ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದೇವರಿಗೆ ತನ್ನ ಬೇಡಿಕೆಗಳನ್ನು ಈಡೇರಿಸುವಂತೆ ಪತ್ರ ಬರೆದ ಭಕ್ತನೊಬ್ಬ ಅದನ್ನು ಹುಂಡಿಯಲ್ಲಿ ಹಾಕಿದ್ದಾನೆ…
ಅವನ ಒಪ್ಪಂದ ಹೇಗಿತ್ತು ಗೊತ್ತಾ..? ನೀನು ನನಗೆ ಕೊಡು, ನಾನು ನಿನಗೆ ಕೊಡುತ್ತೇನೆ…
ಹೌದು, ಒಪ್ಪಂದದ ಆಧಾರದಂತೆ ಭಕ್ತನೊಬ್ಬ ದೇವರಿಗೆ ಪತ್ರ ಬರೆದು ಹುಂಡಿಯಲ್ಲಿ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಯಾವ ದೇವಸ್ಥಾನದಲ್ಲಿ..?
ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಶ್ರೀ ಕ್ಷೇತ್ರ ಚಿಕ್ಕ ತಿರುಪತಿ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ ಹುಂಡಿ ಎಣಿಕೆ ವೇಳೆ ಈ ಪತ್ರ ಪತ್ತೆಯಾಗಿದ್ದು.
ಭಕ್ತ ನೊಬ್ಬ ತನ್ನ ಬೇಡಿಕೆ ಈಡೇರಿಸಿದರೆ, ಅಭಿಷೇಕ, ವಿಶೇಷ ಪೂಜೆ, ಕಾಣಿಕೆ ನೀಡುವುದಾಗಿ ಮನವಿ ಪತ್ರ ಬರೆದಿದ್ದಾನೆ.
ಈ ಒಪ್ಪಂದದ ಪತ್ರದಲ್ಲೇನಿದೆ..?
ತಮ್ಮ ಕುಟುಂಬಕ್ಕೆ ಸ್ವಂತ ನೆಲೆ ಇಲ್ಲ, ನಮಗೊಂದು ಮನೆ ಬೇಕು. ನಾವು ಇರುವ ಮನೆ ಭೋಗ್ಯಕ್ಕಿದ್ದು ಮಾಲೀಕನಿಂದ ಬರುವ 6 ಲಕ್ಷ ಬರುವಂತೆ ಮಾಡು. ನಮ್ಮ ಮಕ್ಕಳಿಗೆ ಉದ್ಯೋಗ, ವ್ಯಾಪಾರ, ವಾಹನ, ಆರೋಗ್ಯ- ಆಯುಷ್ಯ ನಿನ್ನ ಆಶೀರ್ವಾದದಿಂದ ಸಿಗಬೇಕು.
ನಮ್ಮ ಅಳಿಯ, ಮಗಳು, ಮೊಮ್ಮಕ್ಕಳು ಎಲ್ಲರೂ ಚೆನ್ನಾಗಿರಬೇಕು. ಇದೆಲ್ಲಾ ಈಡೇರಿಸಿದ್ರೆ ನಿನಗೆ ಅಭಿಷೇಕ, ಕಾಣಿಕೆ ವಿಶೇಷ ಪೂಜೆ ನೆರವೇರಿಸುತ್ತೇನೆ.
ನೀನು ನನಗೆ ಕೊಡು, ನಾನು ನಿನಗೆ ಕೊಡುತ್ತೇನೆ. ಎಂದು ಸತ್ಯದ ಪ್ರಮಾಣ ಮಾಡಿದ್ದಾನೆ. ಆದರೆ ಪತ್ರ ಬರೆದವರು ತಮ್ಮ ವಿಳಾಸವನ್ನು ಬರೆದಿಲ್ಲ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವಿಜ್ಞಾನಿಗಳು ಆಧುನಿಕ ಉಪಕರಣಗಳಿಂದ ಕಂಡುಹಿಡಿಯುತ್ತಿರುವ ಎಷ್ಟೋ ಸಂಶೋಧನೆಗಳನ್ನು, ನಮ್ಮ ಋಷಿ ಮುನಿಗಳು ಆಗಿನ ಕಾಲದಲ್ಲೇ ಕಂಡುಹಿಡಿದಿದ್ದರು ಅನ್ನೋದಕ್ಕೆ ಹಲವಾರು ನಿದರ್ಶನಗಳಿವೆ.
ಕನ್ನಡದ ಹೆಮ್ಮೆಯ ನಟ, ಅಭಿಮಾನಿಗಳ ಡಿ.ಬಾಸ್ ಸ್ಯಾಂಡಲ್ ವುಡ್ ನ ಬ್ರಾಂಡ್ ಅಂತೆಲ್ಲ ಕರೆಸಿಕೊಳ್ಳುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಕೂಡ ಚೀನಾ ವಸ್ತು ಹಾಗೂ ಅಪ್ಲಿಕೇಷನ್ ಅನ್ನು ಬ್ಯಾನ್ ಮಾಡುವ ನಿರ್ಧಾರ ಕೈಗೊಂಡಿದ್ದು, ಈ ವಿಚಾರವಾಗಿ ದರ್ಶನ್ ಫ್ಯಾನ್ಸ್ ಮೊದಲು ಟಿಕ್ ಟಾಕ್ ಗೆ ಗುಡ್ ಬೈ ಹೇಳಿದ್ದಾರೆ. ಟಿಕ್ ಟಾಕ್ ನಲ್ಲಿಯೂ ಡಿಬಾಸ್ ಹೆಸರು ದಾಖಲೆ ನಿರ್ಮಿಸಿತ್ತು. ಆದರೆ ಇದ್ಯಾವುದನ್ನು ಲೆಕ್ಕಿಸದೆ ದರ್ಶನ್ ಅಭಿಮಾನಿಗಳು ಖಾತೆ ಡಿಲೀಟ್ ಮಾಡಿ ರಾಷ್ಟ್ರ ಪ್ರೇಮ ಮೆರೆದಿದ್ದಾರೆ….
ವೀಳ್ಯದೆಲೆ ಎಂದರೆ ನೆನಪಾಗುವುದು ತಾಂಬೂಲ. ಎಲ್ಲಾ ಶುಭ ಸಮಾರಂಭದಲ್ಲಿ ಹೆಚ್ಚು ಬಳಸುವ ಎಲೆ.ತಾಂಬೂಲದಲ್ಲಿ ಪ್ರಮುಖ ಸ್ಥಾನ ಹೊಂದಿರುವ ವೀಳ್ಯದೆಲೆಗೆ ಸದಾ ಬೇಡಿಕೆ ಇದೆ. ನಿಶ್ಚಿತಾರ್ಥ, ಮದುವೆ, ಮುಂಜಿ, ವ್ರತ ಹೀಗೆ ಏನೇ ಮಂಗಳ ಕಾರ್ಯಗಳಿದ್ದರೂ ವೀಳ್ಯದೆಲೆ ಬೇಕೇ ಬೇಕು. ಊಟದ ನಂತರ ತಾಂಬೂಲ ಹಾಕಿಕೊಳ್ಳಲಂತೂ ಈ ಎಲೆ ಅತ್ಯಗತ್ಯ.ಆದರೆ ಸಾಂಪ್ರದಾಯಕವಾಗಷ್ಟೆ ಅಲ್ಲ, ಇದರ ಔಷಧೀಯ ಗುಣಗಳು ಕೂಡ ಹಲವು. ಆದರೆ ರಕ್ತಸ್ರಾವ, ಪಿತ್ತದಿಂದ ತಲೆ ಸುತ್ತು ಹಾಗೂ ತಿವಿದ ಗಾಯವಾಗಿದ್ದರೆ ವೀಳ್ಯದೆಲೆಯನ್ನು ಸೇವಿಸಬಾರದು. ವೀಳ್ಯೆದೆಲೆಯನ್ನು ಹೆಚ್ಚಾಗಿ ಬಳಸಿದಲ್ಲಿ…
ನಾವು ಮನೆಗಳಲ್ಲಿ ಕೆಲಸ ಮಾಡದ, ಉದ್ಯೋಗ ಮಾಡದೆ ತಿಂದು ಕೆಲಸವಿಲ್ಲದೇ ತಿರುಗುವವರನ್ನು, ಸೋಮಾರಿ ಎಂದು ಮನೆಗಳಲ್ಲಿ ಹಾಸ್ಯ ಮಾಡುವುದುಂಟು. ಹೀಗೆ ಸೋಮಾರಿತನದಿಂದ ಇರುವವರು ಎಲ್ಲಾ ಕಡೆ ಸಿಗುತ್ತಾರೆ. ಅದಕ್ಕಾಗಿಯೇ ವಿಶ್ವವಿದ್ಯಾನಿಲಯವೊಂದು ವಿಶ್ವದ ಸೋಮಾರಿಗಳ ಬಗ್ಗೆ ಅಧ್ಯಯನ ನಡೆಸಿದ್ದು ಅದರ ವಿವರಣೆಯನ್ನು ಕೊಟ್ಟಿದೆ.
ಬಾಲ್ಯ, ಯೌವ್ವನ, ಮುಪ್ಪು ಇವೆಲ್ಲ ಬೇಡ ಅಂದ್ರೂ ನಮ್ಮನ್ನು ಬಿಡೋದಿಲ್ಲ. ವಯಸ್ಸಾದಂತೆ ನಮ್ಮ ದೇಹದಲ್ಲಿ ಬದಲಾವಣೆಗಳು ಸಹಜ. 50 ವರ್ಷ ಆಯ್ತು ಅಂದ್ರೆ ಚರ್ಮ ಸುಕ್ಕುಗಟ್ಟಲು ಶುರುವಾಗುತ್ತೆ. ಆದ್ರೆ ಆಸ್ಟ್ರೇಲಿಯಾದ ಮಹಿಳೆಯೊಬ್ಳು ಪ್ರಕೃತಿಯ ನಿಯಮಕ್ಕೇ ಸೆಡ್ಡು ಹೊಡೆದಿದ್ದಾಳೆ.
ನೆಚ್ಚಿನ ನಟ ನಟಿಯರನ್ನ ನೋಡುವ, ಭೇಟಿ ಮಾಡುವ ಆಸೆ ಪ್ರತಿಯೊಬ್ಬ ಅಭಿಮಾನಿಗೂ ಇರುತ್ತೆ. ಆದ್ರೆ ಹುಚ್ಚು ಅಭಿಮಾನಕ್ಕೆ ಸಿಲುಕಿ ಅದೆಷ್ಟೋ ಅಭಿಮಾನಿಗಳು, ಹಣ, ಪ್ರಾಣ ಹಾನಿ ಮಾಡಿಕೊಂಡಿದ್ದನ್ನ ಕೂಡ ನಾವು ಹಿಂದೆ ಅನೇಕ ಭಾರಿ ನೋಡಿದ್ದೇವೆ. ಇದೀಗ ಇಂಥಹದ್ದೇ ಮತ್ತೊಂದು ಘಟನೆ ನಡೆದಿದ್ದು, ದಕ್ಷಿಣ ಭಾರತದ ಪ್ರಖ್ಯಾತ ನಟಿಯನ್ನು ನೋಡುವ ಆಸೆಯಿಂದ ಅಭಿಮಾನಿಯೋರ್ವ 60 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ. ತಮಿಳುನಾಡಿನ ರಾಮನಾಥಪುರಂ ನಿವಾಸಿಯಾಗಿರುವ ಅಭಿಮಾನಿ ಕಾಜಲ್ ಅಗರ್ವಾಲ್ ನ ಅಪ್ಪಟ ಅಭಿಮಾನಿ. ಕಾಜಲ್ ಅವರನ್ನು ಜೀವನದಲ್ಲಿ ಒಮ್ಮೆಯಾದರೂ…