ರೆಸಿಪಿ

106 ವರ್ಷದ ಈ ಅಜ್ಜಿ ವಿಶ್ವದ ಹಿರಿಯ ಯೂಟ್ಯೂಬ್ ಸ್ಟಾರ್..!ಈ ಅಜ್ಜಿ ಯೂಟ್ಯೂಬ್ ಸ್ಟಾರ್ ಆಗಿದ್ದು ಹೇಗೆ ಗೊತ್ತಾ?

919

ಜಗತ್ತಿನಲ್ಲಿ ಯೂಟ್ಯೂಬ್ ವಿಡಿಯೋಗಳು ಸಖತ್ ಸದ್ದು ಮಾಡುತ್ತಿದ್ದು, ಯೂಟ್ಯೂಬ್‍ನಲ್ಲಿ ವಿವಿಧ ಬಗೆಯ ಅಡುಗೆಗಳನ್ನು ಹೇಳಿಕೊಡುವ ಅನೇಕ ಚಾನಲ್‍ಗಳಿವೆ.   ಚೆಫ್‍ಗಳಿಂದ ಹಿಡಿದು ಗೃಹಿಣಿಯರೂ ಕೂಡ ಯೂಟ್ಯೂಬ್‍ನಲ್ಲಿ ಅಡುಗೆ ವಿಡಿಯೋಗಳನ್ನ ಹಾಕ್ತಿರ್ತಾರೆ. ಇಲ್ಲಿ ಯಾರ ಸಹಾಯವೂ ಇಲ್ಲದೇ ಸ್ಟಾರ್ ಆಗಬಹುದು. ತಮ್ಮದೇ ಚಾನಲ್ ಶುರು ಮಾಡಬಹುದು, ಹಣವನ್ನು ಸಂಪಾದನೆ ಮಾಡಬಹುದು. ಇದೇ ಮಾದರಿಯಲ್ಲಿ ಆಂಧ್ರ ಶತಾಯುಷಿ, 106 ವರ್ಷದ  ಅಜ್ಜಿಯೊಬ್ಬರು ಹಳ್ಳಿ ಸ್ಟೈಲ್ ಅಡುಗೆಗಳ ಮೂಲಕ ಇಂಟರ್ನೆಟ್ ಸ್ಟಾರ್ ಆಗಿದ್ದಾರೆ.

 ಮೂಲ

ಆಂಧ್ರಪ್ರದೇಶದ ಮಸ್ತಾನಮ್ಮ ಎಂಬ ಶತಾಯುಷಿ (106 ವರ್ಷ) ನಾಟಿ ಸ್ಟೈಲ್ ನಾನ್‌-ವೆಜ್ ಮಾಡುವುದರಲ್ಲಿ ಸಖತ್ ಫೇಮಸ್ ಆಗಿದ್ದು, ತಮ್ಮ ರುಚಿ ಮತ್ತು ರೆಸಿಪಿಯನ್ನು ಜಾಗತಿಕವಾಗಿ ಯೂಟ್ಯೂಬ್ ಮೂಲಕ ಹಂಚಿಕೊಳ್ಳುವ ಮೂಲಕ ಜಗತ್ತಿನ ‘ಅತೀ ಹಿರಿಯ ಯೂಟ್ಯೂಬ್ ಸ್ಟಾರ್’ ಎಂಬ ಖ್ಯಾತಿ ಪಡೆದುಕೊಂಡಿದ್ದಾರೆ.

ಆಂಧ್ರಪ್ರದೇಶದ ಮಸ್ತಾನಮ್ಮ ಎಂಬ ಶತಾಯುಷಿ, 106 ವರ್ಷದ ಈ ಅಜ್ಜಿ, ನಾಟಿ ಸ್ಟೈಲ್ ನಾನ್‌-ವೆಜ್ ಮಾಡುವುದರಲ್ಲಿ ಸಖತ್ ಫೇಮಸ್.ತಮ್ಮ ರುಚಿ ಮತ್ತು ರೆಸಿಪಿಯನ್ನು,ಅವರು ಕಂಟ್ರಿ ಫುಡ್ಸ್ (country foods) ಎಂಬ ತಮ್ಮ ಸ್ವಂತ ಯೂಟ್ಯೂಬ್ ಚಾನಲ್ ಮೂಲಕ , ಜಗತ್ತಿನ ‘ಅತೀ ಹಿರಿಯ ಯೂಟ್ಯೂಬ್ ಸ್ಟಾರ್’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ…

ವಿಶ್ವದ ಅತ್ಯಂತ ಹಿರಿಯ ಯೂಟ್ಯೂಬರ್ ಎನಿಸಿಕೊಂಡಿರುವ ಮಸ್ತಾನಮ್ಮ ಅವರ ಯೂಟ್ಯೂಬ್ ಚಾನಲ್‌ಗೆ 2.61 ಲಕ್ಷ ಸಬ್ ಸ್ಕ್ರೈಬರ್ ಇದ್ದಾರೆ ಎನ್ನಲಾಗಿದೆ. ಇದು ದೊಡ್ಡ ಪ್ರಮಾಣದಾಗಿದ್ದು, ಯೂಟೂಬ್‌ನಲ್ಲಿ ಇಷ್ಟು ಸಬ್ ಸ್ಕ್ರೈಬರ್ ಪಡೆಯುವುದು ಅಷ್ಟು ಸುಲಭದ ಮಾತಲ್ಲ.

 

ಹಳ್ಳಿ ವಾತಾವರಣದಲ್ಲಿ, ಸೌದೆ ಒಲೆಯಲ್ಲಿ ನಾನ್‌ವೆಜ್ ಮಾಡುವ ಶತಾಯುಷಿ ಅಜ್ಜಿ ಮಸ್ತಾನಮ್ಮ, ಇದರಿಂದಲೇ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಹಳ್ಳಿ ವಾತಾವರಣ, ಮೈದಾನದಲ್ಲಿ ಇವರು ಅಡುಗೆ ಮಾಡುತ್ತಾರೆ.. ಚಿಕನ್ ಬಿರಿಯಾನಿ, ಮೀನು ಸಾರು, ಮೊಟ್ಟೆಯ ರೆಸಿಪಿಗಳು, ಬದನೆಕಾಯಿ ಮಸಾಲಾ, ಬೆಂಡೇಕಾಯಿ ಫ್ರೈ, ಫ್ರೆಂಚ್ ಫ್ರೈಸ್ ಹೀಗೆ ವಿವಿಧ ಬಗೆಯ ವೆಜ್ ಹಾಗೂ ನಾನ್ ವೆಜ್ ಅಡುಗೆಗಳನ್ನ ಮಾಡೋದು ಹೇಗೆ ಅನ್ನೋದನ್ನ ಮಸ್ತಾನಮ್ಮ ವಿಡಿಯೋಗಳಲ್ಲಿ ತೋರಿಸಿಕೊಡ್ತಾರೆ.

ಅಜ್ಜಿ ಮಸ್ತಾನಮ್ಮ ಸ್ವಲ್ಪ ಪ್ರಮಾಣದಲ್ಲಿ ಅಡುಗೆ ಮಾಡುವುದೇ ಇಲ್ಲ.ಎಲ್ಲವೂ ಹತ್ತರಿಂದ ಹದಿನೈದು ಜನ ತಿನ್ನುವ ಹಾಗೆಯೇ ಇರುತ್ತದೆ. ಅಲ್ಲದೇ ಅಜ್ಜಿ ಮಾಡಿದ ಅಡುಗೆಯನ್ನು ಎಲ್ಲರಿಗೆ ಬಡಿಸುತ್ತಾರೆ ಇದೆ ಅವರ ಸ್ಪೆಷಾಲಿಟಿ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ