ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸರಹ ಆ್ಯಪ್ ಎಂಬ ಹೆಸರಿನ ಈ ಅಪ್ಲಿಕೇಷನ್ ಈಗಂತೂ ತುಂಬಾ ಟ್ರೆಂಡ್ ಕ್ರಿಯೇಟ್ ಮಾಡಿದೆ. ಇದರ ಮೂಲಕ ಯಾರಿಗೂ ನೀವು ರಹಸ್ಯ ಮೆಸೇಜ್ ಕಳುಹಿಸಬಹುದು ಅಗಿದೆ. ಜೈನ್ ಅಲಾಬ್ದೀನ್ ತೌಫಿಕ್ ಎಂಬ ಸೌದಿಅರೇಬಿಯಾದ ವ್ಯಕ್ತಿ ತಯಾರಿಸಿರುವ ಅಪ್ಲಿಕೇಷನ್ ಇದಾಗಿದೆ .
ಈ ಸರಹಾಹ್ ಆಪ್ ಡೌನಲೋಡ್ ಮಾಡಿಕೊಂಡು ಐಡಿ ಕ್ರಿಯೇಟ್ ಮಾಡಲು ನಿಮ್ಮಲ್ಲಿ “ಜಿ ಮೈಲ್ ಐಡಿ ಪಾಸ್ವರ್ಡ್ “ನ ಅವಶ್ಯಕತೆಯಿದೆ .ಪೇಸಬುಕ್ಕಿನ ರೀತಿ ಇಲ್ಲಿಯೂ ಪ್ರೋಫೈಲ್ ಫೋಟೋ ಹಾಕಬಹುದು.
ನಂತರ ನೀವು ಯಾರ ಐಡಿಗೆ ಹೋಗಿ ಮೆಸೇಜ್/ಕಾಮೆಂಟ್ ಹಾಕಿದರೂ ಸಹ ಅದು ಮೆಸೇಜ್/ಕಾಮೆಂಟ್ ಹಾಕಿದ ವ್ಯಕ್ತಿಯ ಮಾಹಿತಿ ನಿಮಗೆ ಏನೇನೂ ತೋರಿಸುವುದಿಲ್ಲ ! ರಿಪ್ಲೇಕೂಡ ಮಾಡಲಾಗದು. ಮೆಸೇಜ್ ಬಂದಿದೆಯಷ್ಟೇ ಎನ್ನುತ್ತದೆ.
ಆದ್ರೆ ನೀವು ಕಳುಹಿಸುವ ಸಂದೇಶಗಳು ಸೀಕ್ರೆಟ್ ಆಗಿ ಇರುತ್ತೆ, ಯಾರಿಗೂ ಗೊತ್ತಿರುವುದಿಲ್ಲ ಎಂದು ವಾದಿಸುತ್ತಿದ್ದ ಈ ಆಪ್ ವಾಸ್ತವದಲ್ಲಿ ಬಳಕೆದಾರರ ಕುರಿತು ಮಾಹಿತಿಯನ್ನು ಸಂಗ್ರಹಿಸಿ ಸರ್ವರ್‍ನಲ್ಲಿ ಅಪ್‍ಲೋಡ್ ಮಾಡುವ ಕೆಲಸವನ್ನು ಮಾಡುತ್ತಿದೆ.
ಹಲುವು ವರದಿಗಳ ಪ್ರಕಾರ ಸಾರ ಆಪ್ ನಿಮ್ಮ ಎಲ್ಲ ಇಮೇಲ್ ಸಂಪರ್ಕ ಮತ್ತು ಫೋನ್ ಸಂಪರ್ಕದ ಮಾಹಿತಿಯನ್ನು ಸರ್ವರ್‍ಗೆ ಹಾಕಿಡುತ್ತದೆ. ಬಿಶಪ್ ಪೋಕ್ಸ್‍ನ ಭದ್ರತಾ ವಿಶ್ಲೇಷಕಿ ಝಚರಿ ಜೂಲಿಯನ್ ಈ ಆಪ್ ನ ಬಗ್ಗೆ ವಿವರಿಸಿದ್ದಾರೆ. ಸರಹದ ಅಭಿವೃದ್ಧಿ ಮಾಡಿದ ಝೈನ್ ಅಲ್ ಅಬಿದಿನ್ ಕೂಡ ಇದನ್ನು ಒಪ್ಪಿಕೊಂಡಿದ್ದಾರೆ.

ಸರಹ ಎಂಬ ಅರೇಬಿಕ್ ಪದದ ಅರ್ಥ ಪ್ರಾಮಾಣಿಕತೆ ಎಂದು. ನಿಮ್ಮ ಸಂದೇಶಗಳು ಯಾರಿಗೂ ತಿಳಿಯುವುದಿಲ್ಲ ಎಂದು ಹೇಳಿ, ತಾನು ಪ್ರಾಮಾಣಿಕ ಎಂದು ಹೇಳಿಕೊಂಡಿತ್ತು. ಆದರೆ ಆಪ್‍ನ ಪ್ರೈವಸಿ ಪಾಲಿಸಿಯಲ್ಲಿ ಆಪ್ ಬಳಕೆದಾರರ ಡಾಟ ಸ್ಟೋರ್ ಮಾಡುವುದಿಲ್ಲ ಎಂದು ಹೇಳಿಕೊಂಡಿತ್ತು. ಸರಹ ಆಪ್ ಆಪಲ್ ಮತ್ತು ಆಂಡ್ರಾಯಿಡ್ ಎರಡು ಫೋನ್‍ಗಳ ಬಳಕೆದಾರರ ಕುರಿತ ಮಾಹಿತಿಯನ್ನು ಸಂಗ್ರಹಿಸಿಡುತ್ತಿದೆ. ಹಾಗಾಗಿ ತನ್ನ ಪ್ರಾಮಾಣಿಕತಣವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ.

ಹೀಗಾಗಿ ನೀವು ಈ ಆಪ್ ಮೂಲಕ ಕಳುಹಿಸುವ ಪ್ರೇಮ ಸಂದೇಶಗಳು, ಬೈಗುಳ ಸಂದೇಶಗಳು ಕಳುಹಿಸಿ ಅಥವಾ ಕಳುಹಿಸದೇ ಇರೀ, ನಿಮ್ಮ ಹೆಸರು, ವಿಳಾಸಗಳು ಬಹಿರಂಗಗೊಳ್ಳುವ ಸೂಚನೆಗಳು ಇವೆ. ಇದೆಲ್ಲಾ ಈ ಸರಹ ಆಪ್ ಅಭಿವ್ರುದ್ದಿಪಡಿಸುವವರ ಮೇಲೆ ಅವಲಂಬಿತವಾಗಿರುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಗರ್ಭಿಣಿ ಸ್ತ್ರೀಯರು ಶಾಂಪೂ, ಹೇರ್ ಕಂಡೀಶನರ್ ಮತ್ತು ಡಿಟರ್ಜೆಂಟ್ ಅತಿಯಾಗಿ ಬಳಸುವುದರಿಂದ ಹುಟ್ಟುವ ಮಕ್ಕಳಿಗೆ ಕೆಲ ನ್ಯೂನತೆಗಳು ಕಾಣಿಸಿಕೊಳ್ಳುತ್ತವೆ ಎಂದು ನೂತನ ಅಧ್ಯಯನವೊಂದು ತಿಳಿಸಿದೆ.
ಲಾಸ್ ಏಂಜಲೀಸ್ ನ ನ್ಯಾಯಾಲಯವೊಂದರಲ್ಲಿ 71 ವರ್ಷದ ಮಹಿಳೆ, ನ್ಯಾನ್ಸಿ ಕ್ಯಾಬಿಬಿ ಎಂಬಾಕೆಗೆ ಬಹುದೊಡ್ಡ ಜಯ ಲಭಿಸಿದೆ. ಕಳೆದೆರಡು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದನ್ಯಾನ್ಸಿ ವಿರುದ್ಧ ಪ್ರಸಿದ್ಧ ಫಾರ್ಮಾಸ್ಯುಟಿಕಲ್ ಹಾಗೂ ಗ್ರಾಹಕರ ಫೇವರಿಟ್ ಪ್ರಾಡಕ್ಸ್ ಜಾನ್ಸನ್ ಆ್ಯಂಡ್ ಜಾನ್ಸನ್. ಕಂಪೆನಿಗೆ ಹಿನ್ನಡೆಯಾಗಿದೆ. ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ 40.3 ಮಿಲಿಯನ್ ಡಾಲರ್ ಅಂದರೆ ಸುಮಾರು . 2,86,00,00,000[286 ಕೋಟಿ]ರೂಪಾಯಿ ಮೊತ್ತವನ್ನು ನ್ಯಾನ್ಸಿಗೆ ಪರಿಹಾರವಾಗಿ ನೀಡಬೇಕೆಂದು ಕಂಪೆನಿಗೆ ಅದೇಶಿಸಿದೆ…. 2017ರಲ್ಲಿ ಕಂಪೆನಿ ವಿರುದ್ಧ ಕೇಸ್ ದಾಖಲು… ನ್ಯಾನ್ಸಿ ಕಂಪೆನಿ ವಿರುದ್ಧ…
ಕ್ರೀಡಾ ಮತ್ತು ಕ್ರೀಡಾಕೂಟದಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎಂದು ಅಧಿಕೃತವಾಗಿ ಕರೆಯಲ್ಪಡುವ ರಾಜೀವ್ ಗಾಂಧಿ ಖೇಲ್ ರತ್ನ, ಇದು ಭಾರತದ ಗಣರಾಜ್ಯದ ಅತ್ಯುನ್ನತ ಕ್ರೀಡಾ ಗೌರವವಾಗಿದೆ. 1984 ರಿಂದ 1989 ರವರೆಗೆ ಕಚೇರಿಯಲ್ಲಿ ಸೇವೆ ಸಲ್ಲಿಸಿದ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೆಸರನ್ನು ಈ ಪ್ರಶಸ್ತಿಗೆ ಇಡಲಾಗಿದೆ. ಇದನ್ನು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ವಾರ್ಷಿಕವಾಗಿ ನೀಡಲಾಗುತ್ತದೆ. ಸ್ವೀಕರಿಸುವವರನ್ನು (ಗಳು) ಸಚಿವಾಲಯವು ರಚಿಸಿದ ಸಮಿತಿಯಿಂದ ಆಯ್ಕೆಮಾಡಲಾಗುತ್ತದೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ…
ಜನಪ್ರಿಯ ರಿಯಾಲಿಟಿ ಶೋ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಮತ್ತೊಮ್ಮೆ ಕೆಟ್ಟ ಕಾರಣಕ್ಕೆ ಸುದ್ದಿಯಾಗಿದ್ದು, ಶೋಗೆ ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಬಂದಿದ್ದ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ ಬಿಗ್ ಬಾಸ್ ಮನೆಯಲ್ಲೂ ಕಿರಿಕ್ ಮಾಡಿಕೊಂಡು ಹೊರ ಬಂದಿದ್ದಾರೆ.
ಕೇಂದ್ರ ಸರ್ಕಾರ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್’ ನಿಧಿ ಯೋಜನೆಯಡಿ ಸಣ್ಣ ರೈತರಿಗೆ ಇದೇ ತಿಂಗಳಿಂದ ಹಣ ನೀಡಲು ಶುರು ಮಾಡಲಿದೆ. ಈ ಯೋಜನೆಯಡಿ 2 ಹೆಕ್ಟೆರ್ ನಷ್ಟು ಕೃಷಿ ಭೂಮಿ ಹೊಂದಿರುವ ರೈತರ ಖಾತೆಗೆ ಹಣ ಜಮಾ ಆಗಲಿದೆ. ವರ್ಷಕ್ಕೆ 6 ಸಾವಿರ ರೂಪಾಯಿ ಖಾತೆಗೆ ಬರಲಿದೆ. ಮೂರು ಕಂತಿನಲ್ಲಿ ಹಣ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮಾರ್ಚ್ ತಿಂಗಳಿನಲ್ಲಿ ಮೊದಲ ಕಂತಿನ ಹಣ 2000 ರೂಪಾಯಿ ಸಿಗಲಿದೆ. ಆದ್ರೆ ಇದಕ್ಕೆ ಆಧಾರ್ ಕಾರ್ಡ್ ಅನಿವಾರ್ಯವಾಗಿದೆ….
ದೇವರಿಗೆ ತನ್ನ ಬೇಡಿಕೆಗಳನ್ನು ಈಡೇರಿಸುವಂತೆ ಪತ್ರ ಬರೆದ ಭಕ್ತನೊಬ್ಬ ಅದನ್ನು ಹುಂಡಿಯಲ್ಲಿ ಹಾಕಿದ್ದಾನೆ…