ಸಿನಿಮಾ, ಸುದ್ದಿ

ಸಾಹಸಸಿಂಹ ವಿಷ್ಣುವರ್ಧನ್ ಜೊತೆ ನಟಿಸಿದ ಖ್ಯಾತ ನಟಿ ರಾಧಾ ಹಾಗೂ ಪುತ್ರಿ. ಆಕೆ ಯಾರು ಗೊತ್ತಾ..?

388

ಸೌಭಾಗ್ಯಲಕ್ಷ್ಮಿ, ಉಷಾ, ಸಾವಿರ ಸುಳ್ಳು, ದಿಗ್ವಿಜಯ ಸಿನಿಮಾಗಳಲ್ಲಿ ನಟಿಸಿರುವ ಸುಂದರ ಮೊಗದ ನಟಿ ರಾಧಾ ಕನ್ನಡ ಚಿತ್ರಪ್ರೇಮಿಗಳಿಗೆ ಚೆನ್ನಾಗಿ ಪರಿಚಯ. ಕನ್ನಡದಲ್ಲಿ ನಟಿಸಿದ್ದು ಬೆರಳೆಣಿಕೆ ಸಿನಿಮಾಗಳಲ್ಲಾದರೂ ಅವರಿಗೆ ಹೆಸರು ತಂದುಕೊಟ್ಟದ್ದು ಮಾತ್ರ ಸಾಹಸಸಿಂಹ ವಿಷ್ಣುವರ್ಧನ್ ಜೊತೆ ಅಭಿನಯಿಸಿದ ಸೌಭಾಗ್ಯಲಕ್ಷ್ಮಿ ಸಿನಿಮಾ.
ರಾಧಾ ಮೊದಲ ಹೆಸರು ಉದಯಚಂದ್ರಿಕ. ಮೂಲತ: ಮಲಯಾಳಂ ಕುಟುಂಬಕ್ಕೆ ಸೇರಿದವರು. ಕನ್ನಡದಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸದಿದ್ದರೂ ತಮಿಳು, ಮಲಯಾಳಂ ಹಾಗೂ ತೆಲುಗು ಸಿನಿಮಾಗಳಲ್ಲಿ ಹೆಸರು ಮಾಡಿದವರು ರಾಧಾ.

1991 ರಲ್ಲಿ ರಾಧಾ ಉದ್ಯಮಿ ರಾಜಶೇಖರನ್ ನಾಯರ್ ಅವರನ್ನು ವಿವಾಹವಾದರು.
ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಕಾರ್ತಿಕ ನಾಯರ್, ತುಳಸಿ ನಾಯರ್ ಹಾಗೂ ವಿಘ್ನೇಶ್ ನಾಯರ್. ಮೊದಲ ಪುತ್ರಿ ಕಾರ್ತಿಕ ನಾಯರ್ ಈಗಾಗಲೇ ಸಿನಿಮಾ ಇಂಡಸ್ಟ್ರಿಯಲ್ಲಿ ಕರಿಯರ್ ಆರಂಭಿಸಿದ್ದಾರೆ. ರಾಧಾ ಅಕ್ಕ ಅಂಬಿಕ ಕೂಡಾ ಖ್ಯಾತ ನಟಿ. 

ತೆಲುಗಿನ ‘ಜೋಶ್’ ಚಿತ್ರದ ಮೂಲಕ ಆ್ಯಕ್ಟಿಂಗ್ ಆರಂಭಿಸಿದ ಕಾರ್ತಿಕ ನಾಯರ್, ಕನ್ನಡದಲ್ಲಿ ದರ್ಶನ್ ಜೊತೆ ‘ಬೃಂದಾವನ’ ಚಿತ್ರದಲ್ಲಿ ನಟಿಸಿದ್ದಾರೆ. ಈಕೆ ನಟಿ ರಾಧಾ ಅವರ ಪುತ್ರಿ ಎಂದು ಎಷ್ಟೋ ಜನರಿಗೆ ತಿಳಿದಿಲ್ಲ. ತೆಲುಗು, ತಮಿಳು, ಮಲಯಾಳಂ, ಕನ್ನಡ ಸೇರಿ ಸುಮಾರು 10 ಸಿನಿಮಾಗಳಲ್ಲಿ ನಟಿಸಿರುವ ಕಾರ್ತಿಕ ನಾಯರ್, ಈಗ ಸಿನಿಮಾಗಳಿಂದ ದೂರವಿದ್ದು ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಇನ್ನು ಕಾರ್ತಿಕ ತಂಗಿ ಕೂಡಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮುಂಬೈ ಹಾಗೂ ಕೇರಳದಲ್ಲಿ ರಾಧಾ ಅವರ ರೆಸ್ಟೋರೆಂಟ್ ಉದ್ಯಮ ಬಹಳ ಹೆಸರಾಗಿದೆ. ಕೇರಳದ ಕೋವಲಂ ಬೀಚ್ ಬಳಿಯ ಇವರ ರೆಸ್ಟೋರೆಂಟ್ಗೆ ಬೆಸ್ಟ್ ಕೋಸ್ಟಲ್ ಬೀಚ್ ರೆಸಾರ್ಟ್ ಅವಾರ್ಡ್ ಕೂಡಾ ದೊರೆತಿದೆ. ಒಟ್ಟಿನಲ್ಲಿ ಪತಿ, ಇಬ್ಬರು ಪುತ್ರಿಯರು, ಪುತ್ರನೊಂದಿಗೆ ಚೆನ್ನೈನಲ್ಲಿ ಸಂತೋಷದ ಜೀವನ ನಡೆಸುತ್ತಿದ್ದಾರೆ ರಾಧಾ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ