ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸೇಬು ಗುಲಾಬಿ ಕುಟುಂಬದಲ್ಲಿನ (ರೋಸೇಸೀ) ಜಾತಿಯಾದ ಮೇಲಸ್ ಡೊಮೆಸ್ಟಿಕಾಕ್ಕೆ ಸೇರಿದ ಪೋಮ್ ಲಕ್ಷಣಗಳಿರುವ ಸೇಬಿನ ಮರದ ಹಣ್ಣು ಅದು ಅತ್ಯಂತ ವ್ಯಾಪಕವಾಗಿ ಬೇಸಾಯಮಾಡಲಾದ ಮರಹಣ್ಣುಗಳ ಪೈಕಿ ಒಂದು, ಮತ್ತು ಮಾನವರಿಂದ ಬಳಸಲಾಗುವ ಮೇಲಸ್ಪಂಗಡದ ಅನೇಕ ಸದಸ್ಯಗಳ ಪೈಕಿ ಅತ್ಯಂತ ವ್ಯಾಪಕವಾಗಿ ಪರಿಚಿತವಾಗಿರುವ ಸದಸ್ಯವಾಗಿದೆ. ಈ ಮರವು ಮಧ್ಯ ಏಷ್ಯಾದ ಮೂಲದ್ದು, ಮತ್ತು ಇಂದೂ ಕೂಡ ಇದರ ಕಾಡುಪೂರ್ವಜವನ್ನು ಇಲ್ಲಿ ಕಾಣಬಹುದು.

ಸೇಬು ಮೂಲತಃ ಸಮಶೀತೋಷ್ಣ ವಲಯದ ಬೆಳೆ. ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರ ನಡುವಿನ ಭೂಭಾಗವು ಇದರ ಮೂಲ ಪ್ರದೇಶವೆಂದು ತಿಳಿಯಲಾಗಿದ್ದು,ನಂತರ ಈ ಬೆಳೆ ಸಮಶೀತೋಷ್ಣ ವಲಯದ ಎಲ್ಲ ದೇಶಗಳಿಗೂ ಪ್ರಸರಣ ಹೊಂದಿದೆ. ಭಾರತದಲ್ಲಿ ಸುಮಾರು ೦.೨೮ ದಶ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು ೨.೯ ದಶ ಲಕ್ಷ ಟನ್ ಸೇಬನ್ನು ಉತ್ಪಾದಿಸಲಾಗುತ್ತದೆ. ದೇಶದಲ್ಲಿ ಹಣ್ಣಿನ ಉತ್ಪಾದನೆಗೆ ಒಳ ಪಟ್ಟಿರುವ ಒಟ್ಟು ಕ್ಷೇತ್ರದ ೬.೧ರಷ್ಟು ಪ್ರದೇಶದಲ್ಲಿ ಸೇಬನ್ನು ಬೆಳೆಯಲಾಗುತ್ತದೆ.

ಇದರ ಬೆಳವಣಿಗೆಗೆ 4-21 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ಅತಿ ಸೂಕ್ತ. ಅಲ್ಲದೆ ಸುಮಾರು 100-125 ಸೆ.ಮೀ.ನಷ್ಟು ಮಳೆ ಬೇಕಾಗುತ್ತದೆ.ಮೋಡ ಮುಸುಕಿದ,ಕಡಿಮೆ ಉಷ್ಣಾಂಶದ,ಆರ್ದ್ರ ವಲಯಗಾಲ್ಲಿ ಚೆನ್ನಾಗಿ ಸೇಬು ಬೆಳೆಯುತ್ತದೆ. ಹಂಚಿಕೆ ಮತ್ತು ಉತ್ಪಾದನೆ: ಭಾರತದಲ್ಲಿ ಸೇಬಿನ ಬೇಸಾಯವು ಕೆಲವೇ ಪ್ರದೇಶದಲ್ಲಿ ಕೇಂದ್ರೀಕೃತವಾಗಿದೆ. ಜಮ್ಮು ಮತ್ತು ಕಾಶ್ಮೀರ,ಹಿಮಾಚಲ ಪ್ರದೇಶ,ಉತ್ತರಾಖಂಡ,ಪಂಜಾಬ್,ಅರುಣಾಚಲ ಪ್ರದೇಶ,ನಾಗಾಲ್ಯಾಂಡ್,ಮೇಘಾಲಯ ಮತ್ತು ಮಣಿಪುರಗಳಲ್ಲಿ ಸೇಬಿನ ಬೇಸಾಯವು ಹಂಚಿಕೆಯಾಗಿದೆ. ದಕ್ಷಿಣ ಭಾರತದಲ್ಲಿ ತಮಿಳುನಾಡಿನ ನೀಲಗಿರಿ ಬೆಟ್ಟಗಳಲ್ಲಿ ಮಾತ್ರ ಸೇಬನ್ನು ಬೆಳೆಯಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈಶಾನ್ಯದ ಎಲ್ಲ ರಾಜ್ಯಗಳು ಹಾಗೂ ಕೇಂದ್ರ ಉನ್ನತ ಪ್ರದೇಶದಲ್ಲಿ ಸೇಬಿನ ಬೇಸಾಯವನ್ನು ಅಭಿವೃದ್ಧಿಪಡಿಸಲಾಗಿದೆ.

ಸೇಬು ನಮ್ಮ ದೈನ೦ದಿನ ಅವಶ್ಯಕತೆಯ ಖನಿಜಾ೦ಶಗಳು, ವಿಟಮಿನ್‌ಗಳು, ಹಾಗೂ ಪ್ರೋಟೀನ್‌ಗಳ ಸಮೃದ್ಧ ಆಗರವಾಗಿದೆ. ಪ್ರತಿ ದಿನವೂ ಸೇಬೊ೦ದನ್ನು ಸೇವಿಸುವುದರ ಮೂಲಕ ನೀವು ಉತ್ತಮ ಆರೋಗ್ಯವುಳ್ಳವರಾಗಿಯೂ ಹಾಗೂ ಸದೃಢರಾಗಿಯೂ ಜೀವಿಸಲು ಸಾಧ್ಯ. ಸೇಬು ತನ್ನಲ್ಲಿ ನಾರಿನ೦ಶ, ಆ೦ಟಿಆಕ್ಸಿಡೆ೦ಟ್, ಹಾಗೂ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ವಿಟಮಿನ್ ಸಿ ಯನ್ನು ಅಗಾಧ ಪ್ರಮಾಣದಲ್ಲಿ ದಾಸ್ತಾನಿರಿಸಿಕೊ೦ಡಿದೆ.ಸಿಪ್ಪೆ ಸಮೇತವಾಗಿ ಸೇಬನ್ನು ಸೇವಿಸುವುದರಿ೦ದ ನೀವು ಅದರ ಸ೦ಪೂರ್ಣವಾದ ಪ್ರಯೋಜನಗಳನ್ನು ಅಥವಾ ಲಾಭಗಳನ್ನು ಪಡೆದ೦ತಾಗುತ್ತದೆ. ಸೇಬಿನ ಸಿಪ್ಪೆಯನ್ನು ತೆಗೆದು ತಿನ್ನುವುದು ಒ೦ದು ಒಳ್ಳೆಯ ಲಕ್ಷಣವಲ್ಲ. ಏಕೆ೦ದರೆ, ಸೇಬಿನ ತಿರುಳಿನಲ್ಲಿರುವುದಕ್ಕಿ೦ತಲೂ ಹೆಚ್ಚಿನ ಪ್ರಮಾಣದ ಆ೦ಟಿ ಆಕ್ಸಿಡೆ೦ಟ್‌ಗಳು ಅದರ ಸಿಪ್ಪೆಯಲ್ಲಿರುತ್ತದೆ
ಹೃದಯದ ಆರೋಗ್ಯ ಕಾಪಾಡುವುದು ಸೇಬು ತಿಂದರೆ ಅದರಿಂದ ಕೊಲೆಸ್ಟ್ರಾಲ್ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುವುದು ಮತ್ತು ಇದರಿಂದ ರಕ್ತನಾಳಗಳಲ್ಲಿ ತುಂಬಿರುವಂತಹ ಪದರವು ಶೇ.48ರಷ್ಟು ಕಡಿಮೆ ಆಗುವುದು ಎಂದು ಅಧ್ಯಯನಗಳು ಹೇಳಿವೆ.

ಸೇಬಿನಿಂದಾಗಿ ಮಹಿಳೆಯರಲ್ಲಿ ಹೃದಯ ಕಾಯಿಲೆಯಿಂದ ಸಾವಿನ ಪ್ರಮಾಣವು ಶೇ.43ರಷ್ಟು ಮತ್ತು ಪುರುಷರಲ್ಲಿ ಶೇ.19ರಷ್ಟು ಕಡಿಮೆ ಆಗಿದೆ ಎಂದು ಅಧ್ಯಯನಗಳು ಹೇಳಿವೆ. ಇದಕ್ಕಾಗಿ ದಿನಕ್ಕೆ 54 ಗ್ರಾಂ ಸೇಬು ತಿನ್ನುವುದು ಅಗತ್ಯವಾಗಿದೆ. ಇದು ಅಪಧಮನಿ ಆರೋಗ್ಯ ಕಾಪಾಡುವುದು.
ತೂಕ ಇಳಿಸಲು ಸೇಬಿನಲ್ಲಿ ಸಸ್ಯಜನ್ಯವಾಗಿರುವಂತಹ ನಾರಿನಾಂಶವಿದೆ ಮತ್ತು ತುಂಬಾ ಕಡಿಮೆ ಪ್ರಮಾಣದ ಕ್ಯಾಲರಿ ಇದೆ. ಇದರಿಂದ ತೂಕ ಕಳೆದುಕೊಳ್ಳಲು ಇದು ತುಂಬಾ ಸಹಕಾರಿ ಆಗಿರುವುದು. ಇದು ಕ್ಯಾಲರಿ ಕಡಿಮೆ ಮಾಡುವುದು. ದಿನಕ್ಕೆ 300 ಗ್ರಾಂ ಸೇಬು ತಿಂದರೆ ಮಹಿಳೆಯರಲ್ಲಿ 12 ವಾರಗಳಲ್ಲಿ 1.3 ಕೆಜಿ ತೂಕ ಇಳಿಕೆ ಆಗಿದೆ.
ತ್ವಚೆಯ ಹೊಳಪು ಹೆಚ್ಚುತ್ತದೆ ವಯಸ್ಸಾದಂತೆ ಚರ್ಮ ಹೊಳಪು ಕಳೆದುಕೊಂಡು ನೆರಿಗೆಗಳು ಮೂಡುತ್ತಾ ಬರುತ್ತವೆ. ಇದನ್ನು ತಡೆಯಲು ಸಾಧ್ಯವಿಲ್ಲವಾದರೂ ಪರಿಣಾಮವನ್ನು ನಿಧಾನಗೊಳಿಸಲು ಸಾಧ್ಯವಿದೆ. ಸೇಬಿನಲ್ಲಿರುವ ಹಲವು ಆಂಟಿ ಆಕ್ಸೆಡೆಂಟುಗಳ ಪರಿಣಾಮವಾಗಿ ಚರ್ಮದ ಜೀವಕೋಶಗಳು ನಾಶವಾಗಿ ನೆರಿಗೆ ಮೂಡುವುದು ನಿಧಾನವಾಗುತ್ತದೆ.
ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ ದೇಹದಲ್ಲಿನ ಕೊಲೆಸ್ಟ್ರಾಲ್ ನರಗಳ ಒಳಭಾಗದಲ್ಲಿ ಅಥವಾ ತಿರುವಿರುವೆಡೆಯಲ್ಲಿನ ಮೂಲೆಗಳಲ್ಲಿ ಸಂಗ್ರಹವಾಗುತ್ತಾ ಹೋಗುತ್ತದೆ. ಕ್ರಮೇಣ ಈ ಸಂಗ್ರಹ ಹೆಚ್ಚುತ್ತಾ ಹೋಗಿ ನರಗಳ ಒಳಭಾಗದ ವ್ಯಾಸವನ್ನು ಕಿರಿದುಗೊಳಿಸುವುದರಿಂದ ಹೃದಯ ಹೆಚ್ಚಿನ ಒತ್ತಡದಲ್ಲಿ ರಕ್ತವನ್ನು ದೂಡಿಕೊಡಬೇಕಾಗುತ್ತದೆ.

ಸೇಬಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ರಕ್ತದಲ್ಲಿ ಸಂಚರಿಸುವ ಮೂಲಕ ನರಗಳ ಒಳಭಾಗದಲ್ಲಿ ಅಂಟಿಕೊಂಡಿರುವ ಈ ಜಿಡ್ಡನ್ನು ಸಡಿಲಗೊಳಿಸುತ್ತವೆ. ಪರಿಣಾಮವಾಗಿ ಕೆಟ್ಟ ಕೊಲೆಸ್ಟ್ರಾಲ್ ರಕ್ತದೊಡನೆ ಹರಿದು ಹೋಗಿ ಶೋಧನಾ ವ್ಯವಸ್ಥೆಯ ಮೂಲಕ ವಿಸರ್ಜಿಸಲ್ಪಡುತ್ತದೆ. ಹೃದಯದ ಒತ್ತಡ ಸಾಮಾನ್ಯಕ್ಕೆ ಹಿಂದಿರುಗಿ ಉತ್ತಮ ಆರೋಗ್ಯ ಲಭಿಸುತ್ತ
ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ ಸೇಬಿನಲ್ಲಿ ಇರುವಂತಹ ಕೆಲವೊಂದು ಸಸ್ಯಜನ್ಯ ಅಂಶಗಳು ಕ್ಯಾನ್ಸರ್ ವಿರೋಧಿ ಅಂಶವನ್ನು ಹೊಂದಿದೆ ಎಂದು ಹಲವಾರು ಅಧ್ಯಯನಗಳು ಕಂಡುಕೊಂಡಿದೆ ಮತ್ತು ಇದರಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಮತ್ತು ಪೈಥೋನ್ಯೂಟ್ರಿಯಂಟ್ಸ್ ಗಳು ಕರುಳು ಮತ್ತು ಶ್ವಾಸಕೋಶದ ಕ್ಯಾನ್ಸರ್ ನ್ನು ತಡೆಯುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.
ಮಧುಮೇಹ ಕಾಯಿಲೆ ಯನ್ನು ತಡೆಯುತ್ತದೆ ಮಧುಮೇಹ ದೇಹದ ಸಕ್ಕರೆಯನ್ನು ಕರಗಿಸಲು ಅಗತ್ಯವಾದ ಇನ್ಸುಲಿನ್ ಉತ್ಪಾದನೆಯನ್ನು ಕುಂಠಿತಗೊಳಿಸುವ ಅಥವಾ ಉತ್ಪಾದನೆಯಾದ ಇನ್ಸುಲಿನ್ ಬಳಕೆಯಾಗದೇ ಸಕ್ಕರೆ ವ್ಯರ್ಥವಾಗುವ ಒಂದು ಕಾಯಿಲೆ .

ಸೇಬುಹಣ್ಣಿನಲ್ಲಿರುವ ಪೋಷಕಾಂಶಗಳು ಮತ್ತು ಆಂಟಿ ಆಕ್ಸಿಡೆಂಟುಗಳು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಸಹಕರಿಸುತ್ತವೆ.ರೋಗನಿರೋಧಕ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಸುಧಾರಿಸಲು ನೆರವಾಗುವ ವಿಟಮಿನ್ ಸಿ ಯು ಸೇಬಿನಲ್ಲಿರುವ ಹಲವಾರು ಘಟಕಗಳ ಪೈಕಿ ಒ೦ದಾಗಿರುತ್ತದೆ. ವಿಟಮಿನ್ ಸಿ ಯು ನಮ್ಮ ಶರೀರವನ್ನು ಬಾಹ್ಯ ಸೂಕ್ಷಾಣುಜೀವಿಗಳ ಆಕ್ರಮಣದಿ೦ದ ರಕ್ಷಿಸಲು ನೆರವಾಗುತ್ತದೆ.
ಕ್ಯಾಟರಾಕ್ಟ್ (ಕಣ್ಣಿನ ಪೊರೆ) ಅನ್ನು ತಡೆಗಟ್ಟುತ್ತದೆ ಕ್ಯಾಟರಾಕ್ಟ್ (ಕಣ್ಣಿನ ಪೊರೆ) ಉ೦ಟಾಗಲು ಇರುವ ಹಲವಾರು ಪ್ರಮುಖವಾದ ಕಾರಣಗಳ ಪೈಕಿ ಒ೦ದು ಯಾವುದೆ೦ದರೆ ಉತ್ಕರ್ಷಣೀಯ ಶೈಥಿಲ್ಯ ವಾಗಿರುತ್ತದೆ. ಸೇಬುಗಳ ನಿಯಮಿತವಾದ ಸೇವನೆಯು ಮುಕ್ತ ರಾಡಿಕಲ್‌ಗಳನ್ನು ನಿವಾರಿಸಲು ನೆರವಾಗುತ್ತದೆ ಹಾಗೂ ತನ್ಮೂಲಕ ಕಣ್ಣುಗಳು ಕ್ಯಾಟರಾಕ್ಟ್ (ಕಣ್ಣಿನ ಪೊರೆ) ಗೆ ಗುರಿಯಾಗುವುದನ್ನು ತಪ್ಪಿಸುತ್ತದೆ.
ಶ್ರೀ ಶಿರಿಸಿ ಮಾರಿಕಾಂಭ ದೇವಿ ಜ್ಯೋತಿಷ್ಯ ಶಾಸ್ತ್ರಂ
ಜ್ಯೋತಿಷ್ಯ ಮಹರ್ಷಿ ಮಂಜುನಾಥ್ ಭಟ್
ನೀವು ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿದ್ದೀರಾ…?
ಪ್ರೀತಿಯಲ್ಲಿ ನಂಬಿ ಮೋಸ ಸ್ತ್ರೀ ಮತ್ತು ಪುರುಷ ವಶೀಕರಣ
ಹಣಕಾಸಿನ ತೊಂದರೆ ಭೂಮಿ ವಿಚಾರ ಕೋರ್ಟ್ ಕೇಸ್ ಅನಾರೋಗ್ಯ
ಇನ್ನೂ ನಿಮ್ಮ ಅನೇಕ ಸಮಸ್ಯೆಗಳಿಗೆ 1 ದಿನದಲ್ಲಿ ಪರಿಹಾರ ಶತಸಿದ್ಧ
ನಂಬಿ ಕರೆ ಮಾಡಿ 9900116427
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನ್ನಡದ ಜಮಮೆಚ್ಚಿನ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ-5′ ಕಾರ್ಯಕ್ರಮ ದಿನದಿಂದ ದಿನಕ್ಕೆ ರೋಚಕಗೊಳ್ಳುತ್ತಿದ್ದು ಕೆಲವೇ ದಿನಗಳಲ್ಲಿ ಫೈನಲ್ ತಲುಪಲಿದೆ.18ಜನರ ಪೈಕಿ ಈಗ ಕೇವಲ 7 ಜನ ಉಳಿದಿದ್ದು ಈ ವಾರದ ಎಲಿಮಿನೇಷನ್ ಪ್ರಕ್ರಿಯಗೆ ಎಲ್ಲಾ ಸ್ಪರ್ದಿಗಳು ನಾಮಿನೇಟ ಆಗಿದ್ದರು.
ಕೋಲಾರ:-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಕೋಲಾರದಿಂದ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ.ಕೋಲಾರದಲ್ಲಿ ಕಾಂಗ್ರೆಸ್ ಭಿನ್ನಮತ ಹಾಗೂ ಗುಂಪುಗಾರಿಕೆ ಶಮನಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ. ಬುಧವಾರ ರಾತ್ರಿ ಕೆ.ಹೆಚ್.ಮುನಿಯಪ್ಪನವರು ಬೆಂಬಲಿಗರ ಜೊತೆ ಸಿದ್ದರಾಮಯ್ಯ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತುಕತೆ ನಡೆಸಿದ್ದಾರೆ. ಮಾತುಕತೆ ಬಳಿಕ ಕೆ.ಹೆಚ್ ಮುನಿಯಪ್ಪ ನವರು ಸಿದ್ದರಾಮಯ್ಯ ನವರಿಗೆ ಕೋಲಾರಕ್ಕೆ ಸ್ವಾಗತ ಕೋರಿದೆ. ಜನವರಿ 9 ರಂದು ಸಿದ್ದರಾಮಯ್ಯ ಅವರು ಕೋಲಾರ ಪ್ರವಾಸ ಕೈಗೊಂಡಿದ್ದು, ಅಂದೇ ಕೋಲಾರದಲ್ಲಿ ಸ್ಪರ್ಧೆ ಬಗ್ಗೆ ಘೋಷಣೆ ಮಾಡಲಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಯಾವ…
ಭುವನೇಶ್ವರ, ಸಂಚಾರಿ ನಿಯಮ ಉಲ್ಲಂಘನೆಗೆ ದಂಡವನ್ನು ಹೆಚ್ಚಿಸಿರುವುದರಿಂದ ವಾಹನ ಸವಾರರು ಕಕ್ಕಾಬಿಕ್ಕಿಯಾಗಿದ್ದು, ಕುಡಿದು ಆಟೋ ಚಾಲನೆ ಮಾಡಿರುವುದು ಸೇರಿದಂತೆ ವಿವಿಧ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಟೋ ಚಾಲಕನಿಗೆ ಬರೋಬ್ಬರಿ 47,500 ರೂ. ದಂಡ ವಿಧಿಸಿರುವ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಕುಡಿದು ವಾಹನ ಚಾಲನೆ ಮಾಡಿರುವುದು, ಪರ್ಮಿಟ್, ಚಾಲನಾ ಪರವಾನಗಿ, ನೋಂದಣಿ ಸೇರಿದಂತೆ ತಿದ್ದುಪಡಿ ಕಾಯ್ದೆಯ ವಿವಿಧ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 47,500 ರೂ. ದಂಡ ವಿಧಿಸಲಾಗಿದೆ. ಭಾನುವಾರದಿಂದ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಭುವನೇಶ್ವರದ ಪೊಲೀಸ್ ಅಧಿಕಾರಿಗಳು…
ಭಾರತ ದೇಶವನ್ನು ತನ್ನ ಕೈ ಬೆರಳುಗಳಿಂದಲೇ ಶಾಸಿಸುವಷ್ಟು ಶಕ್ತಿ ಇರುವ ದಿಗ್ಗಜ, ರಿಲಯೆನ್ಸ್ ಅಧಿನೇತ ಮುಖೇಶ್ ಅಂಬಾನೀ ಪುತ್ರ ಆಕಾಶ್ ಅಂಬಾನೀ ವಿವಾಹ ಇಷ್ಟರಲ್ಲೇ ಜರುಗಲಿದೆ.
ಮಧ್ಯಪ್ರದೇಶದ ಛತ್ತಾರ್ ಪುರ ನೌಗಾಂವ್ ಬ್ಲಾಕ್ ನ ಗರೋಲಿ ಚೌಕಿಯ ಬಾಲಕೃಷ್ಣ ಚೌಬೆ (55) ಎಂಬಾತ ಕಳೆದ ಮೂರು ವರ್ಷಗಳಿಂದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದನು. ಈತ ಕೊಲೆ ಮತ್ತು ದರೋಡೆ ಕೇಸಿನಲ್ಲಿ ಗುರುತಿಸಿಕೊಂಡ ಬಳಿಕ ತನ್ನ ಗ್ರಾಮದಿಂದ ತಲೆಮರೆಸಿಕೊಂಡಿದ್ದನು. ಅದರಲ್ಲೂ ಕೊಲೆ ಪ್ರಕರಣದ ಬಳಿಕ ಬಾಲಕೃಷ್ಣ ಉತ್ತರಪ್ರದೇಶಕ್ಕೆ ಹಾರಿದ್ದನು. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮಾಧವಿ ಅಗ್ನಿಹೋತ್ರಿ ಅವರು ಮದುವೆ ಮಾತುಕತೆಗೆಂದು ಕರೆದು ಆರೋಪಿಯನ್ನು ಬಂಧಿಸಿದ್ದು, ಎಲ್ಲರ ಪ್ರಶಂಸೆಗೆ ಕಾರಣರಾಗಿದ್ದಾರೆ. ಆರೋಪಿಯನ್ನು ಹಿಡಿಯಲು ಪೊಲೀಸರು ಹಲವು ಬಾರಿ ಪ್ರಯತ್ನಿಸಿದರೂ…
ಸ್ನೇಹಿತರೆ ನಿಮಗೆಲ್ಲ ತಿಳಿರುವ ಹಾಗೆ ಪ್ರಸ್ತುತ ದಿನಗಳಲ್ಲಿ ನಮ್ಮ ಪ್ರಪಂಚ ತಂತ್ರಜ್ಞಾನದಿಂದ ಎಷ್ಟೋ ಮುಂದಕ್ಕೆ ಸಾಗುತ್ತಿದೆ. ಇನ್ನು ಇದಕ್ಕೆ ತಂಜ್ರಜ್ಞಾನಕ್ಕೆ ಅನುಗುಣವಾಗಿ ನಮ್ಮ ಕೇಂದ್ರ ಸರ್ಕಾರ ಅದೆಷ್ಟೋ ಬದಲಾವಣೆಗಳನ್ನ ಜಾರಿಗೆ ತರುತ್ತಲೇ ಇದೆ, ಇನ್ನು ಈಗ ವೋಟರ್ ಕಾರ್ಡ್ ಗಳಲ್ಲಿ ಭಾರಿ ಪ್ರಮಾಣದ ಬದಲಾವಣೆಯನ್ನ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದ್ದು ಇದರಿಂದ ಜನರಿಗೆ ತುಂಬಾ ಸಂತಸವಾಗಿದೆ, ಹಾಗಾದರೆ ವೋಟರ್ ಕಾರ್ಡ್ ನಲ್ಲಿ ಆಗುತ್ತಿರುವ ಬದಲಾವಣೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ…