ಸುದ್ದಿ

ಮಂಗಳಮುಖಿಯರಿಗೆ ಮನೆ ಕಟ್ಟಿಕೊಳ್ಳಲು ಅಕ್ಷಯ್ ಕುಮಾರ್ ಕೊಟ್ಟಿದ್ದು ಎಷ್ಟು ಕೋಟಿ ಗೊತ್ತಾ.

71

ಮಂಗಳಮುಖಿಯರಿಗೆ ಸೂಕ್ತ ನೆಲೆ ಕಲ್ಪಿಸಲು, ವಿಶೇಷ ಸ್ಥಾನಮಾನ ನೀಡಲು ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ. ಕೆಲವೊಂದು ರಾಜ್ಯಗಳಲ್ಲಿ ಈಗಾಗಲೇ ಮಂಗಳಮುಖಿಯರಿಗೆ ಹೊಟೇಲ್, ಆಸ್ಪತ್ರೆ ಹಾಗೂ ಇನ್ನಿತರ ಕಡೆಗಳಲ್ಲಿ ಕೆಲಸ ನೀಡಲಾಗಿದ್ದು, ತಮಗೆ ದೊರೆತ ಕೆಲಸವನ್ನು ಮಂಗಳಮುಖಿಯರು ಕೂಡಾ ನಿಷ್ಠೆಯಿಂದ ಮಾಡುತ್ತಿದ್ದಾರೆ.

ಇನ್ನು ಎಷ್ಟೋ ಕಡೆಗಳಲ್ಲಿ ಮಂಗಳಮುಖಿಯರು ಎಂಬ ಕಾರಣಕ್ಕೆ ಕೆಲಸ ನೀಡಲು ಹಿಂಜರಿಯುತ್ತಿದ್ದಾರೆ. ಸರ್ಕಾರದಿಂದ ನೆರವು ದೊರೆಯದೆ ಮಂಗಳಮುಖಿಯರು ಕೂಡಾ ಬೇಸರಗೊಂಡಿದ್ದಾರೆ. ಇದೀಗ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇಂತವರ ಸಹಾಯಕ್ಕೆ ಮುಂದಾಗಿದ್ದಾರೆ. ಮಂಗಳಮುಖಿಯರಿಗೆ ನೆಲೆ ಕಲ್ಪಿಸುವ ಉದ್ದೇಶದಿಂದ 1.5 ಕೋಟಿ ರೂಪಾಯಿ ಹಣ ನೀಡಿದ್ದಾರೆ. ತಮಿಳಿನ ‘ಕಾಂಚನ ‘ ರೀಮೇಕ್ ಆದ ‘ಲಕ್ಷ್ಮಿ ಬಾಂಬ್’ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮಂಗಳಮುಖಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ರಾಘವ ಲಾರೆನ್ಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅಕ್ಷಯ್ ಕುಮಾರ್ ತೆರೆ ಮೇಲೆ ಮಾತ್ರ ಹೀರೋ ಅಲ್ಲದೆ, ಸಮಾಜಮುಖಿ ಕಾರ್ಯ ಮಾಡುವ ಮೂಲಕ ತೆರೆ ಹಿಂದೆ ಕೂಡಾ ಹೀರೋ ಎನಿಸಿಕೊಂಡಿದ್ದಾರೆ. ಇದೀಗ ಮಂಗಳಮುಖಿಯರಿಗೆ ನೆಲೆ ಕಲ್ಪಿಸುವ ಉದ್ದೇಶದಿಂದ ಹಣ ಸಹಾಯ ಮಾಡಿದ್ದಾರೆ. ಈ ವಿಷಯವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿರುವ ರಾಘವ ಲಾರೆನ್ಸ್, ‘ನಮ್ಮ ಸಂಸ್ಥೆ 15 ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆ ಮಂಗಳಮುಖಿಯರಿಗೆ ಮನೆ ಕಟ್ಟಿಸಿಕೊಡುವ ಯೋಜನೆ ಹಾಕಿಕೊಂಡಿದ್ದೇವೆ.

ಇದಕ್ಕೆ ಅಕ್ಷಯ್ ಕುಮಾರ್ ಕೂಡಾ 1.5 ಕೋಟಿ ರೂಪಾಯಿ ಹಣ ಸಹಾಯ ಮಾಡಿದ್ದಾರೆ. ಮನೆ ನಿರ್ಮಾಣದ ಭೂಮಿ ಪೂಜೆ ದಿನಾಂಕವನ್ನು ನಿಮಗೆ ಆದಷ್ಟು ಬೇಗ ತಿಳಿಸುತ್ತೇವೆ’ ಎಂದು ರಾಘವ ಲಾರೆನ್ಸ್ ಹೇಳಿದ್ದಾರೆ. ರಾಘವ ಲಾರೆನ್ಸ್ ಕೂಡಾ ತಮ್ಮ ಚಾರಿಟೆಬಲ್ ಟ್ರಸ್ಟ್ ಮೂಲಕ ಅನೇಕ ವರ್ಷಗಳಿಂದ ಬಡವರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಇವರ ಕಾರ್ಯಕ್ಕೆ ಅಕ್ಷಯ್ ಕುಮಾರ್ ಕೂಡಾ ಕೈ ಜೋಡಿಸಿರುವುದು ಜನರ ಮೆಚ್ಚುಗೆ ಗಳಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಕಿರುತೆರೆಯ ನಂಬರ್ 1 ಧಾರಾವಾಹಿ ಜೊತೆ ಜೊತೆಯಲಿ ಯಾವ ಸೀರಿಯಲ್ ರಿಮೇಕ್ ಗೊತ್ತಾ.?ತಿಳಿದರೆ ಅಚ್ಚರಿ ಪಡೋದಂತು ಗ್ಯಾರಂಟಿ..!

    ಜೀ ಕನ್ನಡದಲ್ಲಿ ಮೂಡಿ ಬರುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿ ಟಿಆರ್ ಪಿಯಲ್ಲಿ ನಂ 1  ಸ್ಥಾನದಲ್ಲಿದೆ. ಇದೇಮೊದಲ ಬಾರಿಗೆ ಸ್ಯಾಂಡಲ್ ವುಡ್ ನಿಂದ ಕಿರುತೆರೆಗೆ ಬಂದಿರುವ ಅನಿರುದ್ಧ್ ಗೆ ಈ ಧಾರಾವಾಹಿ ಹೊಸ ಇನ್ನಿಂಗ್ಸ್ ನೀಡಿದೆ. ಅವರಿಗೆ ಹೆಸರನ್ನು ತಂದು ಕೊಟ್ಟಿದೆ. ನವಿರಾದ ಪ್ರೇಮ ಕಥೆ, ಮಧ್ಯಮ ವರ್ಗ ಕುಟುಂಬದಲ್ಲಿ ನಡೆಯುವಸಾಂಸಾರಿಕ ತಾಪತ್ರಯಗಳು, ಹೊಸ ರೀತಿಯ ನಿರೂಪಣೆ, ಕತೆ ಇವೆಲ್ಲವೂ. ಹೊಸ ಕಥೆಯೊಂದಿಗೆ ಜನರ ಮನಸ್ಸು ಗೆದ್ದಿರುವ ಜೊತೆ ಜೊತೆಯಲಿ ಧಾರಾವಾಹಿ ನಿಜವಾಗಿ ಸ್ವಮೇಕ್ ಕಥೆ ಅಲ್ಲ…

  • ಆರೋಗ್ಯ, ಉಪಯುಕ್ತ ಮಾಹಿತಿ

    ದಿನಾ ಬೆಳಿಗ್ಗೆ ಪರಂಗಿ ಹಣ್ಣು ತಿನ್ನುವುದರಿಂದ ಏನೆಲ್ಲಾ ಪ್ರಯೋಜಗಳಿವೆ ನೋಡಿ…

    ಬಾಯಿಗೆ ರುಚಿ ನೀಡುವ ಹಣ್ಣು ಪಪ್ಪಾಯ. ಇದ್ರ ಸೇವನೆ ಆರೋಗ್ಯಕ್ಕೂ ಒಳ್ಳೆಯದು. ಕೆಲವರು ಪ್ರತಿದಿನ ಬೆಳಿಗ್ಗೆ ಉಪಹಾರದ ಜೊತೆ ಒಂದು ಬೌಲ್ ಪಪ್ಪಾಯ ಸೇವನೆ ಮಾಡ್ತಾರೆ. ಪ್ರತಿದಿನ ಬೆಳಿಗ್ಗೆ ಪಪ್ಪಾಯ ತಿನ್ನುವವರು ಪಪ್ಪಾಯ ತಿನ್ನದಿರುವವರಿಗಿಂತ ಆರೋಗ್ಯವಾಗಿರುತ್ತಾರೆ. ಖಾಯಿಲೆಗೆ ತುತ್ತಾಗುವುದು ಕಡಿಮೆ. ಹಾಗೆ ಕಚೇರಿಯಲ್ಲಿ ಉತ್ತಮ ಕೆಲಸ ಮಾಡಲು ಉತ್ಸಾಹಿತರಾಗಿರುತ್ತಾರೆ. ಪಪ್ಪಾಯಿಯಲ್ಲಿ ವಿಟಮಿನ್ ಹಾಗೂ ಖನಿಜಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ದೇಹಕ್ಕೆ ಕಡಿಮೆಯಾಗಿರುವ ನೀರಿನ ಅಂಶವನ್ನು ಇದು ನೀಡುವುದಲ್ಲದೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ಪಪ್ಪಾಯಿಯಲ್ಲಿ ಕೊಬ್ಬಿನಂಶವಿರುವುದಿಲ್ಲ. ಇದು ಶಕ್ತಿಯ ಒಂದು…

  • ಜ್ಯೋತಿಷ್ಯ

    ಗುರು ರಾಯರನ್ನು ನೆನೆಯುತ್ತಾ ಗುರುವಾರದ ನಿಮ್ಮ ಭವಿಷ್ಯ ಹೇಗಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 24 ಜನವರಿ, 2019 ಜಂಟಿ ಯೋಜನೆಗಳು ಮತ್ತು ಸಂಶಯಾಸ್ಪದ ಹಣಕಾಸು ಯೋಜನೆಗಳಲ್ಲಿ ಹೂಡಿಕೆ ಮಾಡಬೇಡಿ. ನೀವು…

  • ವಿಜ್ಞಾನ

    ಆತಂಕ ಉಂಟು ಮಾಡಿದ ಚಂದ್ರಯಾನದ ಕೊನೆ 15 ನಿಮಿಷ,..!

    ಬೆಂಗಳೂರು, ಮಹತ್ವಾಕಾಂಕ್ಷಿ ಚಂದ್ರಯಾನ-2 ನೌಕೆಯ ಸಂಪರ್ಕ ಕೊನೆ ಕ್ಷಣದಲ್ಲಿ ಕಡಿತಗೊಂಡಿದೆ. ಇದರಿಂದಾಗಿ ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನ ಒಡಲಲ್ಲಿ ಅಡಗಿರುವ ಅನೂಹ್ಯ ರಹಸ್ಯಗಳನ್ನು ಭೇದಿಸುವ ಗುರಿ ಹೊಂದಿದ್ದ ಇಸ್ರೋಗೆ ಕೊಂಚ ಹಿನ್ನಡೆಯಾಗಿದೆ. ಚಂದ್ರನ ಅಂಗಳದ ಮೇಲೆ ಲ್ಯಾಂಡರ್ ಅನ್ನು ಇಳಿಸುವ ಕೊನೆಯ 15ನಿಮಿಷ ಭಾರೀ ಕಷ್ಟದ ಕ್ಷಣಗಳು ಎಂದು ಇಸ್ರೋ ಈ ಮೊದಲೇ ಹೇಳಿತ್ತು. ಹೀಗಾಗಿ ಮೊದಲ ಕೆಲವು ಕ್ಷಣಗಳು ಸುಸೂತ್ರವಾಗಿ ನೆರವೇರಿದರೂ ಇನ್ನೇನು ಚಂದ್ರನ ಅಂಗಳ 2.1 ಕಿ.ಮೀ ದೂರ ಇರುವಂತೆ ಲ್ಯಾಂಡರ್ ನೌಕೆ ಸಂಪರ್ಕ…

  • ಸುದ್ದಿ

    ಇರುವೆ ಬಗೆಗಿನ ಈ 15 ವಿಷಯಗಳು ನಮ್ಮನ್ನ ರೋಮಾಂಚನಗೊಳಿಸುತ್ತೆ..!

    ರೈಲಿನಂತೆ ಸಾಲುಗಟ್ಟಿ ಹೋಗುವ ಇರುವೆಗಳನ್ನು ನೋಡುವುದೇ ಮಕ್ಕಳಿಗೆ ಸಂಭ್ರಮ. ಭೂಮಿಯಲ್ಲಿ ಬರಿಗಣ್ಣಿಗೆ ಕಾಣುವ ಅತ್ಯಂತ ಚಿಕ್ಕ ಜೀವಿಯೆಂದರೆ ಇರುವೆ. ಹಾಗೆಂದ ಮಾತ್ರಕ್ಕೆ ಇದನ್ನು ಅಲ್ಪಜೀವಿಯೆಂದು ಭಾವಿಸುವಂತಿಲ್ಲ. ಭೂ- ನೆಲದಲ್ಲಿ ಸರ್ವಾಂತರ್ಯಾಮಿ ಆಗಿರುವ ಇರುವೆಗಳ ಪ್ರಪಂಚಕ್ಕೆ ಇಣುಕಿದರೆ ಅಚ್ಚರಿಗಳು ಎದುರಾಗುತ್ತವೆ. ಇವುಗಳ ಶಿಸ್ತುಬದ್ಧ ಸಹಜೀವನ ಮನುಕುಲವನ್ನೇ ನಾಚಿಸುವಂತಿದೆ. ಗೊದ್ದ, ಚೊಂಜಿಗ, ಕಟ್ರ ಎಂದೆಲ್ಲ ಕರೆಯಲ್ಪಟ್ಟಿರುವ ಇರುವೆಗಳು ವಿವಿಧ ಗಾತ್ರ, ಬಣ್ಣಗಳಲ್ಲಿವೆ.

  • ಕಾನೂನು

    ನಿಮ್ಮ ಜಮೀನು ವ್ಯವಹಾರಕ್ಕೆ ಇದು ಕಡ್ಡಾಯವಲ್ಲ..?ಇದು ಕೇವಲ ವದಂತಿ ಎಂದ ಕೇಂದ್ರ ಸರ್ಕಾರ..!

    ಆಸ್ತಿ ವಹಿವಾಟಿಗೆ ಆಧಾರ್‌ ಜೋಡಣೆ ಕಡ್ಡಾಯಗೊಳಿಸುವ ಯಾವುದೇ ಪ್ರಸ್ತಾವವೂ ಸದ್ಯಕ್ಕೆ ತನ್ನ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.