ಸುದ್ದಿ, ಸ್ಪೂರ್ತಿ

ರತನ್ ಟಾಟಾ ಕಾಲಿಗೆ ಬಿದ್ದು ನಮಸ್ಕರಿಸಿದ ಇನ್ಫೋಸಿಸ್ ನಾರಾಯಣ ಮೂರ್ತಿ.

72

72 ವರ್ಷದ ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರು 82 ವರ್ಷದ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಾರಾಯಣ ಮೂರ್ತಿ ಅವರ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಮುಂಬೈನಲ್ಲಿ ಮಂಗಳವಾರ ನಡೆದ ಟೈಕಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರತನ್ ಟಾಟಾ ಅವರಿಗೆ ಟೈಕಾನ್ ಮುಂಬೈ 2020 ಜೀವಿತಾವಧಿ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯನ್ನು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ನೀಡಿದರು. ಈ ವೇಳೆ ನಾರಾಯಣ ಮೂರ್ತಿ ಅವರ ರತನ್ ಟಾಟಾ ಅವರ ಕಾಲುಗಳನ್ನು ಮುಟ್ಟಿ ಆಶೀರ್ವಾದ ಪಡೆದರು.

ರತನ್ ಟಾಟಾ ಅವರು ಈ ಚಿತ್ರವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು, ನನ್ನ ಒಳ್ಳೆಯ ಸ್ನೇಹಿತ ನಾರಾಯಣ ಮೂರ್ತಿ ಅವರ ಕೈಯಿಂದ ಟೈಕಾನ್ ಮುಂಬೈ 2020 ಜೀವಿತಾವಧಿ ಸಾಧನೆ ಪ್ರಶಸ್ತಿ ಪಡೆಯುವ ಗೌರವ ನನಗೆ ಸಿಕ್ಕಿತು ಎಂದು ಅವರು ಬರೆದುಕೊಂಡಿದ್ದಾರೆ.

ಸಾಫ್ಟ್ ವೇರ್ ಸರ್ವಿಸ್ ಕ್ಷೇತ್ರದಲ್ಲಿ ಇನ್ಫೋಸಿಸ್ ಮತ್ತು ಟಾಟಾ ಸರ್ವಿಸಸ್ ಪ್ರತಿಸ್ಪರ್ಧಿಗಳೆಸಿದ್ದಾರೆ. ಹೀಗಿದ್ದರೂ ನಾರಾಯಣ ಮೂರ್ತಿ ಅವರು ತಮ್ಮ ಪ್ರತಿಸ್ಪರ್ಧಿಯ ಕಾಲಿಗೆ ನಮಸ್ಕಾರ ಮಾಡಿಕೊಂಡಿದ್ದು ಅಚ್ಚರಿ ಮೂಡಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ…ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

    ಬುಧವಾರ, 21/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ವಹಿಸಲಿದ್ದೀರಿ. ಮೇಲಾಧಿಕಾರಿಗಳೊಂದಿಗಿನ ಮಾತುಕತೆಯಿಂದ ಹೆಚ್ಚಿನ ಫಲ. ಕೃಷಿ, ಹೈನುಗಾರಿಕೆಯಲ್ಲಿ ತೊಡಗಿಕೊಂಡವರಿಗೆ ಅನುಕೂಲ ಮತ್ತು ಲಾಭ ದೊರಕಲಿದೆ. ಅನಿರೀಕ್ಷಿತವಾಗಿ ಸಂಚಾರ ಒದಗಿ ಬಂದೀತು. ಶುಭಮಂಗಲ ಕಾರ್ಯಗಳಿಗಾಗಿ ಓಡಾಟ. ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ಸದ್ಯದಲ್ಲೇ ಶುಭವಾರ್ತೆ ಇದೆ. ಅತಿಥಿಗಳ ಆಗಮನವಿದೆ. ವೃಷಭ:- ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಪ್ರಯತ್ನಬಲಕ್ಕೆ ಒತ್ತು ನೀಡಿರಿ. ಆಗಾಗ ಕಿರಿಕಿರಿ ತೋರಿ ಬಂದರೂ ಕಾರ್ಯಸಾಧನೆಯಾಗುತ್ತದೆ.ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿನ ಸಾಧನೆ ಕಂಡು ಸಂತೋಷ ವಾಗಲಿದೆ….

  • ಕರ್ನಾಟಕ

    ಪೆಟ್ರೋಲ್ ಜಿಎಸ್ಟಿ ವ್ಯಾಪ್ತಿಗೆ ಬಂದ್ರೆ, 1ಲೀಟರ್ ಬೆಲೆ ಇಷ್ಟಾಗಬಹುದು!ಮಾಹಿತಿಗಾಗಿ ಈ ಲೇಖನಿ ಓದಿ…

    ಪೆಟ್ರೋಲ್ ಬೆಲೆ 2014ರ ನಂತರ ಭಾರೀ ಏರಿಕೆಯಾಗಿದೆ. ಜುಲೈ ತಿಂಗಳಿನಿಂದ ದೇಶದಾದ್ಯಂತ ಜಾರಿಗೆ ಬಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ಪೆಟ್ರೋಲ್‌ ಮತ್ತು ಡೀಸೆಲ್‌ಗಳನ್ನು ತಂದರೆ ಇವುಗಳ ಬೆಲೆ ಅರ್ಧದಷ್ಟು ಅಗ್ಗವಾಗಲಿದೆ ಎಂದು ದತ್ತಾಂಶಗಳನ್ನು ವಿಶ್ಲೇಷಿಸುವ ಫ್ಯಾಕ್ಟಲಿಡಾಟ್‌ಇನ್‌ (Factly.in) ಅಂತರ್ಜಾಲ ತಾಣವು ಅಭಿಪ್ರಾಯಪಟ್ಟಿದೆ.

  • ಸುದ್ದಿ

    50 ಸಾವಿರ ಉದ್ಯೋಗಾವಕಾಶವನ್ನು ಸೃಷ್ಟಿಸಿ ಘೋಷಣೆ ಮಾಡಿದ ಮೋದಿ ಸರ್ಕಾರ…!

    ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುತ್ತಿದ್ದ ವಿಧಿ 370ರ ರದ್ಧತಿ ಬಳಿಕ ಮಹತ್ವದ ಹೆಜ್ಜೆಯನ್ನಟ್ಟಿರುವ ಕೇಂದ್ರ ಸರ್ಕಾರ ಇದೀಗ ಕಣಿವೆ ರಾಜ್ಯದ ಯುವಕರಿಗೆ 50 ಸಾವಿರ ಉದ್ಯೋಗ ಕಲ್ಪಿಸುವ ಘೋಷಣೆ ಮಾಡಿದೆ.  ಈ ಕುರಿತಂತೆ ಇಂದು [ಬುಧವಾರ] ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರು ಮಾಹಿತಿ ನೀಡಿದ್ದು, ಕಣಿವೆ ರಾಜ್ಯದ ಯುವಕರಿಗಾಗಿ ರಾಜ್ಯದಲ್ಲಿ 50 ಸಾವಿರ ಉದ್ಯೋಗ ಸೃಷ್ಟಿಸಲಾಗುತ್ತಿದೆ ಎಂದು ಹೇಳಿದರು.  ಈ ಕುರಿತಂತೆ ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಮುಂದಿನ 2 ಅಥವಾ 3…

  • ಉಪಯುಕ್ತ ಮಾಹಿತಿ, ಜೀವನಶೈಲಿ

    ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ..!ಏಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಸಾಮಾನ್ಯವಾಗಿ ನಾವು ಮನೆಯಲ್ಲಿ ಅನ್ನ ಮಾಡುವಾಗ ಅಕ್ಕಿಯನ್ನು ತೊಳೆದು ಆ ನೀರನ್ನು ಚೆಲ್ಲುತ್ತೇವೆ‌ ಅಥವಾ ಹಸುಗಳಿಗೆ ಕುಡಿಸುತ್ತೇವೆ. ಇದು ಎಲ್ಲರೂ ಮಾಡುವುದೇ… ಆದರೆ ಆ ನೀರಿನಿಂದ ನಮ್ಮ ಮುಖದ ಮೇಲಿನ ಮೊಡವೆಗಳನ್ನು ದೂರ ಮಾಡಿಕೊಳ್ಳುಬಹುದಲ್ಲದೇ ನಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದಂತೆ.

  • ಸುದ್ದಿ

    ತಪ್ಪಿನ ಅರಿವಾಗಿ ಜೈ ಜಗದೀಶ್ ಅವರ ಬಳಿ ಕ್ಷಮೆ ಯಾಚಿಸಿದ ಕಿಶನ್…!

    ಬಿಗ್ ಬಾಸ್ ಸೀಸನ್-7ನ ಸ್ಪರ್ಧಿ ಡ್ಯಾನ್ಸರ್ ಕಿಶನ್ ಹಿರಿಯ ನಟ ಜೈ ಜಗದೀಶ್ ಅವರ ಬಳಿ ಕ್ಷಮೆ ಕೇಳಿದ್ದಾರೆ. ಕಿಶನ್ ಸೋಮವಾರ ಜೈ ಜಗದೀಶ್ ಅವರ ಜೊತೆ ಜಗಳವಾಡಿದ್ದರು. ಇದಾದ ಬಳಿಕ ಮನೆಯ ಸದಸ್ಯರು ಹಿರಿಯರನ್ನು ಎಲ್ಲರ ಮುಂದೆ ಈ ರೀತಿ ಪ್ರಶ್ನಿಸಬಾರದು ಇದು ಅವರನ್ನು ಅವಮಾನ ಮಾಡಿದಂತೆ ಎಂದು ಕಿಶನ್ ಬಳಿ ಹೇಳಿದ್ದರು. ಹೀಗಾಗಿ ಕಿಶನ್ ಮಂಗಳವಾರ ಜೈ ಜಗದೀಶ್ ಅವರ ಬಳಿ ಹೋಗಿ ಕ್ಷಮೆ ಕೇಳಿದ್ದಾರೆ. ಜೈ ಜಗದೀಶ್ ಅಡುಗೆ ಮನೆಯಲ್ಲಿದ್ದ ವೇಳೆ  ನಾನು…

  • ಸುದ್ದಿ

    ಮಾರುತಿ ಸುಜುಕಿ S ಕ್ರಾಸ್ ಕಾರು ಖರೀದಿಸುವ ಗ್ರಾಹಕರಿಗೆ ಬಂಪರ್ ಆಫರ್ ನೀಡಲಾಗಿದೆ,..!

    ನವದೆಹಲಿ, ಮಾರಾಟ ಕುಸಿತದ ಬೆನ್ನಲ್ಲೇ ಗ್ರಾಹಕರನ್ನು ಸೆಳೆಯಲು ಮಾರುತಿ ಸುಜುಕಿ ಭರ್ಜರಿ ಡಿಸ್ಕೌಂಟ್ ಆಫರ್ ನೀಡಿದೆ. ಮಾರುತಿ ಸುಜುಕಿ S ಕ್ರಾಸ್ ಕಾರು ಖರೀದಿಸುವ ಗ್ರಾಹಕರಿಗೆ ವಿಶೇಷ ಆಫರ್ ನೀಡಲಾಗಿದೆ. ವಾಹನ ಮಾರಾಟ ಕುಸಿತ ಕಂಡಿರುವ ಬೆನ್ನಲ್ಲೇ ಬಹುತೇಕ ಎಲ್ಲಾ ಆಟೋಮೊಬೈಲ್ ಕಂಪನಿಗಳು ಡಿಸ್ಕೌಂಟ್ ಆಫರ್ ನೀಡುತ್ತಿದೆ. ಇದೀಗ ಸೆಪ್ಟೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ S ಕ್ರಾಸ್ ಕಾರು ಖರೀದಿಸುವ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಈ ತಿಂಗಳಲ್ಲಿ  S ಕ್ರಾಸ್  ಖರೀದಿಸುವ ಗ್ರಾಹಕರಿಗೆ ಗರಿಷ್ಠ…