ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಿಹಿ ಬೂಂದಿ ಮಾಡಲು ಬೇಕಾದ ಪದಾರ್ಥಗಳು : ಕಡ್ಲೆ ಹಿಟ್ಟು 2 ಕಪ್, ಅಡುಗೆ ಸೋಡ 1/4 ಚಮಚ, ಉಪ್ಪು ಚಿಟಿಕೆ, ದ್ರಾಕ್ಷಿ 2 ಚಮಚ, ಗೋಡಂಬಿ 2 ಚಮಚ, ತುಪ್ಪ 2 ಚಮಚ, ಸಕ್ಕರೆ 1/2ಕಪ್, ಏಲಕ್ಕಿ ಪುಡಿ 1/2 ಚಮಚ, ಅಡುಗೆ ಎಣ್ಣೆ 2 ಕಪ್.

ಮಾಡುವ ವಿಧಾನ : ಕಡ್ಲೆಹಿಟ್ಟು , ಉಪ್ಪುಚಿಟಿಕೆ , ಅಡುಗೆ ಸೋಡ ಚೆನ್ನಾಗಿ ಮಿಶ್ರ ಮಾಡಿ. ಸ್ವಲ್ಪ ಸ್ವಲ್ಪ ನೀರು ಚಿಮುಕಿಸಿ ,ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ ಕೊಳ್ಳಿ. ಸಕ್ಕರೆ ಪಾಕ ಒಂದು ಕಪ್ ಸಕ್ಕರೆ ಗೆ ಮುಕ್ಕಾಲು ಕಪ್ ನೀರು ಸೇ ರಿಸಿ ಕುದಿಸಿ, 5 ನಿಮಿಷ ಏಲಕ್ಕಿ ಪುಡಿಯನ್ನು ಸೇರಿಸಿ. ಸ್ಟೌ ಆರಿಸಿ. ಬಾಣಲೆಯಲ್ಲಿ ಎಣ್ಣೆ ಹಾಕಿ. ಕಾದಮೇಲೆ ಕಲಸಿದ ಹಿಟ್ಟನ್ನು ಬೂಂದಿ ಜರಡಿ ಯಲ್ಲಿ ಹಾಕಿ. ಕಾದ ಎಣ್ಣೆಗೆ ಉದುರಿಸಿ. ಗರಿಗರಿಯಾಗಿ ಕರಿದು ತೆಗೆದು, ಸಕ್ಕರೆ ಪಾಕಕ್ಕೆ ಹಾಕಿ, 2 ನಿಮಿಷಗಳ ಕಾಲ ನೆನೆಯಲಿ. ನಂತರ ತೆಗೆದು ಬೇರೆ ಪಾತ್ರೆಗೆ ಹಾಕಿ. ಆರಲು ಬಿಡಿ. ದ್ರಾಕ್ಷಿ ಗೋಡಂಬಿ ತುಪ್ಪದಲ್ಲಿ ಹುರಿದು ಉದುರಿಸಿ. ಸಿಹಿ ಬೂಂದಿ ಸವಿಯಲು ಸಿದ್ಧ.

ಖಾರಾ ಬೂಂದಿ : 2ಕಪ್ ಕಡ್ಲೆ ಹಿಟ್ಟು, ಅಚ್ಚಖಾರದಪುಡಿ 2 ಚಮಚ , ಹಿಂಗು, ಉಪ್ಪು, ಸ್ವಲ್ಪ ಅರಿಶಿನ ಸೇರಿಸಿ ಚೆನ್ನಾಗಿ ಕಲಸಿ. ಸ್ವಲ್ಪ ಸ್ವಲ್ಪ ನೀರು ಚಿಮುಕಿಸಿ (ಇಡ್ಲಿ ಹಿಟ್ಟಿನ ಹದಕ್ಕೆ) ಚೆನ್ನಾಗಿ ಕಲಸಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ ಬೂಂದಿ ಜರಡಿಯಲ್ಲಿ ಕಲಸಿದ ಹಿಟ್ಟನ್ನು ಉದುರಿಸಿ ಕರಿಯಿರಿ. ಕಡ್ಲೆಬೀಜ 1/2 ಕಪ್, ಸಣ್ಣಗೆ ಹೆಚ್ಚಿದ, ಕೊಬ್ಬರಿ 1/4 ಕಪ್, ಹುರಿಗಡಲೆ 1/2 ಕಪ್, ಕರಿಬೇವಿನ ಸೊಪ್ಪು ಒಂದು ಹಿಡಿ, ಒಣಮೆಣಸಿನಕಾಯಿ 7-8 ಚೂರು ಗಳು ಎಲ್ಲವನ್ನೂ ಬೇರೆ ಬೇರೆ ಕರಿಯಿರಿ. ನಂತರ ಕರಿದಿರುವ ಬೂಂದಿಯನ್ನು ಮಿಶ್ರ ಮಾಡಿ.
ಚೆನ್ನಾಗಿ ಮಿಶ್ರ ಮಾಡಿ. ಖಾರಾ ಬೂಂದಿ ಸವಿಯಲು ಸಿದ್ಧ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೇರಳೆ ಹಣ್ಣು ಪ್ರಸ್ತುತ ಮಾರುಕಟ್ಟೆಯಲ್ಲಿ ವಿಧವಿಧ ಹಣ್ಣುಗಳ ರೀತಿಯಲ್ಲಿ ಸಿಗುತ್ತಿದೆ. ಬಾಯಲ್ಲಿ ನೀರೂರಿಸುವ ಇವುಗಳನ್ನು ಪ್ರತಿನಿತ್ಯವೂ ತಿನ್ನುವುದು ತುಂಬಾ ಒಳ್ಳೆಯದು. ಯಾಕೆ ಗೊತ್ತಾ. ನೇರಳೆ ಹಣ್ಣುಗಳಲ್ಲಿ ಕ್ಯಾಲ್ಸಿಯಂ, ಮೆಗ್ನೀಷಿಯಂ, ಫಾಸ್ಪರಸ್, ಸೋಡಿಯಂ, ವಿಟಮಿನ್ ಸಿ, ಥಿಯಾಮಿನ್, ಫೋಲಿಕ್ ಆಸಿಡ್, ನಾರಿನಂಶ, ಕೆರೋಟಿನ್ ಮತ್ತು ಪ್ರೋಟೀನ್ ಗಳು ಹೇರಳವಾಗಿದೆ. ಮಧುಮೇಹ ಇರುವವರಿಗೆ ನೇರಳೆಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಸೇವಿಸಿದರೆ ರಕ್ತದಲ್ಲಿ ಸಕ್ಕರೆ ಮಟ್ಟವು ನಿಯಂತ್ರಣಕ್ಕೆ ಬರುತ್ತದೆ. ಜೀರ್ಣ ವ್ಯವಸ್ಥೆಗೆ ನೇರಳೆ ಹಣ್ಣು ಬಹಳ ಸಹಾಯ ಮಾಡುತ್ತದೆ. ದೇಹದಲ್ಲಿನ…
ಹೊಳೆ ನರಸೀಪುರ ಪಟ್ಟಣದ ಪ್ರೈಂ ಕ್ಲಬ್ ಮತ್ತು ಗೆಳೆಯರ ಬಳಗ ಈ ಶ್ಲಾಘನೀಯ ಕೆಲಸವನ್ನು ಮಾಡಿದೆ. ತಮ್ಮ ತಮ್ಮ ವಾಟ್ಸಪ್ ಗ್ರೂಪ್ನ ಸ್ನೇಹಿತರೆಲ್ಲ ಒಂದಾಗಿ ನೆರೆ ಪೀಡಿತ ಪ್ರದೇಶಗಳಾದ ಹಾವೇರಿಯ ಕೂಡಲ ಗ್ರಾಮ ಮತ್ತು ಬೆಳಗಾವಿಯ ರಾಮದುರ್ಗ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸ್ಕೂಲ್ ಬ್ಯಾಗ್ಗಳನ್ನು ವಿತರಿಸಿದ್ದಾರೆ. ಎರಡು ಜಿಲ್ಲೆಗಳ ಒಟ್ಟು ಮೂರು ಸರ್ಕಾರಿ ಶಾಲೆಗಳ 350ಕ್ಕೂ ಹೆಚ್ಚು ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ಪಠ್ಯ ಪುಸ್ತಕಗಳನ್ನು ವಿತರಿಸಿದ್ದಾರೆ. ಸ್ನೇಹಿತರೆಲ್ಲ ತಮ್ಮ ಶಕ್ತಿಯಾನುಸಾರ ಹಣ ಸಂಗ್ರಹಿಸಿ ನಂತರ ಹೋಲ್…
ಇಂದು ಗುರುವಾರ, 15/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಉದ್ಯೋಗಿಗಳು ನೂತನ ವೃತ್ತಿಯನ್ನು ಕೈಗೊಳ್ಳಬಹುದು.ನಿಧಾನವಾಗಿ ಇತರರ ಹೃದಯವನ್ನು ಗೆಲ್ಲಲು ನಿಮಗೆ ಸಾಧ್ಯವಾಗುತ್ತದೆ. ಕೆಲಸದಿಂದ ಆಗಾಗ್ಗೆ ಮನಸು ದೂರವಾಗುವ ಸಾಧ್ಯತೆಯಿರುತ್ತದೆ.ಹೊಸ ಮನೆಗೆ ಹೋಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಆರೋಗ್ಯದಲ್ಲಿ ಏರುಪೇರಾಗ ಬಹುದು. ಜಾಗ್ರತೆ ವಹಿಸಬೇಕು. ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ತಂದೆ ಜತೆ ಸಮಾಲೋಚಿಸಿ ತೀರ್ಮಾನ ಸಾಧ್ಯತೆ. ತೀರ್ಥ ಕ್ಷೇತ್ರಗಳ ಪ್ರವಾಸಕ್ಕೆ ಮಕ್ಕಳು ನಿಮಗೆ ನೆರವಾಗಲಿದ್ದಾರೆ. ಮಾನಸಿಕ ದುಗುಡ ಉಂಟಾದೀತು ವೃಷಭ:- ಮುಖ್ಯವಾದ ಕೆಲಸವೊಂದಕ್ಕೆ ಸಲಹೆ…
ಇಂದು ಮಹಾಶಿವರಾತ್ರಿ ಮಂಗಳವಾರ, 13/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಪೂಜೆಯಲ್ಲಿ ದೀಪ, ಧೂಪದ ಜೊತೆ ಅಡಿಕೆಗೂ ಮಹತ್ವದ ಸ್ಥಾನವಿದೆ. ಸಣ್ಣ ಅಡಿಕೆ ದೊಡ್ಡ ಖುಷಿಗೆ ಕಾರಣವಾಗಬಹುದು. ವಾಸ್ತು ಶಾಸ್ತ್ರದ ಪ್ರಕಾರ ಪೂಜೆ ಮಾಡಿದ್ದ ಅಡಿಕೆ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಸುಖ-ಶಾಂತಿ ಜೊತೆಗೆ ಆರ್ಥಿಕ ಸಮಸ್ಯೆಗೆ ಪರಿಹಾರ ನೀಡುತ್ತದೆ.
ಭಾನುವಾರ ರಜೆ ದಿನ. ಪ್ರತಿನಿತ್ಯ ಕೆಲಸ, ಶಾಲೆ ಎಂದು ಬ್ಯುಸಿಯಾಗಿರೋ ಕುಟುಂಬಸ್ಥರು ಮನೆಯಲ್ಲಿ ರೆಸ್ಟ್ ಮಾಡುತ್ತಾ ಇರುತ್ತಾರೆ. ಮಕ್ಕಳು ಸಹ ಇಂದು ಮನೆಯಲ್ಲಿಯೇ ಇರುತ್ತಾರೆ. ಎಲ್ಲರೂ ಒಟ್ಟಿಗೆ ಕುಳಿತು ರುಚಿ ರುಚಿಯಾದ ಮಸಲಾ ಚಾಟ್ಸ್ ತಿನ್ನೋ ಬಯಕೆ ಎಲ್ಲರಲ್ಲಿ ಮನೆ ಮಾಡಿರುತ್ತದೆ. ಹೊರಗಡೆ ತಂದ ತಿಂಡಿ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಮನೆಯಲ್ಲಿ ಏನು ಮಾಡಬೇಕೆಂದು ಚಿಂತೆಯಲ್ಲಿದ್ದೀರಾ. ಒಮ್ಮೆ ಸ್ಪೈಸಿ ಸೋಯಾ ಮಂಚೂರಿ ಮಾಡಿ ತಿನ್ನಿ. ಸ್ಪೈಸಿ ಸೋಯಾ ಮಂಚೂರಿ ಮಾಡುವ ವಿಧಾನ ಇಲ್ಲಿದೆ. ಬೇಕಾಗುವಸಾಮಾಗ್ರಿಗಳು* ಸೋಯಾ –…