ಸುದ್ದಿ, ಸ್ಪೂರ್ತಿ

ಮೂರು ಬಾರಿ ನಾಸಾ ಆಫರ್ ತಿರಸ್ಕರಿಸಿದ 19ರ ಯುವಕ ಟ್ರಂಪ್ ಆಹ್ವಾನಿಸಿದರೂ ಅಮೆರಿಕಕ್ಕೆ ತೆರಳಲಿಲ್ಲ, ಭಾರತದಲ್ಲೇ ರಿಸರ್ಚ್ ಮಾಡ್ತೇನೆ ಎಂದ ಗೋಪಾಲ್.

74

ಬಿಹಾರದ ಬಾಗಲ್‍ಪುರದ ಧ್ರುವಗಂಜ್ ಗ್ರಾಮದ 19 ವರ್ಷದ ಯುವಕ ಮೂರು ಬಾರಿ ನಾಸಾ ಆಫರ್ ತಿರಸ್ಕರಿಸಿದ್ದಾರೆ. ಅಲ್ಲದೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಆಹ್ವಾನಿಸಿದರೂ ಭಾರತದಲ್ಲೇ ರಿಸರ್ಚ್ ಮಾಡುತ್ತೇನೆ ಎಂದು ಹೇಳುವ ಮೂಲಕ ಯುವಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾರೆ.

19 ವರ್ಷದ ಯುವಕ ಗೋಪಾಲ್ ಪ್ರತಿ ವರ್ಷ ದೇಶದ 100 ಮಕ್ಕಳಿಗೆ ಸಹಾಯ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. 2019ರಲ್ಲಿ ಗೋಪಾಲ್ ಈ ಕೆಲಸ ಶುರು ಮಾಡಿದ್ದು, ಈಗ 8 ಮಕ್ಕಳ ಆವಿಷ್ಕಾರಕ್ಕಾಗಿ ತಾತ್ಕಾಲಿಕ ಪೇಟೆಂಟ್ ಕೂಡ ಪಡೆದಿದ್ದಾರೆ. ಸದ್ಯ ಗೋಪಾಲ್ ಈ ಡೆಹ್ರಾಡೂನ್ ಸರ್ಕಾರಿ ಗ್ರಾಫಿಕ್ ಏರಾ ಇನ್‍ಸ್ಟಿಟ್ಯೂಟ್‍ನ ಲ್ಯಾಬ್‍ನಲ್ಲಿ ಟೆಸ್ಟಿಂಗ್ ಮಾಡುತ್ತಿದ್ದಾರೆ. ಅಲ್ಲದೆ ಜಾರ್ಖಂಡ್‍ನಲ್ಲಿ ಲ್ಯಾಬ್ ತೆರೆದು ಅಲ್ಲಿ ರಿಸರ್ಚ್ ಮಾಡಲಿದ್ದಾರೆ.

ಗೋಪಾಲ್ ತುಳಸಿಪುರದ ಮಾಡೆಲ್ ಹೈಸ್ಕೂಲ್‍ನಲ್ಲಿ 12ನೇ ತರಗತಿವರೆಗೂ ವಿದ್ಯಾಭ್ಯಾಸ ಮಾಡಿದ್ದಾರೆ. 2013-14ರಲ್ಲಿ ಬಯೋಸೆಲ್ ಆವಿಷ್ಕಾರಕ್ಕಾಗಿ ಗೋಪಾಲ್ ಅವರು ಇನ್‍ಸ್ಪೈಯರ್ಡ್ ಅವಾರ್ಡ್ ಕೂಡ ಪಡೆದಿದ್ದಾರೆ. ಪ್ರಶಸ್ತಿ ಪಡೆಯುವಾಗ ಅವರು ಹತ್ತನೇ ತರಗತಿಯಲ್ಲಿ ಓದುತ್ತಿದ್ದರು. 2008ರಲ್ಲಿ ಗೋಪಾಲ್ ಅವರ ಗ್ರಾಮದಲ್ಲಿ ಪ್ರವಾಹ ಬಂದಿದ್ದು, ಈ ವೇಳೆ ಸಾಕಷ್ಟು ಹಾನಿಯಾಗಿತ್ತು.

ಪ್ರವಾಹ ಬಂದ ಸಂದರ್ಭದಲ್ಲಿ ಗೋಪಾಲ್ ಅವರ ತಂದೆ ಪ್ರೇಮ್‍ರಂಜನ್ ಕುಮಾರ್ ಅವರು ತಮ್ಮ ಮಗನಿಗೆ 10ನೇ ತರಗತಿ ನಂತರ ಮುಂದೆ ಓದಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ ಗೋಪಾಲ್ ತಮ್ಮ ಛಲವನ್ನು ಬಿಟ್ಟು ಕೊಡಲಿಲ್ಲ. ಸ್ಕಾಲರ್‍ಶಿಪ್ ಪಡೆಯಲು ಏನಾದರೂ ಮಾಡಬೇಕು ಎಂದು ಗೋಪಾಲ್ ಯೋಚಿಸುತ್ತಿದ್ದರು.

2017, ಅಗಸ್ಟ್ 31ರಂದು ಗೋಪಾಲ್ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದರು. ಆಗ ಮೋದಿ ಅವರು ಗೋಪಾಲ್‍ರನ್ನು ಅಹಮದಾಬಾದ್‍ನ ಎನ್‍ಐಎಫ್‍ಗೆ ಕಳುಹಿಸಿಕೊಟ್ಟರು. ಈ ವೇಳೆ ಗೋಪಾಲ್ 6 ಆವಿಷ್ಕಾರವನ್ನು ಮಾಡಿದ್ದರು. ಈಗ ಗೋಪಾಲ್ ಅವರ ಹೆಸರು ವಿಶ್ವದ 30 ಸ್ಟಾರ್ಟಪ್ ವಿಜ್ಞಾನಿಗಳ ಪಟ್ಟಿಯಲ್ಲಿದೆ. ಏಪ್ರಿಲ್‍ನಲ್ಲಿ ಅಬುಧಾಬಿಯಲ್ಲಿ ನಡೆಯುವ ವಿಶ್ವದ ಅತಿ ದೊಡ್ಡ ಸೈನ್ಸ್ ಫೇರ್ ನಡೆಯಲಿದೆ. ಇದರಲ್ಲಿ 6 ಸಾವಿರ ವಿಜ್ಞಾನಿಗಳು ಭಾಗವಹಿಸುತ್ತಿದ್ದು, ಗೋಪಾಲ್ ಚೀಫ್ ಸ್ಪೀಕರ್ ಆಗಿ ಭಾಗವಹಿಸಲಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಗ್ರಾಹಕರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ನೀಡಿದ ಜಿಯೋ..!

    ಚಾಲನೆಗೆ ಬಂದ ಕೆಲವೇ ತಿಂಗಳುಗಳಲ್ಲಿ ಆಕರ್ಷಕ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆದ ಜಿಯೋ ಇದೀಗ ತನ್ನ ಹೊರೆಯನ್ನ ತಗ್ಗಿಸಲು ಗ್ರಾಹಕರಿಗೆ ಶಾಕ್‌ ಕೊಡಲು ರೆಡಿಯಾಗಿದೆ. ಈಗಾಗಲೇ ದೇಶದ ಬಹುದೊಡ್ಡ ಟೆಲಿಕಾಂ ಸಂಸ್ಥೆಗಳಾದ ಏರ್‌ಟೆಲ್, ವೋಡಾಪೋನ್,ಐಡಿಯಾ ಬಾಕಿ ಮೊತ್ತವನ್ನು ಹಿಂದಿರುಗಿಸಲು ಗ್ರಾಹಕರಿಗೆ ಬರೆ ಎಳೆಯಲು ಮುಂದಾಗಿವೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಹೊಂದಾಣಿಕೆಯ ಒಟ್ಟು ಆದಾಯ ಕುರಿತಾಗಿ ಏರ್‌ಟೆಲ್ ವೊಡಾಫೋನ್-ಐಡಿಯಾ ಸಂಸ್ಥೆಗಳು ಒಟ್ಟಾರೆ 92,000 ಕೋಟಿ ರುಪಾಯಿಯಷ್ಟು ಬಾಕಿ ಮೊತ್ತ ಹಾಗೂ ಬಡ್ಡಿ ಹಣವನ್ನು ಪಾವತಿಸಬೇಕಿದೆ. ಇದೇ ಹಾದಿಯಲ್ಲಿ ಸಾಗುವ…

  • ಜ್ಯೋತಿಷ್ಯ

    2019ರ ಈ ವರ್ಷದಲ್ಲಿ ಈ ರಾಶಿಗಳಿಗೆ ರಾಜಯೋಗ ಬರಲಿದೆ..!ನಿಮ್ಮ ರಾಶಿ ಯಾವುದು ನೋಡಿ…

    ಹೊಸ ವರ್ಷ ಹೊಸದಾಗಿರಲಿ ಎಂಬುದು ಪ್ರತಿಯೊಬ್ಬರ ಆಸೆ. ಜ್ಯೋತಿಷ್ಯ ಶಾಸ್ತ್ರ ಕೂಡ ಈ ವರ್ಷ ಯಾವ ರಾಶಿಯವರಿಗೆ ರಾಜಯೋಗ ಎಂಬುದನ್ನು ಹೇಳಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2019 ಕುಂಭ ರಾಶಿಯವರಿಗೆ ಶುಭ ಫಲಗಳನ್ನು ನೀಡಲಿದೆಯಂತೆ. ಕುಂಭ ರಾಶಿಯವರ ಪ್ರತಿಯೊಂದು ಸಮಸ್ಯೆ ದೂರವಾಗಿ ಯಶಸ್ಸು ಅರಸಿ ಬರಲಿದೆಯಂತೆ. ಸಂತೋಷ ಎಲ್ಲೆಲ್ಲೂ ಮನೆ ಮಾಡಿರಲಿದೆಯಂತೆ. 2019 ಕುಂಭ ರಾಶಿಯವರಿಗೆ ಸರಳ ಹಾಗೂ ಸುಲಭವಾಗಿರಲಿದೆಯಂತೆ. ಮಂಗಳಕರ ಘಟನೆಗಳು ನಡೆಯಲಿದ್ದು, ಉದ್ಯೋಗ, ಬಡ್ತಿ ಪ್ರಾಪ್ತಿಯಾಗಲಿದೆಯಂತೆ. ಕಂಕಣ ಬಲ ಕೂಡಿ ಬರಲಿದೆಯಂತೆ. ಮಾನ, ಸನ್ಮಾನ,…

  • ಜ್ಯೋತಿಷ್ಯ

    ಶ್ರೀ ಅನ್ನಪೂರ್ಣೇಶ್ವರಿ ಆಶೀರ್ವಾದದೊಂದಿಗೆ ಇಂದಿನ ನಿಮ್ಮ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆಯನ್ನು ತಿಳಿಯಿರಿ,.!!

    ಉದ್ಯೋಗ, ವ್ಯಾಪಾರ ಪ್ರೇಮವಿಚಾರ, ಮದುವೆ, ಗ್ರಹದೋಷ, ಸ್ತ್ರೀವಶೀಕರಣ, ಪುರುಷವಶೀಕರಣ, ಸಂತಾನ,ಮಂಗಳದೋಷ, ದಾಂಪತ್ಯಕಲಹ, ವಿದ್ಯಾಭ್ಯಾಸ, ಮನಃಶಾಂತಿ, ಮಕ್ಕಳವಿಚಾರ, ರಾಜಕೀಯಬೆಳವಣಿಗೆ, ಆಸ್ತಿವಿಚಾರ. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಕೆಲವೇದಿನಗಳಲ್ಲಿ ಪರಿಹಾರ ಶತಸಿದ್ಧ.ಸಂಪರ್ಕಿಸಿ:-9353957085 ಮೇಷ(10 ನವೆಂಬರ್, 2019) : ನಿಮ್ಮ ಅತ್ಯಂತ ಪ್ರೀತಿಯ ಕನಸು ನನಸಾಗುತ್ತದೆ. ಆದರೆ ತುಂಬಾ ಸಂತೋಷ ಸ್ವಲ್ಪ ಸಮಸ್ಯೆಗಳನ್ನು ಉಂಟುಮಾಡಬಹುದಾದ್ದರಿಂದ ನಿಮ್ಮ ಉತ್ಸಾಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ಹಣದ ಲಾಭ ನಿಮ್ಮ ನಿರೀಕ್ಷೆಯಂತಿರುವುದಿಲ್ಲ. ಸಣ್ಣ ಮಕ್ಕಳು ನಿಮ್ಮನ್ನು ವ್ಯಸ್ತವಾಗಿರಿಸುತ್ತಾರೆ ಮತ್ತು ನಿಮಗೆ ಸಂತೋಷ ತರುತ್ತಾರೆ. ಇಂದು ನೀವು…

  • govt, modi, ತಂತ್ರಜ್ಞಾನ

    ಹೊಸ ವರ್ಷಕ್ಕೆ ಹೊಸ ಕೊಡುಗೆ: 2018 ಕ್ಕೆ ದೇಶಿ ಜಿಪಿಎಸ್ ಹೊಂದಲಿರುವ ನಮ್ಮ ಭಾರತ!

    ದೇಶಿ ಜಿಪಿಎಸ್ ಗೆ ನಾವಿಕ್ ಎಂದು ನಾಮಕರಣ ಮಾಡಿದ್ದ ಪ್ರಧಾನಿ, ದೇಶದ ಯಾವುದೇ ಭಾಗದಲ್ಲಿ ಪ್ರಯಾಣಿಕರು ದಾರಿ ತಪ್ಪಿದರೆ, ಸರಿಯಾದ ದಾರಿ ತೋರಿಸುವ ದೇಶಿ ಜಿಪಿಎಸ್ (ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಂ ಅಥವಾ ದಿಕ್ಸೂಚಿ ವ್ಯವಸ್ಥೆಯ ತಂತ್ರಜ್ಞಾನ) ನಾವಿಕ್ ಅಂತಿಮ ಹಂತದ ಪರೀಕ್ಷಾರ್ಥ ಪ್ರಯೋಗದಲ್ಲಿದ್ದು, 2018 ವರ್ಷಾರಂಭಕ್ಕೆ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ.

  • ಸುದ್ದಿ

    ಮಳೆರಾಯನ ಅಬ್ಬರಕ್ಕೆ ತುಂಬಿದ ನದಿಗಳು,ವಾಹನ ಸವಾರರು ಭೋರ್ಗರೆದು ಹರಿಯುತ್ತಿರುವ ನೀರಿನ ಮಧ್ಯೆಯೇ ದುಸ್ಸಾಹಸ ಮಾಡುತ್ತಿದ್ದಾರೆ…!

    ಬೆಳಗಾವಿ, ಚಿಕ್ಕೋಡಿ, ರಾಯಚೂರಿನಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು ಕೃಷ್ಣಾ ನದಿ ವ್ಯಾಪ್ತಿಯಲ್ಲಿರುವ ಬರುವ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ರಸ್ತೆಗಳು ಜಲಾವೃತವಾಗಿದ್ದು, ಕಾರು ಬೈಕ್‍ಗಳು ಆಟಿಕೆಯಂತಾಗಿವೆ, ಆದರೂ ಕೂಡ ವಾಹನ ಸವಾರರು ಮಾತ್ರ ಭೋರ್ಗರೆದು ಹರಿಯುತ್ತಿರುವ ನೀರಿನ ಮಧ್ಯೆಯೇ ದುಸ್ಸಾಹಸ ಮಾಡುತ್ತಿದ್ದಾರೆ. ಬೆಳಗಾವಿಯ ದೆಸೂರು-ಖಾನಾಪೂರ ಮಧ್ಯೆ ಇರುವ ಕೊಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನೀರು ತುಂಬಿ ಹರಿಯುತ್ತಿದ್ದರೂ ಕೂಡ ವಾಹನ ಸವಾರರು ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ವೇಗದಿಂದ ಹರಿಯುತ್ತಿರುವ ನೀರನ್ನೇ ಲೆಕ್ಕಿಸದೇ ವಾಹನ ಸವಾರರು ಕೊಳ್ಳ ದಾಟುತ್ತಿದ್ದಾರೆ. ಸ್ಥಳದಲ್ಲಿ…

  • ಹಣ ಕಾಸು

    ಚಿಲ್ಲರೆ ಅಭಾವ ತಪ್ಪಿಸಲು ಅತೀ ಶೀಘ್ರದಲ್ಲಿ ಬರಲಿವೆ 200 ರುಪಾಯಿ ನೋಟುಗಳು!

    ಜನರ ನಗದು ಚಲಾವಣೆಯನ್ನು ಸುಲಭವಾಗಿಸಲು 200 ರೂಪಾಯಿಯ ನೋಟುಗಳು ಸದ್ಯದಲ್ಲೇ ಚಲಾವಣೆಗೆ ಬರಲಿವೆ. 200 ರೂ. ಮುಖಬೆಲೆಯ ಹೊಸ ನೋಟುಗಳ ಮುದ್ರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.