ಪ್ರೇಮ, ಸ್ಪೂರ್ತಿ

ಮನೆಯವರಿಗೆ ಗೊತ್ತಿಲ್ಲದೇ ಹಾಗೆ ತನ್ನ ಗೆಳತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಹುಡುಗ, ಕಾರಣ ಮಾತ್ರ ಶಾಕಿಂಗ್.

192

ಕೇರಳ ರಾಜ್ಯಕ್ಕೆ ಸೇರಿದ ಸಚಿನ್ ಹಾಗೂ ಭವ್ಯಾ ಎಂಬುವವರು ಡಿಪ್ಲೋಮ ಓದುತ್ತಿದ್ದಾಗ ಇಬ್ಬರೂ ಒಳ್ಳೆಯ ಸ್ನೇಹಿತರಾಗುತ್ತಾರೆ, ಇವರ ಸ್ನೇಹ ತುಂಬಾ ಆತ್ಮೀಯವಾಗಿ 8 ತಿಂಗಳು ಮುಂದುವರೆದ ಕಾರಣ ಇವರ ಸ್ನೇಹವನ್ನ ಅಪಾರ್ಥ ಮಾಡಿಕೊಂಡ ಭವ್ಯಾ ಮನೆಯವರು ಸಚಿನ್ ಜೊತೆ ಮಾತನಾಡದೆ ಇರುವಂತೆ ಭವ್ಯಾಗೆ ಎಚ್ಚರಿಕೆಯನ್ನ ನೀಡುತ್ತಾರೆ. ಇನ್ನು ತಮ್ಮ ಮನೆಯವರ ಮಾತಿಗೆ ಬೆಲೆಕೊಟ್ಟ ಭವ್ಯಾ ಸಚಿನ್ ಜೊತೆ ಮಾತನಾಡುವುದನ್ನ ಬಿಟ್ಟು ಬಿಡುತ್ತಾಳೆ, ಇನ್ನು ಈ ಸಮಯದಲ್ಲಿ ನಮ್ಮಿಬ್ಬರ ನಡುವೆ ಇರುವುದು ಬರಿ ಸ್ನೇಹ ಅಲ್ಲ ಪ್ರೀತಿ ಅನ್ನುವುದು ಅವರಿಬ್ಬರಿಗೂ ಅರಿವಾಗುತ್ತದೆ. ಸಚಿನ್ ಜೊತೆ ಮಾತನಾಡದೆ ಇರುವುದಕ್ಕೆ ಭವ್ಯಾಗೆ ಆಗದೆ ಇದ್ದ ಕಾರಣ ಮನೆಯವರಿಗೆ ತಿಳಿಯದಂತೆ ಸಚಿನ್ ನನ್ನ ಭೇಟಿ ಮಾಡಿ ಅವನ ಜೊತೆ ಮಾತನಾಡುತ್ತಿರುತ್ತಾಳೆ ಭವ್ಯಾ. ಇನ್ನು ಇಬ್ಬರ ನಡುವೆ ಪ್ರೀತಿ ಆರಂಭ ಆದಮೇಲೆ ಕೆಲಸಕ್ಕೆ ಸೇರಿಕೊಂಡ ಭವ್ಯಾಗೆ ಕೆಲವು ದಿನಗಳ ನಂತರ ತೀವ್ರವಾದ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ.

ಬೆನ್ನು ನೋವು ಜಾಸ್ತಿ ಆದಕಾರಣ ಸಚಿನ್ ಜೊತೆ ಆಸ್ಪತ್ರೆಗೆ ಪರಿಶೀಲನೆ ಮಾಡಿದಾಗ ಭವ್ಯಾಗೆ ಕ್ಯಾನ್ಸರ್ ಇರುವುದು ಗೊತ್ತಾಗುತ್ತದೆ, ಇದನ್ನ ಕೇಳಿದ ಭವ್ಯಾ ಮತ್ತು ಸಚಿನ್ ಗೆ ಆಕಾಶವೇ ತಲೆಯ ಮೇಲೆ ಬಿದ್ದಂತೆ ಆಗುತ್ತದೆ. ಇನ್ನು ಈ ಸಮಯದಲ್ಲಿ ಭವ್ಯಾಗೆ ಧೈರ್ಯ ತುಂಬಿದ ಸಚಿನ್ ನಿನಗೆ ನಾನಿದ್ದೇನೆ, ಅದೆಷ್ಟೇ ಕಷ್ಟ ಆಗಲಿ ನಾನು ನಿನ್ನನ್ನ ಕಾಪಾಡಿಕೊಳ್ಳುತ್ತೇನೆ ನೀವು ಸ್ವಲ್ಪಾನು ಹೆದರಬೇಡ ಎಂದು ಭವ್ಯಾಳ ಕಷ್ಟಕ್ಕೆ ಹೆಗಲು ಕೊಟ್ಟ ಸಚಿನ್ ಆಕೆಗೆ ಧೈರ್ಯ ತುಂಬುತ್ತಾನೆ. ಇನ್ನು ಭವ್ಯಾ ಮನೆಗೆ ಗೊತ್ತಾಗದಂತೆ ಆಕೆಯನ್ನ ಪ್ರತಿ ವಾರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರಿಶೀಲನೆ ಮಾಡಿಸಿ ಆಕೆಗೆ ಪ್ರಾರ್ಥಮಿಕ ಚಿಕೆತ್ಸೆಯನ್ನ ಕೊಡಿಸುತ್ತಾನೆ ಸಚಿನ್, ಕೆಲವು ಸಮಯದ ನಂತರ ಈ ವಿಷಯ ಇಬ್ಬರ ಮನೆಯವರಿಗೆ ಗೊತ್ತಾಗಿ ಮನೆಯವರು ಆಘಾತಕ್ಕೆ ಒಳಗಾಗುತ್ತಾರೆ.

ಇನ್ನು ಸಚಿನ್ ಒಳ್ಳೆಯ ತನವನ್ನ ನೋಡಿದ ಭವ್ಯಾ ಮನೆಯವರು ಸಚಿನ್ ಗೆ ಕೈ ಎತ್ತಿ ನಮಸ್ಕಾರ ಮಾಡುತ್ತಾರೆ, ಭವ್ಯಾ ಮನೆಯವರು ತುಂಬಾ ಬಡವರಾಗಿದ್ದ ಕಾರಣ ಪ್ರತಿ ಕ್ಷಣ ಭವ್ಯಾ ಬಗ್ಗೆ ಚಿಂತೆ ಮಾಡಲು ಆರಂಭ ಮಾಡಿದ ಸಚಿನ್ MA ಮಾಡಬೇಕು ಅನ್ನುವ ತನ್ನ ಆಸೆಯನ್ನ ಬದಿಗಿಟ್ಟು ಭವ್ಯಾ ಚಿಕಿತ್ಸೆಗೆ ಹಣವನ್ನ ಒದಗಿಸಲು ಸಿಕ್ಕ ಸಿಕ್ಕಕಡೆ ಕೆಲಸವನ್ನ ಮಾಡುತ್ತಾನೆ ಮತ್ತು ಸಾಲವನ್ನ ಪಡೆಯುತ್ತಾನೆ. ಇನ್ನು ಸಮಯ ಇದ್ದಾಗ ಕೂಲಿ ಕೆಲಸಕ್ಕೆ ಹೋಗಿ ಕಷ್ಟಪಟ್ಟು ದುಡಿಯುತ್ತಾನೆ, ಇನ್ನು ಆಸ್ಪತ್ರೆಯಲ್ಲಿ ವಾರಗಟ್ಟಲೆ ಭವ್ಯಾ ಜೊತೆ ಇರಬೇಕಾಗಿದ್ದ ಕಾರಣ ಒಂದು ದಿನ ದೇವಸ್ಥಾನದಲ್ಲಿ ಸರಳವಾಗಿ ಭವ್ಯಳನ್ನ ಮದುವೆಯಾಗುತ್ತಾನೆ ಸಚಿನ್. ಇನ್ನು ಮದುವೆಯ ಸಮಯದಲ್ಲಿ ಬಂಧುಗಳು ಮತ್ತು ಸ್ನೇಹಿತರು ಸಚಿನ್ ಗೆ ಒಂದಷ್ಟು ಹಣದ ಸಹಾಯವನ್ನ ಮಾಡುತ್ತಾರೆ.

ಕೊನೆಗೆ ಆಸ್ಪತ್ರೆಗೆ ಬೇಕಾಗುವಷ್ಟು ಹಣವನ್ನ ಶೇಖರಣೆ ಮಾಡುತ್ತಾನೆ ಸಚಿನ್, ಇನ್ನು ಭವ್ಯಾ ಆಪರೇಷನ್ ಗೆ ಒಳಗಾಗುವ ಸಚಿನ್ ಹೇಳಿದ ಕೊನೆಯ ಮಾತು ಏನು ಎಂದು ತಿಳಿದರೆ ನಿಮಗೂ ಕೂಡ ಕಣ್ಣಲ್ಲಿ ನೀರು ಬರುತ್ತದೆ. ಹೌದು ಸಚಿನ್ ಕೊನೆಯದಾಗಿ ಹೇಳಿದ್ದು ಏನು ಅಂದರೆ ನಾಳೆಯ ಬಗ್ಗೆ ನನಗೆ ಅರಿವಿಲ್ಲ ಆದರೆ ನನಗೆ ಭವ್ಯಾ ವಾಪಾಸ್ ಬೇಕು ಅಷ್ಟೇ ಮತ್ತು ಅದಕ್ಕಾಗಿ ನಾನು ಏನು ಮಾಡಲು ಕೂಡ ಸಿದ್ದ ಎಂದು ಹೇಳಿ ಕಣ್ಣೀರು ಹಾಕುತ್ತಾನೆ. ದೇವರ ಆಶೀರ್ವಾದ ಇವರಿಬ್ಬರ ಮೇಲೆ ಇದೆ ಎಂದು ಕಾಣುತ್ತದೆ, ಹೌದು ಭವ್ಯಾ ಮಾರಕ ಖಾಯಿಲೆಯನ್ನ ಗೆದ್ದು ಬಂದಿದ್ದಾಳೆ, ಸ್ನೇಹಿತರೆ ಪ್ರೀತಿ ಅಂದರೆ ಆಕರ್ಷಣೆ ಅಲ್ಲ ಮತ್ತು ಪ್ರೀತಿ ಅಂದರೆ ಧೈರ್ಯ ಎಂದು ಸಾರಿದ ಸಚಿನ್ ನ ಒಳ್ಳೆತನ ಮತ್ತು ಇವರಿಬ್ಬರ ಪ್ರೀತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ