inspirational

ಮತ್ತೆ ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ. ಮೋದಿಗೆ ಪತ್ರ ಬರೆದ ಸೋನಿಯಾ ಗಾಂಧಿ.

110

ಇಂದು ಪೆಟ್ರೋಲ್ ಬೆಲೆ 55 ಪೈಸೆ ಹಾಗೂ ಡೀಸೆಲ್ 69 ಪೈಸೆ ಹೆಚ್ಚಳವಾಗಿದೆ. ಈ ಮೂಲಕ ಕೇವಲ 11 ದಿನಗಳಲ್ಲಿ ಪೆಟ್ರೋಲ್ ಬೆಲೆ 6 ರೂ. ಹಾಗೂ ಡೀಸೆಲ್ 6.49 ರೂ.ಗಳಷ್ಟು ಹೆಚ್ಚಳವಾಗಿದೆ.

ಕಳೆದ 11 ದಿನಗಳಲ್ಲಿ ಪ್ರತಿ ದಿನ 20 ಪೈಸೆಯಿಂದ 80 ಪೈಸೆ ವರೆಗೂ ಪೆಟ್ರೋಲ್, ಡೀಸೆಲ್ ದರವನ್ನು ಹೆಚ್ಚಳ ಮಾಡಲಾಗಿದೆ. ಬೆಲೆ ಹೆಚ್ಚಳದಿಂದಾಗಿ ಜನ ಕಂಗಾಲಾಗಿದ್ದಾರೆ. ಮೊದಲೆ ಕೆಲಸ ಸರಿಯಾಗಿ ಸಿಗುತ್ತಿಲ್ಲ. ಕೆಲಸವಿದ್ದರೂ ಸಂಬಳ ಸರಿಯಾಗಿ ಬರುತ್ತಿಲ್ಲ. ಅಲ್ಲದೆ ಇನ್ನೊಂದೆಡೆ ಸಾರ್ವಜನಿಕ ಸಾರಿಗೆ ಸಹ ಸಮರ್ಪಕವಾಗಿಲ್ಲ ಇಂತಹ ಸಂದರ್ಭದಲ್ಲಿ ಇಂಧನ ದರ ಹೆಚ್ಚಿಸಿರುವ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದ ಕುರಿತು ಮಂಗಳವಾರವಷ್ಟೇ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಕೊರೊನಾ ಸಂಕಷ್ಟದ ನಡುವೆ ಜನರಿಗೆ ಬದುಕುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸರಿಯಲ್ಲ, ಕೂಡಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹಿಂಪಡೆಯಿರಿ ಎಂದಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಿದ್ದರೂ, ಸರ್ಕಾರ ಅದರ ಲಾಭವನ್ನು ಜನರಿಗೆ ನೀಡದೆ, ಇಂತಹ ಕಷ್ಟದ ಸಮಯದಲ್ಲಿ ಬೆಲೆ ಏರಿಸಿ ತೊಂದರೆ ಕೊಡುತ್ತಿದೆ ಎಂದು ಆರೋಪಿಸಿದ್ದಾರೆ. ತಕ್ಷಣವೇ ಬೆಲೆ ಏರಿಕೆಯನ್ನು ಹಿಂಪಡೆದು ಜನರಿಗೆ ಬೆಲೆ ಇಳಿಕೆಯ ಲಾಭ ನೀಡಬೇಕು ಎಂದು ಆಗ್ರಹಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ನಂದಿ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳು….!

    ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ನಂದಿ ಮೂರ್ತಿಗೆ ಯಾರೋ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿದ್ದಾರೆ. ಇಂದು ಬೆಳಗ್ಗಿನ ಜಾವ ಪೂಜಾ ವಿಧಿ-ವಿಧಾನದ ಮಾಡುವಾಗ ಚಪ್ಪಲಿ ಹಾರ ಹಾಕಿರುವ ವಿಚಾರ ಬೆಳಕಿಗೆ ಬಂದಿದೆ. ಶುಕ್ರವಾರ ರಾತ್ರಿ ಪೂಜೆ ಮಾಡಿದ ಬಳಿಕ ದೇವಸ್ಥಾನಕ್ಕೆ ಬಾಗಿಲು ಹಾಕಲಾಗಿತ್ತು. ಆದರೆ ಇಂದು ಬೆಳಗ್ಗೆ ಮತ್ತೆ ದೇವಾಲಯದ ಬಾಗಿಲು ತೆರೆದಾಗ ನಂದಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿರುವುದು ಕಂಡು ಬಂದಿದೆ. ರಾತ್ರಿ ದೇವಸ್ಥಾನದಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಿಡಿಗೇಡಿಗಳು ನಂದಿ ವಿಗ್ರಹಕ್ಕೆ ಚಪ್ಪಲಿ…

  • ಸ್ಪೂರ್ತಿ

    ತನ್ನ ತಂದೆಯ ಜೀವ ಉಳಿಸಲು ತನ್ನ ಲೀವರ್ ಅನ್ನೇ ದಾನ ಮಾಡಿದ 19ವರ್ಷದ ಮಗಳು..!

    19 ವರ್ಷದ ಚಿಕ್ಕ ವಯಸ್ಸಿನ ಮಗಳೊಬ್ಬಳು ತಂದೆಯ ಜೀವ ಉಳಿಸಲು ತನ್ನ ಲಿವರ್ ದಾನ ಮಾಡಿ ಆದರ್ಶ ಮಗಳೆನಿಸಿಕೊಂಡಿದ್ದಾಳೆ. ರಾಖಿ ದತ್ತ ತಂದೆಗಾಗಿ ತನ್ನ ಲಿವರ್ ದಾನ ಮಾಡಿದ್ದಾಳೆ. ದೇಹದ ಮೇಲೆ ಲಿವರ್ ಶಸ್ತ್ರಚಿಕಿತ್ಸೆಯ ಕಲೆ ಹಾಗೆ ಉಳಿದುಕೊಳ್ಳುತ್ತದೆ, ತನ್ನ ಮುಂದಿನ ಜೀವನದಲ್ಲಿ ಇದರಿಂದ ತೊಂದರೆಯಾತ್ತದೆ ಎನ್ನುವುದನ್ನೂ ಲೆಕ್ಕಿಸದೇ ಈ ಯುವತಿ ತನ್ನ ತಂದೆಯ ಜೀವ ಉಳಿಸಲು ತನ್ನ 65% ಲಿವರ್‍ನನ್ನು ದಾನ ಮಾಡಿ, ತಂದೆಗೆ ಪುನರ್ಜನ್ಮ ನೀಡಿದ್ದಾಳೆ. ಈ ಬಗ್ಗೆ ವಾಣಿಜ್ಯೋದ್ಯಮಿ ಹರ್ಷ ಗೋಯೆಂಕಾ ಅವರು…

  • ಸುದ್ದಿ

    ಹೊಸದಾಗಿ ಮದುವೆಯಾಗುವವರಿಗೆ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್ : ಉಚಿತವಾಗಿ ಸಿಗಲಿದೆ ಬಟ್ಟೆ-ಬಂಗಾರ….!

    ಶ್ರೀಕ್ಷೇತ್ರ ಧರ್ಮಸ್ಥಳದ ಮಾದರಿಯಲ್ಲಿ ಉಚಿತವಾಗಿ ಸಾಮೂಹಿಕ ವಿವಾಹ ಆಯೋಜಿಸಲು ಮುಜರಾಯಿ ಇಲಾಖೆ ಕ್ರಮಕೈಗೊಂಡಿದೆ ಎನ್ನಲಾಗಿದೆ. ಸರಳ ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕ ಬಡವ ಶ್ರೀಮಂತ ಎಂಬ ಭೇದ ಭಾವ ಬಿಟ್ಟು ಸಮಾತನೆ ಕಾಣಬಹದು. ಬಡವರು, ಜನಸಾಮಾನ್ಯರಿಗೆಅನುಕೂಲವಾಗುವಂತೆ ಮುಜರಾಯಿ ಇಲಾಖೆ ವತಿಯಿಂದ ಉಚಿತ ಸಾಮೂಹಿಕ ವಿವಾಹ ಆಯೋಜಿಸುವ ಹೊಸ ಯೋಜನೆಯನ್ನುಜಾರಿಗೆ ತರಲು ಸರ್ಕಾರ ಮುಂದಾಗಿದೆ. ಯಾವುದೇ ಜಾತಿ ಭೇದವಿಲ್ಲದೆ ಹಿಂದೂ ಸಂಪ್ರದಾಯದಂತೆ ಸರಳವಾಗಿವಿವಾಹವಾಗಲು ಅನುಕೂಲವಾಗುವಂತೆ ಯೋಜನೆ ಜಾರಿಗೆ ತರಲಾಗುವುದು.ಇದು ಬಡವರ ಅನುಕೂಲಕ್ಕಾಗಿ ಮಾಡಿದ್ದಾರೆ ಎನ್ನಬಹುದು. ರಾಜ್ಯದಲ್ಲಿರುವ …

  • ದೇವರು-ಧರ್ಮ

    ಪ್ರತಿಯೊಬ್ಬ “ಹಿಂದೂ ಧರ್ಮ”ದವರು ಕೂಡ ತಿಳಿಯಲೇಬೇಕಾದ ಈ ವಿಷಯಗಳು..!ಏನೆಂದು ತಿಳಿಯಬೇಕಾದ್ರೆ ಈ ಲೇಖನ ಓದಿ…

    ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ. ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, “ಶಾಶ್ವತ ಧರ್ಮ” ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ. ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ “ಪ್ರಕಾರಗಳು”, ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ.

  • ಸುದ್ದಿ

    1.5 ಕೋಟಿ ಮೊತ್ತದ ಪ್ರಶಸ್ತಿಗೆ ಸುಳ್ಳು ದಾಖಲೆ: ಕೃತಿ ಕಾರಂತ್ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳಿಂದ ಆರೋಪ….

    ಇತ್ತೀಚೆಗಷ್ಟೇ 1.5 ಕೋಟಿ ರೂಪಾಯಿ ಮೊತ್ತದ ಪ್ರತಿಷ್ಠಿತ ರೋಲೆಕ್ಸ್ ಪ್ರಶಸ್ತಿಗೆ ಪಾತ್ರರಾದ ವನ್ಯಜೀವಿ ತಜ್ಞೆ ಕೃತಿ ಕಾರಂತ್ ಅವರು, ಪ್ರಶಸ್ತಿಗಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಅರಣ್ಯ ಇಲಾಖೆ ಆರೋಪಿಸಿದೆ. ಖ್ಯಾತ ವನ್ಯಜೀವಿ ತಜ್ಞ ಉಲ್ಲಾಸ್ ಕಾರಂತ್ ಅವರ ಮಗಳು ಮತ್ತು ಖ್ಯಾತ ಸಾಹಿತಿ ದಿ. ಶಿವರಾಮ ಕಾರಂತ್ ಅವರ ಮೊಮ್ಮಗಳಾದ ಕೃತಿ ಕಾರಂತ್, ಆಧಾರ ರಹಿತ ಮತ್ತು ನಕಲಿ ದಾಖಲೆಗಳನ್ನು ನೀಡಿ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂದು ಅರಣ್ಯ ಇಲಾಖೆ ಗಂಭೀರ ಆರೋಪ ಮಾಡಿದೆ. ಈ…

  • ಸುದ್ದಿ

    ಗ್ರಾಹಕರಿಗೆ ಶಾಕ್ ನೀಡಿದ ಏರ್‌ಟೆಲ್, ವೊಡಾಫೋನ್; ಡಿಸೆಂಬರ್‌ 1ರಿಂದ ಕರೆ ದುಬಾರಿ!

    ಜಿಯೋ ಗ್ರಾಹಕರ ಬೆನ್ನಲ್ಲೇ ಏರ್‌ಟೆಲ್‌ ಮತ್ತು ವೊಡಾಫೋನ್‌ ಗ್ರಾಹಕರಿಗೆ ಮುಂದಿನ ತಿಂಗಳಿಂದ ಫೋನ್‌ ಬಿಲ್‌ ಶಾಕ್‌ ತಟ್ಟಲಿದೆ. ವೊಡಾಫೋನ್‌ ಐಡಿಯಾ ಹಾಗೂ ಭಾರ್ತಿ ಏರ್‌ಟೆಲ್‌ ಕಂಪನಿಗಳು ಡಿಸೆಂಬರ್‌ 1ರಿಂದ ತನ್ನ ಸೇವೆಗಳ ದರಗಳನ್ನು ಏರಿಕೆ ಮಾಡುವುದಾಗಿ ಘೋಷಿಸಿವೆ. ಕೆಲವೇ ವರ್ಷಗಳ ಹಿಂದೆ ಹತ್ತಾರು ದೂರ ಸಂಪರ್ಕ ಕಂಪೆನಿಗಳು ಗ್ರಾಹಕರನ್ನು ಸೆಳೆಯಲು ತರಹೇವಾರಿ ಆಫರ್‌ಗಳ ಮೂಲಕ ಕಡಿಮೆ ದರ ಸೇವೆಗಳನ್ನು ಘೋಷಿಸುತ್ತಿದ್ದವು. ಆದರೆ ಈಗ ಬಹುತೇಕ ದೂರಸಂಪರ್ಕ ಕಂಪೆನಿಗಳು ಮುಚ್ಚಿ ಹೋಗಿವೆ ಅಥವಾ ವಿಲೀನಗೊಂಡಿವೆ. ಜಿಯೋ, ಏರ್‌ಟೆಲ್, ವೊಡಾಫೊನ್ ಐಡಿಯಾ ಹಾಗೂ ಸರ್ಕಾರಿ ಸ್ವಾಮ್ಯ…