ಸುದ್ದಿ

ಹಳ್ಳಿ ಹುಡುಗನ ಮೇಲೆ ವಿದೇಶಿ ಹುಡುಗಿಯ ಪ್ರಪೋಸ್. ಪ್ರೇಮ ಕುರುಡೋ? ಪ್ರೇಮಿ ಕುರುಡೋ? ದೇವರೇ ಬಲ್ಲ..

1153

ಪ್ರೀತಿ ಎಂಬುದು ಒಂದು ಸುಮಧುರ ಅನುಭವ, ಪ್ರತಿಯೊಬ್ಬರ ಜೀವನದಲ್ಲಿ ಅನುಭವಿಸಬೇಕಾದ ಒಂದು ಫೀಲಿಂಗ್. ಮನುಷ್ಯನ ಜೀವನದಲ್ಲಿ ಒಂದು ಅವಿಭಾಜ್ಯ ಅಂಶ ಎಂದರೆ ಈ ಪ್ರೀತಿ ಎಂಬ ಫೀಲಿಂಗ್. ತಮಗೆಲ್ಲರಿಗೂ ತಿಳೆದಿರುವ ಹಾಗೆ ಪ್ರೀತಿ ಎಂಬುದು ಯಾವಾಗ, ಯಾರಿಗೆ, ಯಾವ ಜಾಗದಲ್ಲಿ, ಯಾವ ಕ್ಷಣದಲ್ಲಿ ಹೇಗೆ ಹುಟ್ಟುತ್ತದೆ ಎಂಬುದು ಹೇಳಲು ಬಹಳ ಕಷ್ಟಸಾಧ್ಯ.. ಯಾವ ರೂಪದಲ್ಲಿ ಯಾರ ಮೇಲಾದರೂ ಕೂಡ ಆಗಬಹುದು ಉದಾಹರಣೆಗೆ ಬಡವ ಶ್ರೀಮಂತ ,ಸುಂದರಿ ಕುರೂಪಿ , ಮುಸಲ್ಮಾನ ಲಿಂಗಾಯಿತ ಹೀಗೆ ಯಾವ ಧರ್ಮಗಳ ಮೇಲೆ ಬೇಕಾದರೂ ಆಗಬಹುದು.. ಆದರೆ ಪ್ರೀತಿ ಮಾಡುವುದು ದೊಡ್ಡ ವಿಚಾರವಲ್ಲ. ಪ್ರೀತಿ ಮಾಡಿ ವಿವಾಹವಾಗಿ ಬದುಕಿ ಬಾಳಿ ತೋರಿಸಿದರೆ ನಮ್ಮ ಪ್ರೀತಿ ಮತ್ತು ಜೀವನಕ್ಕೆ ಒಂದು ಅರ್ಥ ಸಿಗುತ್ತದೆ.

ಅಂತೆಯೇ ಇಲ್ಲೊಬ್ಬ ಹಳ್ಳಿ ಹುಡುಗನ ಮೇಲೆ ವಿದೇಶಿ ಹುಡುಗಿಗೆ ಸಿಕ್ಕಾಪಟ್ಟೆ ಪ್ರೀತಿಯಾಗಿದೆ. ವಿಶೇಷವೇನೆಂದರೆ ಪ್ರಥಮ ಬಾರಿಗೆ ಅಂದರೆ ಒಂದೇ ನೋಟದಲ್ಲಿ ಆ ಹುಡುಗನ ಮೇಲೆ ಈಕೆಗೆ ಪ್ರೀತಿಯಾಗಿದೆ.ದ್ರೋಹ ಹುಡುಗಿ ವಿದೇಶದಲ್ಲಿ ಯಾವ ಕೆಲಸ ಮಾಡುತ್ತಿದ್ದಾಳೆ ಎಂದು ತಿಳಿದುಕೊಂಡರೆ ಒಂದು ಕ್ಷಣ ನೀವು ಆಶ್ಚರ್ಯ ಪಡುತ್ತೀರಿ..

ಕುಗ್ರಾಮದಲ್ಲಿ ಹುಟ್ಟಿದ ನರೇಂದ್ರ ಅನ್ನುವ ಹುಡುಗ.. ಆದರೆ ಬಿಸಿಲಿಗೆ ಸರಸ್ವತಿ ಒಲಿದು ಬರಲಿಲ್ಲ. ಒಂದು ಅಕ್ಷರವೂ ತಲೆಗೆ ಹೋಗುತ್ತಿರಲಿಲ್ಲ. ಹಳ್ಳಿಯಲ್ಲಿ ಇದ್ದ ಕಾರಣ ಓದು ತಲೆಗೆ ಹತ್ತದ ಕಾರಣ ತಮಗಿದ್ದ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದ ಮತ್ತು ಬಿಡುವಿನ ಸಮಯದಲ್ಲಿ ಕೂಲಿ ಕೆಲಸವನ್ನ ಮಾಡುತ್ತಿದ್ದ.. ವ್ಯವಸಾಯ ನಂಬಿಕೊಂಡರೆ ಅಷ್ಟಾಗಿ ಹಣ ಗಳಿಸಲು ಸಾಧ್ಯವಿಲ್ಲ ಎಂದು ಕೆಲವರು ಅಂದುಕೊಂಡಿರುತ್ತಾರೆ. ಅಂತೆಯೇ ಈ ಹುಡುಗನ ಜೀವನದಲ್ಲೂ ಇದೇ ನಡೆದಿದೆ.

ಮಾಡುತ್ತಿದ್ದ ವ್ಯವಸಾಯ ಮತ್ತು ಕೂಲಿ ಕೆಲಸದಲ್ಲಿ ಆತನಿಗೆ ಬಿಡುಗಾಸು ಸಿಗುತ್ತಿದ್ದ ಕಾರಣ ಕರ್ನಾಟಕ ಮತ್ತು ಗೋವಾ ಗಡಿಯಲ್ಲಿ ಇರುವ ಒಂದು ಬಾರ್ ನಲ್ಲಿ ಕೆಲಸಕ್ಕೆ ಸೇರಿಕೊಂಡ. ಗೋವಾ ಗಡಿ ಎಂದರೆ ತಮಗೆಲ್ಲರಿಗೂ ತಿಳಿದಿರುತ್ತದೆ. ಆ ಬಾರ್ ನಲ್ಲಿ ಹೆಚ್ಚಾಗಿ ವಿದೇಶಿಗರೇ ಬರುತ್ತಿರುತ್ತಾರೆ.. ಇನ್ನು ನರೇಂದ್ರ ಕೆಲಸ ಮಾಡುತ್ತಿದ್ದ ಬಾರ್ ನಲ್ಲಿ ಒಮ್ಮೆ ಒಂದು ರಷ್ಯಾ ದೇಶದ ಸುಂದರ ಹುಡುಗಿ ಬರುತ್ತಾಳೆ. ನಂತರ ನರೇಂದ್ರ ನನ್ನು ಕರೆದು ಒಂದು ಬಿಯರ್ ತರುವಂತೆ ಹೇಳುತ್ತಾಳೆ.

ವಿದೇಶಿ ಹುಡುಗಿಯ ಮಾತಿನಂತೆ ಒಂದು ಬಿಯರನ್ನು ತೆಗೆದುಕೊಂಡು ಬಂದು, ಅವಳ ಮುಂದೆ ಇಟ್ಟು ಗ್ಲಾಸ್ ನಲ್ಲಿ ಬಿಯರ್ ಹಾಕುತ್ತಾನೆ .ಆ ಕ್ಷಣದಲ್ಲಿ ಆಕೆಗೆ ಏನಾಯಿತೋ ಏನೋ? ನರೇಂದ್ರನ ಕಣ್ಣಿನಲ್ಲಿ ಒಂದು ಆಕರ್ಷಣೆ ಕಂಡಿತ್ತಂತೆ. ನಂತರ ಏನಾಯಿತೋ ಗೊತ್ತಿಲ್ಲ, ಅ‍ ಕ್ಷಣದಿಂದ ಆ ರಷ್ಯಾ ಹುಡುಗಿ ನರೇಂದ್ರನನ್ನು ಇಷ್ಟಪಡಲು ಆರಂಭಿಸಿದಳು,ಅಲ್ಲದೆ ನೇರವಾಗಿ ನರೇಂದ್ರನಿಗೆ ತನ್ನ ಪ್ರೇಮದ ವಿಚಾರವನ್ನುಹೇಳಿಬಿಡುತ್ತಾಳೆ .ವಿಶೇಷವೇನೆಂದರೆ ಆಕೆ ಪ್ರಪೋಸ್ ಮಾಡಿದ ತಕ್ಷಣವೇ ಇವಳು ಬೇರೆ ದೇಶದವಳು, ಬೇರೆ ಜಾತಿಯವಳು, ಬೇರೆ ಧರ್ಮದವಳು ಎಂದು ಲೆಕ್ಕಿಸದೇ ಆಕೆಯ ಪ್ರೀತಿಗೆ ಬೆಲೆ ಕೊಟ್ಟು ನರೇಂದ್ರ ಒಪ್ಪಿಕೊಂಡು ಬಿಡುತ್ತಾನೆ.

ನಂತರ ಅವರ ಪ್ರೀತಿ ಚಿಗುರೊಡೆದು ಎಲ್ಲರಿಗೂ ತಿಳಿಯುತ್ತದೇ. ಅಲ್ಲದೇ ಅಲ್ಲಿ ಇಲ್ಲಿ ಸುತ್ತಾಡುತ್ತಿರುತ್ತಾರೆ.ಹೀಗೆ ದಿನಗಳುರುಳಿದಂತೆ ನರೇಂದ್ರನಿಗೆ ಒಂದು ಅಚ್ಚರಿಯ ಸುದ್ದಿ ತಿಳಿದು ಬರುತ್ತದೆ.
ಹೌದು ರಷ್ಯಾದ ಆ ದೇಶದ ಹುಡುಗಿಯ ಹೆಸರು ಅನಸ್ತತ. ಮತ್ತು ಆಕೆ ರಷ್ಯಾದ ಪಾರ್ಲಿಮೆಂಟಿನಲ್ಲಿ ದೊಡ್ಡ ಹುದ್ದೆಯಲ್ಲಿ ಇದ್ದಾಳೆ ಎಂಬುದು ನರೇಂದ್ರನಿಗೆ ತಿಳಿಯುತ್ತದೆ ಮತ್ತು ಇದನ್ನು ಕೇಳಿದ ಅವನು ಆಶ್ಚರ್ಯನಾಗುತ್ತಾನೆ.

ಇನ್ನು ಕೆಲಸದ ಕಾರಣದಿಂದ ಆಕೆ ರಷ್ಯಾಗೆ ಹೋಗಿಬಿಡುತ್ತಾಳೆ. ಆಕೆಯನ್ನು ಬಿಟ್ಟಿರಲಾರದ ನರೇಂದ್ರ ಎರಡು ಭಾರಿ ರಷ್ಯಾ ದೇಶಕ್ಕೆ ಹೋಗಿ ಬರುತ್ತಾನೆ. ನಂತರ ಕೆಲಸವನ್ನು ಮುಗಿಸಿ ಮರಳಿ ಭಾರತಕ್ಕೆ ಬಂದ ಅನಸ್ತತ, ನರೇಂದ್ರನನ್ನು ಮದುವೆ ಮಾಡಿಕೊಳ್ಳುತ್ತಾಳೆ. ನಂತರ ಆಕೆಯನ್ನು ನರೇಂದ್ರ ತನ್ನ ಊರಿಗೆ ಕರೆದುಕೊಂಡು ಹೋಗುತ್ತಾನೆ. ಹಳ್ಳಿಯವರು ಈ ಜೋಡಿಯನ್ನು ನೋಡಿ ಸಿಕ್ಕಾಪಟ್ಟೆ ಶಾಕ್ ಆಗುತ್ತಾರೆ.

ಸದ್ಯಕ್ಕೆ ರಷ್ಯಾ ದೇಶದಲ್ಲಿ ನೆಲೆಯೂರಲು ಆಲೋಚನೆ ಮಾಡಿರುವ ನರೇಂದ್ರ ಮತ್ತು ಅನಸ್ತತ ,ವರ್ಷದಲ್ಲಿ ಮೂರು ತಿಂಗಳು ಭಾರತದಲ್ಲಿ ಇರಲು ನಿರ್ಧಾರ ಮಾಡಿದ್ದಾರಂತೆ. ಅನಸ್ತತ ದೊಡ್ಡ ಹುದ್ದೆಯಲ್ಲಿ ಇರುವುದರಿಂದ ಅವಳು ಹೇಳಿದಂತೆ ನರೇಂದ್ರ ಬದುಕಬೇಕು ಎಂದು ನೀವು ಅಂದುಕೊಂಡಿದ್ದರೆ ಅದು ಅಕ್ಷರಶ ತಪ್ಪು, ನರೇಂದ್ರನನ್ನು ತುಂಬಾ ಪ್ರೀತಿ ಮಾಡುವ ಈ ಹುಡುಗಿ ಆತನಿಗೆ ಗೌರವ ಕೊಡುವುದರ ಜೊತೆಗೆ ಆತನ ಮಾತನ್ನ ಚಾಚೂತಪ್ಪದೆ ಪಾಲಿಸುತ್ತಾಳೆ.ನೋಡಿದ್ರಲ್ಲ ಅದೆಷ್ಟು ಜನ ನಾವು ಸುಂದರವಾಗಿಲ್ಲ ನಾವು ಬಿಳುಪಾಗಿಲ್ಲ ಎಂದು ಕೊರಗುತ್ತಿರುತ್ತಾರೆ.. ಆದರೆ ನಿಮ್ಮ ನಡವಳಿಕೆಯನ್ನ ಗಾಡವಾಗಿ ಪ್ರೀತಿ ಮಾಡುವವರು ಒಬ್ಬರಾದವು ಇದ್ದೆ ಇರುತ್ತಾರೆ ಅನ್ನುವುದು ಈ ಪ್ರೇಮಿಗಳಿಂದ ತಿಳಿದು ಬಂದಿದೆ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    Video Game; 4 ತಿಂಗಳಲ್ಲಿ 30 ಗೇಮ್‌ ರಚಿಸಿ ಅಚ್ಚರಿ ಮೂಡಿಸಿದ ಬಾಲಕ,.!!

    ಮಕ್ಕಳು ಮೊಬೈಲ್‌ ಹಿಡಿದುಕೊಂಡರೆ, ಮೊದಲು ಹುಡುಕುವುದು ಗೇಮ್ಸ್ ಇದೆಯೇ ಎಂದು! ಅದಾದ ಬಳಿಕ ವಿಡಿಯೋ, ಕ್ಯಾಮರಾ ಎಂದೆಲ್ಲ ವಿವಿಧ ಆಯ್ಕೆಗಳನ್ನು ಹುಡುಕುತ್ತಾರೆ. ಅಲ್ಲದೆ ಮೊಬೈಲ್, ಕಂಪ್ಯೂಟರ್ ಮತ್ತು ಟ್ಯಾಬ್ ಬಳಕೆಯನ್ನು ಕೂಡ ಬಹಳ ಬೇಗನೆ ಕಲಿತುಕೊಂಡು ಬಿಡುತ್ತಾರೆ. ಹೀಗೆ ಸ್ಮಾರ್ಟ್ ಆಗಿರುವ ನೈಜೀರಿಯಾದ 9 ವರ್ಷದ ಬಾಲಕನೊಬ್ಬ ನಾಲ್ಕೇ ತಿಂಗಳಲ್ಲಿ ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್‌ಗಳಿಗಾಗಿ 30 ಗೇಮ್‌ಗಳನ್ನು ಅಭಿವೃದ್ಧಿ ಮಾಡುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾನೆ. ಈ ಬಾಲಕನ ಹೆಸರು ಬೇಸಿಕ್‌ ಓಕ್ಪರಾ ಜ್ಯೂ. ಲಾಗೋಸ್‌ ನಿವಾಸಿಯಾಗಿರುವ…

  • ಸುದ್ದಿ

    9ರ ಬಾಲಕಿಯನ್ನು ಅತ್ಯಾಚಾರ ಮಾಡಿದ ಆರೋಪಿಯನ್ನು ನಡು ರಸ್ತೆಯಲ್ಲೇ ಬಡಿದು ಸಾಯಿಸಿದ್ರು ಜನ…..!

    9 ವರ್ಷದ ಅಪ್ರಾಪ್ತೆ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದು, ಆತನನ್ನು ಸ್ಥಳೀಯರು ಹಿಡಿದು ಥಳಿಸಿ ಹತ್ಯೆಗೈದ ಘಟನೆ ಪಂಜಾಬ್‍ನ ಜಲಂಧರ್ ನಲ್ಲಿ ನಡೆದಿದೆ. ಜಲಂಧರ್ ನ ರಾಮ ಮಂಡಿ ಪ್ರದೇಶದಲ್ಲಿ ಭಾನುವಾರ ಈ ಘಟನೆ ನಡೆದಿದೆ. ಅಲೆಮಾರಿ ಕೂಲಿಕಾರನಾಗಿದ್ದ ಪಪ್ಪು ಕುಮಾರ್(39) 9 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಾಲಕಿಯ ಪೋಷಕರು ಕೂಡ ಅಲೆಮಾರಿ ಕೂಲಿಕಾರಾಗಿದ್ದು, ಬಾಲಕಿ ಹಾಗೂ ಆರೋಪಿ ನೆರೆಹೊರೆಯ ಮನೆಗಳಲ್ಲಿ ವಾಸವಾಗಿದ್ದರು. ಭಾನುವಾರ ಆರೋಪಿ ತನ್ನ ಮನೆಗೆ ಬಾಲಕಿಯನ್ನು ಹೊತ್ತೊಯ್ದು ಅತ್ಯಾಚಾರ ಮಾಡಿದ್ದಾನೆ. ಈ…

  • ಉಪಯುಕ್ತ ಮಾಹಿತಿ

    ಕನ್ಯಾದಾನ ಯೋಜನೆ ಅಡಿಯಲ್ಲಿ ದಿನಾಲೂ 121 ರೂಪಾಯಿ ಇನ್ವೆಸ್ಟ್ಮೆಂಟ್ ಮಾಡಿದ್ರೆ ಸಿಗುತ್ತೆ 27 ಲಕ್ಷ ರೂಪಾಯಿಗಳು..!

    ಕಡಿಮೆ ಹಣ ಹೂಡಿಕೆ ಮಾಡಿ ಹೆಚ್ಚಿನ ಹಣ ವಾಪಸ್ ಪಡೆಯಲು ಯಾರು ಬಯಸುವುದಿಲ್ಲ ಹೇಳಿ. ಪ್ರತಿಯೊಬ್ಬರೂ ಕೈತುಂಬ ಸಂಪಾದನೆ ಮಾಡುವ ಬಗ್ಗೆ ಆಲೋಚನೆ ಮಾಡ್ತಾರೆ. ಕಡಿಮೆ ಹಣ ಹೂಡಿ ಹೆಚ್ಚು ಲಾಭ ಪಡೆಯಲು ಬಯಸುವವರಿಗೆ ಎಲ್ಐಸಿ ಹೊಸ ಪಾಲಿಸಿಯೊಂದನ್ನು ಶುರು ಮಾಡಿದೆ. ಎಲ್ಐಸಿ ಈ ಪ್ಲಾನ್ ನಲ್ಲಿ ಪ್ರತಿ ದಿನ 121 ರೂಪಾಯಿ ಹಣ ಹೂಡಿದ್ರೆ 25 ವರ್ಷಗಳ ನಂತ್ರ 27 ಲಕ್ಷ ರೂಪಾಯಿ ನಿಮ್ಮ ಕೈ ಸೇರುತ್ತದೆ. ಮಗಳ ಮದುವೆಗೆ ಸಹಾಯವಾಗಲಿ ಎನ್ನುವ ಕಾರಣಕ್ಕೆ ಎಲ್ಐಸಿ…

  • ಕಾನೂನು

    ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಶಿಕ್ಷೆ

    ಕೋಲಾರ ಜಿಲ್ಲೆಯ ಬಂಗಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ಕೆಜಿಎಫ್ ಟೌನ್, ರಾಬರ್ಟ್ಸನ್ ಪೇಟೆಯ ವಾಸಿ ಉಮೇಶ್ ಬಿನ್ ಪಿ.ರಾಜಾ ಎಂಬುವರು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನ ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿರುವ ಅರೋಪದ ಮೇಲೆ ಬಂಗಾರಪೇಟೆ ಪೋಲಿಸರು ಪೋಕ್ಸೊ ಪ್ರಕರಣ ದಾಖಲಿಸಿಕೊಂಡು ವೃತ್ತ ನಿರೀಕ್ಷಕರಾದ ಸುನೀಲ್ ಕುಮಾರ್ ರವರು ತನಿಖೆ ನೆಡೆಸಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿರುತ್ತಾರೆ. ಸದರಿ ಪ್ರಕರಣದ ಸಂಖ್ಯೆ : ಎಸ್.ಸಿ.11/2021ರ ವಿಚಾರಣೆ ನಡೆಸಿದ ಪೋಕ್ಸೊ ನ್ಯಾಯಾಲದಯದ ನ್ಯಾಯಾಧೀಶರಾದ ಬಿ.ಪಿ.ದೇವಮಾನಿ ರವರು ಆರೋಪ ರುಜುವಾತಾದ ಹಿನ್ನಲೆ ಪೋಕ್ಸೊ…

  • ಸುದ್ದಿ

    ಕೇರಳ ನಂತರ ಕರ್ನಾಟಕದಲ್ಲೂ ಬಾವಲಿ ಜ್ವರದ ಭೀತಿ- 8 ಜಿಲ್ಲೆಗಳಿಗೆ ಕಟ್ಟೆಚರ…..!

    ಕೇರಳದಲ್ಲಿ ಭೀತಿ ಹುಟ್ಟಿಸಿರುವ ನಿಫಾ ವೈರಸ್ (ಬಾವಲಿ ಜ್ವರ)ದ ಸೋಂಕು ಕರ್ನಾಟಕದಲ್ಲೂ ಆತಂಕ ಸೃಷ್ಟಿಸಿದೆ. ಕೇರಳಕ್ಕೆ ಹೊಂದಿಕೊಂಡಿರುವ 8 ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಸೇರಿದತೆ 8 ಜಿಲ್ಲೆಗಳಲ್ಲಿ ನಿಗಾ ವಹಿಸಲಾಗಿದೆ. ಅಲ್ಲದೆ ಪ್ರತಿದಿನ ವೈದ್ಯಕೀಯ ವರದಿ ನೀಡಲು ಸರ್ಕಾರ ಸೂಚಿಸಿದೆ. ಒಂದು ವೇಳೆ ನಿಫಾ ಸೋಂಕು ಪತ್ತೆಯಾದಲ್ಲಿ ಅವರನ್ನು ಜನರಿಂದ ಪ್ರತ್ಯೇಕಿಸಲು ಸೂಚಿಸಲಾಗಿದೆ. ಇದನ್ನೂ ಓದಿ: ನಿಪಾ ವೈರಸ್ ಎಂದರೇನು?- ಲಕ್ಷಣಗಳೇನು?- ವೈರಸ್…

  • ತಂತ್ರಜ್ಞಾನ

    ಮೊಬೈಲ್‌ ನೆಟ್‌ವರ್ಕ್‌ ಇಲ್ಲದ ಪ್ರದೇಶದಲ್ಲಿ ಸಂದೇಶ ಕಳುಹಿಸಲು ಹೊಸ ಆ್ಯಪ್‌..!ತಿಳಿಯಲು ಈ ಲೇಖನ ಓದಿ…

    ಮೊಬೈಲ್‌ ನೆಟ್‌ವರ್ಕ್‌ ಇಲ್ಲದ ಪ್ರದೇಶದಲ್ಲಿ ಸಂಪರ್ಕ ಸಾಧಿಸಲು ಹೊಸ ಆ್ಯಪ್‌ವೊಂದನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.ಈ ಆ್ಯಪ್‌ ಅನ್ನು ಯಾವುದೇ ಸ್ಮಾರ್ಟ್‌ಫೋನ್‌ಗೆ ಅಳವಡಿಸಬಹುದು. ನೆಟ್‌ವರ್ಕ್‌ ಇಲ್ಲದಿದ್ದರೂ ಈ ಆ್ಯಪ್‌ ಹಲವು ಕಿಲೋ ಮೀಟರ್‌ಗಳ ದೂರದವರೆಗೂ ವೈ–ಫೈ ಸಿಗ್ನಲ್‌ ಹೊರಸೂಸುತ್ತದೆ.