ಆರೋಗ್ಯ

ಸುಲಭವಾಗಿ ತೂಕ ಹೆಚ್ಚಿಸಿಕೊಳ್ಳಬೇಕಾ? ಹಾಗಾದರೆ ಈ ಆಹಾರಗಳನ್ನು ಸೇವಿಸಿ.

137

ತೂಕ ಹೆಚ್ಚಿದ್ದರೆ ಹೇಗೆ ಸಮಸ್ಯೆಯೋ ಹಾಗೆಯೇ ತೂಕ ಕಡಿಮೆ ಇದ್ದರೂ ಕಷ್ಟ. ಜಾಹಿರಾತಿನಲ್ಲಿ ಬಂದ ಪುಡಿಯನ್ನೆಲ್ಲ ತಿಂದು ತೇಗಿದರೂ ಪ್ರಯೋಜನವಾಗಿಲ್ಲವೇ? ಅವೆಲ್ಲ ಏನೂ ಬೇಡ, ಸೂಕ್ತ ಆಹಾರ ಸೇವಿಸಿ ಸಾಕು.

ತೂಕ ಕಳ್ಕೊಳೋ ಬಗ್ಗೆ ಎಲ್ಲರೂ ಮಾತಾಡ್ತಾರೆ, ಎಲ್ಲ ಪತ್ರಿಕೆಗಳಲ್ಲೂ ಅದಕ್ಕೆ ಸಂಬಂಧಪಟ್ಟ ಟಿಪ್ಸ್, ಲೇಖನ ದಿನಕ್ಕೊಂದರಂತೆ ಹರಿದು ಬರುತ್ತವೆ, ಇಂಟರ್ನೆಟ್‌ನಲ್ಲಿ ತೂಕ ಕಳೆದುಕೊಂಡವರ ಸಕ್ಸಸ್‌ ಸ್ಟೋರಿಗಳಿಗೂ ಕೊರತೆ ಇಲ್ಲ. ಆದ್ರೆ ತೂಕ ಕಡಿಮೆ ಇರೋರ ಕತೆ ಕೇಳೋರೇ ಇಲ್ಲ. ಕಡ್ಡಿ, ಸಿಳ್ಳೆಕ್ಯಾತ, ಅಸ್ಥಿಪಂಜರ ಎಂದೆಲ್ಲ ಕರೆಸಿಕೊಂಡು, ಉಫ್ ಅಂದ್ರೆ ಹಾರಿ ಹೋಗ್ತಿ ಅಂತ ರೇಗಿಸ್ಕೊಂಡು ಈ ಸಣಕಲು ಶರೀರದವರು ಬೇಸತ್ತು ಹೋಗಿರ್ತಾರೆ. ವೀಕ್ನೆಸ್, ಸುಸ್ತು, ನಿರುತ್ಸಾಹ, ನಿಶ್ಯಕ್ತಿಯಿಂದ ಬಳಲಿರ್ತಾರೆ. ಸರಿಯಾಗಿ ಊಟ ಮಾಡಿದ್ರೂ ದಪ್ಪಗಾಗಲ್ಲ ಅನ್ನೋದು ಇವರ ಅಳಲು. ನೀವೂ ಇವರಲ್ಲಿ ಒಬ್ಬರಾಗಿದ್ದಲ್ಲಿ, ಬರೀ ಊಟವಲ್ಲ, ಈ ಆಹಾರಗಳನ್ನು ನಿಯಮಿತವಾಗಿ ಸೇವಿಸಿ. ಜೊತೆಗೆ ಚೆನ್ನಾಗಿ ನಿದ್ದೆ, ಸರಿಯಾದ ವ್ಯಾಯಾಮ ಮೈಗೂಡಿಸಿಕೊಳ್ಳಿ. ವ್ಯಾಯಾಮದಲ್ಲಿ ವ್ಹೈಟ್ ಟ್ರೇನಿಂಗ್ ಕೂಡಾ ಇದ್ದರೆ ಬರೀ ಫ್ಯಾಟ್ ದೇಹ ಸೇರುವ ಬದಲು ಚೆನ್ನಾಗಿ ಮಸಲ್ ಬಿಲ್ಡ್ ಆಗುತ್ತದೆ.

ಬಾಳೆಹಣ್ಣು
ಹೆಚ್ಚಿನ ಬಾಡಿ ಬಿಲ್ಡರ್ಸ್ ಬಾಳೆಹಣ್ಣನ್ನು ಹೆಚ್ಚಾಗಿ ಸೇವಿಸುತ್ತಾರೆ. ಪೊಟ್ಯಾಷಿಯಂ ಮತ್ತು ಕ್ಯಾಲ್ಸಿಯಂ ಹೊಂದಿರುವ ಬಾಳೆಹಣ್ಣು ಮೂಳೆಗಳ ಆರೋಗ್ಯಕ್ಕೆ ಅತ್ಯಗತ್ಯ. ಇದನ್ನು ನೀವು ಚಾಕೋಲೇಟ್ ಬನಾನಾ ಸ್ಮೂತಿಯ ರೂಪದಲ್ಲಿ ಸೇವಿಸಬಹುದು.

ಪೀನಟ್ ಬಟರ್
ಇದರಲ್ಲಿ ಪ್ರೋಟೀನ್, ಅಗತ್ಯ ಜೀವಸತ್ವಗಳು, ಮೆಗ್ನೀಷಿಯಂ, ಫೈಬರ್, ಫೋಲೇಟ್ ಉತ್ತಮ ಪ್ರಮಾಣದಲ್ಲಿದ್ದು, ನಿಯಮಿತವಾಗಿ ಸೇವಿಸಿದರೆ ಇದು ಹೃದಯದ ಆರೋಗ್ಯವನ್ನು ಕಾಪಾಡಿ, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಚಪಾತಿಗೆ ಸವರಿಕೊಂಡು ರೋಲ್ ಮಾಡಿಕೊಂಡು ತಿನ್ನಲು ರುಚಿಯಾಗಿರುತ್ತದೆ. ಬ್ರೆಡ್‌ನೊಂದಿಗೆ ಕೂಡಾ ಸೇವಿಸಬಹುದು.

ಮೊಟ್ಟೆ
ಮೊಟ್ಟೆಯಲ್ಲಿ ಎ, ಡಿ, ಇ ವಿಟಮಿನ್‌ಗಳು, ಆರೋಗ್ಯಕರ ಕೊಲೆಸ್ಟ್ರಾಲ್ ಮತ್ತು ಸಾಕಷ್ಟು ಪ್ರೋಟೀನ್‌ ಇದೆ. ದೇಹದ ಸ್ನಾಯುಗಳು ಚೆನ್ನಾಗಿ ಬೆಳವಣಿಗೆಯಾಗಬೇಕೆಂದರೆ ಮೊಟ್ಟೆ ಅತ್ಯುತ್ತಮ ಆಯ್ಕೆ. ಅವುಗಳಲ್ಲಿರುವ ಹೈ ಕ್ವಾಲಿಟಿ ಪ್ರೋಟೀನ್ ಹಾಗೂ ಹೆಲ್ದೀ ಫ್ಯಾಟ್ಸ್ ದಪ್ಪಗಾಗಬೇಕೆನ್ನುವವರಿಗೆ ವರದಾನ. ದಿನಕ್ಕೆ 3 ಮೊಟ್ಟೆಗಳನ್ನು ತಿನ್ನಲು ಅಭ್ಯಾಸ ಮಾಡಿಕೊಳ್ಳಿ.

ಸೋಯಾ ಸೋಯಾಬೀನ್‌ನಲ್ಲಿ ಅಮೈನೋ ಆಸಿಡ್ ಇದ್ದು, ಬಾಡಿ ಬಿಲ್ಡ್ ಮಾಡಲು ಸಹಕಾರಿಯಾಗಿದೆ.

ಬಾದಾಮಿ
ಕೇವಲ ಸ್ವಲ್ಪವೇ ಬಾದಾಮಿಯಲ್ಲಿ ಕೂಡಾ 7 ಗ್ರಾಂನಷ್ಟು ಪ್ರೋಟೀನ್ ಹಾಗೂ 18 ಗ್ರಾಂನಷ್ಟು ಆರೋಗ್ಯಕರ ಫ್ಯಾಟ್ ಇರುತ್ತದೆ. ಪ್ರತಿನಿತ್ಯ ಬಾದಾಮಿ ಸೇವಿಸುವುದನ್ನು ಡಯಟ್‌ಗೆ ಸೇರಿಸಿಕೊಳ್ಳಿ.

ದವಸ ಧಾನ್ಯಗಳು
– ಸದೃಢ ಮೈಕಟ್ಟು ಹೊಂದಬೇಕೆಂದಿದ್ದರೆ ಧಾನ್ಯಗಳನ್ನು ಅಪಾರ ಪ್ರಮಾಣದಲ್ಲಿ ಸೇವಿಸಬೇಕು! ಇದರಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಜೊತೆಗೆ ಪ್ರೊಟೀನ್ ಹೇರಳವಾಗಿದ್ದು ಸ್ನಾಯುಗಳ ಆರೋಗ್ಯ ರಕ್ಷಿಸಲೂ ಸಹಾಯ ಮಾಡುತ್ತದೆ.

ಡ್ರೈಫ್ರೂಟ್ಸ್
ವಾಲ್‌ನಟ್, ದ್ರಾಕ್ಷಿ, ಗೋಡಂಬಿ, ಅಂಜೂರ ಮುಂತಾದ ಡ್ರೈ ಫ್ರೂಟ್‌ಗಳಲ್ಲಿ ಶುಗರ್ ಹೆಚ್ಚಿದ್ದು, ತೂಕ ಹೆಚ್ಚಿಸುವುದಕ್ಕೆ ಸಹಕಾರಿ. ರುಚಿಯಲ್ಲಿ ಕೂಡಾ ರಾಜಿ ಮಾಡಿಕೊಳ್ಳಬೇಕಿಲ್ಲ.

ಮೊಸರು
ಮೊಸರು ಸಂಕೀರ್ಣ ಸಕ್ಕರೆ, ಅಮೈನೋ ಆಮ್ಲಗಳು ಮತ್ತು ಕರಗಬಲ್ಲ ಪ್ರೊಟೀನ್ ಗಳ ಮೂಲವಾಗಿದೆ. ಇವೆಲ್ಲವೂ ದಪ್ಪಗಾಗಲು ಸಹಾಯ ಮಾಡುತ್ತಲೇ, ಆರೋಗ್ಯವನ್ನೂ ಕಾಪಾಡುತ್ತವೆ.

ಡಾರ್ಕ್ ಚಾಕೋಲೇಟ್
ಡಾರ್ಕ್ ಚಾಕೋಲೇಟ್‌ಗಳಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್‌ಗಳು ಹೇರಳವಾಗಿರುತ್ತವೆ. ಕೋಕಾ ಪದಾರ್ಥವು ಶೇ.70ರಷ್ಟಾದರೂ ಇರುವ ಡಾರ್ಕ್ ಚಾಕೋಲೇಟ್ ಪ್ರತಿ ದಿನ ಸೇವಿಸಿ. ಪ್ರತಿ 100 ಗ್ರಾಂ ಬಾರ್‌ನಿಂದ 600 ಕ್ಯಾಲೋರಿಗಳನ್ನು ನೀವು ಪಡೆಯಬಹುದು.

ಚೀಸ್
– ಡಾರ್ಕ್ ಚಾಕೋಲೇಟ್‌ನಂತೆಯೇ ಚೀಸ್ ಕೂಡಾ ಹೆಚ್ಚು ಕ್ಯಾಲೋರಿಗಳನ್ನೂ, ಫ್ಯಾಟನ್ನೂ ಹೊಂದಿದೆ. ನಿಮ್ಮ ಆಹಾರದಲ್ಲಿ ಚೀಸ್ ಬಳಕೆ ಹೆಚ್ಚಿಸಿದರೆ ಪ್ರೋಟೀನ್ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ಸಿಗುತ್ತದೆ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಗ್ಯಾಜೆಟ್

    ಇದು ಸೆಲ್ಫಿ ಯುಗ,ಸೆಲ್ಫಿ ತೆಗೆಯುವ ಮುನ್ನ ಈ ಸುದ್ದಿಯನ್ನು ಓದಿ…

    ಇದು ಸೆಲ್ಫಿ ಯುಗ. ಕೈನಲ್ಲಿ ಮೊಬೈಲ್ ಪ್ರತಿಯೊಂದು ಕ್ಷಣದ ಫೋಟೋ ಸೆಲ್ಫಿಯಾಗಿ ಹೊರಬರುತ್ತದೆ. ಸೆಲ್ಫಿ ವಿಶೇಷತೆ ಹೊಂದಿರುವ ಮೊಬೈಲ್ ಫೋನುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ವಿಶ್ವದಾದ್ಯಂತ ಸೆಲ್ಫಿ ಕಾರಣಕ್ಕೆ ನಡೆಯುತ್ತಿರುವ ಸಾವಿನಲ್ಲಿ ಶೇಕಡಾ 60ರಷ್ಟು ಪಾಲು ಭಾರತದ್ದಿದೆ. ಕಳೆದ ಎರಡು ವರ್ಷಗಳ ಅಂಕಿ-ಅಂಶ ಇದನ್ನು ಸ್ಪಷ್ಟಪಡಿಸಿದೆ.

  • ಆರೋಗ್ಯ

    ಬೆಳ್ಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವಿಸಿದರೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಆಯುರ್ವೇದದಲ್ಲಿ ತುಪ್ಪಕ್ಕೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ಅಲ್ಲದೆ ಅದೊಂದು ಔಷಧೀಯ ಪದಾರ್ಥವೂ ಹೌದು. ನಿತ್ಯ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ತಿಂದರೆ ನಾವು ಊಹಿಸಲೂ ಅಸಾಧ್ಯವಾಗುವಂತಹ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಈ ವಿಚಾರ ನಿಮಗೆ ಆಶ್ಚರ್ಯವನ್ನು ಉಂಟುಮಾಡಬಹುದು.

  • ಸಿನಿಮಾ

    ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರರಾಗಿರುವ ರಮ್ಯಾ ಈ ಬಾರಿಯಾದ್ರೂ ತಮ್ಮ ವೋಟ್ ಹಾಕಿದ್ರಾ..?

    ಮಂಡ್ಯ ಲೋಕಸಭಾ ಕ್ಷೇತ್ರದ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಸದ್ಯ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಉಸ್ತುವಾರಿಯನ್ನು ನಿರ್ವಹಿಸುತ್ತಿದ್ದು, ಕೇರಳದ ವಯನಾಡಿನಲ್ಲಿ ಸ್ಪರ್ಧಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಪ್ರಚಾರ ಕಾರ್ಯದಲ್ಲೂ ಪಾಲ್ಗೊಂಡಿದ್ದಾರೆ. ಮಂಡ್ಯ ಚುನಾವಣೆಯಲ್ಲಿ ಸೋತ ಬಳಿಕ ರಮ್ಯಾ ರಾಜ್ಯ ರಾಜಕಾರಣದಿಂದ ದೂರವಾಗಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ಕೈಗೊಂಡಿರಲಿಲ್ಲ. ಅಷ್ಟೇ ಅಲ್ಲ, ಮಂಡ್ಯ ಕ್ಷೇತ್ರದಲ್ಲಿ ಮತದಾನ ಮಾಡುವ ಗೋಜಿಗೂ ರಮ್ಯಾ ಹೋಗಿರಲಿಲ್ಲ. ಇದೀಗ ಗುರುವಾರದಂದು ರಾಜ್ಯದಲ್ಲಿ ಮೊದಲ ಹಂತದ…

  • ಸುದ್ದಿ

    ‘ವೃಷಭಾವತಿ ಉಳಿಸಿ‌’ ಅಭಿಯಾನಕ್ಕೆ ಮತ್ತು ಮ್ಯಾರಥಾನ್ ನಲ್ಲಿ ಗೋಲ್ಡನ್‌ ಸ್ಟಾರ್ ಗಣೇಶ್ ಸಾಥ್…!

    ಐತಿಹಾಸಿಕ ಬೆಂಗಳೂರು ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿ ಉಳಿಸಿಕೊಳ್ಳುವ ಪ್ರಯತ್ನಗಳು ಇತ್ತೀಚಿಗೆ ಹೆಚ್ಚುತ್ತಿದ್ದು ಇಂತಹುದೇ ಅಭಿಯಾನವೊಂದರ ಭಾಗವಾಗಿ ಯುವಬ್ರಿಗೇಡ್ ಕೆಂಪೇಗೌಡ ನಗರಿಯ ಐತಿಹಾಸಿಕ ವೃಷಭಾವತಿ ನದಿ ಉಳಿಸಲು ವಿಶೇಷ ಕಾರ್ಯಕ್ರಮ‌ ಹಮ್ಮಿಕೊಂಡಿದೆ. ಯುವಬ್ರಿಗೇಡ್ ನ ಈ ಪ್ರಯತ್ನ ಕ್ಕೆ ಗೋಲ್ಡನ್ ಸ್ಟಾರ್ ಗಣೇಶ ಕೈಜೋಡಿಸಿದ್ದು, ಇದೇ ಸಪ್ಟೆಂಬರ್ ೨೨ ರಂದು ಭಾನುವಾರ ನಡೆಯುವ ಮ್ಯಾರಥಾನ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಸಪ್ಟೆಂಬರ್ ೨೨ ರಂದು ಭಾನುವಾರ, ವೃಷಭಾವತಿ ಸ್ವಚ್ಛತೆ ಗಾಗಿ ಕೆಂಗೇರಿ ಗಣಪತಿ ದೇವಾಲಯದಿಂದ ಬೆಂಗಳೂರು ವಿವಿವರೆಗೆ ಮ್ಯಾರಥಾನ್ ನಡೆಯಲಿದೆ….

  • India, Place, tourism

    ವ್ಯಾಲಿ ಆಫ್ ಫ್ಲಾವರ್ಸ್ ರಾಷ್ಟ್ರೀಯ ಉದ್ಯಾನವನ

    ವ್ಯಾಲಿ ಆಫ್ ಫ್ಲವರ್ಸ್ ರಾಷ್ಟ್ರೀಯ ಉದ್ಯಾನವನವು ಭಾರತೀಯ ರಾಷ್ಟ್ರೀಯ ಉದ್ಯಾನವನವಾಗಿದ್ದು, ಇದು ಉತ್ತರಾಖಂಡ ರಾಜ್ಯದ ಉತ್ತರ ಚಮೋಲಿ ಮತ್ತು ಪಿಥೋರಗ h ದಲ್ಲಿದೆ ಮತ್ತು ಇದು ಸ್ಥಳೀಯ ಆಲ್ಪೈನ್ ಹೂವುಗಳ ಹುಲ್ಲುಗಾವಲುಗಳು ಮತ್ತು ವಿವಿಧ ಸಸ್ಯವರ್ಗಗಳಿಗೆ ಹೆಸರುವಾಸಿಯಾಗಿದೆ. ಏಷ್ಯಾಟಿಕ್ ಕಪ್ಪು ಕರಡಿ ಹಿಮ ಚಿರತೆ,  ಕಸ್ತೂರಿ ಜಿಂಕೆ, ಕಂದು ಕರಡಿ, ಕೆಂಪು ನರಿ   ಮತ್ತು ನೀಲಿ ಕುರಿಗಳು ಸೇರಿದಂತೆ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ ಈ ಸಮೃದ್ಧ ವೈವಿಧ್ಯಮಯ ಪ್ರದೇಶವಿದೆ. ಉದ್ಯಾನದಲ್ಲಿ ಕಂಡುಬರುವ ಪಕ್ಷಿಗಳಲ್ಲಿ ಹಿಮಾಲಯನ್ ಮೋನಾಲ್…

  • ಜ್ಯೋತಿಷ್ಯ

    ದೇವಿಯ ಕೃಪೆಯಿಂದ ಈ ರಾಶಿಗಳಿಗೆ ಶುಭಯೋಗವಿದ್ದು ನಿಮ್ಮ ರಾಶಿಯೂ ಇದೆಯಾ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(8 ಮಾರ್ಚ್, 2019) ನಿಮ್ಮ ಸ್ನೇಹಿತರು ಮತ್ತು ಸಂಬಂಧಿಗಳ ಮೇಲೆ ನಿಮ್ಮ ಅಭಿಪ್ರಾಯ ಹೇರುವುದು ಅವರನ್ನು ಅನಗತ್ಯವಾಗಿ…