ವಿಸ್ಮಯ ಜಗತ್ತು

ಇವರು ನಮ್ಮ ಇಂಡಿಯನ್ ರಿಯಲ್ ಸ್ಪೈಡರ್ ಮ್ಯಾನ್!ಅಲಿಯಾಸ್ ಕೋತಿ ರಾಜ್.ಇವರ ಸಾಹಸದ ಬಗ್ಗೆ ಕೇಳಿದ್ರೆ ನೀವ್ ಶಾಕ್ ಆಗ್ತೀರಾ!

1009

ಭಾರತದ ಸ್ಪೈಡರ್ ಮ್ಯಾನ್ ಎಂದೇ ಹೆಸರುಗಳಿಸಿರುವ ಚಿತ್ರದುರ್ಗದ ಕೋತಿರಾಜು ಅಲಿಯಾಸ್ ಜೋತಿರಾಜು ಬಗ್ಗೆ ನಿಮಗೆ ಗೊತ್ತೇ? ನೀವು ಚಿತ್ರದುರ್ಗದ ಕೋಟೆಗೆ ಭೇಟಿ ನೀಡಿದ್ದರೆ ನೀವು ಇವರ ಸಾಹಸಮಯ ಆಟಗಳನ್ನು ನೋಡಿರಬಹುದು, ಇವರು ನೂರಾರು ಅಡಿ ಎತ್ತರದ ಗೋಡೆಗಳನ್ನು ಯಾವ ಸಹಾಯವಿಲ್ಲದೆಯೇ ಮೇಲೇರುತ್ತಾರೆ! ಹಾಗೆ ಯಾವ ಸಹಾಯವಿಲ್ಲದೆಯೇ ಕೆಳಗೆ ಇಳಿಯುತ್ತಾರೆ. ಜ್ಯೋತಿರಾಜ್ ಎತ್ತರದ ಗೋಡೆಗಳ ಮೇಲೆ ಗಾಳಿಯ ವೇಗದಲ್ಲಿ ಚಲಿಸುತ್ತಾರೆ! ಇದು ಕೋತಿರಾಜು ಎಂದೇ ಹೆಸರಾಗಿರುವ ಜ್ಯೋತಿರಾಜುವಿನ ನಿಜ ಬದುಕಿನ ರೋಚಕ ಕಥೆ.

ಜ್ಯೋತಿರಾಜು ತಮಿಳುನಾಡಿನ ಕಾಮಾಚಿಪುರದವರು. ತಂದೆ ಈಶ್ವರನ್, ತಾಯಿ ಕುಂಜಾರಂ. ಅವರದು ಮಧ್ಯಮ ವರ್ಗದ ರೈತ ಕುಟುಂಬ. ಜ್ಯೋತಿರಾಜುವಿಗೆ ಚಿಕ್ಕಂದಿನಿಂದಲೂ ಓದುವುದರಲ್ಲಿ ಅಂತಹ ಆಸಕ್ತಿ ಇರಲಿಲ್ಲ. ಒಂದನೇ ತರಗತಿಗೆ ಸ್ವಲ್ಪ ದಿನಗಳ ಕಾಲ ಶಾಲೆಗೆ ಹೋಗಿ ನಂತರ ಶಾಲೆ ಬಿಟ್ಟು ಬಂದವರು ಮತ್ತೆ ಹಿಂತಿರುಗಿ ನೋಡಲಿಲ್ಲ.

 

ಮನೆಬಿಟ್ಟು ಕಾಲ್ನಡಿಗೆಯಲ್ಲೆ ಊರೂರು ತಿರುಗುತ್ತಾ ಕರ್ನಾಟಕಕ್ಕೆ ಬಂದ ಜ್ಯೋತಿರಾಜು, ಕರ್ನಾಟಕದ  ಚಿತ್ರದುರ್ಗದಲ್ಲೆ ಉಳಿದುಕೊಂಡು ಹೊಟ್ಟೆಪಾಡಿಗಾಗಿ ಗಾರೆ ಕೆಲಸಕ್ಕೆ ಸೇರಿದರು. ಹೊಟ್ಟೆಪಾಡಿಗಾಗಿ ತುಂಬಾ ಕಷ್ಟಗಳನ್ನು ಅನುಭವಿಸಿದ ಜ್ಯೋತಿರಾಜು ಇನ್ನೂ ನಾನು ಏನೂ ಸಾಧಿಸಲಾರೆ ಎಂದು ಯೋಚಿಸಿ ಒಂದು ನಿರ್ಧಾರಕ್ಕೆ ಬಂದು, ಕೋಟೆಯನ್ನು ಹಿಂಬದಿಯಿಂದ ಹತ್ತಿದರು.

ಅಲ್ಲಿಯೇ ಪಕ್ಕ ಒಂದು ಬೃಹದಾಕಾರದ ಬಂಡೆ ಕಾಣಿಸಿತು. ಅದನ್ನು ಏರಿ ಸಾಯೋಣವೆಂದು ಬಂಡೆಯ ಮೇಲೆ ನಿಂತಿದ್ದರು. ಆಗ ಅಲ್ಲಿ ಬಂದ ಪ್ರವಾಸಿಗರು ಇವರು ಬಂಡೆ ಏರಿ ನಿಂತಿದ್ದನ್ನು ನೋಡಿ ಸಾಹಸವೆಂದು ಚಪ್ಪಾಳೆ, ಸಿಳ್ಳೆ ಹಾಕಿದರು. ಆಗ ಜ್ಯೋತಿರಾಜು ಆತ್ಮಹತ್ಯೆಯ ಪ್ರಯತ್ನವನ್ನು ಬಿಟ್ಟು ಅಲ್ಲಿಂದ ಮನೆಗೆ ಹೋದರು.

ನಂತರ ಮತ್ತೊಂದು ದಿನ ಕೋಟೆ ಪ್ರವೇಶಿಸಿದಾಗ ಅಲ್ಲಿ ಕೋತಿಗಳು ಬಂಡೆಯಿಂದ ಬಂಡೆಗೆ, ಹಾರುತ್ತಾ ಸಾಗುತ್ತಿದ್ದವು. ಇದನ್ನು ಕಂಡು ನಾನು ಯಾಕೆ ಪ್ರಯತ್ನಿಸಬಾರದು ಎಂದು ಯೋಚಿಸಿ ಚಿಕ್ಕ ಚಿಕ್ಕ ಬಂಡೆಯನ್ನು ಏರಲು ಪ್ರಯತ್ನಿಸಿ ಸಫಲರಾದರು. ಆಗ ಅವರಿಗೆ ತಮ್ಮಲಿರುವ ಶಕ್ತಿಯ ಅರಿವಾಯಿತು.

ಆಗ ಇನ್ನೂ ಸ್ಪೂರ್ತಿ ಪಡೆದ ಜ್ಯೋತಿರಾಜ್ ಒಂದೊಂದೆ ಬಂಡೆಗಳನ್ನು, ಏರುತ್ತಾ, ಜಿಗಿಯುತ್ತಿದ್ದರೆ ಅವರಿಗೆ ಯಾವ ಅಳುಕಾಗಲಿ, ಜಾರುವುದಾಗಲಿ ಆಗುತ್ತಿರಲಿಲ್ಲ. ಕೈ ಕಾಲುಗಳು ಬಂಡೆಯನ್ನು ಬಿಗಿಯಾಗಿ ಹಿಡಿದಿರುತ್ತಿದ್ದವು. ಅತ್ಯಂತ ಕಡಿದಾದ, ಎತ್ತರದ ಬಂಡೆಗಳನ್ನು ಏರುವಾಗಲು ಅವರಿಗೆ ಯಾವುದೇ ರೀತಿ ಅಪಾಯವಾಗಲಿಲ್ಲ.

ಇದರಿಂದಲೇ ನಾನು ಏನಾದ್ರೂ ಸಾಧನೆ ಮಾಡಬೇಕು ಎಂದು ಯೋಚಿಸಿದ ಜ್ಯೋತಿರಾಜ್,  ಅಂದಿನಿಂದ ಕೋಟೆಯಲ್ಲೆ ಹೆಚ್ಚು ಕಾಲ ಅಭ್ಯಾಸ ಮಾಡತೊಡಗಿದರು. ಅಲ್ಲಿಗೆ ಬಂದಂತಹ ಪ್ರವಾಸಿಗರು ಇವರ ಸಾಹಸ, ಧೈರ್ಯಕ್ಕೆ ಮನಸೋತರೆ, ಮಕ್ಕಳು ಸ್ಪೈಡರ್‌ಮ್ಯಾನ್… ಸ್ಪೈಡರ್‌ಮ್ಯಾನ್… ಎಂದು ಕೂಗುತ್ತಿದ್ದರು. ಇವರು ಕೋತಿಯಂತೆ ಜಿಗಿಯುವುದನ್ನು, ಹಾರುವುದನ್ನು ನೋಡಿ ಇವರಿಗೆ ‘ಕೋತಿರಾಜು’ ಎಂಬ ಹೆಸರು ಬಂತು.

ಅವರ ದೇಹಕ್ಕೆ ಬೆಂಬಲಕ್ಕಾಗಿ ಎರಡು ಬೆರಳುಗಳ ಮೇಲೆ ಸ್ಲಾಟಿಂಗ್ ಮಾಡುವಂತಹ ಗೋಡೆಯಿಂದ 90 ಡಿಗ್ರಿಗಳಷ್ಟು ಕೋನದಲ್ಲಿ ಸಮತೋಲನಗೊಳಿಸುವುದಕ್ಕಾಗಿಯೇ ಅವರಿಗೆ ‘ಸ್ಪೈಡರ್ಮ್ಯಾನ್’ ಎಂಬ ಹೆಸರು ಬಂದಿದೆ.

ಅನೇಕರ ಪ್ರಾಣ ರಕ್ಷಿಸಿದ್ದಾರೆ ಜ್ಯೋತಿ ರಾಜ್ :-

ಜೋಗ್ ಫಾಲ್ಸ್ನಲ್ಲಿ ಅನೇಕ ಬಾರಿ ಆತ್ಮಹತ್ಯೆಗೆ ಒಳಗಾದವರ ದೇಹಗಳನ್ನು ಜ್ಯೋತಿರಾಜ್ ನೀಲಾಜಾಲವಾಗಿ ಹುಡುಕಿ ತಂದಿದ್ದಾರೆ, ಇದು ಎಷ್ಟು ಅಪಾಯಕಾರಿ ಎಂದರೆ ಜ್ಯೋತಿರಾಜ್ ತಮ್ಮ ಪ್ರಾಣವನ್ನು ಲೆಕ್ಕಿಸದೆ ಹಲವು ಬಾರಿ ಈ ಕೆಲಸಗಳನ್ನು ಮಾಡಿದ್ದಿದೆ..

ನೀವೇನಾದರೂ ಚಿತ್ರದುರ್ಗದ ಬೆಟ್ಟಕ್ಕೆ ಹೋಗುವವರಿದ್ದರೆ ಮರಿಯದೇ ಜ್ಯೋತಿರಾಜ್ ಅವರನ್ನು ಭೇಟಿಯಾಗಿ….

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಕಬಡ್ಡಿ

    ಈ ಸಲ ಕಪ್ಪು ನಮ್ದೇ

    ಕೋನೆಗೂ ಕಪ್ಪು ಗೆದ್ದ ಬೆಂಗಳೂರು ಹೌದು VIVO Pro Kabaddi Season 6 ರಲ್ಲಿ ಕೋನೆಗೂ ಕಪ್ಪು ನಮ್ದೇ, ಇಂದು ನಡೆದ prokabaddi ಗುಜರಾತ್ ವಿರುದ್ಧ 5 ಅಂಕ 38-33 ರಲ್ಲಿ ಗೆದ್ದಿದೆ.  ಪವನ್ ಕುಮಾರ್ ರವರಿಂದ ವಿರೋಚಿತ ಆಟ Man of the match ಅವರಿಗೆ ಸಿಕ್ಕಿದೆ. ಮ್ಯಾನ್ of the series 24match 282pts, 11.8 avarege ನಲ್ಲಿ 15 ಲಕ್ಷ ರೂ ಗೆದ್ದರು.  ಕಪ್ಪು ಗೆದ್ದ ಬೆಂಗಳೂರು bulls ಇಂದ ಎಲ್ಲ ಜನ…

  • ಸುದ್ದಿ

    ಶ್ರೀರಾಮನ ಬಂಟ ಹನುಮನನ್ನು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿ ಭಕ್ತಿ ಮೆರೆದ ಅಯೋಧ್ಯೆಯ ಮುಸ್ಲಿಂ ಕುಟುಂಬ.

    ಹಿಂದೂ, ಮುಸ್ಲಿಂ ಎಂಬ ಭೇದವಿಲ್ಲದೆ ಅಯೋಧ್ಯೆಯಲ್ಲಿ ಶ್ರೀರಾಮನನ್ನು ಆರಾಧಿಸಲಾಗುತ್ತಿದೆ. ಇದಕ್ಕೆ ಅಯೋಧ್ಯೆಯ ಮುಸ್ಲಿಂ ಕುಟುಂಬವೊಂದು ಸಾಕ್ಷಿಯಾಗಿದೆ. ತಮ್ಮ ಮಗ, ಮಗಳ ಮದುವೆ ಆಮಂತ್ರಣ ಪ್ರತಿಕೆಯಲ್ಲಿ ರಾಮನ ಭಂಟ ಹನುಮನ ಚಿತ್ರವನ್ನು ಮುದ್ರಿಸಿ ಕುಟುಂಬ ಭಕ್ತಿ ಮೆರೆದಿದೆ. ಹೌದು. ಉತ್ತರ ಪ್ರದೇಶ ಚಾರೇರ ಗ್ರಾಮದ ಮುಸ್ಲಿಂ ಕುಟುಂಬ ಶ್ರೀರಾಮನ ಬಂಟ ಹನುಮನ ಚಿತ್ರವುಳ್ಳ ಕ್ಯಾಲೆಂಡರ್ ಒಂದನ್ನು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿದೆ. ಅಷ್ಟೇ ಅಲ್ಲದೆ ಈ ಪತ್ರಿಕೆಯಲ್ಲಿ ಬ್ರಹ್ಮ, ವಿಷ್ಣು, ಶಿವ ಹಾಗೂ ನಾರದರ ಚಿತ್ರವನ್ನೂ ಕೂಡ ಕುಟುಂಬ…

  • ಸುದ್ದಿ

    ದೇವೇಗೌಡರಿಗೆ 87ನೇ ಹುಟ್ಟುಹಬ್ಬದ ಶುಭಾಶಯವನ್ನುತಿಳಿಸಿದ ಪ್ರಧಾನಿ ನರೇಂದ್ರ ಮೋದಿ…,

    ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ 87ನೇ ಹುಟ್ಟುಹಬ್ಬವನ್ನು ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆಯೊಂದಿಗೆ ಆಚರಿಸಿಕೊಳ್ಳಲು ಸಿಎಂ ಎಚ್‌.ಡಿ.ಕುಮಾರಸ್ವಾಮಿ ದಂಪತಿ ಸೇರಿ ಇಡೀ ಕುಟುಂಬ ಶುಕ್ರವಾರ ಸಂಜೆಯೇ 2 ವಿಶೇಷ ವಿಮಾನಗಳಲ್ಲಿ ತಿರುಪತಿಗೆ ತೆರಳಿದೆ. ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರಿಗೆ 87ನೇ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ಮತ್ತು ಉತ್ತಮ ಆರೋಗ್ಯವನ್ನು ದೇವರು ಕರುಣಿಸಲಿ ಎಂದು ನರೇಂದ್ರ ಮೋದಿ ಟ್ವೀಟ್‌ ಮೂಲಕ ಶುಭ ಹಾರೈಸಿದ್ದಾರೆ. ರಾಜಕೀಯ ಕಚ್ಚಾಟಗಳ…

  • ಸುದ್ದಿ

    ‘ಮೇಕಪ್ ಮಾಡದ ದೃಶ್ಯಗಳನ್ನೆ ಹೆಚ್ಚು ತೋರಿಸಿದ್ದಾರೆ’ ಎಂದ ಚೈತ್ರಾ ಹೇಳಿಕೆಗೆ ಸುದೀಪ್ ಗರಂ..!

    ಬಿಗ್ ಬಾಸ್ ಕನ್ನಡ ಏಳನೇ ಆವೃತ್ತಿಯ ಎರಡನೇ ವಾರ ಚೈತ್ರಾ ವಾಸುದೇವನ್ ಎಲಿಮಿನೇಟ್ ಆದರು. ದೊಡ್ಮನೆಯಿಂದ ಚೈತ್ರಾ ಅವರನ್ನ ಹೊರಗೆ ಕರೆದ ಸುದೀಪ್ ವೇದಿಕೆ ಮೇಲೆ ಮಾತುಕತೆ ಮುಂದುವರಿಸಿದರು. ಈ ವೇಳೆ ಚೈತ್ರಾ ವಾಸುದೇವನ್ ಅವರಿಗೆ ತಮ್ಮ ಎರಡು ವಾರದ ಜರ್ನಿ ಕುರಿತು VT (ವಿಡಿಯೋ ದೃಶ್ಯ) ತೋರಿಸಲಾಯಿತು. ಈ ವಿಡಿಯೋ ನೋಡಿದ ಚೈತ್ರಾ ವಾಸುದೇವನ್’ ಮೇಕಪ್ ಇಲ್ಲದ ದೃಶ್ಯ ಹೆಚ್ಚು ತೋರಿಸಿದ್ದಾರೆ’ ಒಂದು ವಿಚಾರಕ್ಕೆ ಕಾಮೆಂಟ್ ಮಾಡಿದರು. ಈ ಮಾತಿನಿಂದ ಬೇಸರಗೊಂಡ ಸುದೀಪ್ ಅವರು, ವೇದಿಕೆಯಲ್ಲೇ…

  • ಸುದ್ದಿ

    ಭಾರತೀಯ ಸೇನೆ ಪಾಕ್ ನೆಲದಲ್ಲಿ ದಾಳಿ ನಡೆಸಿದ ವೇಳೆ ನರೇಂದ್ರ ಮೋದಿ ಏನ್ ಮಾಡ್ತಾ ಇದ್ರು ಗೊತ್ತಾ..?

    ಪುಲ್ವಾಮ ದಾಳಿ ನಂತ್ರ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಏರ್ ಸ್ಟ್ರೈಕ್ ನಡೆಸಿದೆ. ಗಡಿ ನಿಯಂತ್ರಣ ರೇಖೆಯಲ್ಲಿರುವ ಜೈಷ್ ಉಗ್ರ ಸಂಘಟನೆ ಅಡಗು ತಾಣದ ಮೇಲೆ ರಾತ್ರಿ ಸುಮಾರು 3.30 ರ ಸುಮಾರಿಗೆ ಬಾಂಬ್ ದಾಳಿ ನಡೆಸಿದ್ದವು. 12 ಮಿರಾಜ್-2000 ಯುದ್ಧ ವಿಮಾನಗಳು 1000 ಕೆ.ಜಿ ಬಾಂಬ್ ದಾಳಿ ಮಾಡಿದ್ದವು. ದಾಳಿ ಬಗ್ಗೆ ಪಾಕಿಸ್ತಾನಕ್ಕೆ ಸಣ್ಣ ಸುಳಿವೂ ಇರಲಿಲ್ಲ. ವ್ಯವಸ್ಥಿತವಾಗಿ ದಾಳಿ ನಡೆಸಿದ್ದ ಸೇನೆ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ….