ಮನರಂಜನೆ

ಪ್ರಿಯಾಂಕಾ ಮತ್ತು ಭೂಮಿ ಶೆಟ್ಟಿ ಎಲಿಮಿನೇಟ್, ಬಿಗ್ ಟ್ವಿಸ್ಟ್ ನೀಡಿದ ಕಿಚ್ಚ ಸುದೀಪ್.

54

ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ 90 ದಿನಗಳನ್ನು ಮುಗಿಸಿದೆ. ಈ ಕಾರ್ಯಕ್ರಮ ಮುಗಿಯಲು ಇನ್ನೂ ಕೆಲವು ದಿನಗಳು ಇರುವಾಗಲೇ ಭಾನುವಾರ ಪ್ರಿಯಾಂಕಾ ಮತ್ತು ಭೂಮಿ ಶೆಟ್ಟಿ ಡಬಲ್ ಎಲಿಮಿನೇಟ್ ಆಗಿದ್ದಾರೆ.

ಹೌದು.ಭಾನುವಾರ ನಟ ಸುದೀಪ್ ಅವರು ಪ್ರಿಯಾಂಕಾ ಮತ್ತು ಭೂಮಿ ಶೆಟ್ಟಿ ಇಬ್ಬರನ್ನು ಎಲಿಮಿನೇಟ್ ಮಾಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಇಬ್ಬರಿಗೂ ಸರ್ಪ್ರೈಸ್ ಕೊಟ್ಟಿದ್ದಾರೆ. ಮುಂದಿನ ವಾರ ಡಬಲ್ ಎಲಿಮಿನೇಷನ್ ಇದೆ. ಹೀಗಾಗಿ ಈ ವಾರ ಎಲಿಮಿನೇಟ್ ಇರಲಿಲ್ಲ. ಈ ವಿಚಾರ ಮನೆಯ ಸದಸ್ಯರಿಗೆ ಗೊತ್ತಿರಲಿಲ್ಲ. ಹೀಗಾಗಿ ಮನೆಯವರ ಮನಸ್ಥಿತಿ ತಿಳಿದುಕೊಳ್ಳಲು ನಾಮಿನೇಟ್ ಪ್ರಕ್ರಿಯೆ ಮಾಡಲಾಗಿತ್ತು.

ಅದರ ಅನುಸಾರ ಪ್ರಿಯಾಂಕಾ, ಭೂಮಿ ಶೆಟ್ಟಿ, ಚಂದನ್ ಆಚಾರ್ ಮತ್ತು ದೀಪಿಕಾ ದಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಈ ನಾಲ್ವರಲ್ಲಿ ಭಾನುವಾರ ಪ್ರಿಯಾಂಕಾ ಮತ್ತು ಭೂಮಿ ಶೆಟ್ಟಿಯನ್ನು ಸುದೀಪ್ ಎಲಿಮಿನೇಟ್ ಮಾಡಿದ್ದಾರೆ.

ಇವರಲ್ಲಿ ದೀಪಿಕಾ ದಾಸ್ ಅವರನ್ನು ಸೇಫ್ ಎಂದು ಸುದೀಪ್ ಹೇಳಿದರು. ಉಳಿದ ಮೂವರಲ್ಲಿ ಇಂದು ಇಬ್ಬರು ಎಲಿಮಿನೇಟ್ ಆಗುತ್ತಾರೆ. ಭೂಮಿ ಶೆಟ್ಟಿ ಈ ವಾರ ಮೊದಲು ಎಲಿಮಿನೇಟ್ ಆಗುತ್ತಿರುವವರು ಎಂದು ಹೇಳಿದರು. ಇಂದು ಯಾರೇ ಎಲಿಮಿನೇಟ್ ಆದರೂ ವೇದಿಕೆಯ ಮೇಲೆ ಬರಲ್ಲ ಎಂದು ಇಷ್ಟು ದಿನ ಬಿಗ್‍ಬಾಸ್ ಮನೆಯಲ್ಲಿ ಕಳೆದ ಭೂಮಿ ಶೆಟ್ಟಿಯ ಜರ್ನಿಯ ವಿಡಿಯೋವನ್ನು ಪ್ಲೇ ಮಾಡಿದರು.

ವಿಡಿಯೋ ನೋಡಿದ ಭೂಮಿ, ಮನೆಯಿಂದ ಹೊರ ಹೋಗಲು ತುಂಬಾ ನೋವಾಗುತ್ತಿದೆ. ಬಿಗ್‍ಬಾಸ್ ವಾಯ್ಸ್, ಮನೆಯನ್ನು ಮಿಸ್ ಮಾಡಿಕೊಳ್ಳುತ್ತೇನೆ. ಆದರೆ ಅದ್ಭುತವಾದ ಅನುಭವ, ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತೇನೆ, ಒಳ್ಳೆಯ ಫ್ರೆಂಡ್ಸ್ ಸಿಕ್ಕಿದ್ದಾರೆ. ಖುಷಿಯಿಂದ ಹೋಗುತ್ತೇನೆ ಎಂದು ಗಳಗಳನೇ ಅತ್ತಿದ್ದಾರೆ.

ಮನೆಯಿಂದ ಹೊರ ಹೋಗುತ್ತಿರುವ ಎರಡನೇ ಸ್ಪರ್ಧಿ ಪ್ರಿಯಾಂಕಾ ಎಂದು ಸುದೀಪ್ ಹೇಳಿದರು. ಬಳಿಕ ಪ್ರಿಯಾಂಕಾ ಅವರ ಬಿಗ್‍ಬಾಸ್ ಜರ್ನಿಯ ವಿಡಿಯೋ ಪ್ಲೇ ಮಾಡಿದರು.

ವಿಡಿಯೋ ನೋಡಿ ಮಾತನಾಡಿದ ಪ್ರಿಯಾಂಕಾ, ನಿಮ್ಮ ಜೊತೆ ಮಾತನಾಡೋಕೆ ಆಗುತ್ತಿಲ್ಲ ಎಂದು ತುಂಬಾ ನೋವಾಗುತ್ತಿದೆ. ನಾನು ಅತ್ತಾಗ ಮನೆಯ ಎಲ್ಲರೂ ಸಮಾಧಾನ ಮಾಡಿದ್ದಾರೆ. ಹೀಗಾಗಿ ನಾನು ಏನಾದರೂ ತಪ್ಪು ಮಾಡಿದ್ದರೆ ಕ್ಷಮಿಸಿ ಎಂದು ಮನೆಯವರ ಬಳಿ ಕ್ಷಮೆ ಕೇಳಿದರು. ನಂತರ ನನಗೆ ತಿಳಿದ ಹಾಗೆ ಆಟವಾಡಿದ್ದೇನೆ ತಪ್ಪಾಗಿದ್ದರೆ ಸಾರಿ ಸರ್ ಎಂದು ಸುದೀಪ್ ಬಳಿಯೂ ಕ್ಷಮೆ ಕೇಳಿ ಕಣ್ಣೀರು ಹಾಕಿದ್ದಾರೆ.

ಕೊನೆಯ ಕ್ಷಣದಲ್ಲಿ ಸುದೀಪ್ ಇಬ್ಬರಿಗೂ ಸರ್ಪ್ರೈಸ್ ಕೊಟ್ಟಿದ್ದಾರೆ. ನೀವಿಬ್ಬರು ಮನೆಯಿಂದ ಹೊರಗೆ ಬರದೆ ಮನೆಯಲ್ಲಿಯೇ ಇರಿ. ಮುಂದಿನ ಶನಿವಾರ ಮತ್ತೆ ಸಿಗೋಣ ಎಂದು ಹೇಳಿ ಸುದೀಪ್ ಹೋಗಿದ್ದಾರೆ. ಇದನ್ನು ಕೇಳಿದ ತಕ್ಷಣ ಪ್ರಿಯಾಂಕಾ ಮತ್ತು ಭೂಮಿ ಒಂದು ಕ್ಷಣ ಅಚ್ಚರಿ ಪಟ್ಟಿದ್ದಾರೆ. ನಂತರ ಮನೆಯ ಎಲ್ಲಾ ಸ್ಪರ್ಧಿಗಳು ಅವರಿಬ್ಬರನ್ನು ಅಪ್ಪಿಕೊಂಡು ಸಂತಸಪಟ್ಟಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ