ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಾಳೆ ಹಣ್ಣು ಯಾರು ತಾನೇ ತಿನ್ನಲ್ಲ ಹೇಳಿ, ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ವರೆಗೂ ಬಾಳೆ ಹಣ್ಣನ್ನ ತಿನ್ನುತ್ತಾರೆ, ಬಾಳೆ ಹಣ್ಣಿನಲ್ಲಿ ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೋಕೋಸ್ ಎಂಬ ಮೂರು ರೀತಿಯ ಸಕ್ಕರೆ ಅಂಶಗಳನ್ನು ಒಳಗೊಂಡ ಪೈಬರ್ ಇವೆ, ಬಾಳೆಹಣ್ಣು ತ್ವರಿತ ನಿರಂತರ ಮತ್ತು ಗಮನಾರ್ಹ ಶಕ್ತಿ ನೀಡುತ್ತದೆ. ಎರಡು ಬಾಳೆಹಣ್ಣು ತಿಂದರೆ 90 ನಿಮಿಷ ಶ್ರಮದಾಯಕ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಅಧ್ಯನದಿಂದ ತಿಳಿದು ಬಂದಿದೆ, ವಿಶ್ವದ ಪ್ರಮುಖ ಕ್ರೀಡಾ ಪಟುಗಳು ಸೇವಿಸುವ ಹಣ್ಣುಗಳ ಪೈಕಿ ನಂಬರ್ ಒಂದು ಹಣ್ಣು ಎಂದರೆ ಬಾಳೆಹಣ್ಣು ಎಂದು ಹೇಳಿದರೆ ಅಚ್ಚರಿಪಡಬೇಕಾಗಿಲ್ಲ. ಸರ್ವಕಾಲದಲ್ಲಿ ಲಭ್ಯ, ಅಗ್ಗ ಹಾಗೂ ಸುಲಭವಾಗಿ ಜೀರ್ಣಿಸಿಕೊಳ್ಳಬಲ್ಲ ಹಣ್ಣು ಎಂದರೆ ಬಾಳೆಹಣ್ಣು. ಅದರಲ್ಲೂ ಚುಕ್ಕೆಬಿದ್ದ ಸಿಪ್ಪೆಯ ಬಾಳೆಹಣ್ಣಿನಲ್ಲಿ ಟ್ಯೂಮರ್ ನೆಕ್ರೋಸಿಸ್ ಫ್ಯಾಕ್ಟರ್ (ಟಿಎನ್ಎಫ್) ಎಂಬ ಪೋಷಕಾಂಶವಿದ್ದು ಇವು ಕ್ಯಾನ್ಸರ್ ಗೆಡ್ಡೆಗಳನ್ನು ನಾಶಪಡಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಇನ್ನು ಸಾಮಾನ್ಯವಾಗಿ ನೀವು ಬಾಳೆಹಣ್ಣನ್ನು ತಿನ್ನುವಾಗ ಅದರ ಸಿಪ್ಪೆ ಮೇಲೆ ಚುಕ್ಕೆಗಳನ್ನು ನೋಡಿರಬಹುದು, ಈ ಸಿಪ್ಪೆಗಳು ಹೇಗೆ ನಮ್ಮ ಆರೋಗ್ಯಕ್ಕೆ ಲಾಭಕಾರಕ ಎನ್ನುವುದನ್ನು ಎಂದಾದರೂ ಯೋಚಿಸಿದ್ದೀರಾ, ಹಾಗಾದರೆ ಚುಕ್ಕೆ ಇರುವ ಬಾಳೆ ಹಣ್ಣು ನಮ್ಮ ದೇಹಕ್ಕೆ ಹೇಗೆ ಆರೋಗ್ಯಕರ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮಾ ಅನಿಸಿಕೆಯನ್ನ ನಮಗೆ ತಿಳಿಸಿ. ಚುಕ್ಕೆಗಳು ಗಾಢ ಮತ್ತು ಅಗಲವಾಗಿದ್ದಷ್ಟೂ ಬಾಳೆಹಣ್ಣು ಹೆಚ್ಚು ಹೆಚ್ಚು ಹಣ್ಣಾಗುತ್ತಾ ಬಂದಿದೆ ಎಂದು ತಿಳಿದುಕೊಳ್ಳಬಹುದು, ಚುಕ್ಕೆಬೀಳಲು ತೊಡಗಿದ ಬಳಿಕ ಬಾಳೆಹಣ್ಣು ತನ್ನ ಎಲ್ಲಾ ಉತ್ತಮ ಗುಣಗಳನ್ನು ಪಡೆದಿರುತ್ತದೆ ಹಾಗಾಗಿ ಈ ಚುಕ್ಕೆಗಳು ಅಗಲವಾಗುವುದನ್ನು ಕಾಯುವ ಅಗತ್ಯವಿಲ್ಲ ಮತ್ತು ಚಿಕ್ಕ ಚುಕ್ಕೆಗಳಿದ್ದರೂ ಸಾಕು.
ಎದೆಯುರಿಯನ್ನು ಶಮನಗೊಳಿಸುತ್ತದೆ
ಅಜೀರ್ಣತೆಯ ಪ್ರಭಾವವನ್ನು ವಿರುದ್ಧ ದಿಕ್ಕಿನತ್ತ ಹೊರಳಿಸಲು ಬಾಳೆಹಣ್ಣು ಅತ್ಯುತ್ತಮವಾಗಿದೆ. ಪ್ರಾಯಶಃ ಮೊಸರಿನ ಬಳಿಕ ನಾವು ಅತಿ ಸುಲಭವಾಗಿ ಜೀರ್ಣಿಸಿಕೊಳ್ಳಬಹುದಾದ ಆಹಾರಗಳಲ್ಲಿ ಬಾಳೆಹಣ್ಣು ಪ್ರಮುಖವಾಗಿದೆ. ತನ್ಮೂಲಕ ಈಗಾಗಲೇ ಕೆಟ್ಟಿರುವ ಹೊಟ್ಟೆಯನ್ನು ಈ ಆಹಾರ ಇನ್ನಷ್ಟು ಕೆಡಿಸಲಾರದು, ಬದಲಿಗೆ ಉಂಟಾಗಿರುವ ಎದೆಯುರಿ ಮತ್ತು ಹುಳಿತೇಗನ್ನು ಶಮನಗೊಳಿಸಬಲ್ಲುದು. ಹಾಗಾಗಿ ಮುಂದಿನ ಬಾರಿ ಈ ತೊಂದರೆ ಎದುರಾದರೆ ತಕ್ಷಣ ಚುಕ್ಕೆಬಿದ್ದ ಸಿಪ್ಪೆಯ ಬಾಳೆಹಣ್ಣೊಂದನ್ನು ಸೇವಿಸಿದರೆ ಸಾಕು.

ಕ್ಯಾನ್ಸರ್ ವಿರುದ್ಧ ಹೆಚ್ಚುವರಿ ರಕ್ಷಣೆ
ಚುಕ್ಕೆಬಿದ್ದ ಸಿಪ್ಪೆಯ ಬಾಳೆಹಣ್ಣಿನಲ್ಲಿ ಟ್ಯೂಮರ್ ನೆಕ್ರೋಸಿಸ್ ಫ್ಯಾಕ್ಟರ್ (ಟಿಎನ್ಎಫ್) ಎಂಬ ಪೋಷಕಾಂಶವಿದ್ದು ಇವು ಕ್ಯಾನ್ಸರ್ ಗೆಡ್ಡೆಗಳನ್ನು ನಾಶಪಡಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಮೂಲಕ ಕ್ಯಾನ್ಸರ್ ವಿರುದ್ದ ಹೆಚ್ಚುವರಿ ರಕ್ಷಣೆ ಪಡೆಯಲು ಚುಕ್ಕೆಬಿದ್ದ ಸಿಪ್ಪೆಯ ಬಾಳೆಹಣ್ಣೇ ಸೇವನೆಗೆ ಅತ್ಯುತ್ತಮವಾಗಿದೆ.
ಮಾಸಿಕ ದಿನಗಳ ಸೋವಿನಿಂದ ಶಮನ ನೀಡುತ್ತದೆ
ಮಾಸಿಕ ದಿನಗಳಲ್ಲಿ ಎದುರಾಗುವ ಕೆಳಹೊಟ್ಟೆಯ ಭಾಗದ ಸ್ನಾಯುಗಳ ಸೆಡೆತವನ್ನು ಸಡಿಲಿಸಲು ಬಾಳೆಹಣ್ಣಿನ ಪೊಟ್ಯಾಶಿಯಂ ನೆರವಾಗುತ್ತದೆ. ಅಲ್ಲದೇ ಇದರಲ್ಲಿರುವ ವಿಟಮಿನ್ B6 ಹೊಟ್ಟೆಯುಬ್ಬರಿಕೆಯಾಗದಂತೆ ಹಾಗೂ ಕೆಳಹೊಟ್ಟೆಯ ಭಾಗದಲ್ಲಿ ನೀರು ತುಂಬಿಕೊಳ್ಳದಂತೆ ತಡೆಯುತ್ತದೆ. ಹಾಗಾಗಿ ಮಾಸಿಕ ದಿನಗಳಲ್ಲಿ ಸೇವೆಸಲು ಚುಕ್ಕೆಬಿದ್ದ ಸಿಪ್ಪೆಯ ಬಾಳೆಹಣ್ಣು ಅತ್ಯುತ್ತಮ ಆಹಾರವಾಗಿದೆ.
ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುತ್ತದೆ
ನಿಮ್ಮ ರಕ್ತದೊತ್ತಡವನ್ನು ಆರೋಗ್ಯಕರ ಮಟ್ಟಗಳ ಮಿತಿಯೊಳಗೇ ಇರುವಂತೆ ಕಾಪಾಡಿಕೊಳ್ಳಲು, ನಿಮ್ಮ ರಕ್ತದಲ್ಲಿ ನೀವು ಉತ್ತಮ ಪೊಟ್ಯಾಸಿಯಮ್ ಮಟ್ಟವನ್ನು ಹೊಂದಿರಬೇಕು ಮತ್ತು ಚುಕ್ಕೆಬಿದ್ದ ಸಿಪ್ಪೆಯ ಬಾಳೆಹಣ್ಣು ಪೊಟ್ಯಾಶಿಯಂನ ಆಗರವಾಗಿದೆ. ಹಾಗೂ ಹೃದಯದ ಒತ್ತಡವನ್ನು ಹೆಚ್ಚು ಮಾಡುವ ಸೋಡಿಯಂ ಪ್ರಮಾಣ ಅತಿ ಕಡಿಮೆ ಇದೆ. ಮತ್ತು ಕಡಿಮೆ ಸೋಡಿಯಂ ಅಂಶವನ್ನು ಹೊಂದಿರುತ್ತವೆ,

ಖಿನ್ನತೆಯನ್ನು ನಿವಾರಿಸುತ್ತದೆ
ಬಾಳೆಹಣ್ಣಿನಲ್ಲಿರುವ ಟ್ರಿಪ್ಟೋಫ್ಯಾನ್ ಎಂಬ ಅಮೈನೋ ಆಮ್ಲ ಮೆದುಳಿನಲ್ಲಿ ಸೆರೋಟೋನಿನ್ ಎಂಬ ರಸದೂತವನ್ನು ಉತ್ಪಾದಿಸಲು ಪ್ರಚೋದನೆ ನೀಡುತ್ತದೆ. ಇದು ಮನೋಭಾವವನ್ನು ನಿಯಂತ್ರಿಸುವ ಹಾಗೂ ಸುಖನಿದ್ದೆ ಆವರಿಸಲು ಅಗತ್ಯವಾದ ರಸದೂತವಾಗಿದೆ. ಹಾಗಾಗಿ ಬಾಳೆಹಣ್ಣು ತಿಂದ ಬಳಿಕ ನಿರಾಳತೆ ದೊರಕುವ ಜೊತೆಗೇ ಸುಖನಿದ್ದೆಯೂ ಆವರಿಸುತ್ತದೆ.
ಅವು ಶಕ್ತಿಯ ತ್ವರಿತ ಶಕ್ತಿಯ ಮೂಲವಾಗಿದೆ
ಚುಕ್ಕೆಬಿದ್ದ ಸಿಪ್ಪೆಯ ಬಾಳೆಹಣ್ಣು ಮೂರು ನೈಸರ್ಗಿಕ ಸಕ್ಕರೆಗಳನ್ನು ಹೊಂದಿರುತ್ತದೆ – ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೂಕೋಸ್ ಮತ್ತು ಕರಗುವ ನಾರಿನೊಂದಿಗೆ ಸಂಯೋಜಿಸಲ್ಪಟ್ಟಿದೆ. ಶ್ರಮದಾಯಕ ವ್ಯಾಯಾಮದ ಮೊದಲು ಕೇವಲ 2 ಬಾಳೆಹಣ್ಣುಗಳನ್ನು ತಿನ್ನುವುದರಿಂದ ದೇಹದ ಸಹಿಷ್ಣುತೆಯನ್ನು ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಹೆಚ್ಚಿಸಬಹುದು ಎಂದು ಸಂಶೋಧನೆಗಳು ವಿವರಿಸಿವೆ. ಪೊಟ್ಯಾಸಿಯಮ್ ಸ್ನಾಯು ಸೆಳೆತವನ್ನು ತಡೆಯಲು ಸಹಾ ಸಹಾಯ ಮಾಡುತ್ತದೆ.

ತಕ್ಷಣವೇ ಶಕ್ತಿ ದೊರಕುತ್ತದೆ
ಬಾಳೆಹಣ್ಣಿನಲ್ಲಿ ಹೆಚ್ಚಿನ ಕ್ಯಾಲೋರಿಗಳಿದ್ದು ತಿಂದ ಬಳಿಕ ಕ್ಷಿಪ್ರ ಸಮಯದಲ್ಲಿಯೇ ರಕ್ತದ ಮೂಲಕ ದೇಹದಲ್ಲಿ ಹೆಚ್ಚಿನ ಶಕ್ತಿ ಒದಗಿಸಲು ಸಾಧ್ಯವಾಗುತ್ತದೆ. ಹಾಗಾಗಿ ಹೆಚ್ಚಿನ ಶಕ್ತಿಯ ಅಗತ್ಯವಿರುವ ಸಂದರ್ಭದಲ್ಲಿ ಅನಾರೋಗ್ಯಕರ ಶಕ್ತಿಪೇಯಗಳನ್ನು ಕುಡಿಯುವ ಬದಲು ಕೆಲವು ಬಾಳೆಹಣ್ಣುಗಳನ್ನು ತಿಂದರೆ ಸಾಕು. ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಮ್ ನಿಮ್ಮ ಸ್ನಾಯುಗಳನ್ನು ಸೆಳೆತದಿಂದ ತಡೆಯುತ್ತದೆ. ಇತರ ಖನಿಜಗಳು ಮತ್ತು ಪೋಷಕಾಂಶಗಳು ದೀರ್ಘಕಾಲದ ದೈಹಿಕ ಸಹಿಷ್ಣುತೆಯನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.
ಜೀರ್ಣಾಂಗದಲ್ಲಿ ಉಂಟಾಗಿದ್ದ ಹುಣ್ಣುಗಳು ಬೇಗನೇ ಮಾಗುತ್ತವೆ
ಆಮ್ಲೀಯ ಆಹಾರದ ಕಾರಣ ಎದುರಾಗಿರುವ ಹೊಟ್ಟೆ ಮತ್ತು ಕರುಳಿನ ಹುಣ್ಣುಗಳು (ಅಲ್ಸರ್) ನಿಮ್ಮ ಆಹಾರಸೇವನೆಯನ್ನೇ ಬಾಧಿತಗೊಳಿಸಬಹುದು. ಹೊಟ್ಟೆಯ ಹುಣ್ಣು ಇದ್ದರೆ ಖಾರ, ಹುಳಿ ಉಪ್ಪು ಯಾವುದನ್ನೂ ತಿನ್ನಲು ಸಾಧ್ಯವಾಗುವುದಿಲ್ಲ. ಆದರೆ ಈ ಹುಣ್ಣುಗಳ ಮೇಲೆ ಬಾಳೆಹಣ್ಣು ಶಮನಕಾರಿ ಪ್ರಭಾವ ನೀಡುತ್ತದೆ ಹಾಗೂ ಉರಿಯನ್ನೂ ಉಂಟುಮಾಡುವುದಿಲ್ಲ. ಈ ಮೂಲಕ ಈ ತೊಂದರೆ ಇರುವ ವ್ಯಕ್ತಿಗಳಿಗೆ ಅಗತ್ಯವಿರುವ ಅಮೂಲ್ಯ ಪೋಷಕಾಂಶಗಳನ್ನೂ ಒದಗಿಸುತ್ತದೆ.
ಮಲಬದ್ದತೆಯನ್ನು ಇಲ್ಲವಾಗಿಸುತ್ತದೆ
ಬಾಳೆಹಣ್ಣಿನಲ್ಲಿರುವ ಕರಗುವ ನಾರು ಜೀರ್ಣಗೊಂಡ ಆಹಾರ ಕರುಳುಗಳಲ್ಲಿ ಸುಲಭವಾಗಿ ಚಲಿಸಲು ನೆರವಾಗುವ ಮೂಲಕ ತ್ಯಾಜ್ಯಗಳು ಗಟ್ಟಿಯಾಗದಂತೆ ಹಾಗೂ ಮಲಬದ್ದತೆಯಾಗದಂತೆ ನೆರವಾಗುತ್ತವೆ. ಮುಂದಿನ ಬಾರಿ ಮಲಬದ್ದತೆಯ ತೊಂದರೆ ಕಾಣಿಸಿಕೊಂಡರೆ ರಾತ್ರಿ ಮಲಗುವ ಮುನ್ನ ಎರಡು ಚುಕ್ಕೆಬಿದ್ದ ಸಿಪ್ಪೆಯ ಬಾಳೆಹಣ್ಣುಗಳನ್ನು ತಿಂದರೆ ಸಾಕು.

ರಕ್ತಹೀನತೆಯನ್ನು ಇಲ್ಲವಾಗಿಸುತ್ತದೆ
ಬಾಳೆಹಣ್ಣಿನದಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ. ನಮ್ಮ ಪು ರಕ್ತ ಕಣಗಳ ಮುಖ್ಯ ಅಂಶಗಳಲ್ಲಿ ಕಬ್ಬಿಣವೂ ಒಂದು, ಅದು ನಮ್ಮ ರಕ್ತದ ಮೂಲಕ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಸಾಗಿಸಲು ಅಗತ್ಯವಾಗಿದೆ. ಬಾಳೆಹಣ್ಣುಗಳು ನಿಮ್ಮ ದೇಹದ ಕಬ್ಬಿಣದ ಅಗತ್ಯವನ್ನು ಪೂರೈಸುತ್ತವೆ, ಇದರಿಂದಾಗಿ ರಕ್ತಹೀನತೆಯ ಸಂಭವವನ್ನು ಕಡಿಮೆ ಮಾಡುತ್ತದೆ. ರಕ್ತಹೀನತೆಯಿರುವ ವ್ಯಕ್ತಿಗಳ ರಕ್ತದಲ್ಲಿ ಬ್ಬಿಣದ ಅಂಶದ ಕೊರತೆ ಇರುತ್ತದೆ ಮತ್ತು ರೋಗಪೀಡಿತ ಕೆಂಪು ರಕ್ತ ಕಣಗಳು ಹೆಚ್ಚಿರುತ್ತವೆ.
ಚುಕ್ಕೆಬಿದ್ದ ಸಿಪ್ಪೆಯ ಬಾಳೆಹಣ್ಣಿನಲ್ಲಿ ಹೆಚ್ಚು ಪೊಟ್ಯಾಶಿಯಂ ಇರುತ್ತದೆ
ಚುಕ್ಕೆಬೀಳಲು ಪ್ರಾರಂಭವಾದ ಬಳಿಕ ತಿರುಳಿನಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚುತ್ತಾ ಹೋಗುವುದು ಒಂದು ವಿಸ್ಮಯ. ಆದರೆ ಸೋಡಿಯಂ ಮಟ್ಟ ಮಾತ್ರ ಅಲ್ಪವೇ ಇರುತ್ತದೆ. “Journal of the American Medical Association”ಮಾಧ್ಯಮದಲ್ಲಿ ಪ್ರಕಟವಾದ ಪಿ.ಕೆ ವ್ಹೆಲ್ಟನ್ ಮತ್ತು ತಂಡದವರ ವರದಿಯ ಪ್ರಕಾರ ನಿತ್ಯವೂ ಬಾಳೆಹಣ್ಣು ಸೇವಿಸುತ್ತಾ ಬಂದರೆ ಇದು ಸಂಕೋಚನದ ಒತ್ತಡವನ್ನು 3 mmHg ಹಾಗೂ ವಿಕಸನದ ಒತ್ತಡವನ್ನು2 mmHg ವರೆಗೆ ತಗ್ಗಿಸುತ್ತದೆ. “Health foodstyle.net” ಪ್ರಕಾರ, ದಿನಕ್ಕೆರಡು ಚುಕ್ಕೆಬಿದ್ದ ಸಿಪ್ಪೆಯ ಬಾಳೆಹಣ್ಣನ್ನು ಸೇವಿಸಿದಾಗ ಇದರಲ್ಲಿರುವ ಪೋಷಕಾಂಶಗಳು ನಿಮ್ಮ ಆರೋಗ್ಯಕ್ಕೆ ಈ ಕೆಳಗಿನ ಪ್ರಯೋಜನಗಳನ್ನು ಒದಗಿಸುತ್ತವೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಂದು ಮಹಾಶಿವರಾತ್ರಿ ಮಂಗಳವಾರ, 13/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ಬಜೆಟ್ ಮಂಡಿಸಿದ್ದು, ಈ ಬಜೆಟ್’ನಲ್ಲಿ ಬಡವರಿಗೆ ಬಿಪಿಎಲ್ ಕಾರ್ಡುದಾರರಿಗೆ ಆರೋಗ್ಯದ ವಿಚಾರವಾಗಿ ಬಂಪರ್ ಕೊಡುಗೆಯನ್ನು ಘೋಷಿಸಿದ್ದರು. ಹೌದು, ಕೇಂದ್ರಸರ್ಕಾರದ ಮಹತ್ವದ ಯೋಜೆನೆಯಾದ ‘ಆಯುಷ್ಮಾನ್ ಭಾರತ್’ ವಿಮೆ ಯೋಜನೆ ಈಗಾಗಲೇ ಜಾರಿಯಾಗಿದ್ದು, ಈ ಯೋಜನೆಯಿಂದ ಬಡವರು ಮತ್ತು ಬಿಪಿಎಲ್ ಕಾರ್ಡುದಾರರು ಸೇರಿದಂತೆ ಭಾರತದ ಸುಮಾರು 10 ಕೋಟಿ ಕುಟುಂಬಗಳಿಗೆ ಈ ಯೋಜನೆಯಿಂದ ಉಪಯೋಗವಾಗಲಿದೆ.ಈ ಕುಟುಂಬಗಳು ವಾರ್ಷಿಕವಾಗಿ 5 ಲಕ್ಷ ರೂಪಾಯಿಗಳನ್ನು ಆಸ್ಪತ್ರೆ ವೈದ್ಯಕೀಯ ಖರ್ಚಿಗಾಗಿ, ಈ ವಿಮಾ ಯೋಜನೆ ಅಡಿಯಲ್ಲಿ…
ಕೈ ತೋಟದಲ್ಲಿ ಬೆಳೆಯುವ ಘಮ ಘಮ ವೆನ್ನುವ “ಪುದೀನ ಸೊಪ್ಪು” ಅಡಿಗೆ ಮನೇಲಿ ಮಾತ್ರ ಸೀಮಿತ ಆಗದೇ ಆರೋಗ್ಯಕ್ಕೂ ತುಂಬಾ ಒಳ್ಳೇದು. ಏಷ್ಯಾದಲ್ಲಿ ಬೆಳೆದು ಪ್ರಪಂಚದಾದ್ಯಂತ ಬಳಾಕೆಯಾಗುತ್ತಾ ಇರೋ ಈ ಸೊಪ್ಪಲ್ಲಿ ಪ್ರೋಟೀನ್, ಐರನ್, ಕ್ಯಾಲ್ಷಿಯಂ, ಪೊಟ್ಯಾಷಿಯಂ, ಫಾಸ್ಫರಸ್,ಮಗ್ನೀಷಿಯಂ ಅಲ್ಲದೇ ವಿಟಮಿನ್ A ಹಾಗು C ಇರೋದ್ರೀಂದ ಆರೋಗ್ಯಕ್ಕೆ ಬಹಳ ಒಳ್ಳೇದು.
ವೆಂಕಟ ಎಂದರೆ ಸಂಕಟ ಒಂದಿಷ್ಟಿಲ್ಲಾ ಎನ್ನುವ ಹಾಗೆ.. ಹರಿ ನಾಮ ಸ್ಮರಣೆಯಿಂದ ಅನೇಕ ರೋಗಗಳು ವಾಸಿಯಾಗುತ್ತವೆ ಎಂದು ಹಿರಿಯರು ಹೇಳುತ್ತಾರೆ.. ಈಗ ವೈಜ್ಞಾನಿಕವಾಗಿಯೂ ಸಾಭೀತಾಗಿದೆ ನೋಡಿ..ಈ ಒಂದು ಮಂತ್ರದಿಂದ ಹಾರ್ಟ್ ಅಟ್ಯಾಕ್ ಅನ್ನು ಕೂಡ ತಡೆಯಬಹುದು ಇಲ್ಲಿದೆ ನೋಡಿ ಪುರಾವೆ.. ವಿಠ್ಠಲನ ನಾಮ ಸ್ಮರಣೆಯಿಂದ ಹೃದಯಾಘಾತವಾಗಲ್ಲ, ಹೌದು ಇಂತಹದೊಂದು ಸಂಗತಿಯನ್ನು ಪುಣೆ ಮೂಲದ ತಜ್ಞರ ತಂಡವೊಂದು ಹಲವಾರು ಜನರನ್ನು ಪರೀಕ್ಷೆಗೆ ಒಳಪಡಿಸಿ ಹೇಳಿದೆ. ವಿಠ್ಠಲ ವಿಠ್ಠಲ ಎಂದು ನಾಮಸ್ಮರಣೆ ಮಾಡುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬಂದು ಹೃದಯ ಸಮಸ್ಯೆಗಳೇ…
ಮಕ್ಕಳ ನೀಧಿ ಮಯ್ಯಂ ಪಕ್ಷದ ನಾಯಕ ಕಮಲ್ ಹಾಸನ್ ಅವರ ಮೇಲೆ ಅಪರಿಚಿತರು ಚಪ್ಪಲಿ ಎಸೆದ ಘಟನೆ ಬುಧವಾರ ನಡೆದಿದೆ. ಬುಧವಾರ ಸಂಜೆ ತಮಿಳುನಾಡಿನ ತಿರುಪ್ಪರನಕುಂಡ್ರಂ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದ ಕಮಲ್ ಹಾಸನ್ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಿದ್ದ ಸಮಯದಲ್ಲ ಚಪ್ಪಲಿ ಎಸೆಯಲಾಗಿದ್ದು, ಅದು ಅವರಿಗೆ ತಾಕದೆ, ಜನರ ಗುಂಪಿನ ನಡುವೆ ಬಂದು ಬಿದ್ದಿದೆ.ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರು ಮತ್ತು ಹನುಮಾನ್ ಸೇನೆಯ ಒಟ್ಟು ಹನ್ನೊಂದು ಜನರ ಮೇಲೆ ಪೊಲೀಸರಿಗೆ ದೂರು ನೀಡಲಾಗಿದೆ. ತಮಿಳುನಾಡಿನ ಅರವಕುರಿಚಿಯಲ್ಲಿ ಮೇ 19…
ಬಾಯಿಯಿಂದ ನಿಮ್ಮ ಉಗುರುಗಳನ್ನು ಕಚ್ಚುತ್ತಿದ್ದರೆ ಆರೋಗ್ಯಕ್ಕೆ ಹಾನಿಕಾರಕ ಎಂಬುದು ನಿಮಗೆ ಗೊತ್ತಿರುವ ವಿಚಾರವೇ, ಆದರೆ ಇಲ್ಲಿ ಉಗುರು ಕಚ್ಚುವುದರಿಂದ ದೇಹದ ಮೇಲೆ ಯಾವ ರೀತಿಯೆಲ್ಲಾ ಪರಿಣಾಮ ಬೀರುತ್ತದೆ ಎಂಬ ಅಂಶ ಕೊಡಲಾಗಿದೆ ಓದಿ. ನೋಡಲು ಅಸಹ್ಯಕರವಾಗಿ ಕಾಣುತ್ತದೆ. ಯಾವಾಗಲೂ ಉಗುರುಗಳನ್ನು ಕಚ್ಚುವುದರಿಂದ ನಿಮ್ಮ ಬೆರಳುಗಳಿಗೆ ಹಾನಿಯಾಗುತ್ತದೆ. ನಿಮ್ಮ ಬಾಯಿಯಿಂದ ಹೊರಬರುವ ಲಾಲಾರಸದಲ್ಲಿರುವ ರಾಸಾಯನಿಕಗಳು ಬೆರಳುಗಳಿಗೆ ಸಾಕಷ್ಟು ಹಾನಿಯನ್ನು ಉಂಟುಮಾಡುತ್ತವೆ. ಇದು ನಿಮ್ಮ ಬೆರಳಿನ ಚರ್ಮದ ಮೇಲೆ ಸ್ಕ್ರಾಚಿಂಗ್ ಗುರುತುಗಳನ್ನು ಉಂಟುಮಾಡಲಿದ್ದು, ನೋಡಲು ಸಾಕಷ್ಟು ಅಸಹ್ಯಕರವಾಗಿ ಕಾಣುತ್ತದೆ. ಪರೋನಾಸ್ಸಿಯಾ…