inspirational

ಕೇರಳದಲ್ಲಿ ಸಿಲುಕಿಕೊಂಡಿದ್ದ 177 ಯುವತಿಯರನ್ನು ತವರು ರಾಜ್ಯಕ್ಕೆ ಕಳುಹಿಸಿ ಮತ್ತೆ ಮಾನವೀಯತೆ ಮೆರೆದ ಸೋನು ಸೂದ್.

95

ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಶುರುವಾದಾಗಿನಿಂದ ಒಡಿಶಾದ ಸುಮಾರು 177 ಯುವತಿಯರು ಕೇರಳದಲ್ಲಿ ಸಿಲುಕಿಕೊಂಡಿದ್ದರು. ಅಂದಿನಿಂದ ಯುವತಿಯರು ತಮ್ಮ ಊರಿಗೆ ಹೋಗಲು ಯಾವುದೇ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದರು. ಈ ಯುವತಿಯ ಬಗ್ಗೆ ಭುವನೇಶ್ವರದಲ್ಲಿರುವ ಸ್ನೇಹಿತರೊಬ್ಬರ ಮೂಲಕ ಸೋನು ಸೂದ್ ತಿಳಿದುಕೊಂಡಿದ್ದರು.

ತಕ್ಷಣ ಯುವತಿಗೆ ಸಹಾಯ ಮಾಡಲು ಮುಂದಾಗಿದ್ದು, ನಂತರ ವಿಮಾನ ನಿಲ್ದಾಣಗಳನ್ನು ತೆರೆಯಲು ಕೇರಳ ಮತ್ತು ಒಡಿಶಾ ಸರ್ಕಾರಗಳಿಂದ ಅನೇಕ ಅನುಮತಿಗಳನ್ನು ಪಡೆದುಕೊಂಡಿದ್ದಾರೆ. ಬಳಿಕ ಸೋನು ಸೂದ್ ಯುವತಿಯರ ರಕ್ಷಣೆ ಮಾಡಿದ್ದು, ಅಲ್ಲಿಂದ ಅವರನ್ನು ವೈಮಾನಿಕ ಮಾರ್ಗದ ಮೂಲಕ ಒಡಿಶಾಕ್ಕೆ ಕಳುಹಿಸಲಾಗಿದೆ.

ಮೊದಲಿಗೆ ಸೋನು ಸೂದ್ ಕೇರಳದ ಕೊಚ್ಚಿ ಮತ್ತು ಒಡಿಶಾದ ಭುವನೇಶ್ವರ ವಿಮಾನ ನಿಲ್ದಾಣಗಳನ್ನು ತೆರೆಯುವಂತೆ ಆಯಾ ಸರ್ಕಾರಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲಿಂದ ಅನೇಕ ಬಗೆಯ ಅನುಮತಿಗಳನ್ನು ಪಡೆದುಕೊಂಡಿದ್ದಾರೆ. ನಂತರ ಬೆಂಗಳೂರಿನಿಂದ ಕೊಚ್ಚಿಗೆ ವಿಶೇಷ ವಿಮಾನ ರವಾನಿಸಲು ವ್ಯವಸ್ಥೆ ಮಾಡಿದ್ದಾರೆ. ಈ ವಿಮಾನದ ಮೂಲಕ 177 ಯುವತಿಯರನ್ನು ಒಡಿಶಾಕ್ಕೆ ಕಳುಹಿಸಿದ್ದಾರೆ. ಈ ಮೂಲಕ ಯುವತಿಯರು ಅವರ ಕುಟುಂಬವನ್ನು ಸೇರಲು ಸೋನು ಸೂದ್ ನೆರವಾಗಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • Uncategorized

    ಹಳ್ಳಿ ಹುಡುಗರಿಂದ ಕ್ರಿಕೆಟ್ ಕನ್ನಡದಲ್ಲಿ ಲೈವ್ ಕಾಮೆಂಟ್ರಿ

    ನಮ್ಮ ತಂಡದವರಿಂದ ಹಳ್ಳಿಯ ಪ್ರತಿಯೊಬ್ಬನಿಗೂ ಮನಮುಟ್ಟುವಾಗೆ ಕನ್ನಡಲ್ಲಿ ಕ್ರಿಕೆಟ್ ರಸದೌತಣವನ್ನು ಸವಿಯಲು ಸಿದ್ದರಾಗಿ …. ಸಾಧಾರಣ ಮೊತ್ತ ಬೆನ್ನತ್ತಿದರೂ ಆತಂಕದ ಕ್ಷಣಗಳನ್ನು ಎದುರಿಸಿದ ಪಾಕಿಸ್ತಾನ ಒತ್ತಡ ಮೆಟ್ಟಿ ನಿಂತು ಜಯ ತನ್ನದಾಗಿಸಿಕೊಂಡಿತು. ಈ ಮೂಲಕ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ ಹಂತ ಪ್ರವೇಶಿಸಿತು. 237 ರನ್‌ಗಳ ಜಯದ ಗುರಿ ಬೆನ್ನತ್ತಿದ ಪಾಕಿಸ್ತಾನ ಉತ್ತಮ ಆರಂಭ ಕಂಡರೂ ನಂತರ ಆತಂಕಕ್ಕೆ ಒಳ ಗಾಯಿತು. ಅಜರ್‌ ಅಲಿ ಮತ್ತು ಫಕ್ರ್ ಜಮಾನ್‌ ಮೊದಲ ವಿಕೆಟ್‌ಗೆ 68 ಎಸೆತಗಳಲ್ಲಿ 74…

  • Archive

    RRR ಚಲನಚಿತ್ರಕ್ಕೆ ಆಸ್ಕರ್ ಪ್ರಶಸ್ತಿ

    ಇತಿಹಾಸ ಸೃಷ್ಟಿಸಿದ RRR  ಚಿತ್ರ ದಕ್ಷಿಣ ಭಾರತ ಚಲನಚಿತ್ರ ಒಂದಕ್ಕೆ ಮೊದಲ ಆಸ್ಕರ್ ಪ್ರಶಸ್ತಿಯ ಗೌರವ ನಾಟು ನಾಟು..’, ‘ಲಿಫ್ಟ್​ ಮಿ ಅಪ್​’, ‘ದಿಸ್ ಈಸ್ ಲೈಫ್​’, ಹೋಲ್ಡ್ ಮೈ ಹ್ಯಾಂಡ್, ಅಪ್ಲೌಸ್​ ಹಾಡುಗಳು ರೇಸ್​​ನಲ್ಲಿದ್ದವು. ಈ ಪೈಕಿ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದಿದೆ. ‘ಆರ್​ಆರ್​ಆರ್’ ಚಿತ್ರದ ‘ನಾಟು ನಾಟು..’ ಹಾಡು ದಾಖಲೆ ಬರೆದಿದೆ. 95ನೇ ಸಾಲಿನ ಅಕಾಡೆಮಿ ಅವಾರ್ಡ್ ಕರ‍್ಯಕ್ರಮದಲ್ಲಿ ಈ ಹಾಡು ‘ಬೆಸ್ಟ್​ ಒರಿಜಿನಲ್​ ಸಾಂಗ್​’ ವಿಭಾಗದಲ್ಲಿ ಆಸ್ಕರ್ ಬಾಚಿಕೊಂಡಿದೆ. ಎಂ.ಎಂ. ಕೀರವಾಣಿ…

  • ಜ್ಯೋತಿಷ್ಯ

    ನಿಮ್ಮ ಮನೆ ಒಡೆಯದೇ ಈ ಸರಳ ಕ್ರಮಗಳಿಂದ ವಾಸ್ತುದೋಷ ನಿವಾರಣೆ ಮಾಡಿಕೊಳ್ಳಿ…ಹೇಗೆಂದು ತಿಳಿಯಲು ಈ ಲೇಖನ ಓದಿ…

    ವಾಸ್ತುದೋಷದಿಂದ ಸುಖ-ಸಮೃದ್ಧಿ ನಾಶವಾಗುತ್ತದೆ. ಕುಟುಂಬದಲ್ಲಿ ಸಮಸ್ಯೆ ಕಾಡುತ್ತದೆ. ಮನೆಯಲ್ಲಿ ವಾಸ್ತುದೋಷವಿದೆ ಎನ್ನುವ ಕಾರಣಕ್ಕೆ ಜನರು ಮನೆ ಒಡೆಯಲೂ ಮುಂದಾಗ್ತಾರೆ. ಆದ್ರೆ ಮನೆ ಒಡೆಯಬೇಕಾಗಿಲ್ಲ… ಕೆಲ ಸರಳ ಉಪಾಯಗಳನ್ನು ಅನುಸರಿಸಿ ವಾಸ್ತು ದೋಷವನ್ನು ಕಡಿಮೆ ಮಾಡಬಹುದು… *ದೇವರ ಪೂಜೆ ಮಾಡಿದ ಹೂವನ್ನು ದೇವರ ಮನೆಯಲ್ಲಿಡಬೇಡಿ. *ಈಶಾನ್ಯ ಮೂಲೆಯಲ್ಲಿ ಅಧಿಕ ತೂಕದ ವಸ್ತುಗಳನ್ನು ಇಡಬೇಡಿ. *ಮನೆಯ ಉತ್ತರ ದಿಕ್ಕಿನಲ್ಲಿ ತುಳಸಿ ಗಿಡವನ್ನಿಡಿ. *ಮನೆಯ ಗೋಡೆ ಮೇಲೆ ಹಸಿರು, ಸುಂದರ ಫೋಟೋಗಳನ್ನು ಹಾಕಿ. *ನೀರಿಗೆ ಅರಿಶಿನವನ್ನು ಬೆರೆಸಿ ವೀಳ್ಯದೆಲೆ ಸಹಾಯದಿಂದ ಮನೆಗೆಲ್ಲ ಸಿಂಪಡಿಸಿ….

  • ಸುದ್ದಿ

    ಹಿಮಪಾತದ ನಡುವೆ ದೇಶ ಸೇವೆ ಸಲ್ಲಿಸುತ್ತಿರುವ ಈ ವೀರಯೋಧನಿಗೊಂದು ಸಲಾಂ. ಜಾಲತಾಣಗಳಲ್ಲಿ ಸಖತ್ ವೈರಲ್.

    ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಈ ನಡುವೆ ಸಿಆರ್‌ಪಿಎಫ್ ಯೋಧರೊಬ್ಬರು ಕರ್ತವ್ಯ ಸಲ್ಲಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ಫೋಟೋ ನೋಡಿದವರು ಆ ಚಳಿಯಲ್ಲೂ ಎದೆಗುಂದದೆ ಕರ್ತವ್ಯ ಸಲ್ಲಿಸುತ್ತಿರುವ ಯೋಧನಿಗೆ ಸಲಾಂ ಎಂದಿದ್ದಾರೆ. ನಮ್ಮ ಸೈನಿಕರು ನಮ್ಮ ಹೆಮ್ಮೆ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ ನಮ್ಮ ಸೈನಿಕರು ನಮಗಾಗಿ ಪ್ರತಿದಿನ ಪಡುವ ಕಷ್ಟ ಅಷ್ಟಿಷ್ಟಲ್ಲ. ಚಳಿಗಾಳಿ ಹಿಮಮಳೆ ಯಾವುದನ್ನೂ ಲೆಕ್ಕಿಸದೆ ಸೈನಿಕರು ಬಾರ್ಡರ್ ನಲ್ಲಿ ನಮಗಾಗಿ ಪ್ರಾಣ ಒತ್ತೆಯಿಟ್ಟು…

  • ಸುದ್ದಿ

    ರಾಜ್ಯ ಸರ್ಕಾರದ ಖಡಕ್ ಎಚ್ಚರಿಕೆ :2ನೇ ತರಗತಿವರೆಗೂ ಹೋಂ ವರ್ಕ್‌ ನೀಡುವಂತಿಲ್ಲ…..!

    ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಂವರ್ಕ್‌ ನೀಡುವ ಶಾಲೆಗಳ ಮಾನ್ಯತೆಯನ್ನೇ ರದ್ದುಪಡಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಖಡಕ್‌ ಎಚ್ಚರಿಕೆ ನೀಡಿದೆ.2019-20ನೇ ಸಾಲಿನ ಶೈಕ್ಷಣಿಕ ತರಗತಿಗಳು ಈಗಾಗಲೇ ಆರಂಭವಾಗಿವೆ. ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಹೆಚ್ಚಿನ ಹೋಂವರ್ಕ್‌ ನೀಡಲಾಗುತ್ತಿದೆ. ಇದು ಪಾಲಕ, ಪೋಷಕರಿಗೆ ನೇರ ಹೊರೆಯಾಗಲಿದೆ. ಅಲ್ಲದೆ, ಈ ಮಕ್ಕಳ ಹೋಂ ವರ್ಕ್‌ನ್ನು ಮನೆಯಲ್ಲಿ ಪಾಲಕ, ಪೋಷಕರೇ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಂ…