ರಾಜಕೀಯ

5ಸಾವಿರ ಜನ ಸೇರಿಸಿ ಸಮಾವೇಶ ಮಾಡಿ-ರಮೇಶ್‌ಕುಮಾರ್‌ಗೆ ವರ್ತೂರು ಪ್ರಕಾಶ್ ಸವಾಲ್

108

ಘಟಬಂಧನ್ ನಾಯಕರು ಅವರ ಕ್ಷೇತ್ರದಲ್ಲಿ ಈ ಬಾರಿ ಅಡ್ರೆಸ್‌ಗೆ ರ‍್ತಾರಾ-ಚಿಂತನೆ ಮಾಡಲಿ

ಕೋಲಾರ:- ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರನ್ನು ಕೋಲಾರ ವಿಧಾನ ಸಭಾ ಕ್ಷೇತ್ರಕ್ಕೆ ಕರೆತರುವ ಮುನ್ನ ಮಾಜಿ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್‌ರ ಘಟಬಂಧನ್ ತಂಡ ಕೋಲಾರದಲ್ಲಿ ಐದು ಸಾವಿರ ಜನರನ್ನು ಸೇರಿಸಿ ಸಮಾವೇಶ ಮಾಡಿ ತೋರಿಸಲಿ, ಅವರ ಕ್ಷೇತ್ರಗಳಲ್ಲಿ ಅವರು ಅಡ್ರೆಸ್‌ಗೆ ರ‍್ತಾರ ಆಲೋಚಿಸಲಿ ಎಂದು ಮಾಜಿ ಸಚಿವ ಆರ್.ವರ್ತೂರ್ ಪ್ರಕಾಶ್ ಸವಾಲು ಹಾಕಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ಶಾಸಕ ರಮೇಶ್‌ಕುಮಾರ್ ಹೇಳಿಕೆ ನೀಡಿ, ಸಿದ್ದರಾಮಯ್ಯ ಕೋಲಾರಕ್ಕೆ ಬಂದರೆ ವರ್ತೂರು ಪ್ರಕಾಶ್ ಅಡ್ರೆಸ್‌ಗೆ ಇರಲ್ಲ ಎಂದು ಹೇಳಿದ್ದರ ವಿರುದ್ದ ಮಾತನಾಡಿ, ಶ್ರೀನಿವಾಸಪುರ,ಬಂಗಾರಪೇಟೆಯವರನ್ನಲ್ಲ, ಕೋಲಾರಕ್ಷೇತ್ರದ 5 ಸಾವಿರ ಜನಸೇರಿಸಿ ಸಮಾವೇಶ ಮಾಡಿ ತೋರಿಸಿ, ಎಂದು ಸವಾಲೆಸೆದರು.

ಕೋಲಾರ ಕ್ಷೇತ್ರದ ಚಿಂತೆಯನ್ನು ಘಟಬಂಧನ್ ನಾಯಕರು ಬಿಟ್ಟು ಅವರವರ ಕ್ಷೇತ್ರಗಳಲ್ಲಿ ಅವರುಗಳು ಮೊದಲು ಗೆಲ್ಲುತ್ತಾರಾ ಎಂಬುದರ ಬಗ್ಗೆ ಚಿಂತನೆ ಮಾಡಲಿ ಎಂದು ಛೇಡಿಸಿ, ಈಗಾಗಲೇ ಕೆ.ವೈ.ನಂಜೇಗೌಡ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ, ಬಂಗಾರಪೇಟೆಯಲ್ಲಿ ಎಸ್.ಎನ್.ನಾರಾಯಣಸ್ವಾಮಿ, ಶ್ರೀನಿವಾಸಪುರದಲ್ಲಿ ರಮೇಶ್‌ಕುಮಾರ್‌ಗೆ ಸೋಲು ಕಟ್ಟಿಟ್ಟ ಬುತ್ತಿ ಎಂದರು.
ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡುವವರೇ ಇಲ್ಲ,ಹಳ್ಳಿಗಳಿಗೆ ಪ್ರವಾಸ ಮಾಡಲು ಘಟಬಂಧನ್ ನಾಯಕರಿಗೆ ಸಮಯ ಇಲ್ಲದಿರುವಾಗ ಸಿದ್ದರಾಮಯ್ಯ ಪರ ಕೆಲಸ ಮಾಡುವವರು ಯಾರು ಎಂದು ಪ್ರಶ್ನಿಸಿದರು.
ಶಾಸಕ ರಮೇಶ್‌ಕುಮಾರ್‌ಗೆ ಬಾಯಿ ಹಿಡಿತವಿಲ್ಲ, ಸಿದ್ದರಾಮಯ್ಯ ರವರು ಕೋಲಾರದಲ್ಲಿ ಸ್ಪರ್ಧೆ ಮಾಡಿದರೆ ನಾನು ಅಡ್ರೆಸ್ ಗೆ ಇರುವುದಿಲ್ಲ ಎಂದಿದ್ದಾರೆ ಅದು ಅವರ ಘನತೆಗೆ ತಕ್ಕ ಮಾತಲ್ಲ ವಾಸ್ತವವಾಗಿ ಸಿದ್ದರಾಮಯ್ಯ ನವರನ್ನು ಕೋಲಾರಕ್ಕೆ ಕರೆತರುವುದರಿಂದ ಅದು ನನ್ನ ಗೆಲುವಿನ ಮೊದಲ ಮೆಟ್ಟಿಲಾಗಲಿದೆ, ಅದಕ್ಕೆ ರಮೇಶ್‌ಕುಮಾರ್‌ಗೆ ಮಾಧ್ಯಮದ ಮೂಲಕ ಧನ್ಯವಾದ ತಿಳಿಸುವೆ ಎಂದರು.

ರಾಜಕೀಯ ಲೆಕ್ಕಾಚಾರದ ಪ್ರಕಾರ ಕ್ಷೇತ್ರದ ಮತದಾರರ ಸಂಖ್ಯೆ 2 ಲಕ್ಷ 30 ಸಾವಿರ ಇದ್ದು, ಅಲ್ಪಸಂಖ್ಯಾತರ ಮತಗಳು 50 ಸಾವಿರ, ,ಹಿಂದೂಗಳ ಮತ 1 ಲಕ್ಷ 80 ಸಾವಿರ ಇದರಲ್ಲಿ ಕನಿಷ್ಟ ಐದು ಸಾವಿರ ಜನರನ್ನು ಕಾಸು ನೀಡದೆ, ಬೇರೆ ಕ್ಷೇತ್ರದ ಜನರನ್ನು ಸೇರಿಸದೆ ಕೇವಲ ಕೋಲಾರ ವಿಧಾನ ಸಭಾಕ್ಷೇತ್ರದ ಜನರನ್ನು ಮಾತ್ರ ಸೇರಿಸಿ ಸಮಾವೇಶ ನಡೆಸಿದರೆ ಆಗ ಘಟಬಂಧನ್ ನಾಯಕರುನ್ನು ಒಪುö್ಪತ್ತೇನೆ ಎಂದರು.

ಬಿ.ಜೆ.ಪಿ ಸರ್ಕಾರದ ಅಭಿವೃದ್ಧಿ ಕೆಲಸಗಳು,ಸ್ಥಳೀಯ ಶಾಸಕರ ವಿಫಲತೆ,ಸದಾ ಸಂಘಟನೆಯಲ್ಲಿ ತೊಡಗಿರುವ ತಮಗೆ ಕನಿಷ್ಠ 50 ಸಾವಿರ ಮತಗಳ ಅಂತರದಲ್ಲಿ ಗೆಲವು ಶತಸಿದ್ಧವೆಂದರು. ಒಂದು ವೇಳೆ ಜನವರಿ 9 ರಂದು ಸಿದ್ದರಾಮಯ್ಯ ನವರು ಕೋಲಾರಕ್ಕೆ ಬರುವುದು ನಿಶ್ಚಿತವಾದರೆ ಅಂದೇ ತಾವು ನನ್ನ ಬಲ ಪ್ರದರ್ಶನ ಮಾಡುವುದಾಗಿ ಘೋಷಿಸಿದರು.

About the author / 

KOLAR NEWS CHANDRU

KOLAR NEWS CHANDRU editor : kolar news paper/ www.nammakolar.com presschandrukolar@gmail.com mobile-9448715409 kolar.karnataka.563101

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇವರು-ಧರ್ಮ

    ದೇವಸ್ಥಾನಗಳಲ್ಲಿ ಹೊಡೆಯುವ ಘಂಟೆಯ ಹಿಂದಿದೆ ನಿಮ್ಗೆ ತಿಳಿಯದ ಈ ರಹಸ್ಯ.!ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

    ಬಹಳಷ್ಟು ಮಂದಿ ನಿತ್ಯ ದೇವಸ್ಥಾನಕ್ಕೆ ಹೋಗುತ್ತಿರುತ್ತಾರೆ.ದೇವಸ್ಥಾನಕ್ಕೆ ಹೋದಾಗ ದೇವರಿಗೆ ಮಂಗಳಾರತಿ ಮಾಡುವ ಸಮಯದಲ್ಲಿ ಸಾಮಾನ್ಯವಾಗಿ ಎಲ್ಲರೂ ಘಂಟೆ ಬಾರಿಸುತ್ತಾರೆ.ಅದರಲ್ಲೂ ಚಿಕ್ಕಮಕ್ಕಳಿಗಂತೂ ಘಂಟೆ ಬಾರಿಸುವುದರಲ್ಲಿ ಎತ್ತಿದ ಕೈ.ಅದರಲ್ಲಿ ಅವರು ಒಂದು ಕೈ ಮುಂದೆನೇ ಇರ್ತಾರೆ. ಆದರೆ ಗುಡಿಯಲ್ಲಿ ಘಂಟೆ ಯಾಕೆ ಹೊಡೀತಾರೆ ಗೊತ್ತಾ..? ಗುಡಿಗೆ ಹೋದವರು ಕಡ್ಡಾಯವಾಗಿ ಘಂಟೆ  ಭಾರಿಸುತ್ತಾರೆ. ಮನೆಯಲ್ಲೂ ಅಷ್ಟೇ ಪೂಜೆ ಮಾಡುತ್ತಿದ್ದಾಗ, ಆರತಿ ಬೆಳಗುತ್ತಿದ್ದಾಗ ಘಂಟೆ  ಹೊಡೆಯುತ್ತಾರೆ… ದೇವಾಲಯಕ್ಕೆ ಹೋದಾಗ ಗಂಟೆ ಹೊಡೆದರೆ ಮನಸ್ಸಿಗೆ ಆಧ್ಯಾತ್ಮಿಕ ಆನಂದ ಸಿಗುವುದಷ್ಟೇ ಅಲ್ಲದೆ ಸಕಲ ಶುಭಗಳು ಸಿದ್ಧಿಸುತ್ತವೆ. ಘಂಟೆಯಲ್ಲಿ…

  • ಸುದ್ದಿ

    ಬಯಲಾಯ್ತು ಜೆಡಿಎಸ್ ಶಾಸಕ ಮಾತನಾಡಿರುವ ಆಡಿಯೋ..!ಆ ಆಡಿಯೋದಲ್ಲಿ ಮಾತನಾಡಿದ್ದು ಏನು ಗೊತ್ತಾ?

    ಮಂಡ್ಯದಲ್ಲಿ ಪ್ರಚಾರಕ್ಕೆ ಹೊರಗಿನಿಂದ ಜನ ಕರೆಸುತ್ತಿದ್ದಾರಾ ಎಂಬ ಅನುಮಾನವೊಂದು ಕ್ಷೇತ್ರದ ಮತದಾರರನ್ನು ಕಾಡುತ್ತಿದೆ. ಯಾಕಂದ್ರೆ ಸಂಸದ ಶಿವರಾಮೇಗೌಡರು, ಜೆಡಿಎಸ್ ಕಾರ್ಯಕರ್ತನ ಜೊತೆ ಮಾತನಾಡಿರುವ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜೆಡಿಎಸ್ ಸಂಸದ ಎಲ್.ಆರ್. ಶಿವರಾಮೇಗೌಡ ಅವರು, ನಾಗಮಂಗಲ ತಾಲ್ಲೂಕಿನ ಚೀಣ್ಯ ಗ್ರಾಮದ ರಮೇಶ್ ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಈ ಆಡಿಯೋದಲ್ಲಿ ರಮೇಶ್, ಜೆಡಿಎಸ್ ಪರ ಪ್ರಚಾರಕ್ಕೆ ಜನರನ್ನು ಕರೆ ತರುವುದಾಗಿ ಹೇಳಿದ್ದಾರೆ. ಈ ಆಡಿಯೋ ನೋಡಿ… ಬೆಂಗಳೂರಿನಿಂದ ಪ್ರಚಾರಕ್ಕೆ ಜನರನ್ನು…

  • ಸುದ್ದಿ

    ಈ ಮೀನಿನ ಮುಖ ನೋಡಿದರೆ ಅಚ್ಚರಿಯಾಗುವುದಂತೂ ಗ್ಯಾರಂಟಿ ಯಾಕೆ ಗೊತ್ತಾ?ನೀವೇ ನೋಡಿ ಫ್ರೆಂಡ್ಸ್…

    ಪ್ರಕೃತಿಯ ವೈಚಿತ್ರ್ಯಒಮ್ಮೊಮ್ಮೆ ಎಲ್ಲರನ್ನೂ ಬೆರಗಾಗಿಸುತ್ತದೆ. ಬರೀ ಕಲ್ಪನೆಯಲ್ಲಿ ಮಾತ್ರ ಇದ್ದಂತಹ ವಸ್ತುಗಳು, ಜೀವಿಗಳು ಇದ್ದಕ್ಕಿದ್ದಂತೆ ಧುತ್ತನೆ ನಮಗೆದುರಾಗುತ್ತವೆ. ಸದ್ಯ ಚೀನಾದಲ್ಲಿ ಆಗಿರುವುದು ಇದೇ. ಮತ್ಸ್ಯಕನ್ಯೆ ಎಂಬ ಕಲ್ಪನೆ ನಮ್ಮಲ್ಲಿದೆ. ಈ ಹೆಸರು ಹೇಳಿದ ತಕ್ಷಣ ನಮಗೆ ಅರ್ಧ ಮೀನಿನ ದೇಹ, ಅರ್ಧ ಸುಂದರಿಯ ದೇಹ ಕಣ್ಣೆದುರು ಸುಳಿಯುತ್ತದೆ. ನಿಜವಾಗಿಯೂ ಮತ್ಸ್ಯ ಕನ್ಯೆಯನ್ನು ಕಂಡವರಿಲ್ಲ. ಇವೆಲ್ಲ ಬರೀ ನಮ್ಮ ಕಲ್ಪನೆಯ ಪರಿಧಿಯಲ್ಲಿ ಇರುವ ಅಂಶಗಳು. ಆದರೆ,ಕೆಲವೊಮ್ಮೆ ನಮ್ಮ ಕಲ್ಪನೆಯಲ್ಲಿರುವ ವಸ್ತುಗಳೇ ಧುತ್ತನೆ ಪ್ರತ್ಯಕ್ಷವಾಗಿ ನಮ್ಮನ್ನೇ ಒಂದು ಕ್ಷಣ ಆಶ್ಚರ್ಯ…

  • ಜ್ಯೋತಿಷ್ಯ

    ಶ್ರೀ ಗುರು ರಾಘವೇಂದ್ರ ಸ್ವಾಮಿಯನ್ನು ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ whatpp ಮೆಸೇಜ್ ಮಾಡಿ ಮೇಷ…