ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಂಡಕ್ಟರಿಲ್ಲದ ಕೆಎಸ್ಆರ್ಟಿಸಿ bus
ವಿರಾಜಪೇಟೆಯಿಂದ ಮೈಸೂರಿಗೆ ಪ್ರಯಾಣ ಹೊರಟೆ. ಸುಖಕರ ಹಾಗು ಸುರಕ್ಷಿತ ಪ್ರಯಾಣಕ್ಕೆ KSRTC ಬೆಸ್ಟ್. ಅಂದ ಮಾತ್ರಕ್ಕೆ ಬಸ್ ಹತ್ತಿ ಕಿಟಕಿಯ ಆಸನವನ್ನೇ ಆರಿಸಿ ಕುಳಿತುಕೊಂಡೆ. ನಾಲ್ಕೈದು ನಿಮಿಷದ ನಿಲುಗಡೆಯ ನಂತರ ಚಾಲಕ ಬಸ್ ಚಲಾಯಿಸಿದ. ಸಾಮಾನ್ಯವಾಗಿ ಬಸ್ ತಲುಪಿಸುವುದು ಚಾಲಕನಾದರೂ ಪ್ರಯಾಣಿಕರನ್ನು ನಿಭಾಯಿಸುವುದು ನಿರ್ವಾಹಕರು ತಾನೆ? ಅದೆ ನಮ್ಮ ಕಂಡಕ್ಟರ್.
ಬಸ್ 500 ಮೀಟರ್ ಮುಂದೆ ತಲುಪಿತು. ಪ್ರಯಾಣಿಕರೆಲ್ಲರೂ ಮೊಬೈಲ್, ಮಾತುಕತೆಗಳಲ್ಲಿ ನಿರತರಾಗಿದ್ದಾರೆ. ಆಸನಗಳು ಭರ್ತಿಯಾದ ಬಸ್ಸಿನಲ್ಲಿ ಕಂಡಕ್ಟರ್ ಇಲ್ಲವೆಂದು ಯಾರಿಗೂ ಭಾಸವಾಗಲಿಲ್ಲ.
ಸಾರ್ ಕಂಡಕ್ಟರ್ ಇಲ್ಲ ಎಂದು ಯುವಕನೊಬ್ಬ ಕೇಕೆ ಹಾಕಿದ. ಕೇಕೆ ಚಾಲಕನ ಕಿವಿಗೆ ಕೇಳದಿದ್ದರೂ ಕೇಳಿದ ಪ್ರಯಾಣಿಕರೆಲ್ಲರೂ ದಬ್ಬಿಬ್ಬಾಗಿ ಪರಸ್ಪರ ಮುಖ ನೋಡಿ ನಗು ಶುರುಮಾಡಿದರು. ಚಾಲಕನಿಗೆ ವಿಷಯದ ಪರಿವೇ ಇಲ್ಲ. ಪಟ್ಟಣದಲ್ಲಿ ವಾಹನಗಳ ದಟ್ಟಣೆ ಇರುವುದರಿಂದ ನಿಧಾನವಾಗಿ ಚಲಾಯುಸುತ್ತಿದ್ದಾನೆ. ಎಲ್ಲಿಯಾದರೂ ಸ್ಟೋಪ್ ಮಾಡಬೇಕಾದರೆ ಕಂಡಕ್ಟರ್ ನ ಪೀಪಿಯ ಪೀ….. ಶಬ್ಧ ಕೇಳಬೇಕಲ್ಲವೇ..!?
ಹಿಂದಿನಿಂದ ಬಂದ ಯುವಕನೊಬ್ಬ ಚಾಲಕನ ಬಳಿ ತೆರಳಿ ಕಂಡಕ್ಟರ್ ಇಲ್ಲ ಎಂದು ಜೋರಾಗಿ ಕೂಗಿದ. ತಟ್ಟನೆ ಹಿಂದೆ ತಿರುಗಿದೆ ಚಾಲಕ ನಗುತ್ತಾ ಬಸ್ ಬದಿಗೆ ನಿಲ್ಲಿಸಿದ. ಕತ್ತು ತಿರುಗಿಸಿ ಪ್ರಯಾಣಿಕರೊಂದಿಗೆ
ಎಲ್ಲಿ ಹೋದ ಇವ ? ಎಂದು ಕೇಳಿದ. ಹ್ನೇ…. ಕಾಲ್ ಮಾಡಿ ನೋಡು ಎಂದರು ಪ್ರಯಾಣಿಕರು. ನನ್ನತ್ರ ನಂಬರ್ ಇಲ್ಲ ಎಂದ. ಕೇಳಿದ ಪ್ರಯಾಣಿಕರಿಗೆ ಇದೇನೋ ಹಾಸ್ಯ ನಾಟಕದಂತೆ. ಹಾಗಾದ್ರೆ ಸ್ವಲ್ಪ ವೈಟ್ ಮಾಡಿ ಕಂಡಕ್ಟರ್ ಈಕಡೆ ಕಾಲ್ ಮಾಡ್ತಾನೆ ಎಂದರು ಪ್ರಯಾಣಿಕರು. ಇಲ್ಲ ಅವನತ್ರ ನನ್ನ ನಂಬರೂ ಇಲ್ಲಾರೀ ಎಂದನು ಚಾಲಕ.
ನಾವಿಬ್ಬರೂ ಈ ಬಸ್ಸಲ್ಲಿ ಹೊಸಬರು, ಇವತ್ತು ಬೆಳಿಗ್ಗೆ ನೇಮಕವಾಗಿದ್ದಷ್ಟೆ. ಪರಿಚಯವಾಗಲು ಬಿಡುವು ಸಿಗಲಿಲ್ಲ. ಪ್ರಯಾಣಿಕರಿಗೆ ಟಿಕೆಟ್ ಇಲ್ಲದೆ ಮೈಸೂರು ತಲುಪಬಹುದೆಂಬ ಆಸೆಯೇನೋ ಎಲ್ಲರೂ ಫುಲ್ ಖುಷಿಯಲ್ಲಿ.
ತಕ್ಷಣ ಹಿಂದಿನಿಂದ ಜೋರು ಹಾರ್ನ್ ಶಬ್ದ. ತಿರುಗಿ ನೋಡಿದಾಗ ಅತಿವೇಗದಿಂದ ಬಂದ ಆಟೋದಿಂದ ನಗುತ್ತಾ ಇಳಿದು ಬಸ್ಸತ್ತಿದ ಕಂಡಕ್ಟರ್ ಮಾಮ. ಏನಿದ್ದರೂ ಕಂಡಕ್ಟರ್ ಇಲ್ಲದ KSRTC ಒಡೆಯನಿಲ್ಲದ ಮನೆಯಂತಿತ್ತು.
Shafi Anvaari
Kodagarahalli
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪೆನಿ BSNL (ಭಾರತ್ಸಂಚಾರ್ ನಿಗಮ್ ಲಿಮಿಟೆಡ್) ವಿಶಿಷ್ಟವಾದ ಯೋಜನೆಯೊಂದನ್ನು ಆರಂಭಿಸಿದೆ. ಇದು ಲ್ಯಾಂಡ್ ಲೈನ್ಹಾಗೂ ಬ್ರ್ಯಾಡ್ ಬ್ಯಾಂಡ್ ಬಳಕೆದಾರರಿಗೆ ಮಾತ್ರ ಅನ್ವಯ ಆಗುತ್ತದೆ. ಏನು ಈ ವಿಶಿಷ್ಟ ಯೋಜನೆ ಅಂತೀರಾ? 5 ನಿಮಿಷದ ವಾಯ್ಸ್ ಕಾಲ್ ಮಾಡಿದರೆ ಬಿಎಸ್ ಎನ್ ಲ್ ನಿಂದಲೇ 6 ಪೈಸೆ ನೀಡಲಾಗುತ್ತದೆ. ಹೌದು, ಸರಿಯಾಗಿಯೇ ಓದುತ್ತಾ ಇದ್ದೀರಾ. ಕರೆಮಾಡಿ, ಐದು ನಿಮಿಷ ಮಾತನಾಡಿದರೆ ಆರು ಪೈಸೆ ನೀಡುವ ಸ್ಕೀಂ ಇದು. ಭಾರತದಲ್ಲೇ ಇಂಥ ಯೋಜನೆ ಇದೇ ಮೊದಲ…
ಈಗ ಎಲ್ಲಾ ಕಡೆ ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ನಾಡ ಧ್ವಜ ಕುರಿತು ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಹಾಗಾದ್ರೆ ನಮ್ಮ ಸಂವಿಧಾನದಲ್ಲಿ ಪ್ರತ್ಯೇಕ ನಾಡ ಧ್ವಜ ಕುರಿತು ಏನು ಹೇಳಲಾಗಿದೆ? ಭಾರತದ ಯಾವ ರಾಜ್ಯವು ಪ್ರತ್ಯೇಕ ಧ್ವಜವನ್ನು ಹೊಂದಿಲ್ಲವೇ?
ಪ್ರತಿ ವರ್ಷವೂ ಮಾನ್ಸೂನ್ನ್ನು ಕಾಯಲಾಗುತ್ತದೆ. ಯಾಕೆಂದರೆ ಆಕಾಶದಿಂದ ಸುರಿಯು ಮಳೆಯಿಂದ ಹಸಿರು ಹರಡುತ್ತದೆ.ಆದರೆ ಜನರು ಆಕಾಶದಿಂದ ಮಳೆ ಸುರಿಯುವುದನ್ನು ಕಾಯದಂತಹ ಸ್ಥಳದ ಬಗ್ಗೆ ನಿಮಗೆ ಗೊತ್ತಿರಲಾರದು.
ಈಗಿನ ಕಾಲದಲ್ಲಿ ಮಕ್ಕಳಿಗೆ ತಮ್ಮನ್ನು ಸಾಕಿ ಬೆಳೆಸಿದ ತಂದೆ ತಾಯಿಗಳನ್ನು ಸಾಕುವುದೇ ದೊಡ್ಡ ಕಷ್ಟವೆನಿಸಿದೆ.ಹಾಗಾಗಿ ತಮ್ಮ ವೃದ್ಧ ತಂದೆ ತಾಯಿಗಳನ್ನು ವೃದ್ಧಾಶ್ರಮಗಳಲ್ಲಿ ಸೇರಿಸುವುವರೇ ಹೆಚ್ಚು. ಆದರೆ ಇನ್ನು ಮುಂದೆ ಹಾಗೆ ಮಾಡುವ ಆಗಿಲ್ಲ.
ಕೊರೊನಾ ಸುಳಿಗೆ ಸಿಲುಕಿ ಹಲವರು ಜೀವವನ್ನ ಕಳೆದುಕೊಂಡದ್ರೆ, ಬಹುತೇಕರು ಜೀವನವನ್ನು ಕಳೆದುಕೊಳ್ಳುವಂತಾಗಿದೆ. ಕೊರೊನಾ ತಡೆಗಾಗಿ ವಿಶ್ವಮಟ್ಟದಲ್ಲಿ ಲಾಕ್ಡೌನ್ ಸೂತ್ರ ಜಾರಿಗೊಳಿಸಿದ ಪರಿಣಾಮ ಎಷ್ಟೋ ಜನ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಉದ್ಯೋಗ ಕಳೆದುಕೊಂಡ ಕೂಲಿ ಕಾರ್ಮಿಕರು ವಾಹನದ ವ್ಯವಸ್ಥೆ ಇಲ್ಲದೇ ಕಾಲ್ನಡಿಗೆಯಲ್ಲಿಯೇ ತಲೆಯ ಮೇಲೆ ಚೀಲ ಹೊತ್ತು ಹೆಜ್ಜೆ ಹಾಕಿರುವ ದೃಶ್ಯಗಳು ಕಣ್ಮುಂದೆ ಬರುತ್ತವೆ. 42 ವರ್ಷದ ನಾಕರಿನ್ ಇಂಟಾ ನಾಲ್ಕು ವರ್ಷಗಳಿಂದ ಪೈಲಟ್ ವೃತ್ತಿಯಲ್ಲಿದ್ದಾರೆ. ಕೊರೊನಾದಿಂದಾಗಿ ಉದ್ಯೋಗ ಕಳೆದುಕೊಂಡ ನಾಕರಿನ್ ಕುಟುಂಬ ನಿರ್ವಹಣೆಗಾಗಿ ಡೆಲಿವರಿ ಬಾಯ್ ಆಗಿ ಕೆಲಸ…
ಇಂದಿನ ದಿನಗಳಲ್ಲಿ ಮೊಬೈಲ್ ಕಂಪ್ಯೂಟರ್ ಬಳಕೆಯನ್ನು ಏಳೆಂಟು ಗಂಟೆ ನಿರಂತರ ಮಾಡುತ್ತೇವೆ. ಇದರಿಂದ ಕಣ್ಣಿಗೆ ಬಹಳ ಹಾನಿ ಆಗುತ್ತದೆ.