ಸಿನಿಮಾ

ಶ್ರೀಮಂತ ಕುಟುಂಬದಲ್ಲಿ ಬೆಳೆದಿದ್ರೂ,ಈ ನಟನ ಜನಪರ ಕಾಳಜಿ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ..!ತಿಳಿಯಲು ಈ ಲೇಖನಿ ಓದಿ…

1419

ಇವರನ್ನು ಬಿಟ್ಟರೆ ಬೇರೆ ಯಾರಾದರೂ, ಸಿನಿಮಾ ನಟ ಸಮಾಜ ಸುಧಾರಣೆಯ ಕೆಲಸಕ್ಕೆ ಕೈ ಹಾಕಿದ್ರೆ  ತೋರಿಸಿ. ಮತ್ತೊಂದು ವಿಚಾರ ಇವರ ಬಗ್ಗೆ ನಾವು ಹೆಮ್ಮೆ ಪಡಬೇಕು ಇದುವರೆಗೆ ಯಾವ ಸಿನಿಮಾ ನಟನ ಬಾಯಿಂದ ಅಂಬೇಡ್ಕರ್,ಬುದ್ದರ ,ಬಸವಣ್ಣ ಟಿಪ್ಪು, ರವರ ಹೆಸರನ್ನು ವೇದಿಕೆ ಮೇಲೆ ಅಲ್ಲ ಸಿನಿಮಾದಲ್ಲು ಕೂಡ, ಹೇಳಿರುವ ಯಾವ ನಟರನ್ನು ನಾನು ನೋಡಿಲ್ಲ ಇಂಥಹ ನಾಯಕನನ್ನು ಪಡೆದ ನಾವೇ ಪುಣ್ಯ ವಂತರು. ನಾವೆಲ್ಲ ಅವರ ಬೆಂಬಲಕ್ಕೆ ನಿಲ್ಲೋಣ…

ಇಷ್ಟೆಲ್ಲಾ ಪೀಠಿಕೆ ಕೊಟ್ಟಿದ್ದು, ಯಾರೂ ಎನ್ನುವ ಯೋಚನೆಯಲ್ಲಿದ್ದೀರಾ! ಅವರೇ “ಆ ದಿನಗಳು” ಚಿತ್ರದ ನಟ ಚೇತನ್. ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ವಿಷಯಗಳ ಬಗ್ಗೆ ತಿಳಿಯೋಣ…

ಚೇತನ್’ರವರ ಬಾಲ್ಯ ಜೀವನ ಮತ್ತು ವಿಧ್ಯಾಭ್ಯಾಸ:-

ಚೇತನ್ ಹುಟ್ಟಿದ್ದು ಅಮೆರಿಕಾದ ಚಿಕಾಗೋನಗರದಲ್ಲಿ 24 ಫೆಬ್ರವರಿ 1983ರಂದು ಜನಿಸಿದರು.  ಚಿತ್ರದುರ್ಗ  ಮೂಲದ  ವೀರಶೈವ  ಸಮಾಜದ ಈ ಕುಟುಂಬ ಸಾಕಷ್ಟು ವರ್ಷಗಳ ಹಿಂದೆ ಅಮೆರಿಕೆಗೆ ಬಂದು ನೆಲೆಸಿದೆ. ಚೇತನ್ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣ ಪಡೆದದ್ದು ಅಮೇರಿಕೆಯ ಪ್ರತಿಷ್ಠಿತ ಶಾಲೆಗಳಲ್ಲಿ.

ಪದವಿ ಮತ್ತು ಸ್ನಾತಕೋತ್ತರ ವ್ಯಾಸಂಗ ಮಾಡಿದ್ದು ಅಮೆರಿಕಾದ ವಿಶ್ವ ಪ್ರಸಿದ್ಧ ಯೇಲ್ ವಿಶ್ವವಿದ್ಯಾಲಯದಲ್ಲಿ. ಈ ಯೇಲ್ ವಿಶ್ವವಿದ್ಯಾಲಯ ಅನೇಕ ಕ್ಷೇತ್ರಗಳಲ್ಲಿ ಹಾರ್ವರ್ಡನ್ನೂ ಮೀರಿಸುವಂಥದ್ದು. ಜೀವನದ ಬಹುತೇಕ ವರ್ಷಗಳನ್ನು ಅಮೆರಿಕಾದ ಕಳೆದಿದ್ದರೂ ಸಾಹಿತಿಗಳನ್ನೂ ನಾಚಿಸುವವಷ್ಟು ಪರಿಶುದ್ಧವಾಗಿ ಕನ್ನಡದಲ್ಲಿ ಸಂವಾದ ನಡೆಸುತ್ತಾರೆ.

ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಹೇಗೆ?

ಚೇತನ್ ಸಂಪೂರ್ಣ ಅಪ್ಪಟ  ಕಲಾವಿದ. ಆಧುನಿಕನೃತ್ಯ ಪರಿಣಿತಿಯ ಜೊತೆಗೆ ನೃತ್ಯ ತರಬೇತಿ ಮತ್ತು ನೃತ್ಯ ನಿರ್ದೇಶನದಲ್ಲೂ ಪಳಗಿದ್ದಾರೆ. ಪಾಶ್ಚಾತ್ಯ ಜಾಜ್ ಸಂಗೀತ, ಭಾರತೀಯ ಶಾಸ್ತ್ರೀಯ ಸಂಗೀತ, ಅದರಲ್ಲೂ ಕರ್ನಾಟಕ ಸಂಗೀತವನ್ನು ಅದ್ಭುತವಾಗಿ ಸ್ಯಾಕ್ಸೋಫೋನ್ ವಾದ್ಯದಲ್ಲಿ ನುಡಿಸಬಲ್ಲರು ಚೇತನ್.

2007ರಲ್ಲಿ ‘ಆ ದಿನಗಳು’ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಅಪಾರ ಬೇಡಿಕೆಯಿದ್ದರೂ ಇಲ್ಲಿಯವರೆಗೆ ಕೇವಲ 6 ಸಿನೆಮಾಗಳಲ್ಲಿ ನಟಿಸಿ ಸಿನೆಮಾರಂಗದಿಂದ ದೂರವುಳಿದಿದ್ದ ನಟ ಚೇತನ್ ಕುಮಾರ್ ಮತ್ತೆ ಚಿತ್ರರಂಗಕ್ಕೆ ಹಿಂದಿರುಗುವ ತಯಾರಿಯಲ್ಲಿದ್ದಾರೆ.

ನಟನೆಗೆ ತಮ್ಮ ಆದ್ಯತೆಯಾಗಿದ್ದರು ತೆಗೆದುಕೊಂಡಿರುವ ಈ ವಿರಾಮದಲ್ಲಿ ಸಮಾಜಮುಖಿ ಕಾರ್ಯಗಳತ್ತ ತಮ್ಮನ್ನು ತೊಡಗಿಸಿಕೊಂಡಿದ್ದನ್ನು ತಿಳಿಸುತ್ತಾರೆ.

ಎಲ್ಲರೂ ಮೆಚ್ಚುವಂತಾದ್ದು ಚೇತನ್’ರವರ ಸಮಾಜ ಮುಖಿ ಕಾರ್ಯಗಳು…

ಜನಪರ ಕಾಳಜಿಎಲ್ಲಕ್ಕಿಂತ ಚೇತನ್ ಹೆಚ್ಚು ಆಪ್ತರಾಗಲು ಕಾರಣವಾಗುವುದು ಚೇತನರ ಅವಿರತ ಜನಪರ ಕಾಳಜಿ.ಒಂದೇ ಒಂದು ದಿನ ತಲೆಯ ಬುಡಕ್ಕಿಟ್ಟುಕೊಳ್ಳುವ ದಿಂಬು ಒಂಚೂರು ಏರುಪೇರಾದರೂ ಸಹಿಸದ ನಮ್ಮಂಥವರಿಗೆ ಧೊಪ್ಪನೆ ಸುರಿಯುವ ಕೊಡಗಿನ ಮಳೆಯಲ್ಲಿ ಬಯಲನ್ನೇ ಹಾಸಿಕೊಂಡು ಮಲಗುವ ಕಲ್ಪನೆಯೇ ಅಸಾಧ್ಯವಾಗದದ್ದು.

ತಲೆಯ ಮೇಲಿನ ಸೂರು ಕಳೆದುಕೊಂಡ ಸುಮಾರು 3000 ಜನ ಸುಮಾರು 578 ಕುಟುಂಬಗಳು,ಜೇನುಕುರುಬ, ಬೆಟ್ಟಕುರುಬ, ಎರವ. ಶೋಲಿಯ, ಪಣಿಯ ಮತ್ತಿತರ ಆದಿವಾಸಿ ಸಮುದಾಯಗಳ ಜೀವನದ ಸಮಸ್ಯೆಗೆ ತಕ್ಷಣ ಸ್ಪಂದಿಸಿ ಅಲ್ಲೇ ಹೊರಟು ಅವರ ಮಧ್ಯೆಯೇ ಒಬ್ಬನಾಗಿ ಬೆರೆತುಹೋಗಿರುವ ಚೇತನರಂಥವರು ಇಂದಿಗೂ ನಮ್ಮ ನಡುವೆ ಬದುಕಿದ್ದಾರೆ ಎಂದು ನಂಬಿಸಿಕೊಳ್ಳಲು ಸಾಹಸಪಡಬೇಕು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ರಾಷ್ಟ್ರ ಧ್ವಜ ಹೇಗೆಂದ್ರೆ ಹಾಗೆ ಬಳಸುವಂತಿಲ್ಲ!ನಿಮ್ಗೆ ಗೊತ್ತಾ ಸಿನೆಮಾದಲ್ಲಿ ರಾಷ್ಟ್ರ ಧ್ವಜ ಬಳಸಲು ಅನುಮತಿ ಇಲ್ಲಂದ್ರೆ ಏನಾಗುತ್ತೆ ಗೊತ್ತಾ?

    ಭಾರತದ ರಾಷ್ತ್ರೀಯ ಧ್ವಜದ ಈಗಿನ ಅವತರಣಿಕೆಯನ್ನು ಜುಲೈ 22, 1947 ರ ಕಾನ್ಸ್ಟಿಟ್ಯುಯೆಂಟ್ ಅಸ್ಸೆಂಬ್ಲಿ ಸಭೆಯಲ್ಲಿ ಅಂಗೀಕರಿಸಲಾಯಿತು. ಬ್ರಿಟಿಷರಿಂದ ಆಗಸ್ಟ್ 15, 1947 ಪಡೆಯುವ ಕೆಲವೇ ದಿನಗಳ ಮುಂಚೆ ನಡೆದದ್ದು ಈ ಸಭೆ.

  • Health

    ವಿದೇಶದಲ್ಲಿ ಬೇಡಿಕೆಯನ್ನು ಪಡೆದ ನುಗ್ಗೆ ಸೊಪ್ಪಿನ ಪುಡಿ…!

    ಅಪಾರ ಔಷಧ ಗುಣ ಹೊಂದಿರುವ ನುಗ್ಗೆ ಸೊಪ್ಪನ್ನು ನೇರವಾಗಿ ಮಾರಾಟ ಮಾಡಿದರೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಎಂದು ತಿಳಿದ, ತಾಲೂಕಿನ ತಾವರಗೇರಾ ಪ್ರದೇಶದ ರೈತರೊಬ್ಬರು, ಸೊಪ್ಪಿನಿಂದ ತಯಾರಿಸಿದ ಪುಡಿಯನ್ನು ವಿದೇಶಗಳಿಗೆ ರಫ್ತುಮಾಡಿ ಗಮನಸೆಳೆದಿದ್ದಾರೆ. ಮೂಲತಃ ಗಂಗಾವತಿ ತಾಲೂಕಿನವರಾದ ಬಸಯ್ಯ ಹಿರೇಮಠ, ತಾವರಗೇರಾ ಪ್ರದೇಶದಲ್ಲಿ 30ಎಕರೆ ಜಮೀನು ಖರೀದಿಸಿ, ನುಗ್ಗೆ ಬೇಸಾಯದಲ್ಲಿ ತೊಡಗಿದ್ದಾರೆ. ತೋಟಗಾರಿಕೆ ಕೃಷಿಯನ್ನು ವಿಶಿಷ್ಟ ರೀತಿಯಲ್ಲಿ ಕೈಗೊಳ್ಳಲು ಅವರಿಗೆ ಸಾಮಾಜಿಕ ಜಾಲತಾಣ ನೆರವಿಗೆ ಬಂದಿದೆ. ನುಗ್ಗೆ ಸೊಪ್ಪನ್ನು ನಿಗದಿತ ಉಷ್ಣಾಂಶದಲ್ಲಿ ಒಣಗಿಸಿ ಪೌಡರ್‌ ಆಗಿ ಪರಿವರ್ತಿಸಿದರೆ…

  • ರಾಜಕೀಯ

    ಪ್ರದಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸುವ ಧೈರ್ಯ ಒಂದಿರುವವರು ಯಾರು ಗೊತ್ತ….!

    ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿಯಲ್ಲಿನ ಪ್ರಶ್ನಾತೀತ ನಾಯಕರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ವರ್ಚಸ್ಸನ್ನೇ ಬಿಜೆಪಿ ಬಳಸಿಕೊಳ್ಳುತ್ತಿದ್ದು, ಮತ್ತೊಮ್ಮೆ ಅಧಿಕಾರಕ್ಕೇರುವ ವಿಶ್ವಾಸದಲ್ಲಿದೆ. ಇದರ ಮಧ್ಯೆ ಪ್ರಧಾನಿ ಮೋದಿ ಮಧ್ಯ ಪ್ರದೇಶದ ಇಂದೋರ್ ನಲ್ಲಿ ಮಾತನಾಡುವ ವೇಳೆ, ಪಕ್ಷದಲ್ಲಿ ತಮ್ಮನ್ನು ಎಚ್ಚರಿಸುವ, ಬುದ್ಧಿವಾದ ಹೇಳುವ ಹಾಗೂ ಪ್ರಶ್ನಿಸುವವರು ಯಾರೆಂಬ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ನರೇಂದ್ರ ಮೋದಿಯವರು ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಜೊತೆ ಈ ಹಿಂದೆ ತಾವು ಪಕ್ಷದ ಕೆಲಸ ಮಾಡಿದ್ದು,…

  • ಸುದ್ದಿ

    ಬೀದರ್: ರಸ್ತೆಯಲ್ಲೇ ಹುಟ್ಟುಹಬ್ಬ ಆಚರಿಸುತ್ತಿದ್ದ ಯುವಕರ ಮೇಲೆ ವಾಹನ ಹರಿದು ನಾಲ್ಕು ಜನರ ಸಾವು…!

    ಬೀದರ್: ರಸ್ತೆಯಲ್ಲೇ ಹುಟ್ಟುಹಬ್ಬ ಆಚರಿಸುತ್ತಿದ್ದ ಯುವಕರ ಮೇಲೆ ಅಪರಿಚಿತ ವಾಹನವೊಂದು ಹರಿದ ಪರಿಣಾಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಯುವಕ ಸೇರಿ ನಾಲ್ವರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಹುಮ್ನಾಬಾದ್‍ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 65ರ ಮಂಗಲಗಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಯುವಕ ಎಚ್ ಸಚಿನ್, ಆತನ ಗೆಳೆಯರಾದ ಕಾಶಿನಾಥ್, ಗುರುನಾಥ್ ಮತ್ತು ರಘುವೀರ್ ಮೃತಪಟ್ಟವರು. ಇವರೆಲ್ಲರೂ ಸುಮಾರು 22 ವರ್ಷ ವಯಸ್ಸಿನವರಾಗಿದ್ದು, ಹುಮ್ನಾಬಾದ್ ತಾಲೂಕಿನ ಮಂಗಲಗಿ ಗ್ರಾಮದವರು ಎಂದು ಪೊಲೀಸರು ತಿಳಿಸಿದ್ದಾರೆ. ಯುವಕರು ರಸ್ತೆಯಲ್ಲಿ…

  • ಸುದ್ದಿ

    ಪ್ರತಿದಿನ ಎದೆಗೆ ಗುದ್ದುತ್ತಿದ್ದ ಸಾಕುನಾಯಿಗಳು, ನೋವಿನಿಂದ ವೈದ್ಯರ ಬಳಿ ಹೋದ ಮಹಿಳೆಗೆ ಕಾದಿತ್ತು ಭಾರಿ ಶಾಕ್.​

    ತನ್ನ ಜೀವನದಲ್ಲಿ ಎದುರಾಗುತ್ತಿದ್ದ ಅಪಾಯಾಕಾರಿ ಕ್ಯಾನ್ಸರ್​ ರೋಗವನ್ನು ಪತ್ತೆ ಹಚ್ಚಿ ಜೀವ ಉಳಿಸಿದ ತನ್ನ ನಾಯಿಗಳಿಗೆ ಜೀವನವನ್ನೇ ಮುಡಿಪಾಗಿಟ್ಟಿರುವುದಾಗಿ ವೇಲ್ಸ್​ ಮೂಲದ ಶ್ವಾನ ಪ್ರೇಮಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ವೇಲ್ಸ್​ನ ಬಾರ್ಗೋಡ್​ ನಿವಾಸಿಯಾಗಿರುವ​ ಲಿಂಡಾ ಮುಂಕ್ಲೆ(65) ವೇಲ್ಸ್​ ಆನ್​ಲೈನ್​ ಪತ್ರಿಕೆಗೆ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತನ್ನ ಬಳಿ ಐದು ವರ್ಷದ ಬಿಯಾ ಮತ್ತು ಅದರ ಮೂರು ವರ್ಷದ ಹೆಣ್ಣುನಾಯಿ ಎನ್ಯಾ ಸೇರಿದಂತೆ ಒಟ್ಟು ನಾಲ್ಕು ಜರ್ಮನ್​ ಶೆಫರ್ಡ್​ ನಾಯಿಗಳನ್ನು ಸಾಕುತ್ತಿರುವುದಾಗಿ ತಿಳಿಸಿದ್ದಾರೆ. ಅದರಲ್ಲಿ ಎರಡು ನಾಯಿ ತನ್ನ ಬಳಿ…

  • ರಾಜಕೀಯ

    ಪರಸ್ಪರ ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಸಂಸದ ಹಾಗೂ ಶಾಸಕ!ಈ ಸುದ್ದಿ ನೋಡಿ

    ಇತ್ತೀಚಿನ ದಿನಗಳಲ್ಲಿ ರಾಜಕೀಯ ಎಂಬುದು ಎಷ್ಟರ ಮಟ್ಟಿಗೆ ಹಾಳೆದ್ದು ಹೋಗಿದೆ ಎಂದರೆ ಜನಪ್ರತಿನಿಧಿಗಳು ತಮ್ಮ ಘನತೆ ಗಾಂಭೀರ್ಯ , ಗೌರವ ಜವಾಬ್ದಾರಿಗಳನ್ನು ಮರೆತು ಸಾರ್ವಜನಿಕವಾಗಿ ಕೀಳು ವರ್ತನೆ ತೋರಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕರ್ನಾಟಕದ ಕಾಂಗ್ರೆಸ್ ಶಾಸಕರು ಹೊಡೆದಾಡಿಕೊಂಡು ಸುದ್ದಿಯಾಗಿದ್ದರು. ಈಗ ಬಿಜೆಪಿಯಲ್ಲಿ ಅಂತಹದೇ ಘಟನೆ ನಡೆದಿದೆ. ಉತ್ತರ ಪ್ರದೇಶದಲ್ಲಿ ಆಡಳಿತ ಪಕ್ಷವಾಗಿರುವ ಬಿಜೆಪಿ ತಲೆ ತಗ್ಗಿಸುವಂತಹ ಕೆಲಸವನ್ನು ಬಿಜೆಪಿ ಸಂಸದ ಹಾಗೂ ಶಾಸಕ ಮಾಡಿದ್ದಾರೆ. ಇವರಿಬ್ಬರೂ ಪರಸ್ಪರ ಚಪ್ಪಲಿಯಲ್ಲಿ ಹೊಡೆದಾಡಿಕೊಂಡು ತಮ್ಮ ಮಾನವನ್ನು ಹರಾಜು ಹಾಕಿಕೊಳ್ಳುವ…