ಪ್ರದರ್ಶನವನ್ನು ಅಚ್ಚರಿಗೊಳಿಸುವಂತೆ ಮಾಡಲು ಪ್ರಯತ್ನಿಸುತ್ತಾರೆ. ಆದರೆ ನೂತನ ಬಿಗ್ ಬಾಸ್ ನ ಕೆಲವು ಇನ್ಸೈಡ್ ಫೋಟೋಗಳನ್ನು ನಾವು…

  • ದೇಶ-ವಿದೇಶ

    “ಭಾರತೀಯ ಸೇನೆ”ಗೆ ಶೀಘ್ರವೇ ಬರಲಿದೆ “ಸ್ವದೇಶಿ ಬುಲೆಟ್‌ ಪ್ರೂಫ್‌ ಜಾಕೆಟ್‌”………

    ಪ್ರಧಾನಿ ನರೇಂದ್ರ ಮೋದಿ ಅವರು ‘ಮೇಕ್‌ ಇನ್‌ ಇಂಡಿಯಾ’ ಮಂತ್ರ ಜಪಿಸುತ್ತಿರುವಾಗಲೇ ಬಂಗಾಳಿ ವಿಜ್ಞಾನಿಯೊಬ್ಬರು ಕಡಿಮೆ ಬೆಲೆಯ, ಅತ್ಯಂತ ಕಡಿಮೆ ತೂಕದ

  • ರೆಸಿಪಿ

    ಮನೆಯಲ್ಲೇ ಕಾಲ್ ಸೂಪ್ ಮಾಡುವ ಸಿಂಪಲ್ ವಿಧಾನ…

    ಪ್ರತಿ ಸಂಡೇ, ಚಿಕನ್, ಮಟನ್, ಫಿಶ್ ತಿನ್ನುತ್ತೀರಾ. ಹೀಗಾಗಿ ಈ ವಾರ ಆರೋಗ್ಯಕ್ಕೆ ಉತ್ತಮವಾದ ಕಾಲ್ ಸೂಪ್ ಮಾಡಿ ಸವಿಯಿರಿ. ಮಕ್ಕಳಿಂದ ವೃದ್ಧರವೆಗೂ ಕಾಲ್ ಸೂಪನ್ನು ಕುಡಿಯುತ್ತಾರೆ. ಆದರೆ ಮಕ್ಕಳು ಕುಡಿಯಲು ಇಷ್ಟಪಡುವುದಿಲ್ಲ. ಅದಕ್ಕೆ ಮಸಲಾ ಹಾಕಿ ರುಚಿಕರವಾಗಿ ಮಾಡಿಕೊಟ್ಟರೆ ಕುಡಿಯುತ್ತಾರೆ. ಆದ್ದರಿಂದ ಎರಡು ವಿಧಾನದಲ್ಲಿ ಕಾಲ್ ಸೂಪ್ ಮಾಡುವ ವಿಧಾನ ನಿಮಗಾಗಿ… ಬೇಕಾಗುವ ಸಾಮಾಗ್ರಿಗಳು 1. ಮೇಕೆ ಕಾಲು – 2, 2. ಈರುಳ್ಳಿ – ಮೀಡಿಯಂ, 3. ಬೆಳ್ಳುಳ್ಳಿ – 2-3 ಎಸಳು4. ಶುಂಠಿ –…

  • ಸುದ್ದಿ

    ಜಗತ್ತಿನಲ್ಲೇ ಅತಿ ದುಬಾರಿ ಡೈವೋರ್ಸ್; ಪತ್ನಿಗೆ 2.4 ಲಕ್ಷ ಕೋಟಿ ರೂ ಪರಿಹಾರ ಕೊಟ್ಟಿದ್ದು ಯಾರು ಗೊತ್ತೇ.??

    ವಿಶ್ವದ ಅತೀದೊಡ್ಡ  ಶ್ರೀಮಂತ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದ ಅಮೇಜಾನ್​​​​ ಸಂಸ್ಥಾಪಕ ಹಾಗೂ ಸಿಇಒ ಜೆಫ್​​​ ಬೆಜೋಸ್ ಈ ಬಾರಿ 2ನೇ ಸ್ಥಾನಕ್ಕಿಳಿದಿದ್ದಾರೆ. 2019-20 ವರ್ಷದ ಮೂರನೇ ತ್ರೈಮಾಸಿಕದಲ್ಲಿ ಅಮೇಜಾನ್ ಕಂಪನಿಯ ನಿವ್ವಳ ಲಾಭಾಂಶ ಕಡಿಯಾಗಿದೆ. ಹಾಗಾಗಿ ಜೆಫ್​​​ ಬೆಜೋಸ್ ಒಟ್ಟು ಆಸ್ತಿ ಮೌಲ್ಯ 103.9 ಬಿಲಿಯನ್ ಡಾಲರ್​​ಗೆ ಇಳಿಕೆಯಾಗಿದ್ದು, 2ನೇ ಸ್ಥಾನಕ್ಕಿಳಿದಿದ್ದಾರೆ. ಇದೀಗ ವಿಶ್ವದ ಅತ್ಯಂತ ದೊಡ್ಡ ಶ್ರೀಮಂತ ಸ್ಥಾನವನ್ನು ಮತ್ತೆ ಮೈಕ್ರೋಸಾಫ್ಟ್​​​ ಸಹ ಸಂಸ್ಥಾಪಕ ಬಿಲ್​​ ಗೇಟ್ಸ್​ ಅಲಂಕರಿಸಿದ್ದಾರೆ. ಫೋರ್ಬ್ಸ್​​​ ಬಿಡುಗಡೆ ಮಾಡಿರುವ ಜಗತ್ತಿನ ಶ್ರೀಮಂತರ…

  • inspirational

    ಸ್ಮಾರ್ಟ್‌ಫೋನ್‌ ಬಳಕೆಯಿಂದಾಗಿ ಗಂಡ-ಹೆಂಡತಿ ಮಧ್ಯೆ ಬಿರುಕು

    ಇಂದಿನ ಸ್ಮಾರ್ಟ್‌ಫೋನ್‌ಗಳೇ ಗಂಡ-ಹೆಂಡತಿಯ ನಡುವೆ ದೂರ ಹೆಚ್ಚಿಸುತ್ತಿವೆಯೇ? ಇತ್ತೀಚಿನ ವರ್ಷಗಳಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಬೆಳಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೂ ಮೊಬೈಲ್ ಕೈಯಲ್ಲೇ ಇರುತ್ತದೆ. ಆದರೆ ಇದೇ ಸ್ಮಾರ್ಟ್‌ಫೋನ್‌ಗಳು ಈಗ ಕುಟುಂಬ ಸಂಬಂಧಗಳ ಮೇಲೆ, ವಿಶೇಷವಾಗಿ ಗಂಡ-ಹೆಂಡತಿ ಸಂಬಂಧಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂಬ ಆತಂಕಕಾರಿ ವರದಿಗಳು ಹೊರಬಿದ್ದಿವೆ. ಭಾರತದಲ್ಲಿ ನಡೆದ ಹಲವು ಅಧ್ಯಯನಗಳು ದಾಂಪತ್ಯ ಜೀವನದಲ್ಲಿ “ಮೊಬೈಲ್ ಅಂತರ” ವೇಗವಾಗಿ ಹೆಚ್ಚುತ್ತಿದೆ ಎಂದು ಸೂಚಿಸುತ್ತಿವೆ. ಏನು ಹೇಳುತ್ತಿವೆ ಅಧ್ಯಯನಗಳು? ಭಾರತದಲ್ಲಿ…

  • ರಾಜಕೀಯ

    ಪರಸ್ಪರ ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಸಂಸದ ಹಾಗೂ ಶಾಸಕ!ಈ ಸುದ್ದಿ ನೋಡಿ

    ಇತ್ತೀಚಿನ ದಿನಗಳಲ್ಲಿ ರಾಜಕೀಯ ಎಂಬುದು ಎಷ್ಟರ ಮಟ್ಟಿಗೆ ಹಾಳೆದ್ದು ಹೋಗಿದೆ ಎಂದರೆ ಜನಪ್ರತಿನಿಧಿಗಳು ತಮ್ಮ ಘನತೆ ಗಾಂಭೀರ್ಯ , ಗೌರವ ಜವಾಬ್ದಾರಿಗಳನ್ನು ಮರೆತು ಸಾರ್ವಜನಿಕವಾಗಿ ಕೀಳು ವರ್ತನೆ ತೋರಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕರ್ನಾಟಕದ ಕಾಂಗ್ರೆಸ್ ಶಾಸಕರು ಹೊಡೆದಾಡಿಕೊಂಡು ಸುದ್ದಿಯಾಗಿದ್ದರು. ಈಗ ಬಿಜೆಪಿಯಲ್ಲಿ ಅಂತಹದೇ ಘಟನೆ ನಡೆದಿದೆ. ಉತ್ತರ ಪ್ರದೇಶದಲ್ಲಿ ಆಡಳಿತ ಪಕ್ಷವಾಗಿರುವ ಬಿಜೆಪಿ ತಲೆ ತಗ್ಗಿಸುವಂತಹ ಕೆಲಸವನ್ನು ಬಿಜೆಪಿ ಸಂಸದ ಹಾಗೂ ಶಾಸಕ ಮಾಡಿದ್ದಾರೆ. ಇವರಿಬ್ಬರೂ ಪರಸ್ಪರ ಚಪ್ಪಲಿಯಲ್ಲಿ ಹೊಡೆದಾಡಿಕೊಂಡು ತಮ್ಮ ಮಾನವನ್ನು ಹರಾಜು ಹಾಕಿಕೊಳ್ಳುವ…