ಹಣ ಕಾಸು

ಚಿಲ್ಲರೆ ಅಭಾವ ತಪ್ಪಿಸಲು ಅತೀ ಶೀಘ್ರದಲ್ಲಿ ಬರಲಿವೆ 200 ರುಪಾಯಿ ನೋಟುಗಳು!

323

ಜನರ ನಗದು ಚಲಾವಣೆಯನ್ನು ಸುಲಭವಾಗಿಸಲು 200 ರೂಪಾಯಿಯ ನೋಟುಗಳು ಸದ್ಯದಲ್ಲೇ ಚಲಾವಣೆಗೆ ಬರಲಿವೆ. 200 ರೂ. ಮುಖಬೆಲೆಯ ಹೊಸ ನೋಟುಗಳ ಮುದ್ರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.

ಸರ್ಕಾರಿ ಅಧಿಕಾರಿಗಳು ಎಎನ್`ಐಗೆ ನೀಡಿರುವ ಮಾಹಿತಿ ಪ್ರಕಾರ, 200 ರೂಪಾಯಿಯ ಮುದ್ರಣಕ್ಕೆ ಈಗಾಗಲೇ ಆದೇಶ ಹೊರಬಿದ್ದಿದೆ. ಇದೀಗ ನೋಟಿನ ಹೊಸ ವಿನ್ಯಾಸವನ್ನು ಸಿದ್ಧಪಡಿಸಲಾಗಿದ್ದು, ಮುದ್ರಣಾಲಯಕ್ಕೆ ನೋಟಿನ ವಿನ್ಯಾಸವನ್ನು ನೀಡಿಲಾಗಿದೆ ಎಂದು ಹೇಳಲಾಗುತ್ತಿದೆ.

 

ನವೆಂಬರ್ 8ರಂದು ಕೇಂದ್ರ ಸರಕಾರ ಅಪನಗದೀಕರಣ ಘೋಷಿಸಿತ್ತು. ರೂ. 500 ಮತ್ತು 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿತ್ತು. ಇದರಿಂದ ಚಾಲ್ತಿಯಲ್ಲಿದ್ದ 17.9 ಲಕ್ಷ ಕೋಟಿ ಬೆಲೆಯ ಶೇಕಡಾ 86ರಷ್ಟು ನೋಟುಗಳು ಅಮಾನ್ಯವಾಗಿದ್ದವು.

ನಂತರ ಕೇಂದ್ರ ಸರಕಾರ ಹೊಸ 2000 ಮುಖಬೆಲೆಯ ಹಾಗೂ 500 ಮುಖಬೆಲೆಯ ನೋಟನ್ನು ಜಾರಿಗೆ ತಂದಿತ್ತು. 2000 ರೂ. ನೋಟಿಗೆ ವ್ಯಾಪಕ ಚಿಲ್ಲರೆ ಅಭಾವ ಎದುರಾದ ಪರಿಣಾಮ ಹೆಚ್ಚುವರಿಯಾಗಿ 100 ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗಿತ್ತು.

ಹೊಸದಾಗಿ ಚಲಾವಣೆ ಬರಲಿವೆ ಎನ್ನಲಾಗುತ್ತಿರುವ 200 ರೂ. ನೋಟುಗಳು ಪ್ಲಾಸ್ಟಿಕ್ ನೋಟ್ ಆಗಿರಲಿದ್ದು, ನಕಲು ಮಾಡಲು ಸಾಧ್ಯವಾಗುವುದಿಲ್ಲ ಎನ್ನಲಾಗುತ್ತಿದೆ. ಇದರ ಜೊತೆಗೆ 200 ರೂ ನೋಟು ದೇಶಾದ್ಯಂತ ಸೃಷ್ಟಿಯಾಗಿರುವ ಚಿಲ್ಲರೆ ಸಮಸ್ಯೆಗೆ ಪರಿಹಾರ ನೀಡಲಿದೆ ಎನ್ನಲಾಗುತ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ