ಗ್ಯಾಜೆಟ್

ಹುಷಾರ್!ನೀವು ಚೀನಾ ಮೊಬೈಲ್ ಬಳುಸುತ್ತಿದ್ದರೆ ತಪ್ಪದೆ ಈ ಲೇಖನಿ ಓದಿ…

1674

ಈಗಾಗಲೇ ಭಾರತ ಚೀನಾ ಮಧ್ಯದ ಸಂಬಂದ ಹಳಸಿದ್ದು ಯುದ್ದದ ಸನ್ನಿವೇಶ ಉತ್ಪನ್ನವಾಗಿದೆ. ಇದರ ನಡುವೆ ಚೀನಾದ ಮೊಬೈಲ್’ಗಳಿಂದ ಅಪಾಯ ಇದೆ ಎಂಬ ಸೂಚನೆ ಸಿಕ್ಕಿದೆ.

ಹಾಗಾಗಿ ಭಾರತವು ಚೀನಾದ ಒಪ್ಪೋ, ಷಿಯಾಮಿ, ಜಿಯೋನಿ, ಕಂಪನಿಗಳಿಗೆ ನೋಟಿಸ್ ನೀಡಿದೆ. ಮತ್ತು  ಕೇಂದ್ರ ಸರ್ಕಾರವು , ಹ್ಯಾಕಿಂಗ್ ಭದ್ರತಾ ಫೀಚರ್`ಗಳ ಬಗ್ಗೆ ಕಂಪನಿಗಳಲ್ಲಿ  ವಿವರಣೆ ಕೇಳಿದೆ.

ಚೀನಾ ಮೋಬೈಲ್`ಗಳಿಂದ ಭಾರತಕ್ಕೆ ಅಪಾಯ

ಯುದ್ದದ ಸನ್ನಿವೇಶ ಏರ್ಪಟ್ಟಿರುವುದರಿಂದ ಚೀನಾದ ಮೊಬೈಲ್’ಗಳ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ, ಈ ಮೊಬೈಲ್’ಗಳು ಭಾರತೀಯರ ವೈಯಕ್ತಿಕ ಮಾಹಿತಿ ಮತ್ತು ಸಂದೇಶಗಳನ್ನ ಕದಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ.

ಇದರ ಬೆನ್ನಲ್ಲೇ ಚೀನಾ ಮೋಬೈಲ್`ಗಳಿಂದ ಭಾರತಕ್ಕೆ ಅಪಾಯದ ಸೂಚನೆ ಸಿಕ್ಕಿದೆ. ಹೀಗಾಗಿ, ಚೀನಾ ಮೊಬೈಲ್ ಕಂಪನಿಗಳಿಗೆ ಕೇಂದ್ರ ಸರ್ಕಾರ ನೋಟಿಸ್ ಕೊಟ್ಟಿದೆ.

ಈ ಕಂಪನಿಗಳಿಗೆ ಆಗಸ್ಟ್ 28ರವರೆಗೆ ಕೇಂದ್ರ ಸರ್ಕಾರ ಕಾಲಾವಕಾಶ ನೀಡಲಾಗಿದ್ದು, ಅಷ್ಟರೊಳಗೆ ಭದ್ರತಾ ನಿಯಮಗಳ ಅನುಸರಣೆಯ ಮಾಹಿತಿ ಸಲ್ಲಿಸುವಂತೆ ತಿಳಿಸಲಾಗಿದೆ.

ಒಂದು ವೇಳೆ ಭದ್ರತಾ ನಿಯಮಗಳು ಉಲ್ಲಂಘನೆಯಾಗಿದ್ದಲ್ಲಿ  ಅಂತಹ ಕಂಪನಿಗಳಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಇದರ ಜೊತೆಗೆ ಕೇಂದ್ರ ಸರ್ಕಾರ, ಚೀನಾದಿಂದ ಆಮದಾಗುವ ಅಪಾರ ಪ್ರಮಾಣದ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನ ಪರಿಶೀಲನೆಗೆ ಒಳಪಡಿಸುತ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ