ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸ್ಲೆಡ್ಜಿಂಗ್ ಸೈತಾನರ ಸೊಕ್ಕು ಮುರಿದ ಪಂದ್ಯ

ಪಡಿಕ್ಕಲ್ ಯಾವ್ ಬಸ್ಸನ್ನ ಹತ್ಕೊಂಡು ಬಂದ..? ಅರೆ ಇವ್ನು ರೆಡ್ಡಿಗಾರು ಎಲ್ಲಿಂದ ಬಂದ..? ರಾಣಾ ಇಲ್ಲೇನ್ ಮಾಡ್ತಾ ಇದಾನೆ..? ಧ್ರುವ ಜುರೇಲ್ ಕೂಡ ಆಡ್ತಾ ಇದಾನಾ..? ಅವರು ನೋಡಿದ್ರೆ ಅವರ ಬೆಸ್ಟ್ ಟೀಮ್ ತಂದಿದೆ. ಬೌಲಿಂಗ್ ಲೈನ್ ಅಪ್ ನೋಡಿದರೆ ಎದೆಯೊಳಗೆ ಜಲ್ಲಿ ಮಶೀನ್ ಆನ್ ಆದ ಹಾಗಿದೆ.
ಖವಾಜಾ, ಸ್ಮಿತ್, ಹೆಡ್, ಲಬುಶೇನ್, ಮಾರ್ಶ್, ಕ್ಯಾಪ್ಟನ್ ಕಮ್ಮಿನ್ಸ್, ಸ್ಟಾರ್ಕ್, ಹೆಜಲ್ವುಡ್, ನಥಾನ್ ಲಿನ್ ಯಪ್ಪ.. ಅನುಭವಿಗಳೇ ಎಲ್ ನೋಡಿದರೂ ಕಾಣೋದು. ಮೊದಲ ಮ್ಯಾಚ್ ದೇವರಿಗೆ ಅಂತ ಭಾರತದ ಮೊದಲ ಇನ್ನಿಂಗ್ಸ್ ನೋಡಿ ನನ್ನನ್ನೂ ಸೇರಿ ಅನೇಕರಿಗೆ ಅನಿಸಿರಬಹುದು. ಇದಕ್ಕೆ ಇನ್ನೊಂದು ಕಾರಣ ಟೀಮಲ್ಲಿ ಕಂಡ ಮುಖಗಳು.
ಆದ್ರೆ ಈ ಆಟದಲ್ಲಿ ಏನನ್ನೂ ಬೇಗ ನಿರ್ಧರಿಸಬಾರದು ಅನ್ನೋದನ್ನ ಈ ಹಿಂದೆ ಅನೇಕ ಪಂದ್ಯಗಳು ಸಾಬೀತು ಮಾಡಿವೆ. ಮೊದಲ ಇನ್ನಿಂಗ್ಸಲ್ಲಿ ನಮ್ದು 150..ಆಸ್ಟ್ರೇಲಿಯಾ 104..ಕೊನೆ ವಿಕೆಟಿಗೆ ಬಂದ 25 ರನ್ನುಗಳ ಪಾರ್ಟ್ನರ್ ಶಿಪ್ ಅತಿ ದೊಡ್ಡದು. ಬುಮ್ರಾ , ರಾಣಾ, ಸಿರಾಜ್ ಎಸೆದಿದ್ದು ಬೆಂಕಿ ಉಂಡೆಗಳನ್ನ. ಎರಡೂ ತಂಡದ ಮೊದಲ ಇನ್ನಿಂಗ್ಸ್ ಸೇರಿಸಿದ್ರೆ ಆಗೋದು 254 ರನ್ಸ್.. ಆದ್ರೆ ಈಗ ಭಾರತ ಗೆದ್ದ ಲೀಡ್ 295 ರನ್ಸ್.. 🔥

ಎರಡನೇ ಇನ್ನಿಂಗ್ಸ್ ತುಂಬಾ ವರ್ಷಗಳ ಕಾಲ ನೆನಪಲ್ಲಿ ಉಳಿಯೋ ಆಟ.. ಇಡೀ ದಿನ ಜೈಸ್ವಾಲ್ ಹಾಗೂ ರಾಹುಲ್ ಆ ದೈತ್ಯ ಬೌಲಿಂಗ್ ಲೈನ್ ಅಪ್ನ ಗೋಳಾಡಿಸಿದ್ರಲ್ಲ.. ಜೈಸ್ವಾಲ್ ಅಂತೂ ಬೌಲ್ ಮಾಡಿದ್ರೆ ಬ್ಯಾಟ್ ಮಾಡೋದು ಬಾಕಿ ಟೈಮಲ್ಲಿ ರೋಸ್ಟ್ ಮಾಡೋದು. ಅದು ಸ್ಟಾರ್ಕ್ಗೆ.. ಆತ್ಮವಿಶ್ವಾಸ ತುಂಬಿ ತುಳುಕ್ತಾ ಇದೆ. ಪಡಿಕ್ಕಲ್ ತನಗಿರೋ ಅನುಭಕ್ಕೆ ತಕ್ಕಂತೆ ಕೊಡುಗೆ ಕೊಟ್ಟ ಅನಿಸ್ತು..
ಬಟ್ ಗರ್ಜಿಸುವಂತೆ ಮಾಡಿದ್ದು ಕೊಹ್ಲಿ ಶತಕ. ಕೊಹ್ಲಿ ಮತ್ತು ಆಸ್ಟ್ರೇಲಿಯಾ ಚಕಾಮಕಿ ತುಂಬಾ ಹಳೆಯದ್ದು.. ಎಂತದ್ದೇ ಅಸ್ತ್ರ ಹೂಡಿದ್ರೂ ಕೊಹ್ಲಿ ವಿಕೆಟ್ ಪಡೆಯೋಕೆ ಆಗಲೆ ಇಲ್ಲ. ಇನ್ನೊಂದು ಕಡೆಯಲ್ಲಿ ನಿತೀಶ್ ರೆಡ್ಡಿಯ ಆಟ.. ಮಕ ಮೂತಿ ನೋಡದೇ ಚಚ್ಚೋದು ಅಂತಾರಲ್ಲ.. ಅದನ್ನೇ ಮಾಡಿದ್ದು.. ಡಿಕ್ಲೇರ್ ಹೊತ್ತಿಗೆ ಆಸ್ಟ್ರೇಲಿಯಾ ಮುಂದೆ ದೊಡ್ಡ ಬೆಟ್ಟ.
ಬೆಟ್ಟ ಹತ್ತೋಕೆ ಬಂದ ಮೊದಲ ನಾಲ್ವರು ಡಬಲ್ ಡಿಜಿಟ್ ಚೆಂದವನ್ನೂ ಕಾಣೋಕೆ ಆಗಲಿಲ್ಲ. ಬುಮ್ರಾ ಸಿರಾಜ್ ಅಬ್ಬರವೇ ಹಾಗಿತ್ತು. ಇಲ್ಲಿ ತನಕ ಆಸ್ಟ್ರೇಲಿಯಾ ಪರ್ತ್ ಸ್ಟೇಡಿಯಂನಲ್ಲಿ ಸೋಲೇ ಕಂಡಿರ್ಲಿಲ್ಲವಂತೆ. ಅದನ್ನೂ ಕೂಡ ಮನೆಗೆ ಬಂದ ನೆಂಟರು ಉಡುಗೊರೆ ಕೊಟ್ಟಿದಾರೆ.
ಈ ಸಮಯದಲ್ಲಿ ಗಂಭೀರ್ ಕೂಡ ನೆನಪಾಗಲೇ ಬೇಕು. ಸೋತಾಗ ಮಾತ್ರ ನೆನಪಿಸಿಕೊಂಡ್ರೆ ಸರಿ ಅನಿಸೋದೇ ಇಲ್ಲ..
ಥ್ಯಾಂಕ್ಯೂ ಟೀಮ್ ಇಂಡಿಯಾ.. ಗೆಲ್ತಾನೆ ಇರೋಣ.. ಬೀಗ್ತಾನೇ ಇರೋಣ ❤️🇮🇳
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಉಪ್ಪು ಎಷ್ಟು ಅನಿವಾರ್ಯ ಎಂಬುದು ತಿಳಿದ ವಿಷಯವೇ. ಆದರೆ ಕಪ್ಪು ಉಪ್ಪು ಸಹ ಭಾರತೀಯರಲ್ಲಿ ಹಿಂದಿನಿಂದಲೂ ಬಳಕೆಯಲ್ಲಿದೆ. ಈ ಕಪ್ಪು ಉಪ್ಪು ಸಹ ಔಷಧೀಯ ಗುಣಗಳ ಆಗರವೇ ಆಗಿದೆ. ಹಿಮಾಲಯದ ಕಪ್ಪು ಉಪ್ಪು ಅಥವಾ ಆಂಗ್ಲ ಭಾಷೆಯಲ್ಲಿ ಹೇಳುವುದಾದರೆ ಭಾರತೀಯ ಕಪ್ಪು ಉಪ್ಪು ಎಂದೇ ಪ್ರಚಲಿತದಲ್ಲಿದೆ.
ಮದುವೆಯಲ್ಲಿ ಮದುಮಗಳಿಗೆ ತಾಳಿಯೊಂದಿಗೆ ಕಾಲುಂಗುರವನ್ನು ಸಹ ಹಾಕುತ್ತಾರೆ, ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಮುತೈದೆಗೆ ತಾಳಿ, ಕುಂಕುಮ, ಹೂವು, ಬಳೆ, ಇವುಗಳೊಂದಿಗೆ ಕಾಲುಂಗುರವು ಬಹಳ ಪ್ರಮುಖ ಪಾತ್ರವಹಿಸುತ್ತದೆ, ಮದುವೆಯಾದ ಮಹಿಳೆ ಕಾಲುಂಗುರ ಧರಿಸಿದರೆ ಶೋಭೆ. ಇದು ಮದುವೆಯ ಪ್ರತೀಕ ಎಂದು ಕೆಲವರು ತಿಳಿದಿದ್ದರೆ ಮತ್ತೆ ಕೆಲವರು ಇದೊಂದು ಸಂಪ್ರದಾಯವೆಂದು ನಂಬುತ್ತಾರೆ. ಕಾಲುಂಗುರ ಧರಿಸುವುದರ ಹಿಂದೆ ಅಡಗಿದೆ ವೈಜ್ಞಾನಿಕ ಕಾರಣ:- ವೇದಗಳ ಅನುಸಾರ ಎರಡು ಕಾಲು ಬೆರಳಿಗೆ ಬೆಳ್ಳಿ ಕಾಲುಂಗುರ ಧರಿಸುವುದರಿಂದ ತಿಂಗಳ ಮುಟ್ಟು ಸರಿಯಾಗಿ ಆಗುವುದಲ್ಲದೇ ಗರ್ಭಧಾರಣೆ…
ಕೆಂಡಸಂಪಿಗೆಯ ವಿಕ್ಕಿ ವರುನ್ ಹಾಗೂ ಕಿರಿಕ್ ಪಾರ್ಟಿಯ ಸಂಯುಕ್ತ ಹೆಗ್ಡೆ ನಟಿಸಿರುವ ಈ ಸಿನಿಮಾವನ್ನು ಅಲೆಮಾರಿ ಸಂತೋಷ್ ನಿರ್ದೇಶನ ಮಾಡಿದ್ದಾರೆ..
ಹುಟ್ಟುಹಬ್ಬದಂದು ಸ್ನೇಹಿತರು ಎಲ್ಲ ಸೇರಿ ಯುವಕನಿಗೆ ಬರ್ತ್ ಡೇ ಬಂಪ್ಸ್ ಕೊಟ್ಟಿದ್ದು, ಇದರಿಂದ ವಿದ್ಯಾರ್ಥಿ ಮೃತಪಟ್ಟ ಘಟನೆ ತಮಿಳುನಾಡಿದ ಚೆನ್ನೈನಲ್ಲಿ ನಡೆದಿದೆ. ಕಳೆದ ಎರಡು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮೃತಪಟ್ಟ ಯುವಕ ಬೆಂಗಳೂರಿನ ಐಐಎಂ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಯುವಕ ಎರಡು ತಿಂಗಳ ಹಿಂದೆ ತನ್ನ ಹುಟ್ಟುಹಬ್ಬವನ್ನು ಸ್ನೇಹಿತರ ಜೊತೆ ಆಚರಿಸಿಕೊಂಡಿದ್ದನು. ಈ ವೇಳೆ ಸ್ನೇಹಿತರು ಎಲ್ಲರು ಸೇರಿ ಆತನಿಗೆ ಬರ್ತ್ ಡೇ…
‘ರಾಧಾರಮಣ’ ಧಾರಾವಾಹಿಯಲ್ಲಿ ಸಿತಾರಾ ದೇವಿ ಆಗಿ ಅಭಿನಯಿಸುತ್ತಿದ್ದ ಸುಜಾತ ನಿಜ ಜೀವನದಲ್ಲಿ ‘ವಿಲನ್’ಅಲ್ಲ. ಆಕೆ ಅನ್ನಪೂರ್ಣೇಶ್ವರಿ ಅಂತೆಲ್ಲಾ ‘ಅಗ್ನಿಸಾಕ್ಷಿ’ ಚಂದ್ರಿಕಾ ಖ್ಯಾತಿಯ ಪ್ರಿಯಾಂಕಾ ಹಾಡಿ ಹೊಗಳುತ್ತಿದ್ದರು. ಯಾಕಂದ್ರೆ, ಅಡುಗೆ ಮನೆಯ ನೇತೃತ್ವ ವಹಿಸಿಕೊಂಡಿದ್ದ ಸುಜಾತಾ ರುಚಿರುಚಿಯಾಗಿ ಮಾಡುತ್ತಿದ್ದ ಅಡುಗೆ ಪ್ರಿಯಾಂಕಾಗೆ ಇಷ್ಟ ಆಗಿತ್ತು. ಮೊದಲವಾರ ಸುಜಾತ ಜೊತೆ ಕ್ಲೋಸ್ ಆಗಿದ್ದವರು ಪ್ರಿಯಾಂಕಾ. ಇದೀಗ ಅದೇ ಪ್ರಿಯಾಂಕಾ ಎರಡನೇ ವಾರದ ನಾಮಿನೇಷನ್ ನಲ್ಲಿ ಸುಜಾತಾರನ್ನ ಟಾರ್ಗೆಟ್ ಮಾಡಿದ್ದಾರೆ.ಅವಶ್ಯಕತೆ ಇಲ್ಲದೇ ಇದ್ದರೂ ಸುಜಾತಾ ಕೂಗಾಡಿದ್ರಂತೆ. ಇದನ್ನೇ ನೆಪ ಮಾಡಿಕೊಂಡು ಸುಜಾತಾ…
ಭಿಕ್ಷುಕನ ಮನೆಯಲ್ಲಿ 1.70 ಕೋಟಿಗಳ ಹಣ ಸಿಕ್ಕಿದೆ. ಮುಂಬೈ ಪಟ್ಟಣದಲ್ಲಿನ ಕೊಳಗೇರಿಗೆ ಸೇರಿದ ಭಿಕ್ಷುಕನಿಗೆ ತನ್ನವರು ಎಂಬುವರು ಯಾರೂ ಇಲ್ಲ. ಪ್ರತಿದಿನ ಭಿಕ್ಷೆ ಬೇಡುವುದು, ದೊರೆತ್ತದ್ದನ್ನು ತಿನ್ನುವುದು, ಬಂದದ್ದನ್ನು ಎತ್ತಿಡುವುದು…..ಇದೇ ಆತನ ದಿನನಿತ್ಯದ ಕೆಲಸವಾಗಿತ್ತು