ಸುದ್ದಿ

ಮೀನಿಗೆ ಬಲೇ ಬಿಸಿದಾಗ ಈತನಿಗೆ ಸಿಕ್ಕಿದ್ದು ಎಷ್ಟು ಕೋಟಿ ರೂಪಾಯಿ ಗೊತ್ತಾ.

90

ಸ್ನೇಹಿತರೆ ಅದೃಷ್ಟ ಅನ್ನುವುದು ಯಾವಾಗ ಬರುತ್ತದೆ ಮತ್ತು ಯಾವಾಗ ಹೋಗುತ್ತದೆ ಅನ್ನುವುದನ್ನ ಊಹೆ ಮಾಡಲು ಸಾಧ್ಯವಿಲ್ಲ ಮತ್ತು ಕೆಲವೊಮ್ಮೆ ಅದೃಷ್ಟ ನಮ್ಮ ಸುತ್ತಮುತ್ತ ಇದ್ದರೂ ಕೂಡ ನಮಗೆ ತಿಳಿಯುವುದಿಲ್ಲ. ನಾವು ಹೇಳುವ ಈತನ ವಿಷಯದಲ್ಲಿ ನಡೆದಿದ್ದು ಮಾತ್ರ ಒಂದು ದೊಡ್ಡ ವಿಚಿತ್ರ ಎಂದು ಹೇಳಿದರೆ ತಪ್ಪಾಗಲ್ಲ, ಅದೃಷ್ಟ ಈತನ ಕೈ ಹಿಡಿದರೂ ಕೂಡ ಅದರ ಬಗ್ಗೆ ಅವನಿಗೆ ತಿಳಿಯದೆ ಪ್ರತಿದಿನ ಎಂದಿನಂತೆ ಕಷ್ಟಪಡುತ್ತಿದ್ದ. ಹಾಗಾದರೆ ಅಲ್ಲಿ ನಡೆದಿದ್ದು ಏನು ಮತ್ತು ಆ ಅದೃಷ್ಟ ಆತನಿಗೆ ಯಾವ ರೂಪದಲ್ಲಿ ಗೋಚರ ಆಯಿತು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಫಿಲಿಫೈನ್ಸ್ ದೇಶಕ್ಕೆ ಸೇರಿದ ಒಬ್ಬ ಮೀನುಗಾರ ವ್ಯಕ್ತಿ ಎಂದಿನಂತೆ ಮೀನು ಹಿಡಿಯಲು ಸಮುದ್ರಕ್ಕೆ ತೆರಳಿ ಮೀನುಗಾರ ಬಲೇ ಬಿಸುತ್ತಾನೆ, ಇನ್ನು ಆ ಬಲೆಯನ್ನ ಮೇಲಕ್ಕೆ ತಗೆದಾಗ ಮೀನಿನ ಜೊತೆಗೆ ಒಂದು ಬಿಳಿಯಾದ ಕಲ್ಲು ಕೂಡ ಆತನ ಬಲೆಯಲ್ಲಿ ಬಂತು.

ಆ ಬಿಳಿ ಕಲ್ಲು ನೋಡಲು ತುಂಬಾ ಸುಂದರವಾಗಿದೆ ಎಂದು ಭಾವಿಸಿದ ಆ ಮೀನುಗಾರ ಆ ಬಿಳಿ ಕಲ್ಲನ್ನ ತನ್ನ ಮನೆಗೆ ತಂದು ಅದನ್ನ ತಾನು ಮಲಗುವ ಹಾಸಿಗೆಯ ಕೆಳಗೆ ಇಡುತ್ತಾನೆ ಮತ್ತು ನಂತರ ಅದರ ಬಗ್ಗೆ ಆಲೋಚನೆ ಮಾಡುವುದನ್ನೇ ಬಿಟ್ಟು ಬಿಡುತ್ತಾನೆ. ಹೀಗೆ ಹತ್ತು ವರ್ಷಗಳು ಕಳೆದ ನಂತರ ಒಂದು ದಿನ ಆತನ ಮನೆಗೆ ಆಕಸ್ಮಿಕವಾಗಿ ಬೆಂಕಿ ಬೀಳುತ್ತದೆ, ಮನೆಗೆ ಬೆಂಕಿ ಬಿದ್ದ ಕಾರಣ ಎಲ್ಲಾ ವಸ್ತುಗಳನ್ನ ಮನೆಯಿಂದ ಆಚೆ ಇಡುತ್ತಿದ್ದ ಆ ಮೀನುಗಾರ. ಇನ್ನು ಈ ಸಮಯದಲ್ಲಿ ಹಾಸಿಗೆಯ ಅಡಿಯಲ್ಲಿ ಇದ್ದ ಬಿಳಿ ಕಲ್ಲನ್ನ ನೋಡಿ ಅದನ್ನ ತಗೆದುಕೊಂಡು ಹೋಗಿ ಹತ್ತಿರದ ಪ್ರವಾಸೋದ್ಯಮ ಇಲಾಖೆಗೆ ಕೊಟ್ಟು ನೋಡುವುದಕ್ಕೆ ಇದು ತುಂಬಾ ಸುಂದರವಾಗಿದೆ ನಿಮಗೆ ಯಾವುದಕ್ಕಾದರೂ ಉಪಯೋಗ ಬರುವುದು ನೀವು ಇದನ್ನ ಇಟ್ಟುಕೊಳ್ಳಿ ಎಂದು ಅಲ್ಲಿನ ಅಧಿಕಾರಿಗಳಿಗೆ ಕೊಟ್ಟು ಬರುತ್ತಾನೆ ಆ ಮೀನುಗಾರ

ಇನ್ನು ಆ ಪ್ರವಾಸೋದ್ಯಮ ಇಲಾಖೆಯವರು ಈ ಬಿಳಿ ಕಲ್ಲನ್ನ ನೋಡಿ ಒಂದು ಕ್ಷಣ ಬೆರಗಾಗಿ ಹೋದರು, ಹೌದು ಸ್ನೇಹಿತರೆ ಇದು ಅತ್ಯಂತ ವಿರಳವಾಗಿ ಸಿಗುವ ಮುತ್ತು ಮತ್ತು ಅದರ ತೂಕ 34 ಕೆಜಿ ಇದ್ದ ಹಾಗು ಅದರ ಬೆಲೆ ಸುಮಾರು 670 ಕೋಟಿ, ಈ ಕಾರಣಕ್ಕೆ ಇದನ್ನ ನೋಡಿ ಶಾಕ್ ಆದರೂ ಅಲ್ಲಿನ ಪ್ರವಾಸೋದ್ಯಮ ಇಲಾಖೆಯವರು. ಪ್ರಪಂಚದ ಅತೀ ದೊಡ್ಡ ಗಾತ್ರದ ಮುತ್ತು ಅಮೇರಿಕಾದ ಮ್ಯೂಸಿಯಂ ನಲ್ಲಿ ಇದ್ದು ಮತ್ತು ಅದರ ತೂಕ ಇದ್ದು ಅದರ ಬೆಲೆ 200 ಕೋಟಿ ಆಗಿತ್ತು, ಆದರೆ ಈಗ ಸಿಕ್ಕಿರುವ ಮುತ್ತಿನ ಕಲ್ಲು ಪ್ರಪಂಚದ ಅತೀ ದೊಡ್ಡ ಮುತ್ತಿನ ಕಲ್ಲು ಅನ್ನುವುದು ಇನ್ನೊಂದು ಆಶ್ಚರ್ಯವಾದ ವಿಷಯವಾಗಿದೆ.

670 ಕೋಟಿ ಬೆಲೆಬಾಳುವ ವಸ್ತುವನ್ನ ತನ್ನ ಬೆಡ್ ಕೆಳಗೆ ಇಟ್ಟುಕೊಂಡು ಅದರ ಬೆಲೆ ಗೊತ್ತಿಲ್ಲದೇ ಪ್ರತಿದಿನ ಕಷ್ಟ ಪಡುತ್ತಿದ್ದ ಆ ಮೀನುಗಾರ ಮೀನು ಸಿಗದೇ ಇದ್ದ ದಿನದಂದು ಹಣಕ್ಕಾಗಿ ಪರದಾಡುತ್ತಿದ್ದ ಮತ್ತು ಸ್ನೇಹಿತರ ಬಳಿ ಸಾಲವನ್ನ ಪಡೆಯುತ್ತಿದ್ದ, ಸ್ನೇಹಿತರೆ ವಿಚಿತ್ರ ಅಂದರೆ ಇದೆ ಅಲ್ಲವೇ. ಇನ್ನು ಈ ಮುತ್ತಿನ ಕಲ್ಲನ್ನ ಹರಾಜು ಮಾಡಲು ಬಯಸಿರುವ ಫಿಲಿಫೈನ್ಸ್ ಪ್ರವಾಸೋದ್ಯಮ ಇಲಾಖೆಯವರು ಅದರಿಂದ ಬರುವ ಹಣವನ್ನ ಆ ಮೀನುಗಾರನಿಗೆ ಕೊಡುವ ನಿರ್ಧಾರವನ್ನ ಮಾಡಿದ್ದಾರೆ. ಇನ್ನು ಮುತ್ತಿನ ಕಲ್ಲಿನ ಬೆಲೆ ತಿಳಿಯದೆ ಅದನ್ನ ತನ್ನ ಬೆಡ್ ಕೆಳಗೆ ಇಟ್ಟುಕೊಂಡು ಅದನ್ನ ಉಚಿತವಾಗಿ ಪ್ರವಾಸೋದ್ಯಮ ಇಲಾಖೆಗೆ ಕೊಟ್ಟ ಆ ಮೀನುಗಾರನಿಗೆ ಮೋಸ ಮಾಡದೆ ಆ ಮೀನುಗಾರನಿಗೆ ಅದರ ಬೆಲೆ ತಿಳಿಸಿದ ಪ್ರವಾಸೋದ್ಯಮ ಇಲಾಖೆಯವರ ಒಳ್ಳೆಯ ತನಕ್ಕೆ ನಾವು ಮೆಚ್ಚಲೇಬೇಕು, ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜೀವನಶೈಲಿ

    ಭಾರತೀಯ ಮಹಿಳೆಯರು ಆಭರಣಗಳನ್ನು ಧರಿಸುವುದರ ಹಿಂದಿರುವ ವೈಜ್ಞಾನಿಕ ಕಾರಣಗಳು ಗೊತ್ತಾ…? ಈ ಲೇಖನ ಓದಿ…

    ಪ್ರಮಂಚದಲ್ಲಿ ಮಹಿಳೆಯರು ಸುಂದರವಾಗಿ ಕಾಣಲು ಅಲಂಕಾರ ಮಾಡಿಕೊಳ್ಳುತ್ತಾರೆ. ಅಲಂಕಾರ ಮಾಡಿಕೊಳ್ಳದೆ ಮಹಿಳೆಯರ ದಿನ ಪೂರ್ಣವಾಗುವುದಿಲ್ಲ. ಅಲಂಕಾರ ಹಾಗೂ ಒಡವೆಗಳಿಗಾಗಿ ಸಾಕಷ್ಟು ಹಣವನ್ನು ಖರ್ಚುಮಾಡಲು ಹಿಂಜರಿಯುವುದಿಲ್ಲ. ಆದರೇ ನಮ್ಮ ಭಾರತೀಯ ಮಹಿಳೆಯರು ಅಲಂಕಾರಕ್ಕಾಗಿ ಧರಿಸುವ ಆಭರಣಗಳ ಹಿಂದಿರುವ ವೈಜ್ಞಾನಿಕ ಕಾರಣಗಳು ಏನೆಂದು ತಿಳಿಯೋಣ.

  • ಸುದ್ದಿ

    ಗ್ರಾಹಕರಿಗೊಂದು ಸಿಹಿ ಸುದ್ದಿ ನಿಡಿದ SBI ಬ್ಯಾಂಕ್….!

    ಬ್ಯಾಂಕ್ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಬ್ಯಾಂಕ್ ಗಳಲ್ಲಿ ಖಾತೆ ಹೊಂದಿರುವ ಗ್ರಾಹಕರು ಬದಲಾವಣೆಯಗಿರುವ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕಾಗಿದ್ದು, ಆಗಸ್ಟ್ 1ರಿಂದ ಹಲವಾರು ನಿಯಮಗಳು ಬದಲಾವಣೆಯಾಗಲಿವೆ. ಬ್ಯಾಂಕ್‌ನಲ್ಲಿ ಆರ್‌ಟಿಜಿಎಸ್‌ ಮತ್ತು ಎನ್‌ಇಎಫ್‌ಟಿ ಮೂಲಕ ಹಣ ವರ್ಗಾವಣೆ ಮಾಡುವವರಿಗೆ ಇದು ಸಿಹಿಸುದ್ದಿ. ದೇಶವನ್ನು ನಗದುರಹಿತ ಆರ್ಥಿಕತೆಯನ್ನಾಗಿಸುವ ಗುರಿಯೊಂದಿಗೆ ಹಣ ವರ್ಗಾವಣೆ ಶುಲ್ಕವನ್ನು ಹಿಂಪಡೆಯಲು ಆರ್‌ಬಿಐ ನಿರ್ಧರಿಸಿದ ಬೆನ್ನಲ್ಲೇ, ಎಸ್‌ಬಿಐ ಜು.1ರಿಂದ ಅನ್ವಯವಾಗುವಂತೆ ಎನ್‌ಇಎಫ್‌ಟಿ ಮತ್ತು ಆರ್‌ಟಿಜಿಎಸ್‌ ಹಣ ವರ್ಗಾವಣೆ ಶುಲ್ಕವನ್ನು ರದ್ದುಗೊಳಿಸಿದೆ.ಬ್ಯಾಂಕ್‌ನಲ್ಲಿ ಆರ್‌ಟಿಜಿಎಸ್‌ ಮತ್ತು ಎನ್‌ಇಎಫ್‌ಟಿ ಮೂಲಕ…

  • ವಿಸ್ಮಯ ಜಗತ್ತು

    ವರ್ಷಗಳ ಕಾಲ ಸ್ನಾನ ಮಾಡದೆ ಇರುವ ಈ ಭೂಪನ ಬಗ್ಗೆ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ ..

    ಒಂದೇ ಒಂದು ದಿನ ಸ್ನಾನ ಮಾಡದಿದ್ದರೂ ಕೆಟ್ಟ ವಾಸನೆ ಬರುತ್ತದೆ. ಇನ್ನು 60 ವರ್ಷಗಳು ಎಂದರೆ ಹೇಗಿರುತ್ತದೆ!? ಇಷ್ಟಕ್ಕೂ ಅಷ್ಟು ವರ್ಷಗಳ ಕಾಲ ಸ್ನಾನ ಮಾಡದೆ ಯಾರಾದರೂ ಇರುತ್ತಾರಾ…? ನಿಜವಾಗಿಯೂ ಅಂತಹವರು ಇದ್ದರೆ ಅವರ ಬಳಿ ಹೋಗಬೇಕೆಂದರೇನೇ ಸಾಹಸ ಮಾಡಬೇಕು.

  • ಗ್ಯಾಜೆಟ್

    ಇನ್ನು ಮುಂದೆ ಸಮುದ್ರದಾಳದಲ್ಲಿ ಕೂಡ ಫೋನ್ ಮಾಡಬಹುದು!!!

    ಸರ್ಕಾರಿ ಒಡೆತನದ ಬಿಎಸ್ಎನ್‌ಎಲ್ ದೇಶದಲ್ಲಿ ಇದೇ ಮೊದಲ ಬಾರಿಗೆ ಸ್ಯಾಟಿಲೈಟ್ ಫೋನ್ ಸೇವೆಯನ್ನು ಆರಂಭಿಸಲಿದೆ. ಬುಧವಾರ ಮೇ.25 ರಿಂದ ಈ ಸೇವೆಗೆ ಚಾಲನೆ ದೊರೆಯಲಿದ್ದು, ನೇರವಾಗಿ ಉಪಗ್ರಹಗಳ ಸಹಾಯದಿಂದ ಈ ಸೇವೆಯನ್ನು ಬಿಎಸ್ಎನ್ಎಲ್ ಓದಗಿಸಲಿದೆ ಎನ್ನಲಾಗಿದೆ.

  • ಸುದ್ದಿ

    ಡಾಕ್ಟರೇಟ್ ಪಡೆದ ರವಿಮಾಮ : ತಪ್ಪಿರುವ ದಾರಿಯನ್ನ ಸರಿ ಮಾಡಿಕೊಳ್ಳುತ್ತೇನೆ ಎಂದ ಕ್ರೇಜಿ ಸ್ಟಾರ್…!

    ಕನಸುಗಾರ ರವಿಚಂದ್ರನ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಇವರು ಮಾಡಿದ ಕೆಲಸ ಗುರುತಿಸಿ ಈಗ ವಿಶ್ವವಿದ್ಯಾಲಯವೊಂದು ಗೌರವ ಡಾಕ್ಟರೇಟ್ ಪದವಿ ನೀಡಲು ಮುಂದಾಗಿದೆ. ನಟ ವಿ.ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಬೆಂಗಳೂರಿನ ಸಿಎಂಆರ್‌ ಕಾಲೇಜು ಆವರಣದಲ್ಲಿ ಸಂಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರಿಗೆ ಡಾಕ್ಟರೇಟ್  ಗೌರವ ನೀಡಲಾಗಿದೆ. ಅಕ್ಟೋಬರ್ 18 ರವಿಚಂದ್ರನ್ ಮಗಳು ಗೀತಾಂಜಲಿ ಹುಟ್ಟಿದ ದಿನ. ಆ ದಿನವೇ ಅವರಿಗೆ ಗೌರವ ಡಾಕ್ಟರೇಟ್ ನೀಡಲಿದ್ದೇವೆ ಎಂದು ಯುನಿವರ್ಸಿಟಿಯಿಂದ ಕಾಲ್ಬಂದಿತ್ತಂತೆ. ಅಷ್ಟೇ ಅಲ್ಲದೆ ಅವರ 35ವರ್ಷಗಳ…