ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸ್ವಿಟ್ಜರ್ಲೆಂಡ್ನಲ್ಲಿರುವ ರೈತರು ತಮ್ಮ ಕೃಷಿ ಮೂಲ ಪದ್ದತಿಯನ್ನು ಉತ್ತಮಗೊಳಿಸಲು ಒಂದು ಹೊಸ ವಿಧಾನವೊಂದನ್ನು ಕಂಡುಕೊಂಡಿದ್ದಾರೆ. ಹೌದು, ನೀವು ಈ ವಿಷಯ ಕೇಳಿದ್ರೆ ಶಾಕ್ ಆಗ್ತೀರಾ!
ಏಕೆಂದ್ರೆ ಅವರು ಹೈನುಗಾರಿಕೆಯ ಭಾಗವಾಗಿ, ಹಸುಗಳ ಹೊಟ್ಟೆಯಲ್ಲಿ ದೊಡ್ಡ ಹೋಲ್ಗಳನ್ನು ಮಾಡಿದ್ದಾರೆ.ಸ್ವಿಟ್ಜರ್ಲೆಂಡ್ನಲ್ಲಿರುವ ಕೆಲವು ರೈತರು ಹೀಗೆ ಮಾಡುತ್ತಿರುವುದು ಏಕೆ ಎಂದು ಹಲವು ಜನರಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.
ವಿಜ್ಞಾನಿಗಳು ಈ ಹೋಲ್’ಗಳನ್ನು ಕ್ಯಾನುಲಾಗಳೆಂದು ಕರೆಯುತ್ತಾರೆ. ಕೆಲವು ಹಸುಗಳಿಗೆ ಈ ಕ್ಯಾನುಲಾಗಳನ್ನು ಅಳವಡಿಸಿ ಸಂಶೋಧನೆ ನಡೆಸಲಾಯಿತು. ಇದು ಗೋವಿನ ಆಯುಷ್ಯ ಹೆಚ್ಚಿಸಲು ಮಾಡಲಾಗುತ್ತದೆ.
ವಿಜ್ಞಾನಿಗಳಿಗೆ ಗೋವಿನ ಒಳಭಾಗವನ್ನು ತಪಾಸಿಸಲು ಬಹಳ ಕಷ್ಟ ಆಗುತ್ತದೆ. ಅಂತಹ ವೇಳೆ ಗೊವಿನ ಶರೀರದಲ್ಲಿ ತೂತು ಮಾಡಲಾಗುತ್ತದೆ. ಗೋವಿನ ಹೊಟ್ಟೆ ಹೊರ ಜಗತ್ತಿನೊಂದಿಗೆ ಸಂಬಂಧ ಹೊಂದಿರುತ್ತದೆ. ಈ ತೂತನ್ನು ಒಂದು ಪ್ಲಾಸ್ಟಿಕ್ ರಿಂಗ್ನಿಂದ ಮುಚ್ಚಲಾಗುತ್ತದೆ. ಈ ಸರ್ಜರಿ ನಡೆದು ಒಂದು ತಿಂಗಳಲ್ಲಿ ಗೋವು ಪೂರ್ಣ ಚೇತರಿಸಿಕೊಳ್ಳುತ್ತದೆ.
ಕೆಲವು ಹಸುಗಳಿಗೆ ಈ ಕ್ಯಾನುಲಾಗಳನ್ನು ಅಳವಡಿಸಿ ಸಂಶೋಧನೆ ಮಾಡಲಾಯಿತು. ಇದನ್ನು ಮಾಡುವ ಉದ್ದೇಶ ಏನೆಂದರೆ, ಹಸುವಿನ ಪೌಷ್ಠಿಕಾಂಶದ ಮತ್ತು ಪ್ರಾಣಿಗಳಿಗೆ ಆಹಾರವನ್ನು ಹೇಗೆ ಪ್ರಕ್ರಿಯೆಗೊಳಿಸಲು ರೈತರಿಗೆ ಸಾಧ್ಯವಾಗುತ್ತದೆ.
ಈ ಕ್ಯಾನುಲಾಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ಹಸುವಿನ ಹೊಟ್ಟೆಯ ಭಾಗದಲ್ಲಿ ಮಾಡಲಾಗುತ್ತದೆ. ಹಾಗೂ ಶಸ್ತ್ರ ಚಿಕಿತ್ಸೆ ನಂತರ ಹಸುಗಳಿಗೆ ಕೆಲವು ದಿನಗಳು ರೆಸ್ಟ್ ನೀಡಲಾಗುತ್ತದೆ. ರೆಸ್ಟ್ ಅವಧಿ ಮುಗಿದ ನಂತರ ಇಂತಹ ಹಸುಗಳಿಗೆ ಪರೀಕ್ಷೆ ನಡೆಸಲಾಗುತ್ತದೆ.
1920 ರ ದಶಕದಲ್ಲಿ ಈ ವಿಧಾನವನ್ನು ಮೊಟ್ಟಮೊದಲ ಬಾರಿಗೆ ಪರಿಚಯಿಸಲಾಯಿತು ಮತ್ತು ಇದು ಜಾನುವಾರಗಳ ತಳಿಗಳನ್ನು ಹೆಚ್ಚಿಸಲು ಸಹಾಯಮಾಡುತ್ತದೆ. ಈ ದೊಡ್ಡದಾದ ರಂಧ್ರ ತೆರೆದಂತೆ ಇಡಲು ರಬ್ಬರ್ ಗ್ಯಾಸ್ಕೆಟ್ ಅನ್ನು ಉಪಯೋಗಿಸುತ್ತಾರೆ. ಇದನ್ನು ವಿಶೇಷ ಕ್ಯಾಪ್ನೊಂದಿಗೆ ಮುಚ್ಚಲಾಗುತ್ತದೆ.
ಈ ಕಾರ್ಯವಿಧಾನಗಳಿಂದ ಹಸು ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ, ರೈತರು ಸುಲಭವಾಗಿ ಹಸುಗಳಿಗೆ ಯಾವ ತರವಾದ ಆಹಾರ ಕೊಡಬೇಕು, ಎಷ್ಟು ಮಟ್ಟದಲ್ಲಿ ಕೊಡಬೇಕು ಮತ್ತು ಯಾವ ಆಹಾರ ಕೊಟ್ಟರೆ ಜೀರ್ಣವಾಗುತ್ತದೆ ಎಂಬುದನ್ನು ಸುಲಭವಾಗಿ ತಿಳಿಯಬಹುದು. ಈ ಈ ರಂಧ್ರಗಳಿಂದ ಹಸುಗಳ ಆಹಾರದ ಬಗ್ಗೆ ಅರಿಯಲು ಮತ್ತು ಯಾವ ಆಹಾರ ಕೊಡಬೇಕೆಂದು ತಿಳಿಯಲು ಇದು ರೈತರಿಗೆ ತುಂಬಾ ಸಹಾವಾಗಿದೆ.
ಆದರೆ ಗೋವಿನ ಹೊಟ್ಟೆ ತೂತುಮಾಡುವ ಪ್ರಕ್ರಿಯೆಯನ್ನು PETA ವಿರೋಧಿಸುತ್ತದೆ ಕೂಡಾ. ಆದರೆ ಹೀಗೆ ತೂತು ಮಾಡುವ ಕಾರ್ಯ ಕೆಲವು ವರ್ಷಗಳಿಂದ ಪ್ರಚಲಿತದಲ್ಲಿದೆ. ಕೆಲವರು ಇಂತಹ ಸರ್ಜರಿಯಿಂದ ಗೋವಿಗೆ ಯಾವ ಹಾನಿಯಾಗುವುದಿಲ್ಲ ಎಂದು ಹೇಳುತ್ತಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಂಡ್ಯದ ಹುಡುಗಿ ವರಲಕ್ಷ್ಮಿ ಆಟ-ಪಾಠ ಎಲ್ಲದರಲ್ಲೂ ಸದಾ ಮುಂದು. ಆಶುಭಾಷಣ ಮಾಡುವುದರಲ್ಲಿ ಈಕೆ ಎತ್ತಿದ ಕೈ. ಕಬಡ್ಡಿ ಕೂಡ ಆಡುವ ವರಲಕ್ಷ್ಮಿಗೆ ಮುಂದೆ ಟೀಚರ್ ಆಗಿ ಬಡ ಮಕ್ಕಳಿಗೆ ಪಾಠ ಹೇಳಿಕೊಡುವ ಆಸೆ ಇದೆ. ಜೊತೆಗೆ ಸಿ.ಎ (ಚಾರ್ಟರ್ಡ್ ಅಕೌಂಟೆಂಟ್) ಆಗುವ ಕನಸಿದೆ. ಬೆಟ್ಟದಷ್ಟು ಆಸೆ ಹೊತ್ತು ‘ಕನ್ನಡದ ಕೋಟ್ಯಧಿಪತಿ’ ವೇದಿಕೆಗೆ ಬಂದಿದ್ದ ಈ ಪುಟ್ಟ ಹುಡುಗಿಯ ಕನಸು ಒಂದೇ ಕ್ಷಣದಲ್ಲಿ ನುಚ್ಚು ನೂರಾಗಿದ್ದು ಮಾತ್ರ ದುರಾದೃಷ್ಟಕರ. ‘ಕನ್ನಡದ ಕೋಟ್ಯಧಿಪತಿ’ಯಲ್ಲಿ ಕೋಟಿ ರೂಪಾಯಿ ಗೆಲ್ಲಲೇಬೇಕು ಎಂಬ ಛಲ…
ಅಗಾಧ ಬುದ್ಧಿ ಮತ್ತೆಯ ಎಂಟು ವರ್ಷದ ಬಾಲಕ ರಾಷ್ಟ್ರಂ ಆದಿತ್ಯ ಶ್ರೀ ಕೃಷ್ಣನಿಗೆ 9ನೇ ತರಗತಿಗೆ ನೇರವಾಗಿ ದಾಖಲಾಗಲು ಉತ್ತರಪ್ರದೇಶ ಶಿಕ್ಷಣ ಮಂಡಳಿ ವಿಶೇಷ ಅನುಮತಿ ನೀಡಿದೆ. 2021ರಲ್ಲಿ ತನ್ನ 10ನೇ ವಯಸ್ಸಿನಲ್ಲಿ ಲಕ್ನೊದ ನಖಾಸ್ ಪ್ರದೇಶದಲ್ಲಿರುವ ಎಂ.ಡಿ. ಶುಕ್ಲಾ ಇಂಟರ್ ಕಾಲೇಜಿನಿಂದ 10ನೇ ತರಗತಿ ಪರೀಕ್ಷೆ ಎದುರಿಸಲು ಆತ ಸಿದ್ಧತೆ ನಡೆಸುತ್ತಿದ್ದಾನೆ.ನಿಯಮದ ಪ್ರಕಾರ ಉತ್ತರಪ್ರದೇಶ ಶಿಕ್ಷಣ ಮಂಡಳಿಯ 10ನೇ ತರಗತಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಕನಿಷ್ಠ 14 ವರ್ಷ ಆಗಿರಬೇಕು. ಆದರೆ, ರಾಷ್ಟ್ರಂಗೆ 10ನೇ ವಯಸ್ಸಿನಲ್ಲಿ…
ನವದೆಹಲಿ, ದೇಶಾದ್ಯಂತ ಮುಂಗಾರು ಮಳೆ ಆರ್ಭಟದಿಂದಾಗಿ ಪೂರೈಕೆ ಕುಸಿತವಾದ ಬೆನ್ನಲ್ಲೇ, ಈರುಳ್ಳಿ ದರದಲ್ಲಿ ಭಾರೀ ಹೆಚ್ಚಳವಾಗಿದ್ದು, 20-30 ರು.ಗೆ ಬಿಕರಿಯಾಗುತ್ತಿದ್ದ ಈರುಳ್ಳಿ ದರ ಒಂದೇ ವಾರದಲ್ಲಿ 70-80ರು.ಗೆ ಏರಿಕೆಯಾಗಿದೆ. ಈರುಳ್ಳಿ ಬೆಳೆಯವ ರಾಜ್ಯಗಳಲ್ಲಿ ವಿಪರೀತ ಮಳೆ ಹಾಗೂ ಪೂರೈಕೆ ಕೊರತೆಯಿಂದಾಗಿ ಬೆಲೆ ಹೆಚ್ಚಾಗಿದೆ. ಅತೀ ಹೆಚ್ಚು ಈರುಳ್ಳಿ ಬೆಳೆಯುವ ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ, ಗುಜರಾತ್, ಪೂರ್ವ ರಾಜಸ್ತಾನ ಹಾಗೂ ಪಶ್ಚಿಮ ಮಧ್ಯಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಬೆಳೆ ನಾಶ ಹಾಗೂ ಸಾಗಣೆ ಸ್ಥಗಿತದಿಂದಾಗಿ…
ಯೋಗಾಭ್ಯಾಸದಿಂದ ವ್ಯಕ್ತಿಯ ಆತ್ಮಗೌರವ, ಹಾಗೂ ಆತ್ಮವಿಶ್ವಾಸವು ವೃದ್ಧಿಸುತ್ತದೆ. ನಿರಂತರವಾಗಿ ಯೋಗಾಭ್ಯಾಸವನ್ನು ರೂಢಿಸಿಕೊಂಡವರು ರೋಗಮುಕ್ತವಾದ ಜೀವನವನ್ನು ನಡೆಸಬಹುದು ಎಂದು ಪತಂಜಲಿ ಯೋಗ ಶಿಕ್ಷಣ ಸಮಿತಿಯ ಬೆಂಗಳೂರು ಪಶ್ಚಿಮ ವಲಯದ ಸಂಚಾಲಕ ಜಯರಾಮ್ ರವರು ಅಭಿಪ್ರಾಯಪಟ್ಟರು. ತಾಲ್ಲೂಕಿನ ಶ್ರೀಕ್ಷೇತ್ರ ಕೈವಾರದ ಶ್ರೀ ಯೋಗಿನಾರೇಯಣ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಯೋಗಾಭ್ಯಾಸ ಶಿಬಿರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಯೋಗಾಭ್ಯಾಸವನ್ನು ಎಲ್ಲಿ ಬೇಕಾದರೂ ಮಾಡಬಹುದು. ಅದಕ್ಕೆ ವಿಶೇಷ ತಯಾರಿ ಅಥವಾ ಪರಿಕರಗಳೇನೂ ಬೇಕಾಗಿಲ್ಲ. ಯೋಗದಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪ್ರಸ್ತುತ…
ನಟ “ಸುದೀಪ್”ರವರು ಭಾರತದ ಪ್ರಮುಖ ನಟರಲ್ಲಿ ಒಬ್ಬರಾಗಿದ್ದಾರೆ. ಹಾಗಾಗಿ ಅವರು ಸದಾ ಸುದ್ದಿಯೇಲ್ಲಿರುತ್ತಾರೆ. ಇದಕ್ಕೆ ಇನ್ನೊಂದು ಕಾರಣ ಅವರು ಹೆಚ್ಚಾಗಿ ಬಳುಸುವ ಸಾಮಾಜಿಕ ಜಾಲತಾಣ ಟ್ವಿಟ್ಟರ್. ಕನ್ನಡದ ಬೇರೆಲ್ಲಾ ನಟರಿಗಿಂತ ಸುದೀಪ್ರವರು ಟ್ವಿಟ್ಟರ್ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.
ಹಲಸಿನ ಹಣ್ಣಿನ ಹೆಸರು ಕೇಳಿದ್ರೆ ಸಾಕು ಬಾಯಲ್ಲಿ ನೀರು ಬರುತ್ತೆ. ಆದ್ರೆ ಇದು ವರ್ಷ ಪೂರ್ತಿ ನಮ್ಗೆ ಸಿಗೋದಿಲ್ಲ. ಕೆಲವೊಂದು ಸೀಸನ್’ಗಳಲ್ಲಿ ಮಾತ್ರ ಸಿಗುತ್ತೆ. ಹಲಸಿನ ಹಣ್ಣಿನ ವಿಚಾರದಲ್ಲಿ, ಆರೋಗ್ಯದ ಕಡೆ ಬಂದ್ರೆ ಕೆಲವೊಂದು ಅಭಿಪ್ರಾಯಗಳು ವಿಭಿನ್ನವಾಗಿವೆ. ಎನಂದ್ರೆ ಹಲಸಿನ ಹಣ್ಣು ತಿಂದ್ರೆ ಖಾಯಿಲೆ ಬರುತ್ತೆ, ಆರೋಗ್ಯ ಕೆಡುತ್ತೆ ಅನ್ನೋದು ಇದೆ.