Top News

ಈ ಹುಡುಗಿ ತಯಾರಿಸಿದ 1800 ರೂಪಾಯಿಯ AC ಗಾಗಿ ವಿದೇಶಿ ಕಂಪನಿಗಳು ಪೈಪೋಟಿ, ಈಕೆ ಮಾಡಿದ ಟೆಕ್ನಿಕ್ ಏನು ಗೊತ್ತಾ!

13790

ಓದು ಮುಗಿದ ನಂತರ ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಅನ್ನುವ ಆಸೆ ಪ್ರತಿಯೊಬ್ಬರಲ್ಲೂ ಇರುವುದು ಸಾಮಾನ್ಯವಾಗಿದೆ, ಓದು ಮುಗಿದ ನಂತರ ಏನಾದರು ಸಾಧನೆ ಮಾಡುವ ಬದಲು ಓದುವಾಗಲೇ ಏನಾದರು ಸಾಧನೆ ಮಾಡೋಣ ಅನುವ ಛಲಕ್ಕೆ ಬಿದ್ದು ನಮ್ಮ ದೇಶ ಮಾತ್ರವಲ್ಲದೆ ಬೇರೆ ದೇಶದವರು ಮೆಚ್ಚುವ ಕೆಲಸವನ್ನ ಮಾಡಿದ 16 ವರ್ಷದ ಹುಡುಗಿಯ ಈ ಕಥೆಯನ್ನ ಕೇಳಿದರೆ ನೀವು ಕೂಡ ಹೆಮ್ಮೆ ಪಡುತ್ತೀರಿ. ಸಾಮಾನ್ಯವಾಗಿ ಒಂದು AC ಖರೀದಿ ಮಾಡಬೇಕು ಅಂದರೆ ಏನಿಲ್ಲ ಅಂದರೆ 25 ಸಾವಿರ ರೂಪಾಯಿ ಬೇಕು, ಆದರೆ ಈ ಹುಡುಗಿ 1800 ರೂಪಾಯಿ ಖರ್ಚು ಮಾಡಿ AC ತಯಾರಿಸಿದ್ದಾಳೆ.

ಹೌದು ಉತ್ತರ ಪ್ರದೇಶದ ಜಾನ್ಸಿ ನಗರದಲ್ಲಿ ವಾಸವಿರುವ 16 ವರ್ಷದ ಕಲ್ಯಾಣಿ ಅನ್ನುವ ಹುಡುಗಿ ಹತ್ತಿರದ ಲೋಕಮಾನ್ಯ ತಿಲಕ್ ಕಾಲೇಜಿನಲ್ಲಿ PUC ವ್ಯಾಸಂಗ ಮಾಡುತ್ತಿದ್ದಾಳೆ, ಇನ್ನು ಈ ಹುಡುಗಿಯ ತಂದೆ ಮತ್ತು ತಾಯಿ ಇಬ್ಬರು ಕೂಡ ಶಿಕ್ಷಕರಾಗಿ ಕೆಲಸವನ್ನ ಮಾಡುತ್ತಿದ್ದಾರೆ. ಇನ್ನು ಯಾವಾಗಲು ಎಲ್ಲರಿಗಿಂತ ಬಹಳ ವಿಭಿನ್ನವಾಗಿ ಆಲೋಚನೆ ಮಾಡುತ್ತಿದ್ದ ಕಲ್ಯಾಣಿ ಬಹಳ ಕಡಿಮೆ ಬೆಲೆಯಲ್ಲಿ AC ತಯಾರಿಸಬೇಕು ಅನುವ ಆಲೋಚನೆ ಮಾಡಿದಳು, ಇನ್ನು ಆಕೆ ಮಾಡಿದ ಆಲೋಚನೆಯಂತೆ 12 ವೋಲ್ಟ್ DC ಫ್ಯಾನ್, ಐಸ್ ಬಾಕ್ಸ್, ಸೋಲಾರ್ ಸಿಸ್ಟಮ್ ಹಾಗು ಥರ್ಮಾಕೋಲ್ ಬಳಸಿಕೊಂಡು ಕೇವಲ 1800 ರೂಪಾಯಿಯಲ್ಲಿ ಒಂದು AC ತಯಾರಿಸಿದಳು ಕಲ್ಯಾಣಿ.

ಇನ್ನು ಈಕೆ ತಯಾರು ಮಾಡಿದ AC ಗೆ ಯಾವುದೇ ರೀತಿಯ ಕರೆಂಟ್ ಬೇಕಾಗಿಲ್ಲ ಮತ್ತು ಸೋಲಾರ್ ಶಕ್ತಿಯಿಂದ ಈ AC ಕಾರ್ಯ ನಿರ್ವಹಿಸುತ್ತದೆ, ಇನ್ನು ರೂಮ್ ನಲ್ಲಿ ಈ AC ಯನ್ನು ಅರ್ಧ ಘಂಟೆ ಚಾಲು ಮಾಡಿದರೆ ಸಾಕು ಆ ರೂಮ್ 5 ಡಿಗ್ರಿ ತಾಪಮಾನಕ್ಕೆ ಬಂದು ರೂಮ್ ತಂಪಾಗುತ್ತದೆ. ಇನ್ನು ಕಲ್ಯಾಣಿ ತಯಾರು ಮಾಡಿದ ಈ AC ಯನ್ನು ಇನ್ನಷ್ಟು ಡೆವೆಲಪ್ ಮಾಡಿದರೆ ಬೇಸಿಗೆಯಲ್ಲಿ ಬೆವರು ಸುರಿಸುವ ಬದಲು ಈ AC ಯನ್ನು ಬಳಸಬಹುದಾಗಿದೆ. ಇನ್ನು ಈ ಹುಡುಗಿಯ ಕಾರ್ಯದಕ್ಷತೆಯನ್ನ ನೋಡಿದ ಜಪಾನ್ ಮತ್ತು ಇನ್ನಿತರೇ ದೇಶಗಳು ತಮ್ಮ ದೇಶದ ಸೆಮಿನಾರ್ ಗಳಲ್ಲಿ ಪಾಲ್ಗೊಳ್ಳುವಂತೆ ಈ ಹುಡುಗಿಗೆ ಆಮಂತ್ರಣವನ್ನ ನೀಡಿದೆ, ಇನ್ನು ಅಷ್ಟೇ ಅಲ್ಲದೆ ಕಲ್ಯಾಣಿಯ ಈ ಐಡಿಯಾ ಬಗ್ಗೆ ವಿದೇಶಿ ಕಂಪನಿಗಳು ಆಸಕ್ತಿ ತೋರಿಸುತ್ತಿವೆ ಎಂದು ಹೇಳಲಾಗುತ್ತಿದೆ.

ಒಂದು ವಸ್ತುವನ್ನ ತಯಾರು ಮಾಡಿದ ಮೇಲೆ ಇಷ್ಟೇನಾ ಎಂದು ತುಂಬಾ ಜನ ಹೇಳುತ್ತಾರೆ, ಆದರೆ ಹಾಗೆ ಹೇಳುವವರಾರು ತಯಾರಿಸುವ ಹೊಸ ವಿಧಾನವನ್ನ ಕಂಡುಹಿಡಿಯುವ ಗೋಜಿಗೆ ಹೋಗುವುದಿಲ್ಲ. ಇನ್ನು ಕಲ್ಯಾಣಿ ಕಂಡುಹಿಡಿದಿರುವ ಈ AC ನ್ಯಾಷನಲ್ ಲೆವೆಲ್ ಗೆ ಸೆಲೆಕ್ಟ್ ಆಗಿದ್ದು ಈ ವಿನೂತನ ಆಲೋಚನೆಗೆ 50 ಬಹುಮಾನಗಳು ಕಲ್ಯಾಣಿ ಕೈಗೆ ಸೇರಿದೆ. ಇನ್ನು ಈ ಹುಡುಗಿ ಬಹಳ ಒಳ್ಳೆಯ ಹಾಡುಗಾರ್ತಿ ಕೂಡ ಆಗಿದ್ದು ಇಂಡಿಯನ್ ಐಡಿಯಲ್ ನಲ್ಲಿ ಮೂರನೇ ಹಂತದ ತನಕ ಹೋಗಿದ್ದಳು, ಕಲ್ಯಾಣಿಯಂತಹ ಹುಡುಗಿಗೆ ನಮ್ಮ ಬಹುಮಾನಗಳ ಬದಲಾಗಿ ಪ್ರೋತ್ಸಹ ಬೇಕಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಬಾಳೆಹಣ್ಣು ತಿನ್ನುವುದರಿಂದ ಆಗುವ ಲಾಭಗಳು

    ದೇವರ ನೈವೇದ್ಯಕ್ಕೆ ಅರ್ಪಿಸುವ ಹಣ್ಣುಗಳಲ್ಲಿ ಬಾಳೆಹಣ್ಣಿಗೆ  ಮೊದಲ ಸ್ಥಾನ. ಬಾಳೆ ಹಣ್ಣು ಎಲ್ಲಾ ಕಾಲಕ್ಕೂ ಎಲ್ಲಾ ಕಡೆ, ಎಲ್ಲಾ ವರ್ಗದವರಿಗೆ ಸುಲಭವಾಗಿ ಸಿಗುವ ಫಲ. ಅದರಂತೆ ನಿಮ್ಮ ಜೀವನ ಕ್ರಮದಲ್ಲಿ ನಿಯಮಿತವಾಗಿ ಬಾಳೆಹಣ್ಣು ಸೇವಿಸಿದರೆ ನಿಮ್ಮ ಬಾಳು ಬಂಗಾರ ಆಗುತ್ತದೆ ಹಲವು ಪ್ರಬೇಧ ಹೊಂದಿರುವ ಬಾಳೆ ಹಣ್ಣಿನಲ್ಲಿ ಹಲವು ಔಷಧೀಯ ಗುಣಗಳಿವೆ. ಬಾಳೆ ನಿಯಮಿತವಾಗಿ ಸೇವಿಸಿದರೆ ಆರೋಗ್ಯ ವೃದ್ಧಿಸುತ್ತದೆ. ಬಾಳೆಹಣ್ಣು ತಿನ್ನುವುದರಿಂದ ಆಗುವ ಲಾಭಗಳು ಹೈ ಫೈಬರ್ ಬಾಳೆಹಣ್ಣನ್ನು ಕರಗಬಲ್ಲ ಮತ್ತು ಕರಗದಂತಹ ನಾರಿನಿಂದ ತುಂಬಿಸಲಾಗುತ್ತದೆ. ಕರಗಬಲ್ಲ ಫೈಬರ್…

  • ಸಿನಿಮಾ

    ಶಂಕರ್ ನಾಗ್, ಧೋನಿ, ಮೋದಿಯವರು ನನಗೆ ಸ್ಫೂರ್ತಿ ಎಂದ ನಟ ರಾಕಿಂಗ್ ಸ್ಟಾರ್ ಯಶ್.

    ಕನ್ನಡ ನಿರ್ದೇಶಕ ಮತ್ತು ನಟ ಶಂಕರ್ ನಾಗ್ ಅವರು, ಕ್ರಿಕೆಟರ್ ಧೋನಿ ಅವರ ಮತ್ತು ಪ್ರಧಾನ ಮಂತ್ರಿ ಮೋದಿ ಅವರು ನನಗೆ ಸ್ಫೂರ್ತಿಯಾಗಿದ್ದಾರೆ ಎಂದು ನಟ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ. ಸೋಮವಾರ ಸಂಜೆ ಮುಂಬೈನಲ್ಲಿ ನಡೆದ ಜಿಕ್ಯೂ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದು ನಂತರ ಜಿಕ್ಯೂ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ ಅವರು, ನಿಮ್ಮ ಸಕ್ಸಸ್ ಮಂತ್ರ ಯಾವುದು ಎಂದು ಕೇಳಿದಾಗ, ನಾನು ನನಗೆ ಇಷ್ಟವಾದ ಕೆಲಸ ಮಾಡುತ್ತೇನೆ. ಆಗ…

  • ಸುದ್ದಿ

    ವಿಚ್ಛೇದನ ನೀಡಿ ಎರಡನೇ ಮದುವೆ ಆದ್ರೂ, ಈ ಮಹಿಳೆ ತನ್ನ ಎರಡನೇ ಗಂಡನ ಜೊತೆಗೇ, ಮೊದಲ ಪತಿಯ ಸೇವೆ ಮಾಡುತ್ತಿದ್ದಾಳೆ..!ಏಕೆ?ತಿಳಿಯಲು ಈ ಲೇಖನ ಓದಿ…

    ಚೀನಾದಲ್ಲಿ ಮಹಿಳೆಯೊಬ್ಬಳು ತನ್ನ ಪಾರ್ಶ್ವವಾಯು ಪತಿಗೆ ವಿಚ್ಛೇದನ ನೀಡಿದ್ದಾಳೆ. ನಂತ್ರ ತನ್ನ ಸ್ನೇಹಿತನೊಬ್ಬನ ಜೊತೆ ಮದುವೆಯಾಗಿದ್ದಾಳೆ. ಇಷ್ಟಕ್ಕೆ ಕಥೆ ಮುಗಿಯಲಿಲ್ಲ.

  • ದೇವರು-ಧರ್ಮ

    ಇಲ್ಲಿ ಎಲ್ಲರೂ ಕೋಮುವಾದಿಗಳೇ..!!! ಹೇಗೆ ಗೊತ್ತಾ? ಈ ಲೇಖನಿ ಓದಿ…

    ದೇವರು ಭೂಮಿ ಮತ್ತು ಸ್ವರ್ಗಗಳನ್ನು 6 ದಿನದಲ್ಲಿ ನಿರ್ಮಿಸಿದ ಮತ್ತು ಉಳಿದ ಅಗತ್ಯ ವಸ್ತುಗಳನ್ನು 7ನೇ ದಿನದಂದು ನಿರ್ಮಿಸಿದ ಅನ್ನೋದನ್ನ ಜಗತ್ತಿನ 14 ಮಿಲಿಯನ್ ಜನ ಈಗಲೂ ನಂಬುತ್ತಾರೆ ಅನ್ನೋದನ್ನು ನಾನು ನನ್ನ ಹಿಂದು,ಮುಸ್ಲಿಂ,ಕ್ರಿಶ್ಚಿಯನ್ ಮತ್ತು ಯಹೂದಿ ಗೆಳೆಯರಲ್ಲಿ ಹೇಳ್ದಾಗ ಯಹೂದಿ ಗೆಳೆಯನನ್ನು ಬಿಟ್ಟು ಉಳಿದವರೆಲ್ಲ ಹೊಟ್ಟೆ ಹುಣ್ಣಾಗುವಂತೆ ನಕ್ಕರು.

  • ಆರೋಗ್ಯ

    ಮನೆಯಲ್ಲಿರುವ ಇದನ್ನು ದಿನಕ್ಕೊಂದು ತಿಂದರೆ ಏನೆಲ್ಲಾ ಆಗುತ್ತೆ ಗೊತ್ತಾ!!!

    ಹಸಿ ತರಕಾರಿಗಳ ಸೇವನೆಯಿಂದ ನಿಮ್ಮ ದೇಹಕ್ಕೆ ಬೇಕಾದ ಆರೋಗ್ಯ ಶಕ್ತಿ ದೊರೆಯುತ್ತದೆ ಎಂಬುದು ವೈದ್ಯಲೋಕ ತಿಳಿಸಿರುವ ಮಾಹಿತಿಯಾಗಿದೆ. ತರಕಾರಿಗಳನ್ನು ಬೇಯಿಸಿದಾಗ ಅದಲ್ಲಿರುವ ಪೋಷಕಾಂಶಗಳು ನಷ್ಟವಾಗುತ್ತವೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದ್ದು ಆದಷ್ಟು ತರಕಾರಿಗಳನ್ನು ಹಸಿಹಸಿಯಾಗಿಯೇ ನಿಮ್ಮ ನಿತ್ಯದ ಆಹಾರ ಕ್ರಮದಲ್ಲಿ ಬಳಸುವುದರಿಂದ ಲಾಭ ನಿಮಗೇ ಉಂಟಾಗಲಿದೆ.

  • ಸುದ್ದಿ

    ಪೊಲೀಸ್ ಠಾಣೆಯಲ್ಲಿ ಆರೋಪಿಯ ಬರ್ತ್‌ಡೇ ಸೆಲೆಬ್ರೇಷನ್….!

    ಇಲ್ಲಿನ ವಿದ್ಯಾರಣ್ಯ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನ ಬರ್ತ್‌ಡೇ ಪಾರ್ಟಿ ಆಚರಿಸಿದ್ದಾರೆ. ತಾನು ಪೊಲೀಸ್ ಎಂದು ಯಾಮಾರಿಸುತ್ತಿದ್ದ ಆರೋಪಿಯನ್ನು ಬಂಧಿಸಿ, ಠಾಣೆಗೆ ಕರೆದೊಯ್ದ ವಿದ್ಯಾರಣ್ಯಪುರ ಪೊಲೀಸರು, ಠಾಣೆಯಲ್ಲಿ ಕೇಕ್ ಕತ್ತರಿಸಿ, ಆತನ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದಾರೆ. ಅಭಿಷೇಕ್ (25) ಬಂಧಿತ ಆರೋಪಿಯಾಗಿದ್ದು, ಪದವಿಧರನಾಗಿದ್ದಾನೆ. ಈತ ತಾನು ವಿದ್ಯಾರಣ್ಯಪುರ ಕ್ರೈಂ ಪಿಸಿ ಎಂದು ಹೇಳಿಕೊಂಡಿದ್ದ. ಎನಕೌಂಟರ್‌ಗೆ ಹುಬ್ಬಳ್ಳಿ ಮತ್ತು ಗೋವಾಗೆ ಹೋಗ್ಬೇಕು ಗಾಡಿಲಿ ಎಸಿ ಇಲ್ಲ ಎಂದು ಐಡಿ ಕಾರ್ಡ್ ತೋರಿಸಿ ನಂಬಿಸಿದ್ದ. ಈತನ ಮಾತು…