ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸರ್ಕಾರಿ ಒಡೆತನದ ಬಿಎಸ್ಎನ್‌ಎಲ್ ದೇಶದಲ್ಲಿ ಇದೇ ಮೊದಲ ಬಾರಿಗೆ ಸ್ಯಾಟಿಲೈಟ್ ಫೋನ್ ಸೇವೆಯನ್ನು ಆರಂಭಿಸಲಿದೆ. ಬುಧವಾರ ಮೇ.25 ರಿಂದ ಈ ಸೇವೆಗೆ ಚಾಲನೆ ದೊರೆಯಲಿದ್ದು, ನೇರವಾಗಿ ಉಪಗ್ರಹಗಳ ಸಹಾಯದಿಂದ ಈ ಸೇವೆಯನ್ನು ಬಿಎಸ್ಎನ್ಎಲ್ ಓದಗಿಸಲಿದೆ ಎನ್ನಲಾಗಿದೆ.
ಅಂತರರಾಷ್ಟ್ರೀಯ ಮೊಬೈಲ್ ಉಪಗ್ರಹ ಸಂಘಟನೆ “ಇನ್‌ಮಾರ್‌ಸ್ಯಾಟ್’ ಸಹಾಯದಿಂದ ಬಿಎಸ್ಎನ್ಎಲ್ ಸ್ಯಾಟಿಲೈಟ್ ಫೋನ್ ಸೇವೆಯನ್ನು ನೀಡಲಿದೆ. ಸಾಮಾನ್ಯ ಮೊಬೈಲ್ ನೆಟ್‌ವರ್ಕ್ ಇಲ್ಲದ ಜಾಗದಲ್ಲಿ ಸ್ಯಾಟಿಲೈಟ್ ಫೋನ್ ಸೇವೆ ಇರಲಿದೆ. ಇದಕ್ಕಾಗಿ ಇನ್‌ಮಾರ್‌ಸ್ಯಾಟ್ ಒಟ್ಟು 14 ಉಪಗ್ರಹಗಳನ್ನು ಹೊಂದಿದೆ.
ಇಲ್ಲಿ ಓದಿರಿ :- ರೂ 799ಕ್ಕೆ ನೋಕಿಯಾ !!!
ಅಂತರರಾಷ್ಟ್ರೀಯ ಮೊಬೈಲ್ ಉಪಗ್ರಹ ಸಂಘಟನೆ:- 1979ರಲ್ಲಿ ಯುನಿಟೆಡ್ ನೇಷನ್ ನಲ್ಲಿ ಆರಂಭವಾದ ಅಂತರರಾಷ್ಟ್ರೀಯ ಮೊಬೈಲ್ ಉಪಗ್ರಹ ಸಂಘಟನೆಯಲ್ಲಿ ಭಾರತ ಸಂಸ್ಥಾಪಕ ಸದಸ್ಯವನ್ನು ಹೊಂದಿದೆ. ಭಾರತ ಸದ್ಯ ಪುಣೆಯಲ್ಲಿ ಸ್ಯಾಟಿಲೈಟ್ ಫೋನ್ ಸೇವೆಗೆ ಅಗತ್ಯವಿರುವ ಭೂ ವಿನಿಮಯ ಕೇಂದ್ರವನ್ನು ಸ್ಥಾಪಿಸಿದೆ.
ವಿಮಾನದಲ್ಲಿ, ಹಡಗಿನಲ್ಲೂ ಸೇವೆ ಇರಲಿದೆ:- ಬಿಎಸ್ಎನ್‌ಎಲ್ ದೇಶದಲ್ಲಿ ಇದೇ ಮೊದಲ ಬಾರಿಗೆ ಸ್ಯಾಟಿಲೈಟ್ ಫೋನ್ ಸೇವೆಯನ್ನು ನೀಡುತ್ತಿದ್ದು, ಇದು ವಿಮಾನದಲ್ಲಿ ಪ್ರಯಾಣಿಸುವವರಿಗೆ ಮತ್ತು ಹಡಗಿನಲ್ಲಿ ಪ್ರಯಾಣಿಸುವರಿಗೆ ಸಹಾಯಕಾರಿಯಾಗಲಿದ್ದು, ಎಲ್ಲಿಂದ ಬೇಕಾದರು ಕರೆ ಮಾಡುವ ಮತ್ತು ಸ್ವೀಕರಿಸುವ ಅವಕಾಶ ಇರಲಿದೆ.
ವಾಯ್ಸ್ ಮತ್ತು ಎಸ್‌ಎಂಎಸ್ ಮಾತ್ರ ಸಾಧ್ಯ:- ಬಿಎಸ್ಎನ್‌ಎಲ್ ಸ್ಯಾಟಿಲೈಟ್ ಫೋನ್ ಸೇವೆಯಲ್ಲಿ ಬಳಕೆದಾರರು ಕೇವಲ ವಾಯ್ಸ್ ಕರೆ ಮತ್ತು ಎಸ್‌ಎಂಎಸ್ ಗಳನ್ನು ಮಾತ್ರವೇ ಮಾಡಲು ಸಾಧ್ಯವಿರಲಿದೆ. ಇದನ್ನು ಬಳಕೆ ಮಾಡಬೇಕಾಗದರೆ ನೆಟ್‌ವರ್ಕ್ ಇಲ್ಲ ಎನ್ನುವ ಮಾತೇ ಇಲ್ಲ.
ಟಿಸಿಎಲ್ ಸೇವೆ ಅಂತ್ಯ:- ಇದುವರೆಗೂ ದೇಶದಲ್ಲಿ ಸ್ಯಾಟಲೈಟ್ ಫೋನ್ ಸೇವೆಯನ್ನು ನೀಡುತ್ತಿದ್ದ ಟಾಟಾ ಕಮ್ಯುನಿಕೇಷನ್ಸ್ ಲಿ ಜೂನ್ ಅಂತ್ಯದಿಂದ ತನ್ನ ಸೇವೆಯನ್ನು ನಿಲ್ಲಿಸಲಿದ್ದು, ಅದನ್ನು ಬಿಎಸ್ಎನ್ಎಲ್ ಮುಂದುವರೆಸಿಕೊಂಡು ಹೋಗಲಿದೆ ಎನ್ನಲಾಗಿದೆ.
ಮೊಬೈಲ್ ನಂತೆಯೇ ಇರಲಿದೆ:- ಬಿಎಸ್ಎನ್‌ಎಲ್ ಸ್ಯಾಟಿಲೈಟ್ ಫೋನ್ ಬಳಕೆಗೆ ಮೊಬೈಲ್ ಫೋನ್ ಮಾದರಿಯ ಉಪಕರಣ ದೊರೆಯಲಿದೆ. ಇದಕ್ಕಾಗಿ ದೊಡ್ಡ ಗ್ರಾತದ ಉಪಕರಣ ಬಳಕೆಯ ಅವಶ್ಯಕತೆ ಇರುವುದಿಲ್ಲ.
ಶೀಘ್ರವೇ ಜನ ಸಾಮಾನ್ಯರಿಗೂ ಈ ಸೇವೆ:- ಸದ್ಯ ಭಾರತದಲ್ಲಿ ಸ್ಯಾಟಿಲೈಟ್ ಫೋನ್ ಸೇವೆಯನ್ನು ಪೊಲೀಸ್ ವ್ಯವಸ್ಥೆ, ರೈಲ್ವೆ ಇಲಾಖೆ, ಗಡಿ ಭದ್ರತಾ ಪಡೆ ಮತ್ತು ಹಡಗುಗಳಲ್ಲಿ ಮಾತ್ರವೇ ಬಳಸುವ ಅವಕಾಶವನ್ನು ಮಾಡಿಕೊಡಲಾಗಿತ್ತು. ಆದರೆ ಮುಂದೇ ಜನರಿಗೆ ಈ ಸೇವೆ ವಿಸ್ತರಿಸುವ ಯೋಜನೆಯನ್ನು ರೂಪಿಸಲಾಗಿದೆ.
ಆದರೆ ದುಬಾರಿ ಬೆಲೆ:- ಸ್ಯಾಟಿಲೈಟ್ ಫೋನ್ ಪೋನ್‌ನಲ್ಲಿ ಒಂದು ಕರೆ ಮಾಡಬೇಕಾಗಿದರೆ ಪ್ರತಿ ನಿಮಿಷಕ್ಕೆ ರೂ.35 ರಿಂದ ರೂ. 45 ಪಾವತಿಸಬೇಕಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಶ್ರಾವಣ ಶುಕ್ರವಾರ ನಡೆಯುವ ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸಲು ಪ್ರತಿ ವರ್ಷ ಬಳ್ಳಾರಿಗೆ ಬರುತ್ತಿದ್ದ ಭಾರತ ಸರಕಾರದ ಸಚಿವೆಯಾಗಿರುವ ಸುಷ್ಮಾ ಸ್ವರಾಜ್’ರವರು ಈ ವರ್ಷವಾದರೂ ಬಳ್ಳಾರಿಗೆ ಬರುತ್ತಾರೆಯೇ?
ಅಪರೂಪದ ಖಾಯಿಲೆಯ ಲಕ್ಷಣವೊಂದಕ್ಕೆ ಕರ್ನಾಟಕದ ವೈದ್ಯರೊಬ್ಬರ ಹೆಸರು ನಾಮಕರಣ ಮಾಡಲಾಗಿದೆ.
ರಿಪಬ್ಲಿಕ್ ಆಫ್ ಇಂಡಿಯಾ ಚಾನೆಲ್ ಮುಖ್ಯಸ್ಥರಾದ ಅರ್ನಾಬ್ ಗೋಸ್ವಾಮಿ ಟ್ವೀಟ್ ಮಾಡಿರುವ ಪ್ರಕಾರ 2019ಕ್ಕೆ ಭಾರತ ಬಿಜೆಪಿಮಯವಾಗಲಿದೆಯಾ? ಹಾಗೂ ಭಾರತದ ಜನರಿಗೆ ಜಿಯೋ ಮಾತ್ರ ಆಪ್ಷನ್ ಆಗುತ್ತಾ?
ಹೆಚ್ಚಿನ ವಿಜ್ಞಾನಿಗಳು ಹೇಳುವಂತೆ ಶೌಚಾಲಯವು ರೋಗ ರುಜಿನಗಳ ತವರಾಗಿದೆ ಎಂದಾಗಿದೆ. ಆದ್ದರಿಂದ ನೀವು ಸ್ಥಳಕ್ಕೆ ಹೆಚ್ಚು ಆದ್ಯತೆ ನೀಡಿ ಸ್ವಚ್ಛಗೊಳಿಸಿದಂತೆ ನಿಮ್ಮ ಮನೆಯನ್ನು ರಕ್ಷಿಸಿಕೊಳ್ಳಬಹುದಾಗಿದೆ.
ರಾಜಕಾರಣಿಗಳು ಕೆಲಸ ಮಾಡದಿದ್ದರೆ ಅವರ ವಿರುದ್ಧ ಜನರು ವಿವಿಧ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಾರೆ. ಆದರೆ ಆಗಾಗ ಕೆಲವು ಪ್ರತಿಭಟನೆಗಳು ಎಲ್ಲರ ಗಮನ ಸೆಳೆಯುತ್ತವೆ. ಆಸ್ಟ್ರೇಲಿಯಾದ ತಾಸ್ಮಾನಿಯಾದ ಈ ವ್ಯಕ್ತಿ ಮಾಡಿದ ಪ್ರತಿಭಟನೆ ಕೂಡ ಬಹಳ ವಿಶಿಷ್ಟವಾಗಿದೆ. 51 ವರ್ಷದ ವ್ಯಕ್ತಿಯೊಬ್ಬ ಸ್ಥಳೀಯ ಜನಪ್ರತಿನಿಧಿ ಅವನ ಮಾತು ಕೇಳಲಿಲ್ಲವೆಂದು ಅವರ ಕಚೇರಿಯ ಮುಂದೆ 8000 ಕೆಜಿಯಷ್ಟು ಗೊಬ್ಬರ ಹಾಕಲು ಹೋಗಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಅವನಿಗೆ ಬೇಕಾಗಿರುವ ಸರ್ಕಾರದ ಅನುದಾನದ ಬಗ್ಗೆ ಕೇಳಿದ್ದಾನೆ. ಯಾವಾಗ ಅವರು ಅವನ ಪ್ರಶ್ನೆಗೆ ಉತ್ತರಿಸಲಿಲ್ಲವೋ…
ತೂಕ ನಷ್ಟಕ್ಕೆ ಆಹಾರವನ್ನು ಅನುಸರಿಸುವಾಗ ನೀವು ಸೇವಿಸುವ ಕ್ಯಾಲೊರಿಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕಾಗುತ್ತದೆ. ನೀವು ಸೇವಿಸುವುದಕ್ಕಿಂತ ಹೆಚ್ಚಿನ ಕ್ಯಾಲೊರಿಗಳನ್ನು ನೀವು ಸುಡಬೇಕು. ಅದಕ್ಕಾಗಿಯೇ ತೂಕ ನಷ್ಟಕ್ಕೆ ಯಾವುದೇ ಆಹಾರವು ನೀವು ಸೇವಿಸುವ ಕ್ಯಾಲೊರಿಗಳ ಸಂಖ್ಯೆಯನ್ನು ನಿರ್ಬಂಧಿಸುತ್ತದೆ. ಆದರೆ ದಿನದ ಯಾವುದೇ ಸಮಯದಲ್ಲಾದರೂ ಹಸಿವು ಜಾಸ್ತಿಯಾಗಿ ನಿವು ಅಗತ್ಯಕ್ಕಿಂತ ಹೆಚ್ಚಿನದನ್ನು ತಿನ್ನಬಹುದು ಇದರಿಂದ ನಿಮ್ಮ ದೇಹದ ತೂಕ ಕಡಿಮೆಯಾಗುವುದಿಲ್ಲ. ಹೊಟ್ಟೆಯ ಕೊಬ್ಬಿನ ಶೇಖರಣೆಗೆ ಕಾರಣವಾಗುವ ಆಹಾರವನ್ನ ನಿವು ಹಸಿವನ್ನು ನೀಗಿಸಲು ಹೆಚ್ಚಾಗಿ ಹೆಚ್ಚಿನ ಕ್ಯಾಲೊರಿಗಳನ್ನು ಸೇವಿಸುತ್ತೀರಿ. ಅಂತಹ ಪರಿಸ್ಥಿತಿಯನ್ನು…