ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೊರೊನಾ ಮಹಾಮಾರಿ ದೇಶ ಅದರಲ್ಲೂ ರಾಜ್ಯವನ್ನು ವಕ್ಕರಿಸಿದ ಬಳಿಕ ಅನೇಕ ಅಮಾನವೀಯ ಘಟನೆಗಳು ಬೆಳಕಿಗೆ ಬಂದಿವೆ. ಕೆಲವೊಂದು ಮಾನವೀಯ ಕೆಲಸಗಳು ಕೂಡ ನಡೆದಿವೆ. ಈ ಮಧ್ಯೆ ಸಿಲಿಕಾನ್ ಸಿಟಿಯಲ್ಲಿ ಪೌರಕಾರ್ಮಿಕರ ಮೇಲೆ ಮಹಿಳೆಯೊಬ್ಬರು ಅಮಾನವೀಯವಾಗಿ ವರ್ತಿಸಿರುವುದು ಬೆಳಕಿಗೆ ಬಂದಿದೆ.
ಹೌದು. ಪೌರಕಾರ್ಮಿಕರು ಕುಡಿಯಲು ನೀರು ಕೇಳಿದ್ದಕ್ಕೆ ಸಿಟ್ಟುಗೊಂಡ ಮಹಿಳೆ ಅವರನ್ನು ನಿಂದಿಸಿದ್ದಲ್ಲದೇ, ಬಾಟಲಿಯಲ್ಲಿ ನೀರು ತುಂಬಿಸಿ ನಂತರ ಅದನ್ನು ರಸ್ತೆ ಮಧ್ಯದಲ್ಲಿಟ್ಟು ಬಂದಿದ್ದಾರೆ. ಈ ಮೂಲಕ ಅಮಾನವೀಯತೆಯನ್ನು ಪ್ರದರ್ಶಿಸಿದ್ದಾರೆ. ಇದನ್ನು ಅಲ್ಲೆ ಇದ್ದ ಕೆಲವರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಮಹಿಳೆಯನ್ನು ಸಾರ್ವಜನಿಕರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಪ್ರತಿನಿತ್ಯ ನಗರವನ್ನು ಸ್ವಚ್ಛ ಮಾಡುವ ಪೌರಕಾರ್ಮಿಕರು ಮಹಿಳೆಯೊಬ್ಬರ ಜೊತೆ ನೀರು ಕೇಳಿದ್ದಾರೆ. ಈ ವೇಳೆ ಮಹಿಳೆ, ಮೂಗು ಮುಚ್ಚಿಕೊಂಡು ಸ್ವಲ್ಪ ದೂ ಇರಿ ಎಂದು ಗೇಟ್ ಹತ್ತಿರಕ್ಕೂ ಬರದಂತೆ ಹೇಳಿ, ಆ ಕಡೆಯಿಂದಲೇ ನೀರು ಕೇಳಬೇಕು ಎಂದು ಅವಾಜ್ ಹಾಕಿದ್ದಾರೆ. ಅಲ್ಲದೆ ಮನೆಯ ಒಳಗಡೆ ಹೋಗಿ ಒಂದು ಬಾಟಲಿಯಲ್ಲಿ ತುಂಬಿಸಿಕೊಂಡು ಬಂದು ಸ್ವಲ್ ದೂರ ಹೋಗಿ ಎಂದು ಹೇಳಿ ರಸ್ತೆ ಮಧ್ಯದಲ್ಲಿ ನೀರಿನ ಬಾಟಲಿ ಇಟ್ಟು ಬಂದಿದ್ದಾರೆ. ಅಲ್ಲದೆ ಕೂಡಲೆ ಎತ್ಕೊಂಡು ಹೋಗಿ.. ಎತ್ತಕೊಂಡು ಹೋಗಿ ಎಂದು ಹೇಳಿದ್ದಾರೆ.
ಮಹಿಳೆಯ ವರ್ತನೆಯಿಂದ ಬೇಸರಗೊಂಡ ಪೌರಕಾರ್ಮಿಕರು ಅಕ್ಕ.. ನೀರನ್ನು ಕೈಗೆ ಕೊಡಬಹುದಲ್ವ ಅಂತ ಹೇಳಿದ್ದಾರೆ. ಈ ವೇಳೆ ಮಹಿಳೆ, ಅಯ್ಯೋ ಹೋಗಿ ಪರವಾಗಿಲ್ಲ. ನಿಮ್ಮ ಕೈಗೆ ಕೊಟ್ಟರೆ ನಮಗೆ ಕೊರೊನಾ ಬರಲ್ವಾ.. ಹೋಗಿ.. ಹೋಗಿ ಎಂದು ಹೇಳಿಕೊಂಡುಇ ಮಹಿಳೆ ಒಳನಡೆದಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಯಾವ ವೈದ್ಯಕೀಯ ಪದ್ಧತಿ ಇಲ್ಲದಿದ್ದರೂ. ಎಲ್ಲಾ ಔಷಧಿ ಅಂಗಡಿಗಳು, ದವಾಖಾನೆಗಳು ಮುಚ್ಚಿ ಹೋದರೂ 24 ಗಂಟೆ, 365ದಿನವೂ ಔಷಧಿ ದೊರಕುವ ಏಕೈಕ ಕ್ಲಿನಿಕ್ ಎಂದರೆ ಅಡುಗೆ ಮನೆ. ಅಡುಗೆ ಮನೆಯಲ್ಲೇ ಇದೆ ಆರೋಗ್ಯ. ದೊರೆಯುವ ಔಷಧಿಗಳು ಇಲ್ಲಿವೆ ಓದಿ.
ಸಾಮಾನ್ಯವಾಗಿ ಹೊಸ ವರ್ಷ ಬಂತೆಂದರೆ ಆಚರಣೆಯ ಜೊತೆಗೆ ಎಷ್ಟು ದಿನ ರಜೆ ಇರುವುದು ಎಂಬ ಕುತೂಹಲ ಇದ್ದೇ ಇರುತ್ತದೆ..
2018 ರಲ್ಲಿ ರಜೆ ಬಯಸುವವರಿಗೆ ಬಂಪರ್ ಕೊಡುಗೆ ಎಂದರೇ ತಪ್ಪಾಗಲಾರದು.. ಏಕೆಂದರೆ ಬರೋಬ್ಬರಿ 23 ದಿನಗಳ ಸರ್ಕಾರಿ ರಜೆ ಬಂದಿದೆ..
ಹಿಂದೂ ಧರ್ಮದಲ್ಲಿ ಹಣೆಗೆ ತಿಲಕವಿಟ್ಟುಕೊಳ್ಳುವ ಸಂಪ್ರದಾಯವಿದೆ. ಯಾವುದೇ ಶುಭ ಕಾರ್ಯ, ಪೂಜೆ ವೇಳೆ ತಿಲಕವಿಟ್ಟುಕೊಳ್ಳುತ್ತಾರೆ. ದೇವಸ್ಥಾನಕ್ಕೆ ಹೋದ ಭಕ್ತರು ತಿಲಕವಿಟ್ಟುಕೊಳ್ಳುವ ಪದ್ಧತಿಯಿದೆ.
ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಅಗ್ಗದ ದರ ಮತ್ತು ಉತ್ತಮ ಫೀಚರ್ಸ್ ಮೂಲಕ ಜನಪ್ರಿಯತೆ ಗಳಿಸಿರುವ ಶಿಯೋಮಿ ಕಂಪೆನಿ ಸೆಪ್ಟೆಂಬರ್ನಲ್ಲಿ ಮತ್ತೊಂದು ಹೊಸ ಸ್ಮಾರ್ಟ್ಫೋನ್ನ್ನು ಬಿಡುಗಡೆ ಮಾಡಲಿದೆ. ಶಿಯೋಮಿ ಮಿಕ್ಸ್ ಸಿರೀಸ್ನ ಈ ನೂತನ ಸ್ಮಾರ್ಟ್ಫೋನ್ಗೆ ಮಿ ಮಿಕ್ಸ್ 4 ಎಂದು ಹೆಸರಿಡಲಾಗಿದೆ. ಇವೆಲ್ಲಕ್ಕಿಂತ ಈ ಹೊಸ ಫೋನ್ ಎಲ್ಲರ ಗಮನ ಸೆಳೆಯುತ್ತಿರುವುದು ನೂತನ ಮೊಬೈಲ್ಗೆ ನೀಡಲಾಗಿರುವ ಕ್ಯಾಮೆರಾ. ಹೌದು, ಮಿ ಮಿಕ್ಸ್ 4ನಲ್ಲಿ 108 ಮೆಗಾಪಿಕ್ಸೆಲ್ನ ಕ್ಯಾಮೆರಾ ನೀಡಲಾಗಿದೆಯಂತೆ. ಚೀನಾದ ವೆಬ್ಸೈಟ್ ವೀಬೊದಲ್ಲಿ ನೀಡಿರುವ ಮಾಹಿತಿಯ ಪ್ರಕಾರ,…
ಬೆಳ್ಳಂಬೆಳಗ್ಗೆ ಮೆಡಿಸಿನ್ ತಯಾರಿಕಾ ಘಟಕದ ರಿಯಾಕ್ಟರ್ ಸ್ಫೋಟಗೊಂಡು ಹೊತ್ತಿ ಉರಿದ ಘಟನೆ ತುಮಕೂರಿನ ಸತ್ಯಮಂಗಲ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಸತ್ಯಮಂಗಲ ಕೈಗಾರಿಕಾ ಪ್ರದೇಶದಲ್ಲಿದ್ದ ಬೇಳೂರು ಬಾಯರ್ ಮೆಡಿಸಿನ್ ತಯಾರಿಕಾ ಘಟಕದ ಬಾಯ್ಲರ್ ನ ರಿಯಾಕ್ಟರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಇಂದು ಬೆಳಗ್ಗೆ 8:30ರ ಸುಮಾರಿಗೆ ಸೋರಿಕೆಯಾಗಿ ಸ್ಫೋಟಗೊಂಡಿದೆ. ಬೆಳ್ಳಂಬೆಳಗ್ಗೆ ಗ್ರಾಮದ ಮೆಡಿಸಿನ್ ಫ್ಯಾಕ್ಟರಿಯ ಬಾಯ್ಲರ್ನ ತಾಪಮಾನದಲ್ಲಿ ಏರುಪೇರಾಗಿ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಸ್ಫೋಟದ ತೀವ್ರತೆಗೆ ಫ್ಯಾಕ್ಟರಿಯ ಛಾವಣಿ ಕಿತ್ತು ಹೋಗಿದ್ದು, ಅವಶೇಷಗಳು ಗ್ರಾಮದ ಸುತ್ತಮುತ್ತಲ ಮನೆಗಳ…
ಹೊಸ ವರ್ಷದ ಆಗಮನಕ್ಕೆ ಒಂದೇ ದಿನ ಬಾಕಿಯಿದೆ. ಹೊಸ ವರ್ಷ ಈ ವರ್ಷಕ್ಕಿಂತ ಹೆಚ್ಚು ಖುಷಿ, ಯಶಸ್ಸು ತರಲಿ ಎಂದು ಪ್ರತಿಯೊಬ್ಬರೂ ಬಯಸ್ತಾರೆ. ಹೊಸ ವರ್ಷ ಸುಖ, ಸಂತೋಷ, ಸಮೃದ್ಧಿಯಿಂದ ಕೂಡಿರಬೇಕೆಂದ್ರೆ ಕೆಲವೊಂದು ಉಪಾಯಗಳನ್ನು ಅನುಸರಿಸಬೇಕಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೊಸ ವರ್ಷ ಸುಖ, ಸಂತೋಷದಿಂದ ಕೂಡಿರಬೇಕು ಎಂದಾದ್ರೆ ಹೊಸ ವರ್ಷದ ಮೊದಲ ದಿನ ಅಂದ್ರೆ ಜನವರಿ ಒಂದರಂದು ತಾಮ್ರದ ಲೋಟದಲ್ಲಿ ನೀರನ್ನು ಹಾಕಿ, ಅದಕ್ಕೆ ಕೇಸರಿ ಹಾಕಿ ಶಿವಲಿಂಗಕ್ಕೆ ಅರ್ಪಿಸಿ. ಜಲ ಅರ್ಪಿಸುವ ವೇಳೆ ಓಂ…