nation

400 ಶಾಲಾ ಮಕ್ಕಳ ಪ್ರಾಣ ಉಳಿಸಲು,10ಕೆಜಿ ಬಾಂಬ್ ಎತ್ತುಕೊಂಡು 1ಕಿಮೀ ಓಡಿದ, ಈ ಪೇದೆ ರಿಯಲ್ ಸಿಂಗಂ!ಈ ಲೇಖನಿ ಓದಿ ಶಾಕ್ ಆಗ್ತೀರಾ..!

382

ನಾವು ಕೆಲವೊಂದು ಸಾರಿ ಪೋಲಿಸ್’ರ ಬಗ್ಗೆ ಅದರಲ್ಲೂ ಪೋಲಿಸ್ ಪೇದೆಗಳ ಬಗ್ಗೆ ಅವಹೇಳನವಾಗಿ ಮಾತನಾಡುವುದುಂಟು.

ಆದರೆ ಕೆಲವೊಂದು ಸಮಯಗಳಲ್ಲಿ ಅದೇ ಪೊಲೀಸರು ತಮ್ಮ ಪ್ರಾಣವನ್ನು ಲೆಕ್ಕಿಸದೆ, ಪ್ರಾಣವನ್ನೇ ಪಣಕ್ಕಿಟ್ಟು   ಜನರನ್ನು ರಕ್ಷಿಸುತ್ತಾರೆ. ಹೌದು, ಇದೇ ತರ ಘಟನೆಯೊಂದು ಮಧ್ಯಪ್ರದೇಶದ ಚಿತೋರ ಎಂಬ ಹಳ್ಳಿಯಲ್ಲಿ ನಡೆದಿದೆ.

ಅಭಿಷೇಕ್ ಪಟೇಲ್ ಎಂಬ ಪೇದೆಯೊಬ್ಬರು 400 ಮಂದಿ ಮಕ್ಕಳ ಪ್ರಾಣವನ್ನು ರಕ್ಷಿಸಲು, 10 ಕೆಜಿ ತೂಕದ ಬಾಂಬ್ ಅನ್ನು ಹೊತ್ತುಕೊಂಡು 1 ಕಿ.ಮೀ ಓಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಅಭಿಷೇಕ್ ಪಟೇಲ್ ಬಾಂಬ್ ಹೊತ್ತುಕೊಂಡು ಓಡಿದ ಪೊಲೀಸ್ ಪೇದೆ.ಶುಕ್ರವಾರ ಮಧ್ಯಪ್ರದೇಶದ, ಚಿತೋರ ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ನಡೆದ ಘಟನೆಯಾದರೂ ಏನು ಗೊತ್ತಾ..!
ಮಧ್ಯಪ್ರದೇಶದ ಚಿತೋರಾದಲ್ಲಿರುವ ಸರ್ಕಾರಿ ಶಾಲೆಯ ಬಳಿ ಶುಕ್ರವಾರ ಬಾಂಬ್ ಪತ್ತೆಯಾಗಿತ್ತು. ಶಾಲಾ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ವಿಚಾರ ತಿಳಿದು ಪೊಲೀಸರ ಜೊತೆ ಕಾನ್ ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅಭಿಷೇಕ್ ಪಟೇಲ್ ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ.

 

ನಿಜವಾದ ಸಿಂಗಂ ಅಂದ್ರೆ ಈ ಅಭಿಷೇಕ್ ಪಟೇಲ್..!

ಬಾಂಬ್ ನೋಡಿದ ಕೂಡಲೇ ಪೊಲೀಸರು ಶಾಲೆಯನ್ನು ಮುಚ್ಚುವಂತೆ ಹೇಳಿದರು. ಈ ವೇಳೆ ಬಾಂಬ್ ನಿಷ್ಕ್ರಿಯ ದಳ ಸಹ ಸ್ಥಳಕ್ಕೆ ಆಗಮಿಸಿರಲಿಲ್ಲ. ವಿಚಾರ ತಿಳಿದು ಮಾಧ್ಯಮಗಳು ಸ್ಥಳಕ್ಕೆ ಆಗಮಿಸಿದವು. ಈ ಸಂದರ್ಭದಲ್ಲಿ ಎಲ್ಲರೂ ನೋಡುತ್ತಿದ್ದಂತೆ 40 ವರ್ಷದ ಅಭಿಷೇಕ್ ಪಟೇಲ್ 12 ಇಂಚು ಉದ್ದ ಹಾಗೂ 10ಕೆ.ಜಿ ತೂಕದ ಬಾಂಬನ್ನು ಹೊತ್ತುಕೊಂಡು ಓಡಲು ಆರಂಭಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮದ ಪ್ರತಿನಿಧಿಯೊಬ್ಬರು ವಿಡಿಯೋ ಸೆರೆ ಹಿಡಿದಿದ್ದು, ಈಗ 12 ಸೆಕೆಂಡಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಕ್ಕಳ ಪ್ರಾಣ ಉಳಿಸಲು ಒಂದು ಕಿಲೋ ಮೀಟರ್ ಓಡಿದ ರಿಯಲ್ ಸಿಗಂ!
100 ಸಂಖ್ಯೆಗೆ ಕರೆ ಬಂದ ಹಿನ್ನೆಲೆಯಲ್ಲಿ ನಾವು ಶಾಲೆಗೆ ಬಂದೆವು. ಕೆಲ ತಿಂಗಳ ಹಿಂದೆ ನಡೆದ ಪೊಲೀಸ್ ಆಪರೇಷನ್ ತರಬೇತಿ ಸಮಯದಲ್ಲಿ ಬಾಂಬ್ ಸಿಡಿದರೆ ಸುಮಾರು 500 ಮೀಟರ್ ವ್ಯಾಪ್ತಿಯ ಪ್ರದೇಶಗಳಿಗೆ ಹಾನಿ ಆಗುತ್ತದೆ ಎಂದು ತಿಳಿಸಿದ್ದರು.

ಹೀಗಾಗಿ ಮಕ್ಕಳ ಪ್ರಾಣವನ್ನು ಉಳಿಸಲು ನಾನು ಬಾಂಬ್ ಅನ್ನು ಹಿಡಿದುಕೊಂಡು ಒಂದು ಕಿ.ಮೀ ದೂರದವರೆಗೆ ಓಡಿ ಎಸೆದು ಬಂದೆ ಎಂದು ಅಭಿಷೇಕ್ ಪಟೇಲ್ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಈ ಪ್ರದೇಶದ ಸಮೀಪವೇ ಬಾಂಬ್ ಪತ್ತೆಯಾಗಿತ್ತು. ಈ ಬಾಂಬ್ ಈ ಸ್ಥಳಕ್ಕೆ ಹೇಗೆ ಬಂದಿದೆ ಎನ್ನುವುದು ತಿಳಿದು ಬಂದಿಲ್ಲ. ಈ ಶಾಲೆ ಇರುವ ಗ್ರಾಮದಲ್ಲೇ ಸೇನೆ ಶೂಟಿಂಗ್ ನಡೆಸುವ ಸ್ಥಳವಿದೆ. ಈ ಪ್ರಕರಣ ಸಂಬಂಧ ತನಿಖೆ ನಡೆಸಲಾಗುವುದು ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ