ಸುದ್ದಿ

ಒಂದು ದಿನದ ಮಟ್ಟಿಗೆ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಎಸ್‌ಡಿಎಂ ಅಧಿಕಾರಿಯಾದ ಪಿಯೋನ್ ಮಗಳು.

103

ಹಿಮಾಚಲ ಪ್ರದೇಶದ ಕಾಂಗ್ರಾ ಎಂಬಲ್ಲಿ ಶುಕ್ರವಾರದಂದು 10 ನೇ ತರಗತಿಯ ವಿದ್ಯಾರ್ಥಿನಿಯನ್ನು ಒಂದು ದಿನದ ಮಟ್ಟಿಗೆ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಎಸ್‌ಡಿಎಂ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.

10ನೇ ತರಗತಿಯಲ್ಲಿ ಶೇಕಡ 94 ರಷ್ಟು ಅಂಕವನ್ನು ಗಳಿಸಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿನಿ ಹೀನಾ ಠಾಕೂರ್ ಎಂಬವರಿಗೆ ಈ ಅದೃಷ್ಟ ಒಲಿದು ಬಂದಿದೆ. ಹೀನಾ ಅವರ ತಂದೆ ಕಾಂಗ್ರಾ ಉಪವಿಭಾಗದಲ್ಲಿ ಮ್ಯಾಜಿಸ್ಟ್ರೇಟ್‌ನಲ್ಲಿ ಪಿಯೋನ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಪೀಯೊನ್ ತಮ್ಮ ಮಗಳ ಸಾಧನೆಗೆ ಗೌರವ ಸಲ್ಲಿಸಿ ಈ ವಿದ್ಯಾರ್ಥಿನಿಯನ್ನು ಒಂದು ದಿನದ ಮಟ್ಟಿಗೆ ಅಧಿಕಾರಿಯಾಗಿ ಮಾಡಲು ಕಾಂಗ್ರಾ ಎಸ್‌ಡಿಎಂ ಜತಿನ್ ಲಾಲ್ ನಿರ್ಧಾರ ಮಾಡಿದ್ದರು.

ಎಸ್‌ಡಿಎಂ ಮಾರ್ಗದರ್ಶನದಲ್ಲಿ ಹೀನಾ ಕಚೇರಿ ಸಭೆಗಳನ್ನು ನಡೆಸಿದರು. ಅಲ್ಲದೆ ಸಂದರ್ಶಕರ ಸಮಸ್ಯೆಗಳನ್ನು ಆಲಿಸಿದರು. ತದನಂತರ ಹೀನಾ ನನ್ನ ಕನಸು ನನಸಾಗಿದೆ. ಮುಂದೆ ಒಂದು ದಿನ ನಾನು ಡಾಕ್ಟರ್ ಆಗುತ್ತೇನೆ ತದನಂತರ ಐಎಎಸ್ ಆಫೀಸರ್ ಎಂದು ತಮ್ಮ ಕನಸನ್ನು ಹೇಳಿಕೊಂಡಿದ್ದಾರೆ.

ಹೀನಾ ಐಎಎಸ್ ಅಧಿಕಾರಿಯಾಗಬೇಕೆಂಬ ಕನಸಿನ ಬಗ್ಗೆ ತಿಳಿದಾಗ. ಹೀನಾ ಕನಸು ನನಸಾಗಲು ನೆರವಾಗಲು ಬಯಸಿದ್ದೆ ಎಂದು ಜತಿನ್ ಲಾಲ್ ಪ್ರತಿಕ್ರಿಯೆ ನೀಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬಿಗ್ಬಾಸ್ ಪ್ರಥಮ್, ಸಚಿವ ಯು.ಟಿ.ಖಾದರ್’ಗೆ ಕೊಟ್ಟ ಟಾಂಗ್ ಏನು ಗೊತ್ತಾ..?ತಿಳಿಯಲು ಮುಂದೆ ನೋಡಿ…

    ಕನ್ನಡದ ರಿಯಾಲಿಟಿ ಶೋ ಬಿಗ್ಬಾಸ್ ಸಂಚಿಕೆ 5ರಲ್ಲಿ ವಿಜೇತರಾಗಿದ್ದ ಒಳ್ಳೆ ಹುಡುಗ ಪ್ರಥಮ್,ಈಗಂತೂ ಸಾಮಾಜಿಕ ಜಾಲತಾಣ ಫೇಸ್ಬುಕ್’ನಲ್ಲಿ ತುಂಬಾ ಆಕ್ಟಿವ್ ಆಗಿದ್ದಾರೆ.ರಾಜ್ಯದಲ್ಲಿ ಯಾರಿಗೆ ಏನೇ ಆದರೂ, ಅದರ ಬಗ್ಗೆ ತಮ್ಮ ಫೇಸ್ಬುಕ್ ವಾಲ್ನಲ್ಲಿ ಬರೆದುಕೊಂಡು ಅದರ ಬಗ್ಗೆ ಪ್ರತಿಕ್ರಿಯೆ ನೀಡುತ್ತಾರೆ.

  • corona

    ಕೋಲಾರ ಜಿಲ್ಲೆ ಯಲ್ಲಿ ವಾರದೊಳಗೆ 78ಸಾವಿರ ಮಕ್ಕಳಿಗೆ ಉಚಿತ ಲಸಿಕೆ

    ಜಿಲ್ಲೆಯಾದ್ಯಂತ 15ರಿಂದ18ವರ್ಷದ 78,357 ಮಕ್ಕಳಿದ್ದು ಒಂದು ವಾರದೊಳಗೆ ಉಚಿತ ಲಸಿಕೆ ಹಾಕುವ ಮೂಲಕ ಅಭಿಯಾನ ಪೂರ್ಣ ಗೊಳಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಗದೀಶ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಜ.3ರಿಂದ 15ರಿಂದ18 ವರ್ಷದೊಳಗಿನ ಮಕ್ಕಳಿಗೆ ಉಚಿತ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು ಮೊದಲ ದಿನ 2600ಮಕ್ಕಳಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು. ಕೋಲಾರ ಜಿಲ್ಲೆ ಯಲ್ಲಿ 15ರಿಂದ18 ವರ್ಷದ ಮಕ್ಕಳ ಸಂಖ್ಯೆ ಕೋಲಾರ:- 23,381 ಬಂಗಾರಪೇಟೆ:-10,662 ಕೆಜಿಎಫ್:- 11,231 ಮಾಲೂರು:- 11,743…

    Loading

  • ರಾಜಕೀಯ

    ಕೋಲಾರದಲ್ಲಿ ಸಿದ್ಧರಾಮಯ್ಯ ಸ್ಪರ್ಧೆ ಬಹುತೇಕ ಖಚಿತ!

    ಕೋಲಾರ:-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಕೋಲಾರದಿಂದ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ.ಕೋಲಾರದಲ್ಲಿ ಕಾಂಗ್ರೆಸ್ ಭಿನ್ನಮತ ಹಾಗೂ ಗುಂಪುಗಾರಿಕೆ ಶಮನಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ. ಬುಧವಾರ ರಾತ್ರಿ ಕೆ.ಹೆಚ್.ಮುನಿಯಪ್ಪನವರು ಬೆಂಬಲಿಗರ ಜೊತೆ ಸಿದ್ದರಾಮಯ್ಯ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತುಕತೆ ನಡೆಸಿದ್ದಾರೆ. ಮಾತುಕತೆ ಬಳಿಕ ಕೆ.ಹೆಚ್ ಮುನಿಯಪ್ಪ ನವರು ಸಿದ್ದರಾಮಯ್ಯ ನವರಿಗೆ ಕೋಲಾರಕ್ಕೆ ಸ್ವಾಗತ ಕೋರಿದೆ. ಜನವರಿ 9 ರಂದು ಸಿದ್ದರಾಮಯ್ಯ ಅವರು ಕೋಲಾರ ಪ್ರವಾಸ ಕೈಗೊಂಡಿದ್ದು, ಅಂದೇ ಕೋಲಾರದಲ್ಲಿ ಸ್ಪರ್ಧೆ ಬಗ್ಗೆ ಘೋಷಣೆ ಮಾಡಲಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಯಾವ…

  • ಸ್ಪೂರ್ತಿ

    ಎಸ್ಸೆಸ್ಸೆಲ್ಸಿ ಓದಿದ್ದ ಭೂಪ… 7 ಸರಕಾರಿ ಹುದ್ದೆಗಳ ಕೆಲಸಕ್ಕೆ ಸೇರಿದ್ದು ಹೇಗೆ ಗೊತ್ತಾ…?ತಿಳಿಯಲು ಈ ಲೇಖನ ಓದಿ….

    ಓದಿದ್ದು ಎಸ್ಸೆಸ್ಸೆಲ್ಸಿವರೆಗೆ. ಆದರೂ ಒಂದೇ ವರ್ಷದಲ್ಲಿ 7 ನೌಕರಿಗೆ ಅರ್ಹತೆ ಲಭಿಸಿತು. ಆಯ್ಕೆ ಮಾಡಿಕೊಂಡಿದ್ದು ಮಾತ್ರ ಪಿಎಸ್‌ಐ ಹುದ್ದೆ! ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಮುದೂರ ಗ್ರಾಮದ ಕಾನ ಗೌಡ ಪಾಟೀಲ ಎಂಬುವರ ಪುತ್ರ ಪ್ರಶಾಂತ ಪಾಟೀಲ (38) ಎಂಬುವರು 15 ದಿನಗಳ ಹಿಂದಷ್ಟೇ ಪ್ರೊಬೇಷನರಿ ಅವಧಿ ಪೂರೈಸಿ ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ಎಸ್‌ಐ ಆಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.

  • ಸುದ್ದಿ

    ಹೆಣ್ಣು ಮಗು ಭವಿಷ್ಯಕ್ಕೆ ಕಂಟಕವೆಂದ ಜ್ಯೋತಿಷಿ; ಮಗುವನ್ನೇ ಕೊಂದ ಅಪ್ಪ…!

    ಚಿಕ್ಕಮಗಳೂರು: ಹೆಣ್ಣು ಮಗು ಭವಿಷ್ಯಕ್ಕೆ ಕಂಟಕ ಎಂದು ಹೇಳಿದ್ದ ಜ್ಯೋತಿಷಿಯೊಬ್ಬನ ಮಾತು ಕೇಳಿ 1.5 ತಿಂಗಳ ಹೆಣ್ಣು ಹಸುಗೂಸನ್ನು ಸ್ವತಃ ತಂದೆಯೇ ಹತ್ಯೆ ಮಾಡಿದ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಬೂಚೇನಹಳ್ಳಿ ಕಾವಲ್ನಲ್ಲಿ ನವಜಾತ ಹೆಣ್ಣು ಶಿಶುವನ್ನು ಹತ್ಯೆ ಮಾಡಿದ ಘಟ‌ನೆ ನಡೆದಿದೆ. 27 ವರ್ಷದ ಮಂಜುನಾಥ್‌ ನವಜಾತ ಕಂದಮ್ಮನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಹೆಣ್ಣು ಮಗು ಭವಿಷ್ಯಕ್ಕೆ ಕಂಟಕ ಎಂದು ಜ್ಯೋತಿಷಿ ಹೇಳಿದ್ದರಿಂದ ಅದನ್ನು ಕುರುಡಾಗಿ ನಂಬಿದ ತಂದೆ ಮಗುವನ್ನು ಕತ್ತು…

  • ಉಪಯುಕ್ತ ಮಾಹಿತಿ, ಸುದ್ದಿ

    ಹಾವೇರಿ ರೈತನ ಈ ಟೆಕ್ನಿಕ್ ನೋಡಲು ಓಡೋಡಿ ಬರುತ್ತಿರುವ ಜನರು, ಅಷ್ಟಕ್ಕೂ ಆತ ಮಾಡಿದ್ದೇನು ನೋಡಿ.

    ದೇಶದ ಬೆನ್ನೆಲುಬು ರೈತ, ಆದರೆ ರೈತನ ಬೆನ್ನೆಲುಬು ಗಂಗಾ ದೇವಿ ಅಂದರೆ ನೀರು, ನೀರಿಗಾಗಿ ಪರದಾಡುವ ರೈತ ಲಕ್ಷಗಟ್ಟಲೆ ಪರದಾಡಿ ಬೋರ್ ವೆಲ್ ಹಾಕಿಸುತ್ತಾನೆ, ಇಷ್ಟೆಲ್ಲ ಕಷ್ಟಪಡುವ ರೈತನಿಗೆ ಬೋರ್ ನಲ್ಲಿ ಕೆಲವು ಸಮಯ ಮಾತ್ರ ನೀರು ಸಿಗುತ್ತದೆ ಮತ್ತು ಬೇಸಿಗೆಯ ಕೊನೆಯಲ್ಲಿ ನೀರು ನಿಲ್ಲುತ್ತದೆ. ವ್ಯವಸಾಯದಲ್ಲಿ ಅವರಿಗೆ ಒಳ್ಳೆಯ ಲಾಭ ಬಾರದ ಕಾರಣ ಅವರು ಕೆಲಸವನ್ನ ಅರಿಸಿಕೊಂಡು ಪಟ್ಟಣಗಳಿಗೆ ಬರುತ್ತಿದ್ದಾರೆ, ಆದರೆ ನಾವು ಹೇಳುವ ಈ ರೈತ ಒಂದು ದೊಡ್ಡ ಪ್ರಯೋಗವನ್ನ ಮಾಡಿ ವರ್ಷಪೂರ್ತಿ ನೀರು…