ಉಪಯುಕ್ತ ಮಾಹಿತಿ

ಪಿ.ಎಂ. ಕಿಸಾನ್ ಯೋಜನೆಯ ಫಲಾನುಭವಿಗಳು ಕಡ್ಡಾಯವಾಗಿ e kyc ಮಾಡಿಸಿಕೊಳ್ಳಿ

42

ಪಿ.ಎಂ. ಕಿಸಾನ್ ಯೋಜನೆಯಲ್ಲಿ ನೊಂದಣಿಯಾಗಿರುವ ಫಲಾನುಭವಿಗಳಿಗೆ ಆರ್ಥಿಕ ನೆರವು ವರ್ಗಾವಣೆಯು ಚಾಲ್ತಿಯಲ್ಲಿದ್ದು, ಯೋಜನೆಯ ನೆರವು ನೈಜ ಫಲಾನುಭವಿಗಳಿಗೆ ದೊರೆಕುತ್ತಿದ್ದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಲು e kyc ಮಾಡುವುದು ಕಡ್ಡಾಯವಾಗಿರುತ್ತದೆ e kyc ಮಾಡಿಸಲು ತಮ್ಮ ಆಧಾರ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯೊOದಿಗೆ ನೊಂದಣಿಯಾಗಿರುವ ಮೊಬೈಲ್ ಸಂಖ್ಯೆಯನ್ನು ದಾಖಲಿಸಿದ ನಂತರ ಓಟಿಪಿ ಆಧಾರಿಸಿದ e-kyc ಮಾಡಬಹುದಾಗಿರುತ್ತದೆ.
ಆಧಾರ್ ಸಂಖ್ಯೆಯೊOದಿಗೆ ಮೊಬೈಲ್ ಸಂಖ್ಯೆ ಜೋಡಣೆಯಾಗಿರುವ ಅಥವಾ ಮೊಬೈಲ್ ಸಂಖ್ಯೆಗೆ ಓಟಿಪಿ ಸ್ವೀಕೃತಿಯಾಗಿರುವ ಸಂದರ್ಭದಲ್ಲಿ ನಿಮ್ಮ ಹತ್ತಿರದ ನಾಗರಿಕ ಸೇವ ಕೇಂದ್ರಗಳಿಗೆ (ಸಿ.ಎಸ್.ಸಿ) ಭೇಟಿ ನೀಡಿ ಬಯೋಮೆಟ್ರಿಕ್ ಆಧಾರಿತವಾಗಿ (ಕೈ ಬೆರಳಿನ ಗುರುತು ಆಧಾರದ ಮೇಲೆ) e kyc ಮಾಡಿಸಬಹುದಾಗುತ್ತದೆ.


ಈ ಯೋಜನೆ ಅಡಿ ಮುಂದಿನ 13ನೇ ಕಂತಿನ ಆರ್ಥಿಕ ನಿರ್ವ ಪಡೆಯಲು e-kyc ಕಡ್ಡಾಯವಾಗಿರುವುದರಿಂದ ಎಲ್ಲಾ ಅರ್ಹ ಫಲಾನುಭವಿಗಳಿಗೆ e kyc ಮಾಡಿಕೊಳ್ಳಲು ಸಹಾಯಕ ಕೃಷಿ ನಿರ್ದೇಶಕರು ತಿಳಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ರೈತರು ಮತ್ತು ಹತ್ತಿರದ ರೈತ ಸಂಪರ್ಕ ಕೇಂದ್ರಗಳು ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಸಂಪರ್ಕಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About the author / 

KOLAR NEWS CHANDRU

KOLAR NEWS CHANDRU editor : kolar news paper/ www.nammakolar.com presschandrukolar@gmail.com mobile-9448715409 kolar.karnataka.563101

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ