ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇದು 2012ರಲ್ಲಿ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದ ಗುಜರಾತಿನ ಏಕಮಾತ್ರ ಮಹಿಳೆ ಎನಿಸಿದ್ದ ಕೋಮಲ್ ಗಣಾತ್ರ ಅವರ ಕಥೆ. ಅವರ ಬದುಕಿನ ಸಂಘರ್ಷ ನಮ್ಮ ನಿಮ್ಮ ಬದುಕಿನಂತೆಯೇ ಇದೆ, ನೋಡಿ 2008, ಆಗ ಕೋಮಲ್ ಗಣಾತ್ರ ಅವರಿಗೆ 26 ವರ್ಷ. ಮುಂದೆ ತಾನು ಕೂಡ ಸಮಾಜಕ್ಕೆ ದೊಡ್ಡ ವ್ಯಕ್ತಿಯಾಗಬೇಕೆಂದು ಕನಸು ಕಾಣುತ್ತಿದ್ದರು. ಆದರೆ, ಆ ಸಮಯದಲ್ಲಿ ನ್ಯೂಜಿಲ್ಯಾಂಡ್ ನಲ್ಲಿ ನೆಲೆ ಕಂಡಿದ್ದ ಆನಿವಾಸಿ ಭಾರತೀಯ ತಾನು ಕೋಮಲ್ ಗಣಾತ್ರ ಅವರನ್ನು ಕೈ ಹಿಡಿಯುವುದಾಗಿ ಮನೆಯವರಿಂದ ಒತ್ತಡ ತಂದು ಕೊನೆಗೆ 2008ರಲ್ಲಿ ಕೋಮಲ್ ಅವರನ್ನು ಮದುವೆಯಾಗುತ್ತಾನೆ.
ಮದುವೆ ವೇಳೆ ಮಗಳು ಮತ್ತು ಅಳಿಯ ಚೆನ್ನಾಗಿರಲಿ ಎಂದು ಕೋಮಲ್ ಅವರ ತಂದೆ ಪರ್ವಿಣ್ ಗಣಾತ್ರ ಮತ್ತು ತಾಯಿ ರಂಜನ್ ಗಣಾತ್ರ, ಹಣ, ಚಿನ್ನಾಭರಣಗಳನ್ನು ವರದಕ್ಷಿಣೆಯಾಗಿ ಕೊಡುತ್ತಾರೆ. ಇನ್ನು ಕೋಮಲ್ ಅವರನ್ನು ಆನಿವಾಸಿ ಭಾರತೀಯ, ನ್ಯೂಜಿಲ್ಯಾಂಡಿನ ಉದ್ಯಮಿ ಮದುವೆಯಾದ ಮೂರೇ ವಾರದಲ್ಲಿ ಮತ್ತೆ ವರದಕ್ಷಿಣೆಗೆ ಪೀಡಿಸಿ, ಕೋಮಲ್ ಅವರನ್ನು ತ್ಯಜಿಸಿದ.
ಆತ ನ್ಯೂಜಿಲ್ಯಾಂಡ್ನಲ್ಲಿ ಉದ್ಯಮಿಯಾಗಿದ್ದು ಆತನನ್ನು ಹುಡುಕಿಕೊಂಡು ಆಕೆ ಅಲ್ಲಿಗೂ ಹೋದರು. ಆದರೆ ಪ್ರಯೋಜನವಾಗಲಿಲ್ಲ. ನೂರಾರು ಸಮಸ್ಯೆಗಳೆಲ್ಲವನ್ನು ಎದುರಿಸಿ ಕೊನೆಗೆ ಕೋಮಲ್ ನ್ಯೂಜಿಲ್ಯಾಂಡ್ನಿಂದ ಭಾರತಕ್ಕೆ ವಾಪಸ್ಸಾಗಲು ಸಫಲಳಾದಳು. ನ್ಯೂಜಿಲ್ಯಾಂಡಿನಿಂದ ಬಂದ ಕೋಮಲ್ ಕೊನೆಗೆ ಗುಜರಾತಿನ ಒಂದು ಕುಗ್ರಾಮದಲ್ಲಿ ಸರಕಾರಿ ಶಿಕ್ಷಕಿ ಕೆಲಸ ಗಿಟ್ಟಿಸಿಕೊಂಡರ. ಅದು ತಿಂಗಳಿಗೆ 5 ಸಾವಿರ ರೂಪಾಯಿ ಸಂಬಳದ ಕೆಲಸ. ಈ ವೇಳೆಯಲ್ಲೇ UPSC ಗಾಗಿ ತಯಾರಿ ಆರಂಭಿಸುತ್ತಾರೆ. ಇದಕ್ಕೆ ಕೋಮಲ್ ತಂದೆ ಮತ್ತು ಸಹೋದರರು ಪೂರ್ಣ ಸಹಕಾರ ನೀಡುತ್ತಾರೆ.
ಕೋಮಲ್ ಅಂತರ್ಜಾಲ ಅಷ್ಟೇ ಅಲ್ಲ ಸುದ್ದಿ ಪತ್ರಿಕೆ ಸಹ ಬರದ ಹಿಂದುಳಿದ ಗ್ರಾಮದಲ್ಲಿ ಅವರ ಪರೀಕ್ಷಾ ತಯಾರಿ ನಡೆಸುತ್ತಾರೆ. ಕೆಲಕಾಲ ಗುಜರಾತಿನ ಸರ್ದಾರ್ ವಲ್ಲಬಾಯಿ ಪಟೇಲ್ ಐಎಎಸ್ ಕೋಚಿಂಗ್ ಸೆಂಟರ್ ನಲ್ಲಿ ತರಬೇತಿಯನ್ನೂ ಕೂಡ ಪಡೆಯುತ್ತಾರೆ. ಕೊನೆಗೆ ಕೋಮಲ್ ಅವರು ಕಠಿಣ ಅಭ್ಯಾಸದ ಪರಿಣಾಮ ಮೂರನೇ ಪ್ರಯತ್ನದಲ್ಲಿ ಯುಪಿಎಸ್ ಸಿ ಪಾಸು ಮಾಡುತ್ತಾರೆ. ಮತ್ತೆ 2012ರಲ್ಲಿ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದ ಗುಜರಾತಿನ ಏಕಮಾತ್ರ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೋಮಲ್ ಗಣಾತ್ರ ಅವರೀಗ ಭಾರತೀಯ ಕಂದಾಯ ಇಲಾಖೆಯ ಅಧಿಕಾರಿಯಾಗಿದ್ದಾರೆ.
ಗುಜರಾತಿನಲ್ಲಿ ಉತ್ತಮ ಅಧಿಕಾರಿ ಎಂಬ ಹೆಸರನ್ನು ಕೂಡ ಗಳಿಸಿದ್ದಾರೆ. ಬಡವರು ಮತ್ತು ಶೋಷಿತ ಹೆಣ್ಣು ಮಕ್ಕಳ ಪರವಾಗಿ ನಿಂತು, ಅವರಿಗೆ ನ್ಯಾಯ ದೊರಕಿಸಿಕೊಡುವ ಕೆಲಸವನ್ನು ಕೂಡ ಮಾಡುತ್ತಿದ್ದಾರೆ ಐಎಎಸ್ ಅಧಿಕಾರಿ ಕೋಮಲ್ ಅವರು. ಜನಪ್ರತಿನಿಧಿಗಳ ವಿಶ್ವಾಸಕ್ಕೂ ಪಾತ್ರರಾಗಿದ್ದಾರೆ. ಒಟ್ಟಿನಲ್ಲಿ ಮದುವೆಯಾದ ಮೂರೇ ವಾರದಲ್ಲಿ ಗಂಡ ತೊರೆದರೂ ದೃತಿಗೆಡದೆ ಛಲದಿಂದ ಓದಿ ದೊಡ್ಡ ಐಎಎಸ್ ಅಧಿಕಾರಿಯಾಗಿರುವ ಕೋಮಲ್ ಗಣಾತ್ರ ಮಹಿಳೆಯರಿಗೂ ಸ್ಫೂರ್ತಿಯ ಶಕ್ತಿ ಅಲ್ಲವೇ?
🙏🙏
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದೇವಸಖ – ಓಂ ದೇವಸಖಾಯ ನಮಃ, ಚಿಕ್ಲೀತ – ಓಂ ಚಿಕ್ಲೀತಾಯ ನಮಃ, ಆನಂದ – ಓಂ ಆನಂದಾಯ ನಮಃ ಕರ್ದಮ – ಓಂ ಕರ್ದಮಾಯ ನಮಃ , ಶ್ರೀಪ್ರದ – ಓಂ ಶ್ರೀಪ್ರದಾಯ ನಮಃ, ಜಾತವೇದ – ಓಂ ಜಾತವೇದಾಯ ನಮಃ, ಅನುರಾಗ – ಓಂ ಅನುರಾಗಾಯ ನಮಃ, ಸಂವಾದ – ಓಂ ಸಂವಾದಾಯ ನಮಃ, ವಿಜಯ – ಓಂ ವಿಜಯಾಯ ನಮಃ, ವಲ್ಲಭ – ಓಂ ವಲ್ಲಭಾಯ ನಮಃ, ಮದ – ಓಂ ಮದಾಯ…
ಉಗ್ರರಿಗೆ ಹಣಕಾಸು ನೀಡುವ ಹಾಗೂ ಅಕ್ರಮ ಹಣ ವರ್ಗಾವಣೆ ಮಾಡುತ್ತಿರುವ ಜಾಲ ಹತ್ತಿಕ್ಕಿ, ಅಕ್ಟೋಬರ್ ಒಳಗಾಗಿ ಅವರ ವಿರುದ್ಧ ನಿರ್ದಿಷ್ಟ ಕ್ರಮ ಕೈಗೊಳ್ಳದೇ ಇದ್ದಲ್ಲಿ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್(ಎಫ್‍ಎಟಿಎಫ್) ಎಚ್ಚರಿಕೆ ನೀಡಿದೆ.ಫ್ಲೋರಿಡಾದ ಒರ್ಲಾಂಡೋದಲ್ಲಿ ನಡೆದ ಉಗ್ರರ ಹಣಕಾಸು ವ್ಯವಸ್ಥೆಯ ಮೇಲಿನ ಕಣ್ಗಾವಲು ಸಂಸ್ಥೆಯಾದ ಹಣಕಾಸು ಕ್ರಮ ಕ್ರಿಯಾ ಪಡೆಯ (ಎಫ್‍ಎಟಿಎಫ್) ವಾರ್ಷಿಕ ಮಹಾಸಭೆಯಲ್ಲಿ ಉಗ್ರರನ್ನು ಹತ್ತಿಕ್ಕುವಲ್ಲಿ ಪಾಕಿಸ್ತಾನದ ವೈಫಲ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಲಾಯಿತು. ಪ್ರಸ್ತುತವಾಗಿ ಎಫ್‍ಎಟಿಎಫ್ ಅಲ್ಲಿ…
ಕನ್ನಡ ಚಿತ್ರರಂಗದ ದೊಡ್ಮನೆ ಅಣ್ಣಾವ್ರ ಮನೆಯಲ್ಲಿ ಮದುವೆ ಸಂಭ್ರಮ ನಡೆದಿದೆ. ಇದು ದೊಡ್ಮನೆಯ ಮೂರನೇ ತಲೆಮಾರಿನ ಮದುವೆಯಾಗಿದ್ದು, ಡಾ. ರಾಜ್ ಕುಮಾರ್ ಮತ್ತು ಪಾರ್ವತಮ್ಮ ಅವರ ಹಿರಿಯ ಪುತ್ರಿ ಲಕ್ಷ್ಮೀ ಅವರ ಮಗ ಶಾನ್ (ಷಣ್ಮುಖ) ರ ಮದುವೆ ಮಾರ್ಚ್ 26 ರಂದು ಶಿವಮೊಗ್ಗದಲ್ಲಿ ನಡೆದಿದೆ. ಶಾನ್ ಮತ್ತು ಸಿಂಧೂ ಮದುವೆ ಆಮಂತ್ರಣ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಬಿಮಾನಿಗಳು ಮದುವೆಗೆ ಬನ್ನಿ ಎಂದು ಎಲ್ಲರನ್ನೂ ಆಹ್ವಾನ ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ಪುತ್ರಿ ನಿರುಪಮಾ ಮದುವೆ…
ನಟ ಚಿರಂಜೀವಿ ಸರ್ಜಾ ಅವರ ಅಂತಿಯ ದರ್ಶನಕ್ಕೆ ಸಾಕಷ್ಟು ಜನರು ಆಗಮಿಸುತ್ತಿದ್ದಾರೆ. ದರ್ಶನದ ನಡುವೆಯೇ ಅರ್ಚಕರು ಪೂಜಾ ವಿಧಿವಿಧಾನವನ್ನು ಆರಂಭಿಸಿದ್ದಾರೆ. ಈ ವೇಳೆ ಅಣ್ಣ ಚಿರಂಜೀವಿಗೆ ಪೂಜೆ ಸಲ್ಲಿಸುವಾಗ ಧ್ರುವ ಕಣ್ಣೀರು ಹಾಕಿದ್ದಾರೆ. ಅಲ್ಲದೇ ಅಣ್ಣನನ್ನು ತಬ್ಬಿಕೊಂಡು ಗಳಗಳನೇ ಅತ್ತಿದ್ದಾರೆ. ಇತ್ತ ಚಿರಂಜೀವಿ ಪತ್ನಿ ಮೇಘನಾ ರಾಜ್ ಕೂಡ ಪತಿಯ ಕೆನ್ನೆ ಸವರಿದ್ದಾರೆ. ಸಮಯಾಭಾವದಿಂದ ಸಾರ್ವಜನಿಕರ ದರ್ಶನದ ನಡುವೆಯೇ ಪೂಜಾ ವಿಧಿವಿಧಾನ ಪ್ರಾರಂಭವಾಗಿದೆ. ಚಿರು ಅಂತಿಮ ವಿಧಿ ವಿಧಾನದ ಪೂಜೆಗೆ ಕುಟುಂಬಸ್ಥರು, ಅಭಿಮಾನಿಗಳು ಸೇರಿದಂತೆ ಸ್ಯಾಂಡಲ್‍ವುಡ್‍ನ ಅನೇಕ…
ಪಣಜಿ, ದೇಶದ ಜನರ ಆರೋಗ್ಯ ರಕ್ಷಣೆಗೆ ಒತ್ತು ನೀಡಿರುವ ಜಿಎಸ್ಟಿ ಮಂಡಳಿ ಕೆಫೀನ್ ಆಧಾರಿತ ಪೇಯಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ. ಇದೇ ವೇಳೆ ಪ್ರವಾಸೋದ್ಯಮಕ್ಕೆ ಒತ್ತು ಕೊಡಲು ಹೋಟೆಲ್ ಕೋಣೆಗಳ ಬಾಡಿಗೆ ಮೇಲಿನ ತೆರಿಗೆಯನ್ನು ಇಳಿಸಿದೆ. ಜಿಎಸ್ಟಿ ಮಂಡಳಿ ಸಭೆಯ ಬಳಿಕ ಶುಕ್ರವಾರ ರಾತ್ರಿ ಸುದ್ದಿಗಾರರ ಜತೆ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಒಂದು ರಾತ್ರಿ ತಂಗಲು 1 ಸಾವಿರ ರೂ.ವರೆಗಿನ ಹೋಟೆಲ್ ಕೋಣೆಗಳ ಬಾಡಿಗೆ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆಯನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಒಂದು…
ಬೇವು ಬೆಲ್ಲದ ಆರೋಗ್ಯ ಪ್ರಯೋಜನಗಳು ಗೊತ್ತಾದ್ರೆ ನಿಜಕ್ಕೂ ಅಚ್ಚರಿಪಡುವಿರಿ!ಹಿಂದೂ ಕ್ಯಾಲೆಂಡರ್ ಪ್ರಕಾರ ಯುಗಾದಿ ಹೊಸ ವರ್ಷದ ದಿನವಾಗಿದೆ ಹಾಗೂ ಪವಿತ್ರ ಸಮಯ ಎಂದು ಪರಿಗಣಿಸಲ್ಪಡುತ್ತದೆ. ಕರ್ನಾಟಕದಲ್ಲಿ ಈ ಹಬ್ಬಕ್ಕೆ ಯುಗಾದಿ ಎಂದೂ ಮಹಾರಾಷ್ಟ್ರದಲ್ಲಿ ಗುಡಿ ಪಾವ್ಡಾ ಎಂಬ ಹೆಸರಿನಿಂದಲೂ ಆಚರಿಸಲಾಗುತ್ತದೆ. ಹಬ್ಬದ ವಿಶೇಷವಾಗಿ ಬೇವು ಮತ್ತು ಬೆಲ್ಲದ ಮಿಶ್ರಣವನ್ನು ಸಾಂಕೇತಿಕವಾಗಿ ಸೇವಿಸಲಾಗುತ್ತದೆ. ತಮಿಳುನಾದು ಮತ್ತು ಆಂಧ್ರಪ್ರದೇಶದಲ್ಲಿಯೂ ಈ ಹಬ್ಬವನ್ನು ಆಚರಿಸಲಾಗುತ್ತದೆ ಹಾಗೂ ಸುಖ ದುಃಖದ ಸಂಕೇತಗಳಾಗಿ ಬೇವು ಬೆಲ್ಲವನ್ನು ಹಂಚಲಾಗುತ್ತದೆ. ಬೇವು ರುಚಿಯಲ್ಲಿ ಕಹಿ ಮತ್ತು ಬೆಲ್ಲ…