ಗ್ಯಾಜೆಟ್

ಹೊಸ ಜಿಯೋ ಫೋನ್’ನಲ್ಲಿ ಎಷ್ಟು ಸಿಮ್ ಹಾಕಬಹುದು?ಈ ಫೋನ್’ನಲ್ಲಿ ಬೇರೆ ಕಂಪನಿ ಸಿಮ್ ಹಾಕ್ಬಹುದಾ???

1217

ಕೆಲವು ದಿನಗಳ ಹಿಂದಷ್ಟೇ ಮುಖೇಶ್ ಅಂಬಾನಿ ನೇತೃತ್ವದ ಜಿಯೋ ಕಂಪನಿ ಕಡಿಮೆ ಬೆಲೆ ಜಿಯೋ ಫ್ಯೂಚರ್ ಫೋನ್ ಬಿಡುಗಡೆ ಮಾಡಿದ್ದರು.

ಕೇವಲ 1500ರೂ ಡೆಪಾಸಿಟ್ ಮಾಡಿದ್ರೆ ಈ ಫೋನ್ ಸಿಗುತ್ತದೆ. ಆದರೆ ಒಂದು ಖುಷಿ ವಿಚಾರ ಏನಂದ್ರೆ ಮೂರು ವರ್ಷದ ಬಳಿಕ ಈ ಫೋನ್ ನೀಡಿದ ಹಣವನ್ನು ಮರುಪಾವತಿ ಮಾಡಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ತಿಳಿಸಿದ್ದಾರೆ.

ಅಂದ ಹಾಗೆ ಇದೆಲ್ಲಾ ನಿಮಗೆ ತಿಳಿದಿರುವ ವಿಷಯವೇ.ಅಸಲಿ ವಿಷಯ ಏನಪ್ಪ ಅಂದ್ರೆ ಜಿಯೋ ಕಂಪನಿ ಫ್ರೀ ಫೋನ್ ಕೊಡುವುದಾಗಿ ಹೇಳಿದ ದಿನವೇ, ಎಲ್ಲರಲ್ಲೂ ಮೂಡಿದ ಪ್ರಶ್ನೆ ಏನಂದರೆ ಈ ಫೋನ್’ನಲ್ಲಿ ಎಷ್ಟು ಸಿಮ್ ಹಾಕಬಹುದೆಂದು? ಅಂದರೆ ಸಿಂಗಲ್ ಸಿಮ್ ಅಥವಾ ಡ್ಯುಯಲ್ ಸಿಮ್ ಫೋನ್ ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿರಲಿಲ್ಲ.

ಈ ಫೋನ್’ನಲ್ಲಿ ಎಷ್ಟು ಸಿಮ್ ಹಾಕಬಹುದು ಗೊತ್ತಾ?

ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.ಫೋನ್ ಬಿಡುಗಡೆಯಾದ ಸಂದರ್ಭದಲ್ಲಿ ಹಾರ್ಡ್ ವೇರ್ ಗುಣವೈಶಿಷ್ಟ್ಯಗಳು ಪ್ರಕಟಗೊಂಡಿದ್ದರೂ ಎಷ್ಟು ಸಿಮ್ ಹಾಕಬಹುದು ಎನ್ನುವ ಮಾಹಿತಿ ಪ್ರಕಟವಾಗಿರಲಿಲ್ಲ.

ಕೆಲ ಮಾಧ್ಯಮಗಳಲ್ಲಿ ಡ್ಯುಯಲ್ ಸಿಮ್ ಹಾಕಬಹುದು ಎನ್ನುವ ವರದಿ ಪ್ರಕಟವಾಗಿತ್ತು. ಆದರೆ ಈಗ ಕಂಪನಿಯ ವಕ್ತಾರರೊಬ್ಬರು ಈ ಫೋನಿನಲ್ಲಿ ಸಿಂಗಲ್ ಸಿಮ್ ಮಾತ್ರ ಹಾಕಬಹುದು ಎಂದು ಹೇಳಿದ್ದಾರೆ.
4ಜಿ ಎಲ್ಟಿರಇ ಸಿಮ್ ಮಾತ್ರ ಈ ಫೋನಿಗೆ ಹಾಕಲು ಸಾಧ್ಯವಿದೆ. ಆಗಸ್ಟ್ 24ರಿಂದ ಆನ್ ಲೈನ್ ಮತ್ತು ಆಫ್ಲೈಈನ್ ನಲ್ಲಿ ಈ ಫೋನಿಗೆ ಬುಕ್ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

ಈ ಜಿಯೋ ಫ್ಯೂಚರ್ ಫೋನ್’ನಲ್ಲಿ ಬೇರೆ ಕಂಪನಿ ಸಿಮ್ ಹಾಕಬಹುದಾ?
ಎಲ್ಟಿನಇ ಟೆಕ್ನಾಲಜಿಗೆ ಸಪೋರ್ಟ್ ಮಾಡುವ ಕಾರಣ ದೇಶದಲ್ಲಿರುವ ಏರ್ಟೆಲ್ , ವೋಡಾಫೋನ್, ಐಡಿಯಾ, ಬಿಎಸ್ಎನ್ಎಲ್, ಕಂಪೆನಿಯ ಸಿಮ್ ಜಿಯೋ ಫೋನಿನಲ್ಲಿ ಹಾಕಲು ಸಾಧ್ಯವಿಲ್ಲ.

ಏನೆಲ್ಲಾ ಫ್ಯೂಚರ್’ಗಳಿವೆ ಗೊತ್ತಾ?
ಆಲ್ಫಾ ನ್ಯುಮರಿಕ್ ಕೀಪ್ಯಾಡ್, 2.4 ಇಂಚಿನ ಕ್ಯೂವಿಜಿಎ ಡಿಸ್ಪ್ಲೇ 240*320 ಪಿಕ್ಸೆಲ್, ಎಫ್ ಎಂ ರೇಡಿಯೋ, ಟಾರ್ಚ್ ಲೈಟ್, ಹೆಡ್ ಫೋನ್ ಜ್ಯಾಕ್, ಎಸ್ಡಿ ಕಾರ್ಡ್ ಸ್ಲಾಟ್, ಫೋನ್ ಕಾಂಟಾಕ್ಟ್, ಕಾಲ್ ಹಿಸ್ಟರಿ ಇರಲಿದೆ.

ಈ ಫೋನ್ ಖರೀದಿಸಿದ ಗ್ರಾಹಕರಿಗೆ ಬಂಪರ್ ಆಫರ್!


ಈ ಫೀಚರ್ ಫೋನ್ ಖರೀದಿಸಿದ ಗ್ರಾಹಕರಿಗೆ ತಿಂಗಳಿಗೆ 153 ರೂ. ರಿಚಾರ್ಚ್ ಆಫರ್ ಅನ್ನು ಜಿಯೋ ಬಿಡುಗಡೆ ಮಾಡಿದೆ.

ಈ ಆಫರ್ ನಲ್ಲಿ ಗ್ರಾಹಕರಿಗೆ ಆನ್ ಲಿಮಿಟೆಡ್ ಡೇಟಾ ಪ್ಯಾಕ್ ಸಿಗಲಿದೆ. ಅಷ್ಟೇ ಅಲ್ಲದೇ ಎಂದಿನಂತೆ ಹೊರ ಹೋಗುವ ಕರೆಗಳು ಮತ್ತು ಮೆಸೇಜ್ ಗಳು ಉಚಿತವಾಗಿ ಸಿಗಲಿದೆ.

ಮೂಲ:

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • India, nation, ಆಧ್ಯಾತ್ಮ

    ಅದ್ಭುತ ವಾಸ್ತುಶಿಲ್ಪದ ಅಕ್ಷರ್ಧಮ್ ಮಂದಿರ

    ಸ್ವಾಮಿನಾರಾಯಣ್ ಅಕ್ಷರ್ಧಮ್ ನವದೆಹಲಿ ಹಿಂದೂ ದೇವಾಲಯ, ಮತ್ತು ಭಾರತದ ನವದೆಹಲಿಯಲ್ಲಿರುವ ಆಧ್ಯಾತ್ಮಿಕ-ಸಾಂಸ್ಕೃತಿಕ ಆವರಣ. ಅಕ್ಷರ್ಧಮ್ ದೇವಸ್ಥಾನ ಅಥವಾ ದೆಹಲಿ ಅಕ್ಷರ್ಧಮ್ ಎಂದೂ ಕರೆಯಲ್ಪಡುವ ಈ ಸಂಕೀರ್ಣವು ಸಾಂಪ್ರದಾಯಿಕ ಮತ್ತು ಆಧುನಿಕ ಹಿಂದೂ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ವಾಸ್ತುಶಿಲ್ಪದ ಸಹಸ್ರಮಾನಗಳನ್ನು ಪ್ರದರ್ಶಿಸುತ್ತದೆ. ಯೋಗಿಜಿ ಮಹಾರಾಜ್ ಅವರಿಂದ ಸ್ಫೂರ್ತಿ ಪಡೆದ ಮತ್ತು ಪ್ರಮುಖ್ ಸ್ವಾಮಿ ಮಹಾರಾಜ್ ರಚಿಸಿದ ಇದನ್ನು ಬಿಎಪಿಎಸ್ ನಿರ್ಮಿಸಿದೆ. ಈ ದೇವಾಲಯವನ್ನು  ನವೆಂಬರ್ 6, 2005 ರಂದು ಪ್ರಮುಖ್ ಸ್ವಾಮಿ ಮಹಾರಾಜ್ ಅವರು ಡಾ. ಎ. ಪಿ….

  • ಸುದ್ದಿ

    ಟೀ ಕುಡಿಯಲು ಬಂದಾಗ ಹುಚ್ಚ ವೆಂಕಟ್ ಮೇಲೆ ಹಲ್ಲೆ. ಯುವಕರ ವಿರುದ್ಧಐಪಿಸಿ ಸೆಕ್ಷನ್ ಪ್ರಕರಣ.

    ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರ ಮೇಲೆ ಹಲ್ಲೆ ಮಾಡಿದ್ದ ಪ್ರಕರಣ ಸಂಬಂಧಿಸಿದಂತೆ ಈಗ ಆರೋಪಿಗಳ ಮೇಲೆ ಆಕ್ಷನ್ ತೆಗೆದುಕೊಳ್ಳಲಾಗಿದೆ. ಇದರ ಹಿನ್ನೆಲೆ ನಟ ನವರಸನಾಯಕ ಜಗ್ಗೇಶ್ ಪೊಲೀಸರಿಗೆ ಧನ್ಯವಾದವನ್ನು ತಿಳಿಸಿದ್ದಾರೆ. ಹುಚ್ಚ ವೆಂಕಟ್ ಅವರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಮಂಡ್ಯದ ಗ್ರಾಮಾಂತರ ಪೊಲೀಸರು ಇದರ ವಿರುದ್ಧ ಕ್ರಮವನ್ನು ತೆಗೆದುಕೊಂಡಿದ್ದಾರೆ. ಇದರ ಬಗ್ಗೆ ಟ್ವೀಟ್ ಮಾಡಿದ ನವರಸ ನಾಯಕ ಜಗ್ಗೇಶ್ ಅವರು, ವೆಂಕಟ್ ಮೇಲೆ ಕೈಮಾಡಿದವರ ಮೇಲೆ ದಾಖಲು ಮಾಡಿದ ಮಂಡ್ಯ ರವರಿಗೆ ಕಲಾಪ್ರೇಮಿಗಳು ಧನ್ಯವಾದ…

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ, ಈ ದಿನದ ನಿಮ್ಮ ರಾಶಿ ಭವಿಷ್ಯದೊಂದಿಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 30 ಜನವರಿ, 2019 ನಿಮ್ಮ ಪ್ರಮುಖ ಆತಂಕ ಮತ್ತು ಒತ್ತಡದ ಒಂದು ಕಾರಣವೆಂದರೆ ಕೆಲವೊಮ್ಮೆಯಾದರೂ ನೀವು…

  • ಸುದ್ದಿ

    7 ವರ್ಷಗಳಲ್ಲಿ 7 ಬಾರಿ ಗರ್ಭಪಾತ ; ಕರಳು ಚಿಮ್ಮುತ್ತೆ ಮಹಿಳೆಯ ಹೃದಯ ವಿದ್ರಾವಕ ಕಥೆ….

    ಹೈದ್ರಾಬಾದ್ ನ ಮಹಿಳೆಯೊಬ್ಬಳ ನೋವಿನ ಕಥೆ ಬಹಿರಂಗವಾಗಿದೆ. ಮಹಿಳೆಗೆ ಒಂದಲ್ಲ ಎರಡಲ್ಲ 7 ಬಾರಿ ಗರ್ಭಪಾತವಾಗಿದೆ. ಪ್ರತಿ ಬಾರಿ ಗರ್ಭ ಧರಿಸುತ್ತಿದ್ದಂತೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಗಂಡನ ಮನೆಯವರು ಲಿಂಗ ಪರೀಕ್ಷೆ ನಂತ್ರ ಗರ್ಭಪಾತ ಮಾಡಿಸ್ತಿದ್ದರಂತೆ. ಸುಮತಿ ಏಳು ವರ್ಷಗಳಲ್ಲಿ 7 ಬಾರಿ ಗರ್ಭ ಧರಿಸಿದ್ದಾಳೆ. ಪ್ರತಿ ಬಾರಿಯೂ ಗರ್ಭಪಾತ ಮಾಡಿಸಲಾಗಿದೆ. ಒಂದು ಗರ್ಭಪಾತದಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ಗರ್ಭಪಾತ ನಡೆಯುತ್ತಿತ್ತು. ಗರ್ಭ ಧರಿಸಿದ ಮೇಲೆ ಖುಷಿ ಪಡುವ ಬದಲು ಅಳುತ್ತಿದ್ದ ಸುಮತಿ ಈ ಬಾರಿ ಹೆಣ್ಣಾಗದಿರಲಿ ಎಂದು…

  • ಸುದ್ದಿ

    ಉಡುಪಿಯ ಅರಬ್ಬೀ ಸಮುದ್ರ ಈಗ ಕಪ್ಪು ಸಮುದ್ರವಾಗಿದೆ…..ಕಾರಣ?

    ಜಿಲ್ಲೆಯಲ್ಲಿ ಅರಬ್ಬೀ ಸಮುದ್ರ ಬುಡಮೇಲಾಗಿದೆ. ನೀಲಿ ಸಮುದ್ರ ಈಗ ಕಪ್ಪು ಸಮುದ್ರವಾಗಿದೆ. ದಡಕ್ಕೆ ಬರುವ ಅಲೆಗಳು, ನಡು ಸಮುದ್ರದ ಚಿತ್ರಣ ಯುರೋಪಿನ ಸಮುದ್ರವನ್ನು ಹೋಲುತ್ತಿದೆ. ಮಳೆಯ ರೌದ್ರನರ್ತನದ ಬಳಿಕ ಇದೀಗ ಅರಬ್ಬೀ ಸಮುದ್ರ ಕಪ್ಪುಬಣ್ಣಕ್ಕೆ ತಿರುಗಿದೆ. ಸಾಮಾನ್ಯವಾಗಿ ಪೂರ್ಣಪ್ರಮಾಣದ ಗಾಳಿಮಳೆಯಾದಾಗ ಸಮುದ್ರ ಪ್ರಕ್ಷುಬ್ಧಗೊಳ್ಳುತ್ತದೆ. ಅಲೆಯ ಅಬ್ಬರವೂ ಜೋರಾಗಿ ಕಡಲ ನೀರು ಸಂಪೂರ್ಣ ಉಲ್ಟಾಪಲ್ಟಾವಾಗುತ್ತದೆ. ಈ ಸಂದರ್ಭದಲ್ಲಿ ಸಮುದ್ರದ ಮರಳು, ಅಲೆಯಲ್ಲಿ ಮಿಶ್ರಣಗೊಂಡಾಗ ಸಮುದ್ರ ಕಪ್ಪು ಬಣ್ಣಕ್ಕೆ ತಿರುಗಿದಂತೆ ಭಾಸವಾಗುತ್ತದೆ. ಇದು ನದಿಗಳ ನೀರು ಸಂಗಮಗೊಳ್ಳುವ ಅಳಿವೆ ಬಾಗಿಲ…

  • ಆಧ್ಯಾತ್ಮ

    ದೀಪಗಳ ಹಬ್ಬದ ಹಿನ್ನಲೆ ಏನು ಗೊತ್ತಾ?ಪಟಾಕಿ ಹೊಡೆಯುವವರಿಗೆ ಇಲ್ಲಿವೆ, ಕೆಲವು ಸಲಹೆಗಳು…ತಿಳಿಯಲು ಇದನ್ನು ಓದಿ…

    ಅಜ್ಞಾನವೆಂಬ ಕತ್ತಲನ್ನು ಕಳೆದು ಬದುಕಲ್ಲಿ ಸುಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸುವ ಹಬ್ಬ ದೀಪಾವಳಿ. ಮಕ್ಕಳಿಗಂತೂ ದೀಪಾವಳಿ ಎಂದರೆ ಬಲು ಅಚ್ಚು ಮೆಚ್ಚು. ಪಟಾಕಿ ದೀಪಾವಳಿಯ ಪ್ರಧಾನ ಆಕರ್ಷಣೆ. ದೀಪ +ಅವಳಿ ಎಂದರೆ ಜೋಡಿ ದೀಪ ಅಥವಾ ದೀಪಗಳ ಸಾಲು ಎಂದರ್ಥ. ಸಾಲು ಸಾಲು ದೀಪ ಹಚ್ಚುವ ಈ ಹಬ್ಬಕ್ಕೆ ದೀಪಾವಳಿ ಎಂದೇ ಹೆಸರು ಬಂದಿದೆ.