ದೇಶ-ವಿದೇಶ

ಉಗ್ರ ಸಂಘಟನೆಯ ಮುಕಂಡನನ್ನು ಅಟ್ಟಾಡಿಸಿ ಕೊಂದ ನಮ್ಮ ಹೆಮ್ಮೆಯ ಭಾರತೀಯ ಸೇನೆ

658

ಭಾರತೀಯ ಸೇನೆ ಶನಿವಾರ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಹಿಜ್ಬುಲ್‍ ಮುಜಾಹಿದ್ದೀನ್ ಮುಖಂಡ ಸಬ್ಜಾರ್‍ ಅಹ್ಮದ್‍ ಸೇರಿದಂತೆ 7 ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿದೆ. ಬುಹ್ರಾನ್‍ ವಾನಿ ನಂತರ ಸಬ್ಜಾರ್ ಅಹ್ಮದ್‍ ಹಿಜ್ಬುಲ್‍ ಸಂಘಟನೆಯನ್ನು ಮುನ್ನಡೆಸುತ್ತಿದ್ದ ಎಂದು ಸೇನಾ ಮೂಲಗಳು ಹೇಳಿವೆ.

ಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್‍ನ ಮನೆಯೊಂದರಲ್ಲಿ ಸಜ್ಬಾರ್‍ ಅಹ್ಮದ್ ಅಲಿಯಾಸ್‍ ಅಬು ಜರ್ರಾರ್ ಅವಿತಿರುವ ಮಾಹಿತಿ ಪಡೆದ ಸೇನಾ ಪಡೆ ಸುತ್ತುವರಿದಿದೆ. ಸಜ್ಬಾರ್ ಜೊತೆ ಪಾಕಿಸ್ತಾನ ಮೂಲದ ವ್ಯಕ್ತಿಯೊಬ್ಬ ಸೇರಿದಂತೆ ಇಬ್ಬರು ಇದ್ದು, ಅವರ ಬಗ್ಗೆ ಸ್ಪಷ್ಟ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಸೇನೆ ಸುತ್ತುವರಿದಿರುವುದನ್ನು ಮನಗಂಡ ಸಬ್ಜಾರ್‍ ಮತ್ತು ಸಂಗಡಿಗರು ಗುಂಡಿನ ದಾಳಿ ನಡೆಸಿದ್ದರಿಂದ ಕೆಲವು ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದಿದ್ದು, ಅಂತಿಮವಾಗಿ ಸೇನೆ ಯಶಸ್ಸು ಸಾಧಿಸಿತು.

ಇತ್ತೀಚೆಗಷ್ಟೇ ಶ್ರೀನಗರಕ್ಕೆ ಸಬ್ಜಾರ್ ಬೇಟಿ ನೀಡಿದ್ದು, ಹುರಿಯತ್ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದು, ಭಾರೀ ಪ್ರಮಾಣದ ದಾಳಿಗೆ ಸಂಚು ರೂಪಿಸಿದ್ದ ಎಂದು ಹೇಳಲಾಗಿದೆ.

ಕಳೆದ ಜುಲೈನಲ್ಲಿ ಬುಹ್ರಾನ್‍ ವಾನಿ ಹತ್ಯೆಯಾದ ನಂತರ ಹಿಜ್ಬುಲ್‍ ಮುಜಾಹಿದ್ದೀನ್ ಸಂಘಟನೆಯ ನೇತೃತ್ವವನ್ನು ಮುಸಾ ವಹಿಸಿಕೊಂಡಿದ್ದ. ಆದರೆ ಮೇ 13ರಂದು ಮುಸಾ ಉಗ್ರರ ಗುಂಪು ನೆರೆದಿದ್ದ. ಇದರಿಂದಾಗಿ ಸಬ್ಜಾರ್ ಸಂಘಟನೆಯ ಸಾರಥ್ಯ ವಹಿಸಿಕೊಂಡಿದ್ದ ಎಂದು ಮೂಲಗಳು ವಿವರಿಸಿವೆ.

ಇದೇ ವೇಳೆ ಶನಿವಾರ ನಡೆದ ಇತರೆ ಕಾರ್ಯಾಚರಣೆಯಲ್ಲಿ 7 ಉಗ್ರರನ್ನು ಹತ್ಯೆ ಮಾಡಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ