ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಲ್ವತ್ತು ದಿನಗಳ ಹಸುಗೂಸನ್ನು ಹೃದಯದ ಶಸ್ತ್ರಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್ ನಲ್ಲಿ ಅಂಬುಲೆನ್ಸ್ ನಲ್ಲಿ ರವಾನಿಸಲಾಗಿದೆ. ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದ ಮಗುವಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಆಗಬೇಕಿತ್ತು. ಅದಕ್ಕಾಗಿ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಮಗುವನ್ನು ರವಾನಿಸಲಾಗಿದೆ. ಚಾಲಕ ಹನೀಫ್ ಅವರು ಮಂಗಳೂರಿನಿಂದ ಆಂಬುಲೆನ್ಸ್ ಮೂಲಕ ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಮಗುವನ್ನು ಕೇವಲ ಆರು ಗಂಟೆಯಲ್ಲಿ ಬೆಂಗಳೂರು ತಲುಪಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಉಜಿರೆ ಮೂಲದ ಸೈಫುಲ್ ಅಜ್ಮಾನ್ ಎನ್ನುವ ಈ ಮಗುವಿಗೆ ಅಂಬುಲೆನ್ಸ್ ನಲ್ಲಿ ಹೃದಯ ಪಂಪಿಂಗ್ ವ್ಯವಸ್ಥೆ ಮಾಡಿಕೊಂಡು ಕರೆದೊಯ್ಯಲಾಯ್ತು. ಮಂಗಳೂರಿನಿಂದ, ಬಿ.ಸಿ.ರೋಡ್, ಕಲ್ಲಡ್ಕ, ಮಾಣಿ, ಉಪ್ಪಿನಂಗಡಿ, ನೆಲ್ಯಾಡಿ, ಶಿರಾಡಿ, ಸಕಲೇಶಪುರ, ಹಾಸನ, ನೆಲಮಂಗಲ ಮೂಲಕ ಮಂಗಳೂರು- ಬೆಂಗಳೂರು ಹೆದ್ದಾರಿಯಲ್ಲಿ ಆಂಬುಲೆನ್ಸ್ ಬಂದಿದ್ದು ಹೆದ್ದಾರಿ ಉದ್ದಕ್ಕೂ ಜನರು ಟ್ರಾಫಿಕ್ ಸಂಚಾರ ಸುಗಮಗೊಳಿಸಿದ್ದಾರೆ. ಅಲ್ಲದೆ, ಆಯಾ ಭಾಗದ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ಎಸ್ಕಾರ್ಟ್ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಂಬುಲೆನ್ಸ್ ಚಾಲಕ ಹನೀಫ್, ಮಗುವಿಗೆ ಪುನರ್ ಜನ್ಮ ಸಿಗಬೇಕು ಎನ್ನುವ ಆಸೆ ನನಗೆ ಇತ್ತು. ಮಂಗಳೂರಿನಿಂದ ಬೆಂಗಳೂರನ್ನು 5 ಗಂಟೆಯಲ್ಲಿ ತಲುಪಬಹುದು ಎಂಬ ಆಲೋಚೆ ಹೊಂದಿದ್ದೆ. ಅದರಂತೆ 4 ಗಂಟೆ 32 ನಿಮಿಷದಲ್ಲಿ ಬೆಂಗಳೂರನ್ನು ತಲುಪಿದೆ. ಆದರೆ ಯಶವಂತಪುರದಿಂದ ನನಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಸಿಗಲಿಲ್ಲ. ಹೀಗಾಗಿ ಆಸ್ಪತ್ರೆಗೆ ತಲುಪಲು 15 ನಿಮಿಷ ಹೆಚ್ಚು ಸಮಯ ತೆಗೆದುಕೊಂಡೆ ಎಂದು ಹೇಳಿದ್ದಾರೆ.
ಇದೇ ವೇಳೆ ಸಾರ್ವಜನಿಕರು ಚಾಲಕ ಹನೀಫ್ ಅವರಿಗೆ ಮೈಸೂರು ಪೇಟಾ ಹಾಕಿ ಸನ್ಮಾನಿಸಿದರು. ಹನೀಫ್ ಅವರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಗವಾನ್ ಶಿವ, ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಲ್ಲಿ ಒಬರಾಗಿದ್ದು, ತ್ರಿಮೂರ್ತಿಗಳಲ್ಲಿ ಭಗವಾನ್ ಶಿವನನ್ನು ಲಯಕರ್ತ(ವಿನಾಶಕ) ದೇವರಾಗಿ ಪರಿಗಣಿಸಲಾಗಿದೆ. ಹಿಂದೂ ಧರ್ಮದ ಪ್ರಕಾರ ಭಗವಾನ್ ಶಿವ ದೇವರನ್ನು ದೇವರ ದೇವ ಮಹಾದೇವ ಎಂದು ಹೇಳಲಾಗಿದೆ. ಮಹಾದೇವನು ಅನಂತವಾಗಿದ್ದು, ಅವರಿಗೆ ಹುಟ್ಟು ಇಲ್ಲ, ಸಾವೂ ಇಲ್ಲ ಎಂದು ಹೇಳಲಾಗಿದೆ. ನೈಜ ಪ್ರಪಂಚದಲ್ಲಿ ಮತ್ತು ಶೂನ್ಯ ಪ್ರಪಂಚದಲ್ಲಿ ಭಗವಾನ್ ಶಿವ ದೇವರು ಇದ್ದಾರೆ ಎಂದು ಹೇಳಲಾಗಿದೆ.
ವಿದ್ಯುತ್ ಕಳ್ಳತನ ತಡೆಗೆ ಪ್ರೀಪೇಯ್ಡ್ ಅಥವಾ ಸ್ಮಾರ್ಟ್ ಮೀಟರ್ ಅಳವಡಿಸುವುದು ಕಡ್ಡಾಯಗೊಳಿಸುವುದರೊಂದಿಗೆ, ಈ ವರ್ಷದ ಅಂತ್ಯದೊಳಗೆ ತಡೆ ರಹಿತ ವಿದ್ಯುತ್ ನೀಡಲು ಸರಕಾರ ಚಿಂತಿಸಿದೆ.
ಹಾವು ಎಂದರೆ ಎಂಥವರಿಗೂ ಭಯ ಆಗುತ್ತೆ. ಅಂತಹದರಲ್ಲಿ ಹಾವಿನೊಂದಿಗೆ ಆಟವಾಡುತ್ತಾ ಅದರೊಂದಿಗೆ ಸ್ನೇಹ ಬೆಳಸಿಕೊಂಡು ಅವುಗಳೊಂದಿಗೆ ಬೆರೆಯುತ್ತಾಳೆ ಈ ಪುಟ್ಟ ಬಾಲಕಿ.
ಏರೋ ಇಂಡಿಯಾ 2019ರ ಏರ್ ಶೋ ನೋಡಲು ರಾಜಧಾನಿ ಬೆಂಗಳೂರಿನ ಯಲಹಂಕಕ್ಕೆ ಆಗಮಿಸಿದ್ದರು, ಎಲ್ಲರೂ ತಮ್ಮ ಕಾರುಗಳನ್ನು ಪಾರ್ಕ್ ಮಾಡಿ ವೈಮಾನಿಕ ಪ್ರದರ್ಶನವನ್ನು ನೋಡುವಲ್ಲಿ ಮುಳುಗಿ ಹೋಗಿದ್ದರು, ಆದರೆ ನೋಡು ನೋಡುತ್ತಿದ್ದಂತೆಯೇ ಕಣ್ಣ ಮುಂದೆಯೇ ಕಷ್ಟ ಪಟ್ಟು ತೆಗೆದುಕೊಂಡಿದ್ದ ಕಾರುಗಳು ಭಸ್ಮವಾದವು. ಏರ್ ಶೋ ನಡೆಯುತ್ತಿದ್ದ ಸಂದರ್ಭದಲ್ಲೇ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಗೇಟ್ ನಂಬರ್ 5 ರ ಪಾರ್ಕಿಂಗ್ ಸ್ಥಳದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು 150ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲಾಗಿದೆ. ಸ್ಥಳಕ್ಕೆ 10…
ಚುನಾಯಿತರಾದ ಶಾಸಕರು ತಮ್ಮ ತಮ್ಮ ಕ್ಷೇತ್ರಕ್ಕೆ ಎಷ್ಟರ ಮಟ್ಟಿಗೆ ಭೇಟಿ ನೀಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ.. ಆದರೆ ಇಲ್ಲೊಬ್ಬರು ಶಾಸಕರಿದ್ದಾರೆ.. ತಮ್ಮ ಕ್ಷೇತ್ರದ ಜನರ ಜೊತೆ ಸಾಮಾನ್ಯ ಜನರಂತೆ ಬೆರೆತು ಕ್ಷೇತ್ರದ ಹಾಗು ಹೋಗುಗಳ ಬಗ್ಗೆ ಸ್ವತಃ ತಾವೇ ಖುದ್ದಾಗಿ ವಿಚಾರಿಸುತ್ತಿರುತ್ತಾರೆ.. ಹೌದು ಇವರು ಮತ್ಯಾರು ಅಲ್ಲ ಅಭಿವೃದ್ಧಿ ಹೊಂದಿದ ಕ್ಷೇತ್ರಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ಮಲ್ಲೇಶ್ವರಂ ಶಾಸಕರಾದ ಡಾ.ಅಶ್ವತ್ಥ್ ನಾರಾಯಣ್ ರವರು.. ಈಗಾಗಲೇ ಪ್ರತಿಭೆಗಳಿಗಾಗಿ ತಮ್ಮ ಕ್ಷೇತ್ರದಲ್ಲಿ ಮಾಡಿಕೊಟ್ಟಿರುವ ಅನುಕೂಲಗಳು ಲೆಕ್ಕವಿಲ್ಲ.. ಶಾಸಕರ ಅನುದಾನ…
ಇಂದು ಸೋಮವಾರ, 05/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಶ್ರಮಕ್ಕೆ ತಕ್ಕ ಪ್ರತಿಫಲ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.ಕಾರ್ಯದಲ್ಲಿ ಯಶಸ್ಸು. ಸಂಚಾರದಲ್ಲಿ ಜಾಗ್ರತೆವಹಿಸಿ.ಕಾರ್ಯಗಳಲ್ಲಿ ಶುಭ. ಆರ್ಥಿಕ ವ್ಯವಹಾರದಲ್ಲಿ ಸಫಲತೆ. ವ್ಯಾಪಾರ ಹೂಡಿಕೆಗಳಿಂದ ಲಾಭ. ವೃಷಭ:- ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾದ ಸೌಕರ್ಯ ಸಿಗಲಿದೆ. ವಿದ್ಯಾರ್ಥಿಗಳು ಉತ್ತಮ ದಿನವಾಗಿದೆ. ಸಾಂಸಾರಿಕವಾಗಿ ತಾಳ್ಮೆ-ಸಮಾಧಾನಗಳಿಂದ ನೆಮ್ಮದಿ. ಬಂಧುಗಳ ಆಗಮನ ಸಾಧ್ಯತೆ. ಆರ್ಥಿಕವಾಗಿ ಲಾಭ ಯಾರಲಿದೆ. ಕುಟುಂಬದಲ್ಲಿ ಸಂತಸ. ನೀವು ಪ್ರಯಾಣ ಮಾಡುವಾಗ ಹಣ ಖರ್ಚು ಮಾಡುವ ಬಗ್ಗೆ ಗಮನ ಇರಲಿ. ಮಿಥುನ:– ಹಣದ…