inspirational

ವಿಶ್ವದ ನಂಬರ್ 1 ಶ್ರೀಮಂತ ಬೆಜೋಸ್​ನ ಹಿಂದಿಕ್ಕಿದ ಬರ್ನಾರ್ಡ್ ಅರ್ನಾಲ್ಟ್

8

ವಿಶ್ವದ ನಂಬರ್ 1 ಶ್ರೀಮಂತ ಎಂಬ ಅಗ್ಗಳಿಕೆ ಈಗ 72 ವರ್ಷದ ಬರ್ನಾರ್ಡ್ ಅರ್ನಾಲ್ಟ್ ಪಾಲಾಗಿದೆ. LVMH ಅಧ್ಯಕ್ಷ, ಸಿಇಒ ಅರ್ನಾಲ್ಟ್ ಬಗ್ಗೆ ಮಾಹಿತಿ ಇಲ್ಲಿದೆ.

  • Published On – 25 May 2021
Bernard Arnault: ವಿಶ್ವದ ನಂಬರ್ 1 ಶ್ರೀಮಂತ ಬೆಜೋಸ್​ನ ಹಿಂದಿಕ್ಕಿದ ಬರ್ನಾರ್ಡ್ ಅರ್ನಾಲ್ಟ್

ಬರ್ನಾರ್ಡ್ ಅರ್ನಾಲ್ಟ್

ಈಗ ವಿಶ್ವದ ನಂಬರ್ 1 ಶ್ರೀಮಂತ ಸ್ಥಾನದಲ್ಲಿದೆ. ಫೋರ್ಬ್ಸ್ ಅಂಕಿ- ಅಂಶದ ಪ್ರಕಾರ, ಅರ್ನಾಲ್ಟ್ ನಿವ್ವಳ ಆಸ್ತಿ ಮೌಲ್ಯ 18,620 ಕೋಟಿ ಅಮೆರಿಕನ್ ಡಾಲರ್. ಇಷ್ಟು ಹಣ ಇದ್ದರೆ ಭಾರತದ ರೂಪಾಯಿ ಲೆಕ್ಕದಲ್ಲಿ ಎಷ್ಟಾಗುತ್ತದೆ ಎಂಬ ಕುತೂಹಲ ನಿಮಗೆ ಆಗಬಹುದು. 13.10 ಲಕ್ಷ ಕೋಟಿ ರೂಪಾಯಿ ಆಸ್ತಿ ಆಗುತ್ತದೆ. 72 ವರ್ಷದ, ಎಲ್​ವಿಎಂಎಚ್​ನ ಅಧ್ಯಕ್ಷ ಮತ್ತು ಸಿಇಒ ಅರ್ನಾಲ್ಟ್ ಆಸ್ತಿಯು ಕಳೆದ ಒಂದೂವರೆ ವರ್ಷದಲ್ಲಿ 11,000 ಕೋಟಿ ಅಮೆರಿಕನ್ ಡಾಲರ್ ಹೆಚ್ಚಾಗಿದೆ. ಬ್ಲೂಮ್​ಬರ್ಗ್ ಬಿಲಯನೇರ್ ಸೂಚ್ಯಂಕದ ಪ್ರಕಾರ, ಈ ತಿಂಗಳ ಶುರುವಿನಲ್ಲಿ ಎಲಾನ್ ಮಸ್ಕ್ ಅನ್ನು ಮೀರಿಸಿದ ಅರ್ನಾಲ್ಟ್ ವಿಶ್ವದ ಅತ್ಯಂತ ಶ್ರೀಮಂತರಲ್ಲಿ ಎರಡನೇ ಸ್ಥಾನಕ್ಕೆ ಏರಿದರು.

ಲೂಯಿಸ್ ವ್ಯೂಟ್ಟನ್ ಮೊಯೆಟ್ ಹೆನೆಸ್ಸೆ (LVMH) ಎಂಬುದು ವಿಶ್ವದ ಮುಂಚೂಣಿ ಫ್ಯಾಷನ್ ವಿಲಾಸಿ ವಸ್ತುಗಳ ಕಂಪೆನಿ. 2021ರ ಮೊದಲ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಶೇ 32ರಷ್ಟ ಏರಿಕೆ ದಾಖಲಿಸಿ, ಆದಾಯವು 1400 ಕೋಟಿ ಯುರೋ ಮುಟ್ಟಿದೆ. ಈ ವರ್ಷದ ಜನವರಿಯಲ್ಲಿ ಎಲ್​ವಿಎಂಎಚ್​ನಿಂದ ಅಮೆರಿಕದ ಅತಿ ದೊಡ್ಡ ಆಭರಣ ತಯಾರಕ ಕಂಪೆನಿಯಾದ ಟಿಫಾನಿ ಅಂಡ್ ಕಂಪೆನಿಯನ್ನು 1.58 ಕೋಟಿ ಅಮೆರಿಕನ್ ಡಾಲರ್​ಗೆ ಖರೀದಿಸಿ, ಫ್ಯಾಷನ್ ಉದ್ಯಮದಲ್ಲಿನ ಅತಿ ದೊಡ್ಡ ವ್ಯವಹಾರ ಎಂಬ ದಾಖಲೆ ಬರೆಯಿತು. ಈ ವ್ಯವಹಾರದಿಂದಾಗಿ ಎಲ್​ವಿಎಂಎಚ್​ನ ಸಣ್ಣ ಉದ್ಯಮವನ್ನು ಉತ್ತೇಜಿಸಲು ಸಹಾಯ ಆಗುತ್ತದೆ ಎಂಬ ನಂಬಿಕೆ ಇದೆ. ಈಗಾಗಲೇ ಬುಲ್ಗಾರಿ ಮತ್ತು ಟ್ಯಾಗ್ ಹ್ಯುಯೆರ್​ನಂಥ ಆಭರಣ ಹಾಗೂ ವಾಚ್ ವಿಭಾಗಗಳಿಗೆ ಕಂಪೆನಿ ಹೆಸರಾಗಿದೆ.

ಬರ್ನಾರ್ಡ್ ಅರ್ನಾಲ್ಟ್ ಸಾಮ್ರಾಜ್ಯವು 70 ಬ್ರ್ಯಾಂಡ್​ಗಳನ್ನು ಹೊಂದಿದೆ. ಈಚಿನ ತಿಂಗಳಲ್ಲಿ ಹೆಸರಾಂತ ಕಂಪೆನಿಗಳಲ್ಲಿ 53.8 ಕೋಟಿ ಅಮೆರಿಕ ಡಾಲರ್ ಮೌಲ್ಯದ ಷೇರುಗಳನ್ನು ಅರ್ನಾಲ್ಟ್ ಖರೀದಿ ಮಾಡಿದ್ದಾರೆ. ದುಬಾರಿ ವಸ್ತುಗಳ ಮಾರ್ಕೆಟ್ ಅನ್ನು ಅರ್ನಾಲ್ಟ್ ಪ್ರವೇಶಿಸಿದ್ದು 1984ರಲ್ಲಿ. ಮೊದಲಿಗೆ ಕೈಗೆತ್ತಿಕೊಂಡು ದಿವಾಳಿಯಾಗಿದ್ದ ಟೆಕ್ಸ್​ಟೈಲ್ ಸಮೂಹ. ಅದರ ಮಾಲೀಕತ್ವ ಇದ್ದದ್ದು ಕ್ರಿಶ್ಚಿಯನ್ ಡಿಯಾರ್ ಬಳಿ. 1989ರಲ್ಲಿ ಅರ್ನಾಲ್ಟ್ ಎಲ್​ವಿಎಂಎಚ್​ನ ಪ್ರಮುಖ ಷೇರುದಾರರಾದರು.

About the author / 

DRM

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ, ಉಪಯುಕ್ತ ಮಾಹಿತಿ

    ನಿಮ್ಮ ಉತ್ತಮ ನಿದ್ರೆಗಾಗಿ ಸೇವಿಸಬಹುದಾದ ಆಹಾರಗಳು ಯಾವುವು ಗೊತ್ತಾ ..?ತಿಳಿಯಲು ಈ ಲೇಖನ ಓದಿ…

    ದಿನನಿತ್ಯದ ಚಟುವಟಿಕೆಯಲ್ಲಿ ನಿದ್ರೆಯೂ ಒಂದು. ಉತ್ತಮ ಆರೋಗ್ಯಕ್ಕೆ ಪೌಷ್ಟಿಕಾಂಶ ಭರಿತ ಆಹಾರ ಮುಖ್ಯವಾದಂತೆ ಉತ್ತಮ ನಿದ್ರೆಗೂ ನಾವು ಸೇವಿಸುವ ಆಹಾರ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ.

  • ಸುದ್ದಿ

    ರೈಲ್ವೇ ಆಸ್ಪತ್ರೆಯಲ್ಲಿ ಕೇವಲ ಒಂದು ರೂಪಾಯಿಗೆ ಹೆರಿಗೆ ಮಾಡಿದ ವೈದ್ಯರು..ನಿಜಕ್ಕೂ ಅಚ್ಚರಿಯೇ ಹೌದು….!

    ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ನಿಲ್ದಾಣದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಇಂದು ಬೆಳಿಗ್ಗೆ ಮುಂಬೈನಲ್ಲಿ ನಡೆದಿದೆ. ಮುಂಬೈನ 1 ರೂಪಾಯಿ ಕ್ಲಿನಿಕ್ ಮಹಿಳೆಯ ನೆರವಿಗೆ ಬಂದಿದೆ. ಕರ್ಜನತ್ ನಿಂದ ಪರೇಲ್ ಗೆ ಹೊರಟಿದ್ದ ಸುಭಂತಿ ಪಾತ್ರಾ ಅವರಿಗೆ ಥಾಣೆಯ ಬಳಿ ಹೆರಿಗೆ ನೋವು ಕಾಣಿಸಿಕೊಂಡಿತ್ತು ಎಂದು ಒಂದು ರೂಪಾಯಿ ಚಿಕಿತ್ಸಾಲಯದ ಕಾರ್ಯನಿರ್ವಹಣಾಧಿಕಾರಿ  ಡಾ ರಾಹುಲ್ ಗುಳೆ ತಿಳಿಸಿದ್ದಾರೆ. ಸುಮಾರು 35 ಕಿ.ಮೀ. ದೂರದ ಊರಿಗೆ ಪ್ರಯಾಣಿಸುವಷ್ಟರಲ್ಲಿ ಸುಭಂತಿಗೆ ಹೆರಿಗೆ ನೋವು…

  • ಸುದ್ದಿ

    ಜಮೀನಿನಲ್ಲಿ ಕೆಲಸವನ್ನ ಮಾಡುತ್ತಿದ್ದ ಕೂಲಿಗೆ ಜಮೀನಿನಲ್ಲಿ ಸಿಕ್ಕಿದ್ದೇನು ಗೊತ್ತಾ.!

    ಸ್ನೇಹಿತರೆ ಇಂಗ್ಲೆಂಡ್ ದೇಶದಕ್ಕೆ ಸೇರಿದ ಈತನ ಹೆಸರು ಸ್ಟಿವನ್, ಜೀವನದಲ್ಲಿ ತುಂಬಾ ಕಷ್ಟವನ್ನ ಅನುಭವಿಸಿದ ಈತನಿಗೆ 60 ವರ್ಷ ವಯಸ್ಸು, ತನ್ನ 60 ವರ್ಷ ಜೀವನದಲ್ಲಿ ಯಾವತ್ತೂ ಸುಖಕರ ಜೀವನವನ್ನ ಈತ ಅನುಭವಿಸಿರಲಿಲ್ಲ. ಈತ ದಿನದ ಖರ್ಚಿಗಾಗಿ ತುಂಬಾ ಕಷ್ಟಪಡುತ್ತಿದ್ದ ಮತ್ತು ಲಾರಿ ಡ್ರೈವರ್ ಆಗಿ ಕೆಲಸವನ್ನ ಕೂಡ ಮಾಡುತ್ತಿದ್ದ, ಕೆಲವು ಸಮಯದ ನಂತರ ಈತನಿಗೆ ವಯಸ್ಸಾಗಿದೆ ಅನ್ನುವ ಕಾರಣಕ್ಕೆ ಈತನನ್ನ ಡ್ರೈವರ್ ಕೆಲಸದಿಂದ ತಗೆದು ಹಾಕಲಾಯಿತು. ಡ್ರೈವರ್ ಕೆಲಸವನ್ನ ಬಿಟ್ಟ ನಂತರ ಓಕ್ ಮರದ ತೋಟದಲ್ಲಿ…

  • ಆರೋಗ್ಯ, ಉಪಯುಕ್ತ ಮಾಹಿತಿ

    ದಿನನಿತ್ಯ ಈ ಒಂದು ಹಣ್ಣು ತಿಂದರೆ ಸಾಕು. ನಿಮ್ಮ ಅತ್ತಿರ ಯಾವ ಕಾಯಿಲೆಯು ಸುಳಿವುದಿಲ್ಲ. ಈ ಅರೋಗ್ಯ ಮಾಹಿತಿ ನೋಡಿ.

    ಸೀತಾಫಲ ಭಾರತೀಯರಿಗೆ ಚಿರಪರಿಚಿತ, ಆದರೆ ಎಷ್ಟೋ ಜನರಿಗೆ ಇದರ ನಿಜವಾದ ಪೌಷ್ಟಿಕತೆಯ ಬಗ್ಗೆ ತಿಳಿದಿಲ್ಲ. ನಿಜವಾಗಿ ಹೇಳಬೇಕೆಂದರೆ ಸೀತಾಫಲ ನಮ್ಮ ದೇಹಕ್ಕೆ ಬರುವ ಎಲ್ಲ ರೋಗಗಳಿಗೂ ಫುಲ್ ಸ್ಟಾಪ್ ಇಡುವ ಅದ್ಬುತ ಶಕ್ತಿ ಹೊಂದಿದೆ. ದಿನಾಲೂ ಒಂದು ಸೀತಾಫಲದ ಸೇವನೆ ದೇಹಕ್ಕೆ ಬಲಶಾಲಿ ಮದ್ದು. ಕಸ್ಟರ್ಡ್ ಆಪಲ್, ಶುಗರ್ ಆಪಲ್, ಚೆರಿಮೋಯಾ ಮೊದಲಾದ ಇತರ ಹೆಸರುಗಳಿಂದಲೂ ಕರೆಯಲ್ಪಡುವ ಈ ಸೀತಾಫಲವನ್ನು ಬೆಲೆಯ ತಕ್ಕಡಿಯಲ್ಲಿ ತೂಗದೇ ಪೋಷಕಾಂಶಗಳ ತಕ್ಕಡಿಯಲ್ಲಿ ತೂಗಿದರೆ ಇದು ಭಾರೀ ಬೆಲೆಯುಳ್ಳ ಫಲವಾಗಿದೆ. ತೂಕ ಹೆಚ್ಚಿಸಬೇಕಾದವರಿಗೆ…

  • ಸುದ್ದಿ

    ಮದುವೆಯಾಗೋಲ್ಲ ಎಂದ ಪ್ರಿಯತಮನ ವಿರುದ್ಧ ಕ್ರೂರವಾಗಿ ಸೇಡು ತೀರಿಸಿಕೊಂಡ ಯುವತಿ…!

    ನವದೆಹಲಿ: ಈ ಯುವಕ-ಯುವತಿ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಅದೇನಾಯಿಯೋ ಯುವಕ ಮದುವೆಯಾಗಲು ನಿರಾಕರಿಸಿದ. ನಮ್ಮ ಸಂಬಂಧವನ್ನು ಮುರಿದುಕೊಳ್ಳೋಣ ಎಂದು ಯುವತಿ ಬಳಿ ಹೇಳಿದ. ಅದನ್ನು ಕೇಳಿದ ಯುವತಿ ಅಳಲಿಲ್ಲ, ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ ಬದಲಿಗೆ ಕ್ರೂರವಾಗಿ ಸೇಡು ತೀರಿಸಿಕೊಂಡಳು. ಘಟನೆ ನಡೆದಿದ್ದು ದೆಹಲಿಯ ವಿಕಾಸಪುರಿಯಲ್ಲಿ. ಜೂನ್​ 11ರಂದು ಬೈಕ್​ನಲ್ಲಿ ಹೋಗುತ್ತಿದ್ದರು. ಯುವಕ ಅದಾಗಲೇ ಮದುವೆ ಬೇಡ ಎಂದಿದ್ದ. ಬೈಕ್​ನಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಯುವತಿ ಆತನ ಬಳಿ ಹೆಲ್ಮೆಟ್​ ತೆಗೆಯುವಂತೆ ಕೇಳಿದ್ದಾಳೆ. ಆತ ತೆಗೆದಕೂಡಲೇ ಮುಖಕ್ಕೆ ಆ್ಯಸಿಡ್​ ಎರಚಿದ್ದಾಳೆ….

  • ಸುದ್ದಿ

    ಸ್ನೇಹಿತರೇ ಈ ಬೋಳಿಮಗ ಸಿಗೋವರೆಗೂ ತಪ್ಪದೆ ಶೇರ್ ಮಾಡಿ..ಏಕೆ ಗೊತ್ತಾ.? ಈ ವಿಡಿಯೋ ನೋಡಿ ನಿಮ್ಗೆ ಅಳು ಜೊತೆಗೆ ಕೋಪ ಬರ್ದೇ ಇರಲ್ಲ…

    ಈಗಂತೂ ಜನರು ತಮ್ಮ ಮನುಷ್ಯತ್ವವನ್ನೇ ಮರೆತುಬಿಟ್ಟಿದ್ದಾರೆ.ರಾಕ್ಷಸರು ಅಂದ್ರೆ ಹೀಗೆ ಇದ್ರ ಅಂತ ಅನ್ನಿಸೋದಕ್ಕೆ ಶುರುವಾಗಿದೆ.ಸಾಧು ಪ್ರಾಣಿಗಳನ್ನು ಹಿಡಿದು ಹಿಂಸಿಸುವುದು, ಅವಕ್ಕೆ ನರಕ ಯಾತನೆ ಕೊಟ್ಟು ಸಾಯಿಸುವುದು ಕೆಲವರಿಗೆ ಮಾಮೂಲಾಗಿದೆ.ಇದರಿಂದ ಅಂತಹ ಜನಗಳಿಗೆ ಏನು ಆನಂದ ಸಿಗುತ್ತೋ ಗೊತ್ತಿಲ್ಲಾ.. ಈತ್ತಿಚೆಗೆಷ್ಟೇ ಕೋತಿಯನ್ನು ಮರಕ್ಕೆ ನೇತು ಹಾಕಿ ಕರುಣೆ ಇಲ್ಲದೆ ಹಿಗ್ಗಾ ಮುಗ್ಗಾ ಹೊಡೆಯುತ್ತಿದ್ದ ರಾಕ್ಷಸನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಅವನಿಗೆ ತಕ್ಕ ಶಿಕ್ಷ್ಗೆ ಕೂಡ ಆಯಿತು. ಇಲ್ಲಿ ಓದಿ:-ಭಾರತದಲ್ಲಿ ಇದೇ ಮೊದಲ ಬಾರಿಗೆ ಕೋತಿಯನ್ನು ಹಿಂಸಿಸಿ…