ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕರ್ನಾಟಕ ಸರ್ಕಾರದ ಹೊಸ ಯೋಜನೆಯಾದ ಇಂದಿರಾ ಕ್ಯಾಂಟೀನ್ ಯೋಜನೆ ಆರಂಭವಾಗಿದ್ದು, ಮೊದಲ ದಿನವೇ ಭರ್ಜರಿ ಪ್ರತಿಕ್ರಿಯೆ ದೊರೆತಿದೆ. ಇದು ರ್ರಾಜ್ಯ ಸರ್ಕಾರದ ನೂತನ ಯೋಜನೆಯಾಗಿದ್ದು, ಬೆಂಗಳೂರು ನಗರದಲ್ಲಿ ಬಡ ಹಾಗೂ ಕೆಳ ಮಧ್ಯಮ ವರ್ಗ ದವರಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಕೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಇಂದಿರಾ ಕ್ಯಾಂಟೀನ್’ ಎಂಬ ಹೆಸರಿನಲ್ಲಿ ಆರಂಭಿಸಿದೆ.
ಬೆಂಗಳೂರು ನಗರದಾದ್ಯಂತ 101 ಇಂದಿರಾ ಕ್ಯಾಂಟೀನ್’ಗಳಲ್ಲಿ ಆಹಾರ ಲಭ್ಯವಾಗಿದ್ದು, 6 ಅಡುಗೆ ಮನೆಗಳಿಂದ 101 ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆಮಾಡಲಾಗುತ್ತಿದೆ. ಈ ಎಲ್ಲಾ ಕ್ಯಾಂಟೀನ್ ಗಳಲ್ಲಿ ದಿನ ನಿತ್ಯ ಸುಮಾರು 1500 ಜನರಿಗೆ ಆಹಾರ ಒದಗಿಸಲು ಸರ್ಕಾರ ನಿರ್ಧರಿಸಿದೆ.
7.30 ರ ವೇಳೆಗೆ ಕ್ಯಾಂಟೀನ್ ತೆರೆದರೆ ಗ್ರಾಹಕರು 7 ಗಂಟೆಯ ವೇಳೆಗೆ ಆಗಮಿಸಿ ತಿಂಡಿಗಾಗಿ ಸರದಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದೆ. ಕನಕನಪಾಳ್ಯದಲ್ಲಿರುವ ಕ್ಯಾಂಟೀನ್‌ನಲ್ಲಿ 1 ಗಂಟೆಯವೊಳಗೆ ತಿಂಡಿ ಖಾಲಿಯಾಗಿ ಕೆಲ ಗ್ರಾಹಕರು ನಿರಾಸೆಯಾಗಿ ವಾಪಾಸ್ ಹೋಗಿರುವ ಬಗ್ಗೆ ವರದಿಯಾಗಿದೆ.
ಇಂದಿರಾ ಕ್ಯಾಂಟೀನ್ ತಿಂಡಿ ಬಗ್ಗೆ ಜನರ ಅಭಿಪ್ರಾಯ:-
ತಿಂಡಿ ಸವಿದ ಗ್ರಾಹಕರು ತಿಂಡಿ ತುಂಬಾ ಚೆನ್ನಾಗಿದೆ ಆದರೆ ನೀಡುತ್ತಿರುವ ಪ್ರಮಾುಣ ಸಾಲುತ್ತಿಲ್ಲ ಎಂದಿದ್ದಾರೆ. 5 ರೂಪಾಯಿಗೆ 250 ಗ್ರಾಂ ತಿಂಡಿ ನೀಡಲಾಗುತ್ತಿದ್ದು ಇದು ಗ್ರಾಹಕರಿಕೆ ಕಡಿಮೆ ಎನಿಸಿದೆ.
ಇಂದಿರಾ ಕ್ಯಾಂಟೀನ್’ನ ಮೆನು ಹೀಗಿದೆ ನೋಡಿ:-
ಇಂದಿರಾ ಕ್ಯಾಂಟೀನ್ ಬೆಳಗ್ಗಿನ ಉಪಹಾರ
ಸಾಂಬಾರ್ ಹಾಗೂ ಮೊಸರನ್ನದೊಂದಿಗೆ ಕ್ರಮವಾಗಿ ಟೊಮೆಟೋಬಾತ್, ಚಿತ್ರಾನ್ನ, ವಾಂಗಿಬಾತ್, ಬಿಸಿಬೇಳೆಬಾತ್, ಮೆಂತ್ಯೆಪಲಾವ್, ಪುಳಿಯೋಗರೆ ಹಾಗೂ ದರ್ಶಿನಿ ಪಲಾವ್ ನೀಡಲಾಗುತ್ತಿದೆ. ಖಾರಾಬಾತ್ ಮತ್ತು ಕೇಸರಿಬಾತ್ ದೊರೆಯಲಿದೆ. ಇಡ್ಲಿಯ ಜತೆಗೆ ಕ್ರಮವಾಗಿ ಪುಳಿಯೋಗರೆ ಸಹ ಬೆಳಗ್ಗಿನ ತಿಂಡಿಯಾಗಿ ದೊರೆಯಲಿದೆ.
ಮಧ್ಯಾಹ್ನದ ಹಾಗೂ ರಾತ್ರಿ ಊಟ
ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಸಾಮಾನ್ಯವಾಗಿ ಅನ್ನವಾಂಗಿಬಾತ್, ಚಿತ್ರಾನ್ನ,ರವಾ ಕಿಚಡಿ, ಪೊಂಗಲ್, ಖಾರಾಬಾತ್,
ಹಾಗಾದ್ರೆ “ನಮ್ಮ ಆಪ್ಪಾಜಿ ಕ್ಯಾಂಟೀನ್” ವಿಶೇಷ ಏನು ಗೊತ್ತಾ?
ರಾಜ್ಯ ಸರ್ಕಾರದ ಇಂದಿರಾ ಕ್ಯಾಂಟೀನ್ ಯೋಜನೆಗೆ ಸೆಡ್ಡು ಹೊಡೆಯಲ , ಜೆಡಿಎಸ್ ಮುಖಂಡ ಶಾಸಕ ಟಿ ಎ ಶರವಣ ‘ನಮ್ಮ ಅಪ್ಪಾಜಿ ಕ್ಯಾಂಟೀನ್’ಆರಂಭಿಸಿದ್ದಾರೆ.
ನಮ್ಮ ಆಪ್ಪಾಜಿ ಕ್ಯಾಂಟೀನ್ ಮೆನು ಹೀಗಿದೆ :-
ನಮ್ಮ ಅಪ್ಪಾಜಿ ಕ್ಯಾಂಟೀನ್’ನಲ್ಲಿ 5 ರೂ.ಗೆ ತಟ್ಟೆ ಇಡ್ಲಿ-ವಡೆ, ಖಾರಾಬಾತ್, ಕೇಸರಿಬಾತ್, 10 ರೂ.ಗೆ ಪೊಂಗಲ್, ಮುದ್ದೆ ಬಸ್ಸಾರು, ಅನ್ನ ಸಾಂಬಾರ್,ರೈಸ್ ಬಾತ್, 3 ರೂ.ಗೆ ಕಾಫಿ-ಟೀ ನೀಡಲಾಗುವುದು. ಬೆಳಗ್ಗೆ 7.30 ರಿಂದ ಮಧ್ಯಾಹ್ನ 2.30ರ ತನಕ ಕ್ಯಾಂಟೀನ್ ಓಪನ್ ಇರಲಿದೆ.
ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯ ಟಿ ಎ ಶರವಣ ತಮ್ಮ ಸ್ವಂತ ಹಣದಿಂದ ‘ನಮ್ಮ ಅಪ್ಪಾಜಿ ಕ್ಯಾಂಟೀನ್’ ನನ್ನು ಮೊದಲಿಗೆ ಬೆಂಗಳೂರಿನ ಬಸವನಗುಡಿಯಲ್ಲಿ ಶುರುವಾಗಲಿದ್ದು ಬಳಿಕ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಿಗೂ ವಿಸ್ತರಣೆಯಾಗಲಿದೆ.
“ನಮ್ಮ ಆಪ್ಪಾಜಿ ಕ್ಯಾಂಟೀನ್” ಬಹು ಮುಖ್ಯ ವಿಶೇಷತೆ.
ಕ್ಯಾಂಟೀನ್’ಗೆ ರೈತರಿಂದ ನೇರವಾಗಿ ಆಹಾರ ಧಾನ್ಯ, ತರಕಾರಿ ಖರೀದಸಲಾಗುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚಂಡೀಗಢ: 150 ಅಡಿ ಆಳದ ಕೊಳವೆಬಾವಿಗೆ ಬಿದ್ದ 2 ವರ್ಷದ ಬಾಲಕನನ್ನು ಸುಮಾರು 109 ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿ ರಕ್ಷಿಸುವ ಪ್ರಯತ್ನ ನಡೆಸಿದರೂ ಆತ ಮೃತಪಟ್ಟ ಘಟನೆ ಇಂದು ನಡೆದಿದೆ. ಫಥೇವೀರ್ ಸಿಂಗ್ ಬಳಕೆ ಮಾಡದ ಕೊಳವೆ ಬಾವಿಗೆ ¸ಬಿದ್ದ ಬಾಲಕ. ಈತ ಸಂಗೂರ್ ಜಿಲ್ಲೆಯ ಭಗವಾನ್ ಪುರ ಗ್ರಾಮದಲ್ಲಿ ತಮ್ಮ ಮನೆಯ ಹತ್ತಿರವೇ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಆಟವಾಡುತ್ತಿದ್ದನು. ಈ ವೇಳೆ ಬಳಕೆ ಮಾಡದೇ ಇರುವ ಬೋರ್ ವೆಲ್ ಒಳಗೆ ಆಯತಪ್ಪಿ…
ಉತ್ತರ ಕನ್ನಡ ಜೆಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಡ್ಡೆ ಸರಕಾರಿ ಶಾಲೆಯ ಈ ಹುಡ್ಗಾ ನೀರಿನಲ್ಲಿ ಚಲಿಸುವ ಸೈಕಲ್ ಆವಿಷ್ಕಾರ ಮಾಡಿದ್ದು, ಈ ಚಿಕ್ಕ ವಯಸ್ಸಿನಲ್ಲಿಯೇ ಈತನ ಪ್ರತಿಭೆ ಮೆಚ್ಚವಂತದ್ದು.
ಭಾನುವಾರ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಚಾಂಪಿಯನ್ಸ್ ಟ್ರೋಫಿ ಕೊನೆಯ ಲೀಗ್ ಪಂದ್ಯ ನೋಡಲು ಬಂದ ಉದ್ಯಮಿ ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ಭಾರತೀಯ ಪ್ರೇಕ್ಷಕರು ಹೀಯಾಳಿಸಿದ ಘಟನೆ ನಡೆದಿದೆ
ಕೆಲವು ಮಹಿಳೆಯರಿಗೆ ಹೆಚ್ಚು ಕಾಲ ಬೋಳಿಸದ ಗಡ್ಡದ ಪುರುಷರೇ ಹೆಚ್ಚು ಇಷ್ಟ. ಈ ಗಡ್ಡ ಚುಚ್ಚುತ್ತದೆ ಎಂದು ಉಳಿದ ಮಹಿಳೆಯರು ದೂರು ಸರಿದರು ಕೆಲವರಿಗೆ ಮಾತ್ರ ಈ ಚುಚ್ಚುವಿಕೆಯೇ ಹೆಚ್ಚು ಇಷ್ಟವಾಗುತ್ತದಂತೆ! ಈಗ ಬಹುತೇಕ ಪುರುಷರು ರಗಡ್ ಲುಕ್ ಎಂದು ಗಡ್ಡ ಮತ್ತು ಮೀಸೆಯನ್ನು ಉರಿಗೊಳಿಸುವುದನ್ನು ನೀವು ನೋಡಿರಬಹುದು.
ಹೋಟೆಲ್ ಹಾಗೂ ರೆಸ್ಟೋರೆಂಟ್ಗಳಲ್ಲಿ ಗ್ರಾಹಕರಿಗೆ ನೀಡಲಾಗುವ ಆಹಾರಕ್ಕೆ ಮಿತಿ ಹೇರಲು ಕೇಂದ್ರ ಸರ್ಕಾರ ಮುಂದಾಗಿದೆ. ಅಲ್ಲದೇ, ಒಬ್ಬ ವ್ಯಕ್ತಿ ಗರಿಷ್ಠ ಎಷ್ಟುಆಹಾರ ಸೇವಿಸಬಲ್ಲ ಎಂಬುದನ್ನು ಹೋಟೆಲ್ನವರೇ ತಿಳಿಸಬೇಕು ಹೇಳಿದೆ.
ದಟ್ಟವಾದ ರೇಷಿಮೆಯಂತಹ ಕೂದಲು ನೋಡಿದರೆ ಕಣ್ಮನ ಸೆಳೆಯುತ್ತದೆ. ಸುಂದರ ಕೇಶ ಯಾವ ಮೇಕಪ್ ಮತ್ತು ಆಭರಣಗಳು ನೀಡದಂತಹ ಮೆರುಗನ್ನು ನೀಡುತ್ತದೆ. ನಿದಾನವಾಗಿ ತಲೆಬಾಚಲು ಸಹ ಸಮಯ ಸಿಗದ ಇಂದಿನ ದಿನಗಳಲ್ಲಿ ಕೇಶಕ್ಕಾಗಿ ಆರೈಕೆ ತುಸು ಕಷ್ಟವೇ.