ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಜ್ಯ ಸರ್ಕಾರವು ಇಂದಿನಿಂದ ನೈಟ್ ಕರ್ಫ್ಯೂ & ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲು ನಿರ್ಧರಿಸಲಾಗಿದೆ.ಈಗಾಗಲೇ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ ಮುಂದಿನ 2ವಾರಗಳ ಕಾಲ ಮುಂದುವರಿಸಲು ನಿರ್ಧರಿಸಲಾಗಿದೆ ರಾತ್ರಿ 10ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.ವಾರಾಂತ್ಯದ ಕರ್ಫ್ಯೂವನ್ನು ದಿನಾಂಕ 7ರಿಂದ ಶುಕ್ರವಾರ ರಾತ್ರಿ 10 ಗಂಟೆಯಿಂದ 10 ರ ಸೋಮವಾರ ಬೆಳಿಗ್ಗೆ 5 ರವರೆಗೆ ಜಾರಿ ಮಾಡಲಾಗಿದೆ
ಸರ್ಕಾರಿ ಕಚೇರಿಗಳು ಮಾಲ್ಗಳಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗುವುದು.
* ಚಿತ್ರಮಂದಿರ, ಮಾಲ್, ಬಾರ್, ಪಬ್ಗಳ ಒಟ್ಟು ಸಾಮರ್ಥ್ಯದ ಅರ್ಧದಷ್ಟು ಜನರಿಗೆ ಮಾತ್ರ ಪ್ರವೇಶ ಇರುತ್ತದೆ. ಇಲ್ಲಿಗೆ ಭೇಟಿ ನೀಡುವವರಿಗೆ ಲಸಿಕೆ ಕಡ್ಡಾಯ ಆಗಿರಲಿದೆ.
* ದೇವಸ್ಥಾನಕ್ಕೆ 50 ಜನಕ್ಕೆ ಮಾತ್ರ ಅವಕಾಶ
* ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಲು ಡಬಲ್ ಡೋಸ್ ಕಡ್ಡಾಯ ಆಗಿರಲಿದೆ.
* ಮದುವೆ ಹೊರಾಂಗಣದಲ್ಲಿದ್ದರೆ 200, ಒಳಾಂಗಣದಲ್ಲಿದ್ದರೆ 100 ಜನರಿಗೆ ಮಾತ್ರ ಅವಕಾಶ. ಅವರಿಗೂ 2 ಡೋಸ್ ಆಗಿರಬೇಕು.
* ಮಹಾರಾಷ್ಟ್ರ, ಕೇರಳದಿಂದ ಬರುವವರಿಗೆ ಆರ್ಟಿಪಿಸಿಆರ್ ಕಡ್ಡಾಯ.
* ಯಾವುದೇ ರ್ಯಾಲಿ, ಸಭೆ, ಸಮಾರಂಭಗಳು ನಡೆಯುವಂತಿಲ್ಲ.
* ಮೆಟ್ರೋ, ಬಸ್ಗಳಿಗೂ ನಿರ್ಬಂಧ ವಿಧಿಸಲಾಗಿದ್ದು, ಸೀಟು ಇರುವಷ್ಟೇ ಪ್ರಯಣಿಕರಿಗೆ ಅವಕಾಶ ನೀಡಲು ಮುಂದಾಗಿದ್ದು, ಬಿಎಂಟಿಸಿ, ಮೆಟ್ರೋಗಳಲ್ಲಿ ನಿಂತು ಪ್ರಯಾಣಿಸುವಂತಿಲ್ಲ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇನ್ಫೋಸಿಸ್ ದಂಪತಿ ನಾರಾಯಣ ಮೂರ್ತಿ, ಸುಧಾ ಮೂರ್ತಿ ಅವರ ಮಗನ ಮದುವೆ ಡಿ. 2ರಂದು ಬೆಂಗಳೂರಿನ ಹೋಟೆಲಿನಲ್ಲಿ ಸರಳವಾಗಿ ನಡೆಯಲಿದೆ. ಸುಧಾಮೂರ್ತಿ ಅವರ ಮಗ ರೋಹನ್ ಮೂರ್ತಿ ಅವರು ಕೇರಳದ ಕೊಚ್ಚಿ ಮೂಲದ ಅರ್ಪಣಾ ಕೃಷ್ಣನ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಮದುವೆ ಸರಳವಾಗಿ ನಡೆಯಲಿದ್ದು, ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರಿಗೆ ಆಹ್ವಾನ ನೀಡಲಾಗಿದೆ. ರೋಹನ್ ಹಾಗೂ ಅರ್ಪಣಾ ಸ್ನೇಹಿತರೊಬ್ಬರ ಮೂಲಕ ಮೂರು ವರ್ಷಗಳಿಂದ ಪರಿಚಯವಾಗಿದ್ದರು. ಅರ್ಪಣಾ ನಿವೃತ್ತ ಎಸ್ಬಿಐ ಉದ್ಯೋಗಿ ಸಾವಿತ್ರಿ…
ಆ ಮುದ್ದಿನ ಶ್ವಾನ ಆರು ಮಂದಿಯ ಜೀವ ಉಳಿಸಿದೆ…! ಅಚ್ಚರಿಯಾದರೂ ಇದು ನಿಜ. ಈ ಘಟನೆ ನಡೆದಿದ್ದು ಒಡಿಸ್ಸಾದ ಕೊರಪುತ್ ಜಿಲ್ಲೆಯಲ್ಲಿ. ಶಂಕರ್ ಪ್ರಸಾದ್ ತ್ರಿಪಾಠಿ ಎಂಬವರ ಮನೆಗೆ ಭಾನುವಾರ ಬೃಹತ್ ಸರ್ಪ ಎಂಟ್ರಿ ಕೊಟ್ಟಿತ್ತು. ಮನೆಯವರು ತಮ್ಮ ಕೆಲಸದಲ್ಲಿ ನಿರತರಾಗಿದ್ದ ಕಾರಣ ಈ ಹಾವನ್ನು ಯಾರೂ ಗಮನಿಸಿರಲಿಲ್ಲ. ಇದು ನೇರವಾಗಿ ಮನೆಯೊಳಗೆ ಹೋಗಿ ಬಚ್ಚಿಟ್ಟುಕೊಳ್ಳಲು ಯತ್ನಿಸಿತ್ತು. ಆದರೆ, ಅದೃಷ್ಟ ಚೆನ್ನಾಗಿತ್ತು. ಶಂಕರ್ ಪ್ರಸಾದ್ ಅವರ ಸಾಕು ನಾಯಿ `ಡಾಗಿ’ ಈ ಸರ್ಪವನ್ನು ಕಂಡಿತ್ತು. ಇದನ್ನು ನೋಡಿದ…
ವಿಮಾನದಲ್ಲಿ ಊಟ, ತಿಂಡಿ, ತಿನಿಸುಗಳನ್ನು ತಿನ್ನುವುದು ಸಾಮಾನ್ಯ. ಆದರೆ, ಉತ್ತರಪ್ರದೇಶದ ನೋಯ್ಡಾದಲ್ಲೊಂದು ಹಾರಾಡುವ ರೆಸ್ಟೋರೆಂಟ್ ಭಾರೀ ಜನಪ್ರಿಯಗೊಳ್ಳುತ್ತಿದೆ. ಭೂಮಿಯಿಂದ 160 ಅಡಿ ಎತ್ತರದ ಈ ರೆಸ್ಟೋರೆಂಟ್ ನಲ್ಲಿ ಸಾಹಸಮಯಿ ಜನರು ಊಟ ಮಾಡಿ ಸಂಭ್ರಮಿಸುತ್ತಿದ್ದಾರೆ. ಕ್ರೇನ್ ನ ಸಹಾಯದಿಂದ 160 ಅಡಿ ಎತ್ತರಕ್ಕೆ ಗ್ರಾಹಕರನ್ನು ಕರೆದೊಯ್ಯುವ ಈ ರೆಸ್ಟೋರೆಂಟ್ 24 ಸೀಟುಗಳ ಸಾಮರ್ಥ್ಯವನ್ನು ಹೊಂದಿದೆ. ದುಬೈನಲ್ಲಿ ಇಂತಹದ್ದೇ ಅನುಭವವನ್ನು ಪಡೆದು ಬಂದಿರುವ ನಿಖಿಲ್ ಕುಮಾರ್ ಎಂಬುವರು ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹ ರೆಸ್ಟೋರೆಂಟನ್ನು ಪರಿಚಯಿಸಿದ್ದಾರೆ.
ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಿ ಪರೀಕ್ಷೆ ಬಗ್ಗೆ ಆತ್ಮವಿಶ್ವಾಸ ಮೂಡಿಸುವ ಸಲುವಾಗಿ 6 ಮತ್ತು 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಎಸ್. ಸುರೇಶ್ ಕುಮಾರ್ ಅವರು ತಿಳಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಬಳಿಕ ಬುಧವಾರ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಬ್ಯಾಡಮೂಡ್ಲು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಪರೀಕ್ಷೆ ಬಗ್ಗೆ ಚರ್ಚಿಸಿದ ಬಳಿಕ…
ಈತ ಒಬ್ಬ ರಿಕ್ಷಾ ಓಡಿಸೋ ಸಾಮಾನ್ಯ ಚಾಲಕ. ಈತನ ಹೆಸರು ಬಬ್ಲು. ಇವರ ವೃತ್ತಿಯಲ್ಲಿ 8 ವರ್ಷದ ಹಿಂದೆ ನಡೆದಿದ್ದ ಕತೆ ಈಗ ಹೊರಜಗತ್ತಿಗೆ ಗೊತ್ತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸೂಪರ್ ಹೀರೊ ಹಾಗಿದ್ದಾರೆ. ಅಷ್ಟಕ್ಕೂ ಇವರು ಮಾಡಿ ಆ ಒಳ್ಳೆಯ ಕೆಲಸವೇನು ಗೊತ್ತಾ?
ಅಪಾರ ಔಷಧ ಗುಣ ಹೊಂದಿರುವ ನುಗ್ಗೆ ಸೊಪ್ಪನ್ನು ನೇರವಾಗಿ ಮಾರಾಟ ಮಾಡಿದರೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಎಂದು ತಿಳಿದ, ತಾಲೂಕಿನ ತಾವರಗೇರಾ ಪ್ರದೇಶದ ರೈತರೊಬ್ಬರು, ಸೊಪ್ಪಿನಿಂದ ತಯಾರಿಸಿದ ಪುಡಿಯನ್ನು ವಿದೇಶಗಳಿಗೆ ರಫ್ತುಮಾಡಿ ಗಮನಸೆಳೆದಿದ್ದಾರೆ. ಮೂಲತಃ ಗಂಗಾವತಿ ತಾಲೂಕಿನವರಾದ ಬಸಯ್ಯ ಹಿರೇಮಠ, ತಾವರಗೇರಾ ಪ್ರದೇಶದಲ್ಲಿ 30ಎಕರೆ ಜಮೀನು ಖರೀದಿಸಿ, ನುಗ್ಗೆ ಬೇಸಾಯದಲ್ಲಿ ತೊಡಗಿದ್ದಾರೆ. ತೋಟಗಾರಿಕೆ ಕೃಷಿಯನ್ನು ವಿಶಿಷ್ಟ ರೀತಿಯಲ್ಲಿ ಕೈಗೊಳ್ಳಲು ಅವರಿಗೆ ಸಾಮಾಜಿಕ ಜಾಲತಾಣ ನೆರವಿಗೆ ಬಂದಿದೆ. ನುಗ್ಗೆ ಸೊಪ್ಪನ್ನು ನಿಗದಿತ ಉಷ್ಣಾಂಶದಲ್ಲಿ ಒಣಗಿಸಿ ಪೌಡರ್ ಆಗಿ ಪರಿವರ್ತಿಸಿದರೆ…