ಉಪಯುಕ್ತ ಮಾಹಿತಿ

ವಸತಿ ಯೋಜನೆಗಳಿಗೆ ನೀಡುವ ಸಹಾಯಧನದ ಮೊತ್ತ ಹೆಚ್ಚಳ!

162

ಬೆಂಗಳೂರು(05-01-2023): ವಸತಿ ಯೋಜನೆಗಳ ಫ‌ಲಾನುಭವಿಗಳಿಗೆ ಗ್ರಾಮೀಣ ಭಾಗದಲ್ಲಿ ನೀಡುತ್ತಿದ್ದ ಸಹಾಯಧನ ಮೊತ್ತವನ್ನು 1.20 ಲಕ್ಷ ರೂ.ನಿಂದ 3 ಲಕ್ಷ ರೂ.ಗೆ ಹಾಗೂ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ನೀಡುತ್ತಿದ್ದ 2.70 ಲಕ್ಷ ರೂ.ನಿಂದ 4 ಲಕ್ಷ ರೂ.ಗೆ ಹೆಚ್ಚಳ ಮಾಡುವ ಮಹತ್ವದ ತರ‍್ಮಾನಕ್ಕೆ ಸರ್ಕಾರ ಮುಂದಾಗಿದೆ.

ಬಡತನರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಸೂರು ಕಲ್ಪಿಸುವ ಬಸವ, ಅಂಬೇಡ್ಕರ್‌ ಸೇರಿ ರಾಜ್ಯದಲ್ಲಿ ಜಾರಿಯಲ್ಲಿರುವ ವಸತಿ ಯೋಜನೆಗಳಿಗೆ ನೀಡುವ ಸಹಾಯಧನದ ಮೊತ್ತ ಹೆಚ್ಚಳವಾಗಲಿದೆ.

ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲ ಮಾಡಿಕೊಡುವ ಹಾಗೂ ಅವರನ್ನು ಸಾಲದ ಹೊರೆಯಿಂದ ತಪ್ಪಿಸಲು ಸಹಾಯಧನವನ್ನು ಹೆಚ್ಚಳ ಮಾಡಲು ನರ‍್ಧರಿಸಿದ್ದೇವೆ. ವಸತಿ ಇಲಾಖೆ ಕೈಗೊಂಡಿರುವ ಈ ನರ‍್ಧಾರದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ ಘೋಷಣೆ ಮಾಡಲಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಸಬ್ಸಿಡಿ ಮೊತ್ತ ಹೆಚ್ಚಳ ಮಾಡುವುದರಿಂದ ಬಡವರು ಅತ್ಯಂತ ಕಡಿಮೆ ಬೆಲೆಯಲ್ಲಿ ಮನೆಗಳನ್ನು ನರ‍್ಮಾಣ ಮಾಡಿಕೊಂಡರೆ ರ‍್ಕಾರದ ಸಬ್ಸಿಡಿ ದೊರೆತು ಬಡವರು ಸಾಲದ ಹೊರೆಯಿಂದ ದೂರ ಉಳಿದು ನೆಮ್ಮದಿಯಿಂದ ಜೀವನ ಸಾಗಿಸುವಂತಾಗುತ್ತದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಎಲ್ಲಾ ವಸತಿ ಯೋಜನೆಗಳಿಗೂ ಒಂದೇ ಮಾದರಿಯಲ್ಲಿ ಸಬ್ಸಿಡಿ ನೀಡುತ್ತದೆ. ಅದೇ ಮಾದರಿಯಲ್ಲಿ ರಾಜ್ಯವು ಜಾರಿಗೆ ತರುತ್ತಿರುವುದರಿಂದ ತಾರತಮ್ಯ ನಿವಾರಣೆಯಾಗಲಿದೆ ಎಂದರು. ನಗರ ಪಟ್ಟಣಗಳಲ್ಲಿ ವಾಸಿಸುವ ಕೊಳಚೆ ನಿವಾಸಿಗಳಿಗೆ ಮುಂದಿನ ಮರ‍್ಚ್‌ ಒಳಗಾಗಿ 83 ಸಾವಿರ ಮನೆಗಳನ್ನು ನರ‍್ಮಿಸಿಕೊಡುವುದಾಗಿ ಇದೇ ಸಂರ‍್ಭದಲ್ಲಿ ಅವರು ಭರವಸೆ ನೀಡಿದರು.

About the author / 

KOLAR NEWS CHANDRU

KOLAR NEWS CHANDRU editor : kolar news paper/ www.nammakolar.com presschandrukolar@gmail.com mobile-9448715409 kolar.karnataka.563101

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ