ಸಿನಿಮಾ, ಸುದ್ದಿ, ಸ್ಪೂರ್ತಿ

ಡಿ-ಬಾಸ್ ಮನವಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ ಅಭಿಮಾನಿಗಳು.

68

 ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಮನೆ ಮುಂದೆ ದೊಡ್ಡ ಬೋರ್ಡ್ ಹಾಕುವ ಮೂಲಕ ತಮ್ಮ ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದರು. ಈಗ ದರ್ಶನ್ ಅವರ ಮನವಿಗೆ ಅಭಿಮಾನಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ.

ಫೆಬ್ರವರಿ 16ರಂದು ದರ್ಶನ್ ಅವರ ಹುಟ್ಟುಹಬ್ಬವಿದ್ದು, ಡಿ-ಬಾಸ್ ಜನ್ಮದಿನವನ್ನು ಅಭಿಮಾನಿಗಳು ದೊಡ್ಡ ಹಬ್ಬದಂತೆ ಆಚರಿಸುತ್ತಾರೆ. ಆದರೆ ಬ್ಯಾನರ್, ಕೇಕ್, ಹಾರ ತಂದು ಅದ್ಧೂರಿಯಾಗಿ ನನ್ನ ಹುಟ್ಟುಹಬ್ಬ ಆಚರಿಸಬೇಡಿ ಎಂದು ಅಭಿಮಾನಿಗಳಿಗೆ ದರ್ಶನ್ ಮನವಿ ಮಾಡಿದ್ದರು.

ಕಳೆದ ವರ್ಷ ದರ್ಶನ್ ತಮ್ಮ ಹುಟ್ಟುಹಬ್ಬಕ್ಕೆ ಬ್ಯಾನರ್, ಕೇಕ್, ಹಾರಕ್ಕೆ ಹಣವನ್ನು ಖರ್ಚು ಮಾಡುವ ಬದಲು ಆ ಹಣದಲ್ಲಿ ದವಸ ಧಾನ್ಯ ನೀಡುವಂತೆ ಮನವಿ ಮಾಡಿದ್ದರು. ದರ್ಶನ್ ಮಾತಿಗೆ ಬೆಲೆ ಕೊಟ್ಟು ಅಭಿಮಾನಿಗಳು ಅಕ್ಕಿ, ಬೇಳೆ ಸೇರಿದಂತೆ ಹಲವು ಪದಾರ್ಥಗಳನ್ನು ದಾನ ನೀಡುವ ಮೂಲಕ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಿದ್ದರು. ಈ ವರ್ಷವು ಕೂಡ ದರ್ಶನ್ ಅವರು ಅದೇ ರೀತಿ ಮನವಿ ಮಾಡಿಕೊಂಡಿದ್ದು, ಅಭಿಮಾನಿಗಳು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.

ದರ್ಶನ್ ಅವರು ಮನವಿ ಮಾಡಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಇಂದು ಬೆಳಗ್ಗೆಯಿಂದಲೂ ಹಲವು ಅಭಿಮಾನಿಗಳು ದರ್ಶನ್ ಅವರನ್ನು ಭೇಟಿ ಮಾಡಿ ದವಸ ಧಾನ್ಯವನ್ನು ನೀಡುತ್ತಿದ್ದಾರೆ. ಅಭಿಮಾನಿಗಳು ದರ್ಶನ್ ಅವರಿಗೆ ದವಸ ಧಾನ್ಯ ನೀಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸದ್ಯ ಅಡುಗೆ ಸಾಮಾಗ್ರಿಗಳನ್ನು ನೀಡಿದ ಬಳಿಕ ಅಭಿಮಾನಿಗಳು ದರ್ಶನ್ ಅವರ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಡುತ್ತಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಆರೋಗ್ಯ ಸಂಜೀವಿನಿ ಈರುಳ್ಳಿಯ ಈ ಉಪಯೋಗಗಳನ್ನು ಕೇಳಿದ್ರೆ ಶಾಕ್ ಆಗ್ತೀರಾ..!

    ಈರುಳ್ಳಿಯನ್ನು ಕ್ರಮವಾಗಿ ಸೇವಿಸುತ್ತಾ ಬಂದರೆ ಮೂಳೆಗಳು, ನರಗಳು ದೃಢವಾಗಿರುತ್ತವೆಯಂತೆ. ಎರಡೂ ಹೊತ್ತಿನ ಊಟದಲ್ಲಿ ಹಸಿ ಈರುಳ್ಳಿ ಮಜ್ಜಿಗೆ ಅನ್ನದೊಂದಿಗೆ ಸೇವಿಸುವವರು ನಿತ್ಯ ಆರೋಗ್ಯವಂತರಾಗಿ ಮುಂದುವರೆಯುತ್ತಾರೆ.

  • ಜ್ಯೋತಿಷ್ಯ

    ನಿತ್ಯ ಭವಿಷ್ಯ..ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

    ಇಂದು ಶನಿವಾರ, 03/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಕೆಲಸದ ಒತ್ತಡದಿಂದ ಸರಿಯಾಗಿ ಆಹಾರ ಸೇವಿಸದೆ ದೇಹಾಲಸ್ಯ. ಹಣದ ಆಧಾಯ ಹೆಚ್ಚಾಗುತ್ತದೆ. ಉದ್ದೇಶಿಸಿದ ಕೆಲಸಕಾರ್ಯಗಳು ನಡೆಯಲಿವೆ. ನೀವು ನಂಬುವರರಿಂದ ನಿಜ ತಿಳಿಯುತ್ತದೆ.ಆರ್ಥಿಕ ವಿಚಾರದಲ್ಲಿ ಜಾಗ್ರತೆ. ವೃಷಭ:- ಅಪವಾದಗಳೂ ಬೆನ್ನತ್ತಿ ಬರಬಹುದು. ನಿರೀಕ್ಷಿತ ಮೂಲದಿಂದ ಧನಾದಾಯ. ಬಾಕಿಯಿರುವ ಕುಟುಂಬದ ಎಲ್ಲಾ ಸಾಲಗಳನ್ನು ತೀರಿಸಲು ಸಾಧ್ಯ. ತಂದೆಯಿಂದ ನಿಮಗೆ ನಿರೀಕ್ಷಿತ ಧನ ಸಹಾಯ ದೊರೆಯಲಿದೆ. ಪಿತ್ರಾಜಿತ ಆಸ್ತಿಗಳು ಒದಗಿಬರುತ್ತವೆ. ಆರ್ಥಿಕವಾಗಿ ಅಭಿವೃದ್ಧಿ. ಅತಿ ವೇಗದ ಚಾಲನೆ…

  • inspirational

    ಸೀತಾಫಲ ಹಣ್ಣನ್ನು ನೀವು ತಿಂದಿರಬಹುದು ಆದರೆ, ಇದರ ಅದ್ಬುತ ರಹಸ್ಯಗಳನ್ನು ನೋಡಿ.

    ಈ ಪ್ರಪಂಚದಲ್ಲಿ ಹಲವು ರೀತಿಯ ಹಣ್ಣುಗಳು ಸಿಗುತ್ತದೆ ಮತ್ತು ಅದರಲ್ಲಿ ಕೆಲವು ಹಣ್ಣುಗಳು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾದರೆ ಇನ್ನು ಕೆಲವು ಹಣ್ಣುಗಳು ಕೇವಲ ರುಚಿಯನ್ನ ಮಾತ್ರ ನೀಡುತ್ತದೆ. ಇನ್ನು ಸೀತಾಫಲ ಹಣ್ಣನ್ನು ಯಾರು ತಾನೇ ಇಷ್ಟಪಡಲ್ಲ ಹೇಳಿ, ಪ್ರತಿಯೊಬ್ಬರು ಕೂಡ ಒಮ್ಮೆಯಾದರೂ ಈ ಹಣ್ಣಿನ ರುಚಿ ನೋಡಿರುತ್ತೀರಿ, ಇನ್ನು ಈ ಹಣ್ಣಿನ ಜ್ಯೂಸ್ ಕೂಡ ಕುಡಿದಿರಬಹುದು ಆದರೆ ಈ ಹಣ್ಣಿನಲ್ಲಿರುವ ಕೆಲವು ಅದ್ಬುತ ರಹಸ್ಯಗಳ ಬಗ್ಗೆ ಮಾತ್ರ ನಿಮಗೆ ತಿಳಿದಿರಲು ಸಾಧ್ಯವೇ ಇಲ್ಲ. ಹೌದು ಸೀತಾಫಲ ಸಾಮಾನ್ಯವಾದ…

  • ಜ್ಯೋತಿಷ್ಯ

    ಆಂಜನೇಯನ ಕೃಪೆಯಿಂದ ಇಂದಿನ ನಿಖರವಾದ ದಿನಭವಿಷ್ಯ ಹೇಗಿದೆ ನೋಡಿ,ಶುಭ ಅಶುಭಗಳ ಲೆಕ್ಕಾಚಾರ 12/07/2019.

    ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ಸದಾ ಕಾಲವು ನಿಮ್ಮನ್ನು ಜನರು ಮಾತನಾಡಿಸಬೇಕು. ಪ್ರತಿಯೊಂದು ಕ್ರಿಯೆಗೂ ಶಹಾಬಾಸ್‌ಗಿರಿ ಕೊಡಬೇಕೆಂಬ ಮನೋಭೂಮಿಕೆಯಿಂದ ಹೊರಬನ್ನಿ. ಏಕೆಂದರೆ ಎಲ್ಲರನ್ನು ಎಲ್ಲಾ ಕಾಲಕ್ಕೂ ಮೂರ್ಖರನ್ನಾಗಿಸಲು ಶಕ್ಯವಿಲ್ಲ. ನಿಮ್ಮಲ್ಲಿನ ತಪ್ಪನ್ನು ತಿದ್ದುವವರನ್ನುನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ…

  • ಸುದ್ದಿ

    ರೈತ ಯುವಕನನ್ನು ಮಾಡುವೆ ಆಗೋ ಹುಡುಗಿಗೆ ಸಿಗಲಿದೆ ಒಂದು ಲಕ್ಷ ಬಂಪರ್ ಆಫರ್..!

    ಉತ್ತರ ಕನ್ನಡ ಜಿಲ್ಲೆಯ ಯೆಲ್ಲಾಪುರ ಗ್ರಾಮದ ಸಹಕಾರ ಸೊಸೈಟಿ  ಶಾದಿಭಾಗ್ಯ ಯೋಜನೆಯಡಿ ಬಂಪರ್ ಬಹುಮಾನ ಘೋಷಿಸಿದೆ.ಆನಗೋಡು ಗ್ರಾಮದ ರೈತನನ್ನು ವಿವಾಹವಾದ ಯಾವುದೇ ಯುವತಿಯ ಅಕೌಂಟ್ ಗೆ 1 ಲಕ್ಷ ರು ಹಣ ಡೆಪಾಸಿಟ್ ಮಾಡಲಾಗುವುದು. ಈ ಆಫರ್ ಆನಗೋಡು ಗ್ರಾಮಸ್ಥರಿಗೆ ಹಾಗೂ ಆನಗೋಡು ಸೇವಾ ಸಹಕಾರಿ ಸಂಘದ ಸದಸ್ಯರಿಗೆ  ಮಾತ್ರ ಅನ್ವಯಿಸುತ್ತಿದೆ.ಈ ಯೋಜನೆ 2019ರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಸಹಾಯಕರಾಗಿರುವ ಕುಟುಂಬಗಳಿಗೆ ಧನ ಸಹಾಯವಾಗಲಿದೆ, ಭವಿಷ್ಯದಲ್ಲಿ ಅವರಿಗೆ ಸಹಾಯವಾಗಲಿ ಎಂಬ…

  • ವಿಸ್ಮಯ ಜಗತ್ತು

    ಆಕಾಶದಲ್ಲಿ ವಿಮಾನದ ಮೇಲೆ ದಾಳಿ ಮಾಡಿದ ಹದ್ದುಗಳು..!ತಿಳಿಯಲು ಇದನ್ನು ಓದಿ..

    ಆಕಾಶದಲ್ಲಿ ಅತೀ ವೇಗವಾಗಿ ಚಲಿಸುತ್ತಿದ್ದ ಒಂದು ವಿಮಾನದ ಮೇಲೆ ಹದ್ದುಗಳು ಒಮ್ಮೆಲೇ ದಾಳಿಮಾಡಿದವು. ಅದೂ ಸಹ ಒಂದಲ್ಲ ಎರಡಲ್ಲ ಹತ್ತಾರು ಸಂಖ್ಯೆಯಲ್ಲಿ ದಾಳಿ ಮಾಡಿ ಪೈಲೆಟ್ ಅನ್ನು ತಬ್ಬಿಬ್ಬುಗೊಳಿಸಿದವು. ಆತಂಕ ಗೊಂಡ ಪೈಲೆಟ್ ವಿಮಾನವನ್ನು ಆಕಡೆ, ಈಕಡೆ ಓಡಿಸತೊಡಗಿದ.