ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದೇಹ ಒಬ್ಬನದ್ದು, ತಲೆ ಮತ್ತೂಬ್ಬನದ್ದು! ಈ ರೀತಿ ಸಿನಿಮಾದಲ್ಲಿ ನೀವು ನೋಡಿರುತ್ತಿರಿ ಅಲ್ಲವೇ…?
ಎಲ್ಲ ಅಂದುಕೊಂಡಂತೆ ಆದರೆ,ಒಬ್ಬ ಮನುಷ್ಯನ ತಲೆಯನ್ನು ಇನ್ನೊಬ್ಬರ ದೇಹಕ್ಕೆ ಜೋಡಿಸಬಹುದಂತೆ..

ಆಶ್ಚರ್ಯವಾಯಿತೇ…?ಮುಂದೆ ಓದಿ..
ಇದೇ ಮೊದಲ ಬಾರಿಗೆ ಅಂತಹುದೊಂದು ಪ್ರಯತ್ನ ನಡೆಯಲಿದೆ. ಮಾನವನ ತಲೆಯನ್ನೇ ಕಸಿ ಮಾಡಿ, ಮತ್ತೂಬ್ಬನ ದೇಹಕ್ಕೆ ಕೂರಿಸಲು ಎಲ್ಲ ಸಿದ್ಧತೆಗಳು ಆರಂಭವಾಗಿವೆ. ಅದಕ್ಕೆ ಮುನ್ನುಡಿಯೆಂಬಂತೆ, ಒಂದು ಇಲಿಯ ದೇಹಕ್ಕೆ ಮತ್ತೂಂದು ಇಲಿಯ ತಲೆಯನ್ನು ಕಸಿ ಮಾಡಲಾಗಿದೆ.

ಹೌದು. ಚೀನದ ವಿಜ್ಞಾನಿಗಳು ಇಂತಹ ಸಾಹಸಕ್ಕೆ ಕೈಹಾಕಿದ್ದಾರೆ. ಪ್ರಸಕ್ತ ವರ್ಷಾಂತ್ಯದಲ್ಲಿ ಮಾನವನ ಮೇಲೆ ನಡೆಯುವ “ತಲೆ ಕಸಿಗೆ’ ಪೂರ್ವಸಿದ್ಧತೆ ಎಂಬಂತೆ, ದೊಡ್ಡ ಇಲಿಯೊಂದರ ತಲೆಯ ಮೇಲೆ ಪುಟ್ಟ ಇಲಿಯ ತಲೆಯನ್ನು ಕಸಿ ಮಾಡಿದ್ದಾರೆ. ಆದರೆ, ಈ ಇಲಿಗಳು ಸರಾಸರಿ 36 ಗಂಟೆಗಳ ಕಾಲವಷ್ಟೇ ಬದುಕುಳಿದಿವೆ.
ಯಶಸ್ವಿ ಪ್ರಯೋಗ: ಚೀನದ ಹಾರ್ಬಿನ್ ವೈದ್ಯಕೀಯ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಪ್ರಯೋಗಕ್ಕೆ ಮೂರು ಇಲಿಗಳನ್ನು ಬಳಸಿದ್ದಾರೆ. ಸಣ್ಣ ಇಲಿ ದಾನಿಯಾಗಿಯೂ ಮತ್ತೆರಡು ದೊಡ್ಡ ಇಲಿಗಳ ಪೈಕಿ ಒಂದನ್ನು ರಕ್ತದ ಪೂರೈಕೆಗೆ ಹಾಗೂ ಮತ್ತೂಂದನ್ನು ಸ್ವೀಕರ್ತನಾಗಿ ಬಳಸಲಾಯಿತು. ರಕ್ತದ ಹರಿವನ್ನು ನಿಭಾಯಿಸಲು ಸಿಲಿಕಾನ್ ಟ್ಯೂಬ್ ಮೂಲಕ ಇಲಿಗಳ ರಕ್ತನಾಳಗಳನ್ನು ಒಂದಕ್ಕೊಂದು ಸಂಪರ್ಕಿಸಲಾಯಿತು.
ಅನಂತರ, ಮೂರನೇ ಇಲಿಯಿಂದ ದಾನಿ ಇಲಿಯ ತಲೆಗೆ ರಕ್ತದ ಪೂರೈಕೆ ಸಮರ್ಪಕವಾಗಿ ಆಗುವಂತೆ ಪಂಪ್ ಅನ್ನು ಬಳಸಲಾಯಿತು. ಈ ಮೂಲಕ ಶಸ್ತ್ರಚಿಕಿತ್ಸೆ ವೇಳೆ ಮೆದುಳಿನ ಅಂಗಾಂಶಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲಾಯಿತು. ಪರಿಣಾಮ, ಶಸ್ತ್ರಚಿಕಿತ್ಸೆ ಮುಗಿದ ಬಳಿಕವೂ ದಾನಿಯ ತಲೆಯು ಅಲ್ಲಾಡುತ್ತಿತ್ತು ಎಂದಿದ್ದಾರೆ ವಿಜ್ಞಾನಿಗಳು.

36 ಗಂಟೆ ಬದುಕಿತು: ಶಸ್ತ್ರಚಿಕಿತ್ಸೆ ಬಳಿಕ ಎರಡು ತಲೆಯ ಇಲಿಯು 36 ಗಂಟೆಗಳ ಕಾಲ ಬದುಕುಳಿಯಿತು. ಆದರೆ, ದೀರ್ಘಕಾಲ ಉಳಿಯುವಂತೆ ಮಾಡಲು ಸಾಧ್ಯವಿದೆ ಎನ್ನುವುದು ವಿಜ್ಞಾನಿಗಳ ವಿಶ್ವಾಸ.

ಸದ್ಯದಲ್ಲೇ ಜೀವಂತ ತಲೆ ಕಸಿ: ಮೊದಲ ಬಾರಿಗೆ ಜೀವಂತ ತಲೆ ಕಸಿ ಮಾಡಲು ಹೊರಟ ಡಾ| ಕ್ಯಾನವೆರೋ ಅವರನ್ನು ನಿಂದಿಸಿದವರೇ ಹೆಚ್ಚು. ಈಗ ಅವರು ವೆಲೆರಿ ಸ್ಪಿರಿಡೊನೋವ್ ಎಂಬ ವ್ಯಕ್ತಿಯೊಬ್ಬರಿಗೆ ತಲೆ ಕಸಿ ಮಾಡಲು ಮುಂದಾಗಿದ್ದಾರೆ. ದೈಹಿಕ ಶಕ್ತಿಯನ್ನು ಕಳೆದುಕೊಂಡು, ಹಲವು ವರ್ಷಗಳಿಂದ ವೀಲ್‌ಚೇರ್‌ನಲ್ಲೇ ಕಾಲ ಕಳೆಯುತ್ತಿರುವ ವೆಲೆರಿ ಅವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಅವರ ದೇಹವನ್ನು ಮೊದಲು ಘನೀಭವಿಸಿ (ಫ್ರೀಜ್), ಕುತ್ತಿಗೆ ಮತ್ತು ಬೆನ್ನುಹುರಿಯನ್ನು ಕತ್ತರಿಸಲಾಗುತ್ತದೆ. ಅನಂತರ ಅವರ ತಲೆಯನ್ನು ದಾನಿಯ ದೇಹಕ್ಕೆ ಅಳವಡಿಸಲಾಗುತ್ತದೆ. ಅಚ್ಚರಿಯೆಂದರೆ, ವೆಲೆರಿ ತಲೆಯನ್ನು ಮತ್ತೂಂದು ದೇಹಕ್ಕೆ ಕೂರಿಸಲು ವಿಶೇಷ ರೀತಿಯ ಅಂಟು (ಗಮ್) ಬಳಸಲಾಗು ತ್ತದೆ. ಇದು ಯಶಸ್ವಿಯಾದರೆ ವೈದ್ಯಕೀಯ ಲೋಕದಲ್ಲಿ ಹೊಸ ಮೈಲುಗಲ್ಲು ಸೃಷ್ಟಿಯಾಗಲಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ಪ್ರತಿದಿನದಂತೆ ಎಲ್ಲವೂ ಸರಿಯಾಗಿದೆ ಎಂದುಕೊಂಡಾಗಲೇ ಕುತಂತ್ರಿಗಳಿಂದ ತೊಂದರೆ ಎದುರಾಗುವ ಸಾಧ್ಯತೆ ಇದೆ. ಈ ಬಗ್ಗೆ ಸಾಕಷ್ಟು ಪೂರ್ವಭಾವಿ ತಯಾರಿ ಮಾಡಿಕೊಂಡೇ ಅವರನ್ನು ಎದುರಿಸಿದಾಗ ಅವರು ಕೇವಲ ಪೇಪರ್ ಹುಲಿಗಳೆಂದು…
ಇಂದಿನಿಂದ ಡೈರೆಕ್ಟ್ ಟು ಹೋಮ್ ರಿಲಯನ್ಸ್ ಬಿಗ್ ಟಿವಿ ಸೆಟ್ ಆಪ್ ಬಾಕ್ಸ್ ಪ್ರೀ ಬುಕ್ಕಿಂಗ್ ಆರಂಭಗೊಂಡಿದೆ. ರಿಲಯನ್ಸ್ ಬಿಗ್ ಟಿವಿ ಸುಮಾರು 500ಕ್ಕೂ ಹೆಚ್ಚು ಫ್ರೀ-ಟು-ಏರ್ ಚ್ಯಾನಲ್ಗಳನ್ನು 5 ವರ್ಷಗಳ ಕಾಲ ಉಚಿತವಾಗಿ ವೀಕ್ಷಿಸಬಹುದಾಗಿದೆ.
ಗರ್ಭಿಣಿ ಸ್ತ್ರೀಯರು ಶಾಂಪೂ, ಹೇರ್ ಕಂಡೀಶನರ್ ಮತ್ತು ಡಿಟರ್ಜೆಂಟ್ ಅತಿಯಾಗಿ ಬಳಸುವುದರಿಂದ ಹುಟ್ಟುವ ಮಕ್ಕಳಿಗೆ ಕೆಲ ನ್ಯೂನತೆಗಳು ಕಾಣಿಸಿಕೊಳ್ಳುತ್ತವೆ ಎಂದು ನೂತನ ಅಧ್ಯಯನವೊಂದು ತಿಳಿಸಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಲ್ಲಿರುವ ಹೆಸರು ಟ್ರೋಲ್ ವಾಸಣ್ಣ. ಮೂಲತಃ ಮಲ್ಪೆಯವರಾದ ವಾಸು ಅವರಿಗೆ ಇದೀಗ ಸೈಬರ್ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ. ವಾಸು ಅವರು ರಾಜಕೀಯ ಪ್ರೇರಿತ ಮಾತುಗಳು, ರಾಜಕೀಯ ನಾಯಕರನ್ನು, ಪಕ್ಷಗಳನ್ನು ಅಪಹಾಸ್ಯ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹೀಗಾಗಿ ಸದ್ಯ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ವಾಸು ಅವರನ್ನು ಕರೆಸಿ ಸೈಬರ್ ಕ್ರೈಂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಯಾಗಿರುವ ವಾಸು ಅವರಿಂದ ಕೆಲ ಕಿಡಿಗೇಡಿಗಳು…
ಮತ್ತೆ ನಮ್ಮ ಗಣೇಶ ಬಂದ. ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಗಣಪತಿಯನ್ನು ಪೂಜಿಸಲಾಗುತ್ತದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ, ವ್ರತವೆಂದು ಆಚರಿಸಲಾಗುತ್ತದೆ. ಹಬ್ಬದ ದಿನ ಮೋದಕ, ಕಡುಬುಎಂಬ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ.
ಕುರುಕ್ಷೇತ್ರ ಚಿತ್ರಕ್ಕೆ ಅಂತೂ ಚಾಲನೆ ಸಿಕ್ಕಿದೆ. ದರ್ಶನ್ ದುರ್ಯೋಧನನಾಗಿ ಬರಲಿದ್ದಾರೆ ಎನ್ನುವ ಮಾತೀಗ ನಿಜವಾಗಿದೆ. ಮುನಿರತ್ನ ನಿರ್ಮಾಣದ ಈ ಸಿನಿಮಾ ಯಾವಾಗ ಕೆಲಸ ಸೆಟ್ಟೇರಲಿದೆ ಎನ್ನುವ ಕುತೂಹಲ ಸಿನಿಪ್ರಿಯರನ್ನು ಕಾಡುತ್ತಿತ್ತು. ಮಲ್ಟಿ ಸ್ಟಾರ್ ಸಿನಿಮಾ ನಿಜಕ್ಕೂ ತಯಾರಾಗುತ್ತಾ ಅನ್ನುವ ಪ್ರಶ್ನೆ ಹಲವರಿಗಿತ್ತು. ಆ ಎಲ್ಲಾ ಪ್ರಶ್ನೆಗಳಿಗೂ ಮುನಿರತ್ನ ತಮ್ಮ ಕೆಲಸದ ಮುಖಾಂತರವೇ ಉತ್ತರ ಕೊಟ್ಟಿದ್ದಾರೆ.