KOLAR NEWS PAPER

ಯೋಗಥಾನ್ ಕಾರ್ಯಕ್ರಮ: ಪೂರ್ವ ಸಿದ್ಧತೆ ಪರಿಶೀಲನೆ

42

ಜಿಲ್ಲೆಯಲ್ಲಿ ಜನವರಿ 15 ರಂದು ಬೆಳಿಗ್ಗೆ 6.00 ಗಂಟೆಗೆ ಕೋಲಾರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಯೋಗಥಾನ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಪೂರ್ವ ಸಿದ್ಧತೆಯನ್ನು ಹಾಗೂ ಯೋಗ ತಾಲೀಮು ಪರಿಶೀಲಿಸಿ ಎಲ್ಲಾ ವ್ಯವಸ್ಥೆಗಳು ಸರಿಯಾಗಿವೆಯೇ ಎಂದು ಖುದ್ದು ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ ಅವರು ಇಂದು ಪರಿಶೀಲನೆ ನಡೆಸಿದರು.

15ನೇ ಜನವರಿಯಂದು ಜಿಲ್ಲಾ ಮಟ್ಟದಲ್ಲಿ ನಡೆಯುವ ಯೋಗಥಾನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ಆಯ್ದ ಶಾಲಾ ವಿದ್ಯಾರ್ಥಿಗಳು, ದೈಹಿಕ ಶಿಕ್ಷಕರು, ಯೋಗಪಟುಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದರು. ಅಂತೆಯೇ ಕ್ರೀಡಾಂಗಣದಲ್ಲಿ ಮೂಲಭೂತ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಕಾಲೇಜು ಮಕ್ಕಳನ್ನು ಕರೆ ತರುವಾಗ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಲು ಸೂಚಿಸಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳಿಗೆ ಅತಿ ಸಣ್ಣ ಮಕ್ಕಳನ್ನು ಕರೆ ತರಬಾರದು ಎಂದು ಸೂಚಿಸಿದರು. ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಸಂಬAಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದರು.

About the author / 

KOLAR NEWS CHANDRU

KOLAR NEWS CHANDRU editor : kolar news paper/ www.nammakolar.com presschandrukolar@gmail.com mobile-9448715409 kolar.karnataka.563101

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಭಾರೀ ಮಳೆ ಗುಡುಗು, ಸಿಡಿಲು ಬಡಿದು ಪ್ರೇಮ ಸೌಧ ತಾಜ್ ಮಹಲ್‍ಗೆ ಹಾನಿ.

    ಉತ್ತರ ಪ್ರದೇಶದ ಕೆಲ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಗುಡುಗು, ಸಿಡಿಲು ಸಹಿತ ವರುಣ ದೇವ ವಿಜೃಂಭಿಸಿದ ಕಾರಣ ಆಗ್ರಾದಲ್ಲಿರುವ ಐತಿಹಾಸಿಕ ಕಟ್ಟಡ ತಾಜ್‍ಮಹಲ್‍ಗೆ ಹಾನಿಯಾಗಿರುವ ಕುರಿತು ವರದಿಯಾಗಿದೆ. ಕಟ್ಟಡದ ಮುಖ್ಯಗೇಟ್ ಮತ್ತು ಎತ್ತರದ ಗುಮ್ಮಟದ ಕೆಳ ಭಾಗದ ಅಮೃತ ಶಿಲೆಯ ರೇಲಿಂಗ್‍ಗೆ ಹಾನಿಯಾಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಮಾಧಿಯ ಮೇಲ್‍ಭಾಗಕ್ಕೆ ಹಾನಿಯಾಗಿದ್ದು, ತಾಜ್‍ಮಹಲ್ ಆವರಣದಲ್ಲಿದ್ದ ಕೆಲ ಮರಗಳು ಬುಡದ ಸಮೇತ ಕಿತ್ತು ಬಂದಿರುವುದಾಗಿ ಎಎಸ್‍ಐ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ ಬಸಂತ್ ಕುಮಾರ್ ಮಾಹಿತಿ ನೀಡಿದ್ದಾರೆ. ಈ ಹಿಂದೆಯೂ…

  • ಸಿನಿಮಾ

    ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕೀರ್ತಿ ತಂದ ನಟ ಅರುಣ್ ಸಾಗರ್ ಪುತ್ರ..

    ಸಾಮಾನ್ಯವಾಗಿ ನಟರ ಮಕ್ಕಳು ತಂದೆಯಂತೆಯೇ ಸಿನಿಮಾ ಕ್ಷೇತ್ರದ ಮೇಲೆ ಹೆಚ್ಚಿನ ಆಶಕ್ತಿ ಹೊಂದಿರುತ್ತಾರೆ. ಆದರೆ ನಟ ಅರುಣ್ ಸಾಗರ್ ಪುತ್ರ ಸಿನಿಮಾ ಬಿಟ್ಟು ಕ್ರೀಡಾ ವಿಭಾಗದಲ್ಲಿ ಆಶಕ್ತಿ ಹೊಂದಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ ವಿದೇಶಿ ಕ್ರೀಡೆ ಮಾಕ್ಸ್ ಮೌಥಾಯ್‍ಯಲ್ಲಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಹೌದು, ಅಂತರಾಷ್ಟ್ರೀಯ ಮಟ್ಟದ ಮಾಕ್ಸ್ ಮೌಥಾಯ್ ಸ್ಪರ್ಧೆ ಥಾಯ್ಲಂಡ್‍ನ ಪಟಾಯಲ್ಲಿ ನಡೆದಿತ್ತು. ಇದರಲ್ಲಿ ವಿವಿಧ ದೇಶಗಳು ಭಾಗಿಯಾಗಿದ್ದವು. ಇದೇ ರೀತಿ ಈ ಸ್ಪರ್ಧೆಯಲ್ಲಿ ಅರುಣ್…

  • ಸಿನಿಮಾ

    ನಮ್ಮ ಸರ್ಕಾರ ಇದೆ ಎಂದು ಧಮಕಿ ಹಾಕಿದ ಶಾಸಕನಿಗೆ ತಿರುಗೇಟು ನೀಡಿದ ದರ್ಶನ್…

    ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರಿಗೆ ನಟರಾದ ದರ್ಶನ್ ಮತ್ತು ಯಶ್ ಸಾಥ್ ನೀಡಿದ್ದಾರೆ. ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರವಾಗಿರುವ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಕೆಯ ವೇಳೆ ಜನಸಾಗರವೇ ಹರಿದು ಬಂದಿದ್ದು, ಶಕ್ತಿ ಪ್ರದರ್ಶನದ ಮೂಲಕ ಸುಮಲತಾ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ನಡೆದ ಸಮಾವೇಶದಲ್ಲಿ ಮಾತನಾಡಿದ ದರ್ಶನ್, ನಾನು ಇಲ್ಲಿ ನಿಂತಿದ್ದಕ್ಕೆ ಹಳೆ ಮ್ಯಾಟರ್ ಓಪನ್ ಆಗುತ್ತಿದೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ, ಅದೂ ಆಗಲಿ, ಅದರಿಂದ ಖುಷಿ,…

  • ಮನರಂಜನೆ

    ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಹುಡುಗಿಯರ ಈ ಏಲಿಯನ್ ಡಾನ್ಸ್.!ಹೇಗೆಲ್ಲಾ ಡಾನ್ಸ್ ಮಾಡಿದ್ದಾರೆ ನೋಡಿ ಶಾಕ್ ಆಗ್ತೀರಾ…

    ಸೋಶಿಯಲ್ ಮೀಡಿಯಾದಲ್ಲಿ ಯಾವಾಗ ಏನು ವೈರಲ್ ಆಗುತ್ತೆ ಹೇಳೋದಕ್ಕೆ ಆಗೋಲ್ಲ…ಈಗಂತೂ ಏಲಿಯನ್ ಡಾನ್ಸ್ ಪ್ರಪಂಚದಾದ್ಯಂತ ವೈರಲ್ ಆಗುತ್ತಿದೆ. ಹುಡುಗಿಯರಂತೂ ಈ ಏಲಿಯನ್ ಡಾನ್ಸ್’ಗೆ  ಚಾಲೆಂಜ್ ಮಾಡಿದವರಂತೆ ಹುಚ್ಚೆದ್ದು  ಕುಣಿಯುತ್ತಿದ್ದಾರೆ. ಹೌದು ಪ್ರಪಂಚದಾದ್ಯಂತ ವೈರಲ್ ಆಗುತ್ತಿರುವ ಈ ಏಲಿಯನ್ ಡಾನ್ಸ್ ಹೆಸರು Dame Tu Cosita ಅಂತ ಹೇಳಿ.ಈ ಡಾನ್ಸ್’ಗೆ ಎಲ್ಲಾ ನಟ ನಟಿಯರು ಸೇರಿದಂತೆ ಪ್ರಪಂಚದಾದ್ಯಂತ  ಚಾಲೆಂಜ್ ಮಾಡಿದ್ದಾರೆ. ಹುಡುಗಿಯರು ಅಂತೂ ಈ ಡಾನ್ಸ್’ಗೆ ಮಾರುಹೋಗಿದ್ದಾರೆ. ವಿಶ್ವದಾದ್ಯಂತ ಏಲಿಯನ್ ಜೊತೆ ಡಾನ್ಸ್ ಮಾಡುವುದು ಈಗ ಪ್ರಸಿದ್ಧವಾಗಿದೆ. ಅನೇಕ ಸ್ಟಾರ್ಸ್ ಈ ಏಲಿಯನ್ ಜೊತೆ ಡಾನ್ಸ್ ಮಾಡ್ತಿದ್ದಾರೆ. ವೈರಲ್ ಆಗಿರುವ…

  • ಸುದ್ದಿ

    ಕೊಡಗಿನಲ್ಲಿ ಕಂಪಿಸಿದ ಭೂಮಿ, ಜಲ ಪ್ರಳಯಕ್ಕೆ ಸಿಲುಕಿದ ಜನರು…!

    ಮಡಿಕೇರಿ, ಮೇ 26: ಕೊಡಗಿನಲ್ಲಿ ಮತ್ತೆ ಭಯದ ವಾತಾವರಣ ನಿರ್ಮಾಣವಾಗಿದೆ. ಕಳೆದ ವರ್ಷ ಉತ್ತರ ಕೊಡಗಿನಲ್ಲಿ (ಮಡಿಕೇರಿ ಭಾಗ) ಭೂಮಿ ಕಂಪಿಸಿದ ಅನುಭವವಾಗಿತ್ತು. ಜತೆಗೆ ನಿಗೂಢ ಶಬ್ದ ಕಿವಿಗೆ ಬಡಿದಿತ್ತು. ಅದಾದ ಬಳಿಕ ಆ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಏನಾಯಿತು ಎಂಬುದು ಎಲ್ಲರ ಮುಂದಿದೆ. ಈ ಬಾರಿ ಮತ್ತೆ ಭೂಮಿ ಕಂಪಿಸಿದ್ದು, ಅದು ಉತ್ತರ ಕೊಡಗಿನಿಂದ ದಕ್ಷಿಣ ಕೊಡಗಿನತ್ತ ವರ್ಗಾವಣೆಗೊಂಡಿದೆ. ಇದು ಭಯಕ್ಕೆ ಕಾರಣವಾಗಿದೆ. ಕಳೆದ ವರ್ಷ ಮಡಿಕೇರಿ ತಾಲ್ಲೂಕು ವ್ಯಾಪ್ತಿಯಲ್ಲಿ ಭೂಕುಸಿತ ಉಂಟಾಗಿ, ಜಲಪ್ರಳಯವಾಗಿ ಭಾರೀ ಅನಾಹುತ…

  • ಸುದ್ದಿ

    ಸರ್ಕಾರಿ ಶಾಲಾ ವಿಧ್ಯಾರ್ಥಿಗಳಿಗೆ ಸ್ಕೂಲ್ ಶೂ ತೊಡಿಸಿ ಮಾನವೀಯತೆ ಮೆರೆದ ನಟ ಕಿಚ್ಚ ಸುದೀಪ್……!

    ಸರ್ಕಾರಿ ಶಾಲಾ ಮಕ್ಕಳಿಗೆ ಶೂ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಿಚ್ಚ ಸುದೀಪ್ ಅವರು ಮಕ್ಕಳಿಗೆ ಸ್ಕೂಲ್ ಶೂ ತೊಡಿಸಿ ತಮ್ಮಲ್ಲಿರುವ ಸಾಮಾಜಿಕ ಕಳಕಳಿಯನ್ನು ತೋರಿದ್ದಾರೆ. ಇಂದು ಕೆಂಗೇರಿಯ ಸರ್ಕಾರಿ ಶಾಲಾ ಮಕ್ಕಳಿಗೆ ಕಿಚ್ಚಸುದೀಪ್ ಚಾರಿಟೇಬಲ್ ಟ್ರಸ್ಟ್ ಮೂಲಕ ಮಕ್ಕಳಿಗೆ ಶೂ ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶೂ ವಿತರಣೆ ಕಾರ್ಯಕ್ರಮಕ್ಕೆ ಸುದೀಪ್ ಅಭಿಮಾನಿಗಳು ಸುದೀಪ್ ಅವರನ್ನು ಆಹ್ವಾನ ಮಾಡಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಕಿಚ್ಚ ಸುದೀಪ್ ಅವರು ಸರ್ಕಾರಿ ಶಾಲಾ ಮಕ್ಕಳಿಗೆ ಸ್ಕೂಲ್ ಶೂ ಮತ್ತು ಸಾಕ್ಸ್…