ಸಿನಿಮಾ

ಉಪ್ಪಿ ರಾಜಕೀಯ ಎಂಟ್ರಿ?ಯಾವ ರಾಜಕೀಯ ಪಕ್ಷ ಸೇರ್ತಾರೆ ಗೊತ್ತಾ?ಮುಂದೆ ಓದಿ…

458

ದೇಶದ ರಾಜಕಾರಣದಲ್ಲಿ ತಮಿಳುನಾಡಿನ ಸೂಪರ್ ಸ್ಟಾರ್‍ಗಳಾದ ರಜನಿಕಾಂತ್ ಹಾಗೂ ಕಮಲಹಾಸನ್ ಅವರು ರಾಜಕೀಯಕ್ಕೆ ಬರುತ್ತಿರುವ ಬೆನ್ನಲ್ಲೇ ನಮ್ಮ ನಾಡಿನ ರಿಯಲ್‍ಸ್ಟಾರ್ ಉಪೇಂದ್ರ ಸಹ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಉಪೇಂದ್ರ ಅವರು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ರಾಜಕೀಯ ಅಂಗಳಕ್ಕೂ ಇಳಿಯಲಿದ್ದಾರೆ ಎಂದು ಅವರ ಆಪ್ತ ಮೂಲಗಳು ಹಾಗೂ ಅಭಿಮಾನಿಗಳು ಈಗಾಗಲೇ ಸಾಕಷ್ಟು ಬಾರಿ ಹೇಳಿದ್ದಾರಾದರೂ ಈ ಬಗ್ಗೆ ಉಪ್ಪಿ ಎಲ್ಲೂ ಅಧಿಕೃತ ಮಾಹಿತಿ ನೀಡಿಲ್ಲ.

ಈ ಬಗ್ಗೆ ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ಆರಂಭವಾಗಿದ್ದು, ಉಪೇಂದ್ರ ರಾಜಕೀಯ ಪ್ರವೇಶ ಸುದ್ದಿ ದಟ್ಟವಾಗಿದೆ. ಈ ಕುರಿತು ನಾಳೆ ಉಪ್ಪಿ ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆಯೂ ಉಪೇಂದ್ರ ರಾಜಕೀಯ ಬರುತ್ತಾರೆ ಎಂದು ಹೇಳಲಾಗುತ್ತಿತ್ತಾದರೂ ಈ ಬಗ್ಗೆ ಅವರು ಅಲ್ಲಗಳೆದಿದ್ದರು. ತಮ್ಮ ಚಿತ್ರಗಳಲ್ಲಿ ಸಮಾಜದಲ್ಲಾಗುತ್ತಿರುವ ಭ್ರಷ್ಟಾಚಾರ ಹಾಗೂ ರಾಜಕಾರಣದ ಬಗ್ಗೆ ಯುವ ಜನತೆಯಲ್ಲಿ ಜಾಗೃತಿ ಮೂಡಿಸಿದ್ದರು.

ಉಪೇಂದ್ರರವರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದು, ಈ ಮೂಲಕ ಉಪೇಂದ್ರ ಅವರು ರಾಜಕೀಯಕ್ಕೆ ಎಂಟ್ರ ಕೊಟ್ಟರೇ ಬಿಜೆಪಿ ಸೇರಲಿದ್ದಾರೆಯೇ ಅಥವಾ ತಾವೇ ಸ್ವತಂತ್ರ ಪಕ್ಷ ಕಟ್ಟಲಿದ್ದಾರೆಯೇ ಎಂಬ ಪ್ರಶ್ನೆ ಮೂಡತೊಡಗಿದೆ.

ತಮ್ಮ ರಾಜಕೀಯ ಪ್ರವೇಶದ ಕುರಿತಾಗಿ ಅಭಿಮಾನಿಗಳು, ಆತ್ಮೀಯರೊಂದಿಗೆ ಉಪೇಂದ್ರ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಬೆಳವಣಿಗೆಗಳ ಕುರಿತಾಗಿ ಇತ್ತೀಚೆಗೆ ಟ್ವಿಟರ್ ನಲ್ಲಿ ಅವರು ನೀಡುತ್ತಿದ್ದ ಅಭಿಪ್ರಾಯಗಳು ಹೆಚ್ಚಿನ ಗಮನಸೆಳೆದಿದ್ದವು.

ಆದರೆ ಉಪ್ಪಿ ಅವರ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಅವರು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದಾದರೂ ಪಕ್ಷದ ಚಿಹ್ನೆಯಿಂದಲೋ ಅಥವಾ ಸ್ವಾತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೋ ಅಥವಾ ತಾವೇ ಹೊಸ ಪಕ್ಷವನ್ನು ಹುಟ್ಟಿ ಹಾಕುತ್ತಾರೋ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು.

ಅಪಾರ ಅಭಿಮಾನಿಗಳನ್ನು ಹೊಂದಿರುವ ಉಪೇಂದ್ರ ಅವರು ರಾಜಕೀಯಕ್ಕೆ ಪ್ರವೇಶ ಪಡೆಯುತ್ತಿರುವುದಕ್ಕೆ ಅವರ ಅಪಾರ ಅಭಿಮಾನಿಗಳು ಸಹಮತ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

ಉಪೇಂದ್ರ ಅವರು ತಮ್ಮ ಸೂಪರ್, ಟೋಪಿವಾಲ, ಓಂಕಾರ ಚಿತ್ರಗಳಲ್ಲಿ ನಮ್ಮ ರಾಜಕಾರಣಿಗಳು ವಿದೇಶಗಳಲ್ಲಿ ಇಟ್ಟಿರುವ ಕಪ್ಪು ಹಣದ ಬಗ್ಗೆ ವಿಷಯದ ಬಗ್ಗೆ ಹಾಗೂ ಎಚ್‍ಟುಒ ಚಿತ್ರದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವಿನ ನೀರಿನ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ಮೂಲಕ ಗಮನ ಸೆಳೆದಿದ್ದರು.  ದೇಶದ ಅಭಿವೃದ್ಧಿಯ ಬಗ್ಗೆ ಕಾಳಜಿ ಹೊಂದಿರುವ ಉಪೇಂದ್ರ ಅವರು ರಾಜಕೀಯಕ್ಕೆ ಬರುತ್ತಾರೋ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ.

ಸಿಕ್ಕಿಂ ಗಡಿಯಲ್ಲಿ ಚೀನಾ ಉದ್ವಿಗ್ನತೆ ಸೃಷ್ಟಿಸಿ ಯುದ್ಧದ ಭೀತಿ ಆವರಿಸಿರೋ ಈ ಹೊತ್ತಿನಲ್ಲಿ ದೇಶದಲ್ಲಿರೋ ನಾವು ಚಿಕ್ಕ ಚಿಕ್ಕ ವಿಷಯಗಳಿಗೆ ಕಚ್ಚಾಡುತ್ತಿದ್ದೇವೆ ಎಂದು, ಉಪೇಂದ್ರರವರು ಇತ್ತೀಚೆಗೆ ಒಂದು ಟ್ವೀಟ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದರು.

ಭಾರತೀಯರು ಹೇಗಿದ್ದರೂ ಬಂದ್‌ಗಳಿಗೆ ಹೆಸರು ಮಾಡಿದವರು, ಯಾವುದೋ ಸಣ್ಣ ಪುಟ್ಟ ವಿಷಯಕ್ಕೆ ಬಂದ್‌ ಮಾಡಿ ಬೀದಿಗಿಳಿಯುವ ನಾವು ಯಾಕೆ ಭಾರತ್ ಬಂದ್ ಮಾಡಿ ನಮ್ಮ ಯೋಧರನ್ನು ಬೆಂಬಲಿಸಬಾರದು? ಆ ಮೂಲಕ ಯಾಕೆ ಚೀನಾಗೆ ಎಚ್ಚರಿಕೆ ನೀಡಬಾರದು ಎಂದು ಉಪೇಂದ್ರ ಇತ್ತೀಚೆಗಷ್ಟೇ ತಮ್ಮ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಭಾರತದ ಈ ಹಳ್ಳಿಯಲ್ಲಿರುವ ಎಲ್ಲರೂ ಕೋಟ್ಯಾಧಿಪತಿಗಳೇ..!ಇದು ಏಷ್ಯಾದ ಕೋಟ್ಯಾಧಿಪತಿಗಳ ಹಳ್ಳಿ…!

    ಹಳ್ಳಿಗಳು ಅಂದ್ರೆ ನಮ್ಮಲ್ಲಿ ಬಡತನ, ಅನಕ್ಷರತೆ, ಬಂಡವಾಳದ ಕೊರತೆ, ಹಣದ ಅಭಾವ ಎನ್ನುವ ಮಾತುಗಳು ನಮ್ಮ ಕಾಣಿಸುತ್ತವೆ.ಆದರೆ ನಮ್ಮ ಭಾರತದಲ್ಲಿರುವ ಈ ಹಳ್ಳಿ, ಏಷ್ಯಾದ ಶ್ರೀಮಂತ ಹಳ್ಳಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

  • ಸುದ್ದಿ

    ಸಿಎಂ ಯಡಿಯೂರಪ್ಪ ಮುಂದಿವೆ 2 ಸವಾಲುಗಳು…!

    ಬೆಂಗಳೂರು:  ಬಿಜೆಪಿ ಸರ್ಕಾರವೇನೋ ಅಸ್ಥಿತ್ವಕ್ಕೆ ಬಂದಿದೆ. ಆದರೆ, ನೂತನ ಸಿಎಂ ಯಡಿಯೂರಪ್ಪ ಈಗ ಪ್ರಮುಖ 2 ಸವಾಲುಗಳಿವೆ. ಒಂದು ಬಹುಮತಸಾಬೀತು, ಮತ್ತೊಂದು ಸಂಪುಟ ರಚನೆ. ಇದು ಬಿಜೆಪಿ ನಾಯಕರಲ್ಲೂ ತಳಮಳ ಸೃಷ್ಟಿಸಿದೆ. ಮುಂದಿನ ವಾರ ನೂತನ ಸರ್ಕಾರ ಬಹುಮತ ಸಾಬೀತು ಮಾಡುವ ಸಾಧ್ಯತೆ ಇದೆ. 4ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರಕ್ಕೇರಿದ್ದಾರೆ. 14 ತಿಂಗಳ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನ ಬಳಿಕ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಬಹುಮತ ಸಾಬೀತು ಈಗ ಯಡಿಯೂರಪ್ಪ ಮುಂದಿರುವ…

  • ಉಪಯುಕ್ತ ಮಾಹಿತಿ

    ಮನೆಯಲ್ಲಿ ಗ್ಯಾಸ್‌ ಸಿಲಿಂಡರ್‌ ಬಳಸುತ್ತೀರಾ.? ಹಾಗಾದರೆ ಇದನೊಮ್ಮೆ ಇಗಲೇ ತಿಳಿದುಕೊಳ್ಳಿ.!

    ನಿಮ್ಮ ಕುಟುಂಬದ ಸದಸ್ಯರ ಸುರಕ್ಷತೆಯ ಬಗ್ಗೆ ಯೋಚಿಸಿದ್ದೀರಾ ? ನಿಮ್ಮ ಮನೆಯಲ್ಲಿ , ನಿಮ್ಮ ಅಮ್ಮ , ಅಕ್ಕ, ಹೆಂಡತಿ ಅಡುಗೆಮನೆಯಲ್ಲಿ ವರ್ಷದ 365 ದಿನಗಳು ಬಿಡುವಿಲ್ಲದೆ ಕೆಲಸ ಮಾಡುತ್ತಾರೆ. ಅಡುಗೆಮನೆಯಲ್ಲಿ ಗ್ಯಾಸ್ ಸಿಲಿಂಡರ ಲೀಕ್ ನಿಂದ ಆಗುವ ಭಾರಿ ದುರಂತವನ್ನು ನಾವುಗಳು ಪೇಪರಿನಲ್ಲಿ, ನ್ಯೂಸ್ ಚಾನೆಲ್ಸ್ ಗಳಲ್ಲಿ ನೋಡ್ತಾ ಇರುತೇವೆ , ಆದರೆ ಗ್ಯಾಸ್ ಲೀಕ್ , ಅಥವಾ ಸ್ಪೋಟದಿಂದ ಆಗುವ ಅನಾಹುತ ಭಾರಿ ದೊಡ್ಡದು, ಅದರಿಂದ ನಮ್ಮ ಕುಟುಂಭದ ರಕ್ಷಣೆ ಕೊಡ ನಮ್ಮ ದೊಡ್ಡ…

  • ಸುದ್ದಿ

    ರೈತರಿಗೆ ಮತ್ತೊಂದು ಬಂಪರ್ ಆಫರ್ ಕೊಟ್ಟ ಮೋದಿ ಸರ್ಕಾರ…!

    ಮುಂದಿನ ವರ್ಷಗಳಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಹಲವು ಯೋಜನೆ ಕೈಗೊಂಡಿರುವ ಕೇಂದ್ರ ಸರ್ಕಾರ ಮತ್ತೊಂದು ಹೊಸ ಯೋಜನೆ ಜಾರಿಗೊಳಿಸಿದೆ. ರೈತರಿಗೆ ಕೃಷಿ ಕಾರ್ಯಗಳಿಗೆ ಯಂತ್ರಗಳನ್ನು ಬಾಡಿಗೆಗೆ ನೀಡಲು ಕೃಷಿ ಸಚಿವಾಲಯ ಸಿ.ಹೆಚ್.ಸಿ. ಫಾರ್ಮ್ ಮೆಷಿನರಿ ಆಪ್ ಪರಿಚಯಿಸಿದೆ. ಇದರ ಮೂಲಕ ರೈತರು ಕೃಷಿ ಉಪಕರಣ ಬಾಡಿಗೆ ಪಡೆಯಬಹುದಾಗಿದೆ. ಕೃಷಿ ಕೇಂದ್ರಗಳಿಂದ 50 ಕಿಲೋಮೀಟರ್ ದೂರದಲ್ಲಿನ ಪ್ರದೇಶಗಳಿಗೆ ಕೃಷಿ ಉಪಕರಣಗಳನ್ನು ಬಾಡಿಗೆಗೆ ಪಡೆಯಬಹುದಾಗಿದೆ. 12 ಭಾಷೆಗಳಲ್ಲಿ ಆಪ್ ಮಾಹಿತಿ ನೀಡಲಿದೆ. ರೈತರು ತಮಗೆ ಅಗತ್ಯವಿರುವ ಕೃಷಿ ಯಂತ್ರೋಪಕರಣಗಳ…

  • ಸಿನಿಮಾ

    ಅಂಜನಿಪುತ್ರನಿಗೆ ಕೋರ್ಟ್ ಶಾಕ್..!

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ‘ಅಂಜನಿಪುತ್ರ’ ಚಿತ್ರ ಪ್ರದರ್ಶನಕ್ಕೆ ಸೆಷೆನ್ಸ್ ಕೋರ್ಟ್ ಶನಿವಾರ ತಡೆಯಾಜ್ಞೆ ನೀಡಿದೆ.ಅಂಜನಿಪುತ್ರ ಚಿತ್ರದಲ್ಲಿ ವಕೀಲರ ಬಗ್ಗೆ ಅವಹೇಳನಕಾರಿ ಸಂಭಾಷಣೆ ಇರುವ ಹಿನ್ನೆಲೆಯಲ್ಲಿ ಸಿನಿಮಾ ಪ್ರದರ್ಶನಕ್ಕೆ ಸಿವಿಲ್ ಕೋರ್ಟ್ ತಡೆ ನೀಡಿದೆ.

  • ಸಿನಿಮಾ

    “ಸಂಜಯ್ ದತ್”ಗೂ “ವಿಲನ್”ಗೂ ಸಂಬಂಧವೇನು ???

    ಜೋಗಿ ಪ್ರೇಮ್ ನಿರ್ದೇಶನದ “ದಿ ವಿಲನ್” ಈಗಾಗಲೇ ಬಾರಿ ಸುದ್ದಿ ಮಾಡುತ್ತಿದೆ. ಇದರಲ್ಲಿ ಅಭಿನಯಿಸುತ್ತಿರುವ ಶಿವರಾಜ್ ಕುಮಾರ್ ಹಾಗೂ ಕಿಚ್ಹ ಸುದೀಪ್ ವಿಭಿನ್ನ ಹೇರ್ ಸ್ಟೈಲ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುವುದೇ ಅದಕ್ಕೆ ಕಾರಣ.