ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತ ಮೂಲದ ವಿಧ್ಯಾರ್ಥಿಗಳು ಎಷ್ಟು ಜೀನಿಯಸ್ ಎಂದ್ರೆ, ಪ್ರಪಂಚದ ಯಾವುದೇ ದೇಶದಲ್ಲಿ ಇದ್ದರೂ ಬುದ್ದಿವಂತಿಕೆಯಲ್ಲಿ ನಮ್ಮ ದೇಶದವರು ಒಂದು ಕೈ ಮೇಲೇನೆ ಇರುತ್ತಾರೆ.
ಹೌದು! ಭಾರತ ಮೂಲದ ರಾಹುಲ್ ಎಂಬ ಪುಟ್ಟ ಬಾಲಕ ಬ್ರಿಟಿಷ್ ಟಿವಿ ಷೋ ಒಂದರಲ್ಲಿ ಭಾಗವಹಿಸುವ ಮುಖಾಂತರ ಫೇಮಸ್ ಆಗಿದ್ದಾನೆ.
ಭಾರತ ಮೂಲದ 12 ವರ್ಷ ವಯಸ್ಸಿನ ಬಾಲಕ ಬ್ರಿಟಿಷ್ ಟಿವಿ ಷೋ ಒಂದರಲ್ಲಿ ಎಲ್ಲ ಪ್ರಶ್ನೆಗಳಿಗೆ ಸರಿ ಉತ್ತರ ನೀಡುವ ಮೂಲಕ ರಾತ್ರೋರಾತ್ರಿ ಮನೆಮಾತಾಗಿದ್ದಾನೆ.
ಚಾನಲ್ 4 ಪ್ರಸಾರ ಮಾಡುವ ಚೈಲ್ಡ್ ಜೀನಿಯಸ್ ಕಾರ್ಯಕ್ರಮದಲ್ಲಿ ರಾಹುಲ್ ಎಂಬ ಪುಟ್ಟ ಬಾಲಕ ಮೊದಲ ಸುತ್ತಿನಲ್ಲಿ ಎಲ್ಲ 14 ಪ್ರಶ್ನೆಗಳಿಗೂ ಸರಿ ಉತ್ತರ ನೀಡಿ ಗಮನ ಸೆಳೆದಿದ್ದಾನೆ.
ಅಲ್ಬರ್ಟ್ ಐನ್ಸ್ಟೀನ್’ಗಿಂತಲೂ ಅಧಿಕ ಐಕ್ಯೂ
162 ಐಕ್ಯೂ ಹೊಂದಿರುವ ಈ ಬಾಲಕ, ಅಲ್ಬರ್ಟ್ ಐನ್ಸ್ಟೀನ್ ಹಾಗೂ ಸ್ಟೀಫನ್ ಹಾಕಿಂಗ್ಸ್ಗಿಂತಲೂ ಅಧಿಕ ಐಕ್ಯೂ ಹೊಂದಿದ್ದಾನೆ ಎಂದು ಹೇಳಲಾಗಿದೆ.
ಇವನ ಐಕ್ಯೂ ಪ್ರಮಾಣ ಹಳೆಯಲು ಇನ್ನೂ ಸಾಧ್ಯವಾಗಿಲ್ಲ
ಈ ಮೂಲಕ ಬಾಲಕ ವಿಶ್ವದ ಅತ್ಯಧಿಕ ಐಕ್ಯೂ ಹೊಂದಿದ ವ್ಯಕ್ತಿಗಳ ಸಾಲಿಗೆ ಸೇರಿದ್ದಾನೆ. ಆದರೆ ಈತನ ಐಕ್ಯೂ ಪ್ರಮಾಣವನ್ನು ನಿಖರವಾಗಿ ಯಾವ ವಿಜ್ಞಾನಿಗಳೂ ಅಳೆದಿಲ್ಲ. ಇದು ಅಂದಾಜು ಐಕ್ಯೂ ಆಗಿದೆ.
ಇದರ ಬಗ್ಗೆ ರಾಹುಲ್ ಹೇಳಿದ್ದೇನು ಗೊತ್ತಾ?
ರಾಹುಲ್ ಹೇಳಿರುವ ಪ್ರಕಾರ ನಾನು ಯಾವಾಗಲು ಖರ್ಚಿನ ಬಗ್ಗೆ ಯೋಚನೆ ಮಾಡದೆ, ನನ್ನ ಕಡೆಯಿಂದ ಅತ್ಯುತ್ತಮವಾದದನ್ನು ಏನೆಲ್ಲಾ ಕೊಡಬಹುದೋ, ಅದನ್ನು ಕೊಡಲು ಪ್ರಯತ್ನಿಸುತ್ತೇನೆ.ನನ್ನ ಪ್ರಕಾರ ನಾನು ಬುದ್ದಿವಂತ, ಪ್ರತಿಭಾವಂತ. ನಾನು ಮಾನಸಿಕ ಗಣಿತ ಮತ್ತು ಸಾಮಾನ್ಯ ಜ್ಞಾನದಲ್ಲಿ ತುಂಬಾ ಉತ್ತಮವಾಗಿದ್ದೇನೆ. ನನ್ನ ನೆಚ್ಚಿನ ಭಾಷೆ ಲ್ಯಾಟಿನ್ ಎಂದು ರಾಹುಲ್ ಹೇಳಿದ್ದಾರೆ.
ಪರೀಕ್ಷೆ ಹೇಗೆ ನಡೆಯುತ್ತೆ?
ಈ ಕಾರ್ಯಕ್ರಮದಲ್ಲಿ 12 ವರ್ಷ ವಯಸ್ಸಿನ 20 ಮಕ್ಕಳ ಪೈಕಿ ವಾರಕ್ಕೆ ಒಬ್ಬ ಬಾಲಕನನ್ನು ಆಯ್ಕೆ ಮಾಡಲಾಗುತ್ತದೆ. ಸ್ಪೆಲ್ಲಿಂಗ್ ಪರೀಕ್ಷೆಯಲ್ಲಿ ಪೂರ್ಣ ಅಂಕ ಪಡೆದ ರಾಹುಲ್ ಕಠಿಣ ಶಬ್ದಗಳನ್ನು ಕೂಡಾ ಸಮರ್ಪಕವಾಗಿ ಉಚ್ಚರಿಸಿದ್ದ.
ಟೈಮ್ಡ್ ಮೆಮೊರಿ ಸುತ್ತಿನಲ್ಲಿ 15 ಪ್ರಶ್ನೆಗಳ ಪೈಕಿ 14ಕ್ಕೆ ಸರಿ ಉತ್ತರ ನೀಡಿದ್ದ. ಆದರೆ ಅಂತಿಮ ಪ್ರಶ್ನೆಗೆ ಉತ್ತರಿಸಲು ಸಮಯಾವಕಾಶ ಇರಲಿಲ್ಲ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಜ್ಯ ಸಿಇಟಿ ಫಲಿತಾಂಶ ಇಂದು ಬೆಳಗ್ಗೆ 11 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ.
ಬಡವರ ಸೇಬು ಎಂದೇ ಖ್ಯಾತಿ ಪಡೆದಿರುವ ಸೀಬೆ ಅಥವಾ ಪೇರಳ ಹಣ್ಣು ಎಲ್ಲಾ ಖಾಯಿಲೆಗೂ ರಾಮಬಾಣ. ಸೇಬಿನ ಬದಲು ದಿನಕ್ಕೊಂದು ಸೀಬೆಹಣ್ಣು ತಿಂದು ವೈದ್ಯರಿಂದ ದೂರ ಇರಿ ಎಂದು ಹೇಳಬಹುದು. ಏಕೆಂದರೆ ಉತ್ತಮ ಹಣ್ಣುಗಳಲ್ಲಿ ಸೀಬೆಹಣ್ಣು ಕೂಡ ಒಂದು. ಅಗತ್ಯವಾಗಿ ಬೇಕಾಗಿರುವ ಪ್ರಮುಖ ಪೌಷ್ಟಿಕಾಂಶಗಳನ್ನು ಹೊಂದಿರುವ ಹಣ್ಣು ಇದು. ಸ್ಲಿಮ್ ಆಗಬೇಕೆನ್ನುವವರು ಡಯಟಿಂಗ್ ಲಿಸ್ಟ್‌ನಲ್ಲಿ ಸೀಬೆಹಣ್ಣನ್ನು ಸೇರಿಸಿಕೊಳ್ಳಬಹುದು. ಕಡಿಮೆ ಕ್ಯಾಲೋರಿಯ ಈ ಹಣ್ಣು , ದೇಹಕ್ಕೆ ವಿಟಮಿನ್‌ಗಳ ಮಹಾಪೂರವನ್ನೇ ಪೂರೈಸುವುದರೊಂದಿಗೆ ಕೊಬ್ಬಿನಾಂಶದ ಪ್ರಮಾಣವನ್ನು ಕುಂಠಿತಗೊಳಿಸುತ್ತದೆ ಎನ್ನುತ್ತಾರೆ ಎಕ್ಸ್‌ಪರ್ಟ್ಸ್. ಇದು…
ನಿತ್ಯ ಭವಿಷ್ಯ………… ಮೇಷ ರಾಶಿ ನಿಮ್ಮ ಬುದ್ಧಿ ಚಾತುರ್ಯಕ್ಕೆ ಎಂತಹವರೂ ತಲೆ ಬಾಗುವರು. ಜೀವನದಲ್ಲಿನ ಕಷ್ಟಗಳ ಮೇಲೆ ಜಯ ಸಾಧಿಸುವಿರಿ. ಉತ್ತಮ ಸ್ನೇಹಿತರ ಬೆಂಬಲ ನಿಮಗೆ ದೊರೆಯುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ನಂಬಿದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಕ್ರಮೇಣ ತೊಂದರೆಗೆ ದಾರಿ ಆಗುವುದು. ವೃಷಭ ರಾಶಿ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಪ್ರಗತಿಯತ್ತ ಸಾಗುವವು. ಕೆಲವರಿಗೆ ಬಡ್ತಿ ಸಿಗುವುದು. ದೂರದೂರಿನ ಬಂಧುಗಳಿಂದ ಕಿರಿಕಿರಿ ಮಾತುಗಳು ಎದುರಾಗುವ ಸಂಭವವಿದೆ. ನೀವು ಮಾಡದೇ ಇರುವ ತಪ್ಪಿಗೆ ಮುನಿಸಿಕೊಳ್ಳುವ ಸಂದರ್ಭವಿದೆ. ಇದಕ್ಕೆ ಹೆಚ್ಚಿನ…
ನಿಮ್ಮ ಮನೆಗೆ ಧಿಡೀರ್ ಅಂತ ಅತಿಥಿಗಳು ಬಂದರೆ ಇಲ್ಲಿದೆ ನೋಡಿ ಬಿಸಿ ಬಿಸಿ ತುಪ್ಪಾನ್ನ ಮಾಡುವ ವಿಧಾನ
ಲಕ್ನೋ: ಗೂಡ್ಸ್ ರೈಲು ಹಳಿ ತಪ್ಪಿದ್ದ ಸುದ್ದಿಯನ್ನು ವರದಿ ಮಾಡಲು ಹೋಗಿದ್ದ ಪತ್ರಕರ್ತನ ಮೇಲೆ ಹಲ್ಲೆ ಮಾಡಿ, ಆತನ ಬಟ್ಟೆ ಬಿಚ್ಚಿಸಿ ಬಲವಂತವಾಗಿ ಮೂತ್ರ ಕುಡಿಸಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿಯಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಧೀಮಾನ್ಪುರಾದಲ್ಲಿ ಗೂಡ್ಸ್ ರೈಲು ಹಳಿತಪ್ಪಿದ ಸಂದರ್ಭದಲ್ಲಿ ಪತ್ರಕರ್ತ ವರದಿ ಮಾಡಲು ಹೋದಾಗ ಈ ಘಟನೆ ನಡೆದಿದೆ. ಸರ್ಕಾರಿ ರೈಲ್ವೇ ಪೊಲೀಸ್(ಜಿಆರ್ ಪಿ) ಅಧಿಕಾರಿ ರಾಕೇಶ್ ಕುಮಾರ್ ನೇತೃತ್ವದ ಸಿಬ್ಬಂದಿ ಪತ್ರಕರ್ತನ ಮೇಲೆ ಹಲ್ಲೆ ಮಾಡಿದ್ದಾರೆ. ಪತ್ರಕರ್ತನ ಮೇಲೆ ಹಲ್ಲೆ ಮಾಡಿರುವ…
ಮಂಡ್ಯ: ಗುತ್ತಲು ರಸ್ತೆಯಲ್ಲಿ 2018ರ ಅ.2ರ ಸಂಜೆ ಸಂಭವಿಸಿದ್ದ ಲಾರಿ ಅಪಘಾತದಲ್ಲಿ ಮೃತಪಟ್ಟವರು ದೆವ್ವಗಳಾಗಿದ್ದಾರೆ. ಆ ದೆವ್ವಗಳ ಚಿತ್ರಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ ಎಂಬ ಚಿತ್ರಸಹಿತ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿವೆ. ಇತ್ತೀಚೆಗೆ ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲ ಬಳಿ ಬಿಳಿ ಬಟ್ಟೆ ತೊಟ್ಟಿದ್ದ ಮಹಿಳೆಯಂತೆ ನಿಂತು ಡ್ರಾಪ್ ಕೇಳುವ ವಿಡಿಯೋ ವೈರಲ್ ಆಗಿ. ಅದು ದೆವ್ವವೇ ಇರಬೇಕು ಎಂಬ ಚರ್ಚೆಗಳು ನಡೆದಿದ್ದವು. ಅದರ ಬೆನ್ನಲ್ಲೇ ನಗರದ ಗುತ್ತಲು ರಸ್ತೆ ಬದಿಯಲ್ಲಿ ಮತ್ತು ಬೇಕರಿಯೊಂದರ ಪಕ್ಕ ದೆವ್ವಗಳು…