ಆರೋಗ್ಯ, ಉಪಯುಕ್ತ ಮಾಹಿತಿ

ಚಳಿಗಾಲದಲ್ಲಿ ಗೋಡಂಬಿ ಸೇವನೆ ಮಾಡುವುದರಿಂದ ಏನೆಲ್ಲಾ ಉಪಯೋಗವಿದೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ!

65

ಚಳಿಗಾಲ ಬಂತೆಂದರೆ ಏನನ್ನಾದರೂ ತಿನ್ನುತ್ತಲೇ ಇರಬೇಕು ಎನಿಸದೇ ಇರದು. ಕಾಳು, ಹಣ್ಣುಗಳು, ತುಪ್ಪದಂತಹ ಪದಾರ್ಥಗಳು ದೇಹದ ಉಷ್ಣಗಳನ್ನು ಹೆಚ್ಚಿಸುವಲ್ಲಿ ಸಹಕಾರಿ, ಹಾಗಾಗಿ ಈ ಬಗೆ ಆಹಾರ ಪದಾರ್ಥಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಇದರಿಂದ ದೇಹದ ಉಷ್ಣತೆ ಕಾಪಾಡುವುದರ ಜತೆಗೆ ಕಾಯಿಲೆ ಬೀಳದಿರಲು ಇದೊಂದು ಒಳ್ಳೆಯ ಉಪಾಯವೂ ಹೌದು. ಶೇಂಗಾ ಮತ್ತು ದ್ವಿದಳ ಧಾನ್ಯಗಳು, ಬಾದಾಮಿ ಮತ್ತು ಗೋಡಂಬಿ ಮತ್ತು ಇವುಗಳಿಂದ ತಯಾರಿಸಿದ ಪದಾರ್ಥಗಳು ಉತ್ತಮ. ಅಲ್ಲದೆ ಇವು ದೇಹದೊಳಗಿನ ಕೊಲೆಸ್ಟ್ರಾಲ್​ನ್ನು ಹೆಚ್ಚಿಸುವುದಿಲ್ಲ.

ಗೋಡಂಬಿ ಸೇವನೆಯಿಂದ ದೇಹದೊಳಗೆ ಕೊಲೆಸ್ಟ್ರಾಲ್​ ಹೆಚ್ಚಾಗುತ್ತದೆಯೆ? ಈ ಪ್ರಶ್ನೆಗೆ ಪ್ರಖ್ಯಾತ ಪೌಷ್ಟಿಕ ತಜ್ಞ ರುಜುತಾ ದಿವೆಕರ್​, ಗೋಡಂಬಿ ಮೂಲತಃ ಭಾರತ ಮತ್ತು ಆಫ್ರಿಕಾದ ಬೆಳೆ. ಇದು ಬದಾಮಿಯಂತೆ ದೇಹಕ್ಕೆ ಒಳ್ಳೆಯದು. ಗೋಡಂಬಿಯಲ್ಲಿ ಕೊಲೆಸ್ಟ್ರಾಲ್​ ಅಂಶಗಳಿಲ್ಲ. ಗೋಡಂಬಿ ಎಂಬುದು ಪೋಷಕಾಂಶಗಳ ತವರುಮನೆ. ಇದು ಸಕ್ಕರೆ ಕಾಯಿಲೆ ಇರುವವರ ಪಾದಗಳಿಗೆ ಒಳ್ಳೆಯದು. ಬೊಗಸೆ ತುಂಬ ಗೋಡಂಬಿಗಳನ್ನು ಪ್ರತಿನಿತ್ಯ ಸೇವಿಸುವದರಿಂದ ಕಾಲು ಸೆಳೆತ ಇನ್ನಿಲ್ಲವಾಗುತ್ತದೆ. ಅಲ್ಲದೆ, ರಕ್ತದಲ್ಲಿನ ಸಕ್ಕರೆ ಅಂಶವನ್ನು ಸಮತೋಲನವಾಗಿಡಬಹುದು ಎನ್ನುತ್ತಾರೆ.ಒಂದು ಮೋಸಂಬಿ ಹಣ್ಣಿಗಿಂತ ಗೋಡಂಬಿ 5 ಪಟ್ಟು ಹೆಚ್ಚು ವಿಟಮಿನ್​ ಸಿ ಹೊಂದಿರುತ್ತದೆ. ದೇಹದಲ್ಲಿನ ಉಷ್ಣಾಂಶ ಹೆಚ್ಚಿಸಲು ವಿಟಮಿನ್​ ಸಿ ಉಪಯೋಗಕಾರಿ .

Ripe cashew nuts in woman’s hands

ಗೋಡಂಬಿಯ ನಾಲ್ಕು ಪ್ರಯೋಜನಗಳು

ಸಹಾಯಕವಾದ ಫೈಬರ್‌ಗಳನ್ನು ಹೊಂದಿದೆ
ಗೋಡಂಬಿ ಅಥವಾ ಕ್ಯಾಶೀವ್ ನಟ್‌ಗಳಲ್ಲಿ ಆಹಾರದ ಫೈಬರ್ ಅಂಶ ಹೊಂದಿದ್ದು, ಇದನ್ನು ನಮ್ಮ ದೇಹ ಉತ್ಪಾದನೆ ಮಾಡದ ಕಾರಣ ಅದನ್ನು ಹೊರಗಿನಿಂದ ಸೇವಿಸಬೇಕಾಗುತ್ತದೆ. ಇದರಿಂದ ಜೀರ್ಣ ಶಕ್ತಿ ಹೆಚ್ಚಾಗಲಿದ್ದು, ಜೀರ್ಣಾಂಗ ಸಂಬಂಧಿ ರೋಗಗಳನ್ನು ಕಡಿಮೆ ಮಾಡುತ್ತದೆ.

ಹೃದಯ ರೋಗವನ್ನು ನಿಯಂತ್ರಣದಲ್ಲಿಡುತ್ತದೆ
ಗೋಡಂಬಿ ಎಲ್‌ಡಿಎಲ್‌ ಕೊಲೆಸ್ಟರಾಲ್‌ ಅನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಎಚ್‌ಡಿಎಲ್‌ ಕೊಲೆಸ್ಟರಾಲ್‌ ಒಯ್ಯುವ ಸಾಮಥ್ಯವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯ ರೋಗ ಬರುವ ಅಪಾಯವನ್ನು ತಗ್ಗಿಸುತ್ತದೆ. ಆದರೆ, ಉಪ್ಪು ಅಂಶ ಹೆಚ್ಚಿರುವ ಅಥವಾ ಹುರಿದ ಗೋಡಂಬಿಯಲ್ಲದಂತೆ ನೋಡಿಕೊಳ್ಳಿ.

ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ
ಗೋಡಂಬಿಯಲ್ಲಿ ಒಮೆಗಾ 3 ಅಂಶವಿರುವುದರಿಂದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇನ್ನು, ಹಸಿವಾದಾಗ ಬೊಗಸೆಯಷ್ಟು ಗೋಡಂಬಿ ತಿಂದರೆ
ಅದರಿಂದ ಹೆಚ್ಚು ಕಾಲ ಹೊಟ್ಟೆ ತುಂಬುವಂತೆಯೂ ನೋಡಿಕೊಳ್ಳುತ್ತದೆ.

ಕಣ್ಣಿಗೆ ಸೋಂಕು ಹರಡದಂತೆ ತಡೆಯಲು ಸಹಾಯ ಮಾಡುತ್ತದೆ
ವಾತಾವರಣದಲ್ಲಿ ಹೆಚ್ಚು ಮಾಲಿನ್ಯವಿದ್ದರೂ ಸಹ ಗೋಡಂಬಿಯನ್ನುತಿನ್ನುವುದರಿಂದ ಕಣ್ಣಿಗೆ ಸೋಂಕು ಬರದಂತೆ ತಡೆಯುತ್ತದೆ. ಯಾಕೆಂದರೆ ಇದು ಪ್ರಬಲ ಆ್ಯಂಟಿಆಕ್ಸಿಡೆಂಟ್ ಪಿಗ್ಮೆಂಟ್ ಹೊಂದಿದೆ. ಹೀಗಾಗಿ, ರೆಟಿನಾ ಮೇಲೆ ರಕ್ಷಣಾತ್ಮಕ ಪದರವನ್ನು ಸೃಷ್ಟಿ ಮಾಡಲಿದ್ದು, ಇದರಿಂದ ಹಾನಿಕರ ಯುವಿ ಕಿರಣಗಳನ್ನು ತಡೆಯುತ್ತದೆ.

ನಿಮ್ಮ ಚರ್ಮಕ್ಕೆ ಒಳ್ಳೆಯದು

ಗೋಡಂಬಿ ಮೆಗ್ನೀಷಿಯಂ, ಝಿಂಕ್, ಕಬ್ಬಿಣ ಹಾಗೂ ಫಾಸ್ಫರಸ್ ಅಂಶ ಹೆಚ್ಚಿರುತ್ತದೆ. ಅಲ್ಲದೆ, ಪ್ರೋಟೀನ್‌ಗಳು ಹಾಗೂ ಸೆಲೆನಿಯಂ ಸೇರಿ ಆ್ಯಂಟಿಆಕ್ಸಿಡೆಂಟ್ಸ್‌ ಸಹ ಹೆಚ್ಚಿರುತ್ತದೆ.. ಅದರಿಂದ ನಿಮ್ಮ ಚರ್ಮಕ್ಕೆ ಒಳ್ಳೆಯದು. ಜತೆಗೆ, ಗೋಡಂಬಿ ತಿನ್ನುವುದಾಗಲೀ, ಗೋಡಂಬಿ ಎಣ್ಣೆಯನ್ನು ನೆತ್ತಿ ಮೇಲೆ ಹಚ್ಚಿಕೊಳ್ಳುವುದರಿಂದ ಚರ್ಮ ಹಾಗೂ ಕೂದಲಿಗೆ ಮೆಲಾನಿನ್ ಪಿಗ್ಮೆಂಟ್ ಉತ್ಪತ್ತಿಯಾಗಲು ನೆರವಾಗುತ್ತದೆ. ಇನ್ನೊಂದೆಡೆ, ಕೂದಲಿಗೆ ನಯವಾದ ವಿನ್ಯಾಸವನ್ನೂ ಇದು ನೀಡುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಕೋಟಿ ಕೋಟಿ ಬೆಲೆಬಾಳುವ ಕಾರುಗಳ ಯಜಮಾನ ‘ಲೂನಾ’ ದಲ್ಲಿ ಪಯಣ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಳಿ ಅನೇಕ ದುಬಾರಿ ಕಾರುಗಳು ಮತ್ತು ಬೈಕ್‍ಗಳು ಇವೆ. ಆದರೂ ದರ್ಶನ್ ಲೂನಾ ಗಾಡಿಯಲ್ಲಿ ಸವಾರಿ ಮಾಡಿದ್ದಾರೆ. ನಟ ದರ್ಶನ್ ಅವರ ಪಾಲಿಗೆ ಈ ಲೂನಾ ಗಾಡಿ ಲಕ್ಕಿಯಾಗಿದೆ. ಯಾಕೆಂದರೆ ಈ ಲೂನಾ ಗಾಡಿಯನ್ನು ದರ್ಶನ್ ತಂದೆ ತೂಗುದೀಪ್ ಶ್ರೀನಿವಾಸ್ ಅವರು ಕೊಡಿಸಿದ್ದರು. ಹೀಗಾಗಿ ದರ್ಶನ್ ಇಂದಿಗೂ ಅಪ್ಪ ಕೊಡಿಸಿದ ಗಾಡಿನಾ ಜೋಪಾನವಾಗಿ ಕಾಪಾಡಿಕೊಂಡಿದ್ದಾರೆ. ದರ್ಶನ್ ನಟನಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡುವ ಮೊದಲು ಲೈಟ್ ಬಾಯ್ ಆಗಿದ್ದರು. ಆಗ ಈ ಲೂನಾ ಗಾಡಿನಾ…

  • ದೇಗುಲ ದರ್ಶನ, ದೇವರು

    ಶಾರದಾ ಮಾತೆಯ ಮಹಿಮೆ. ಶೃಂಗೇರಿ ದೇಗುಲದ ಗರ್ಭಿಣಿ ಕಪ್ಪೆಯ ರಹಸ್ಯ ನಿಮಗೆ ಗೊತ್ತಾ, ನೋಡಿ.!

    ಶೃಂಗೇರಿಯಲ್ಲಿ ಶಾರದಾ ಮಾತೆಯ ಸ್ಥಾಪನೆ ಆಗಿದ್ದಾದರೂ ಹೇಗೆ ಇದರ ಬಗ್ಗೆ ನಿಮಗೆ ನಾವು ಹೆಚ್ಚು ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಹಾಗಾದರೆ ಸ್ನೇಹಿತರೇ ಶೃಂಗೇರಿಗೆ ಶೃಂಗೇರಿ ಅಂತ ಹೆಸರು ಬಂದಿದ್ದು ಹೇಗೆ ಮತ್ತು ಶೃಂಗೇರಿಯಲ್ಲಿ ಮಠ ಸ್ಥಾಪನೆ ಮಾಡಿದವರು ಯಾರು ಮತ್ತು ಇಲ್ಲಿಗೆ ಶಾರದಾ ಮಾತೆ ಬಂದು ನೆಲೆಸಿದ್ದಾರೆ ಹೇಗೆ ಅನ್ನೋದನ್ನು ನಾವು ತಿಳಿಯೋಣ . ಶೃಂಗೇರಿಯು ಚಿಕ್ಕಮಗಳೂರು ಜಿಲ್ಲೆಯಿಂದ ಸುಮಾರು ತೊಂಬತ್ತು ಕಿಲೋ ಮೀಟರ್ ದೂರದಲ್ಲಿದೆ ಮತ್ತು ಶೃಂಗೇರಿ ಶಾರದಾ ಮಾತೆ ತುಂಗಾ ನದಿಯ ದಡದಲ್ಲಿ ನೆಲೆಸಿದ್ದಾಳೆ ಮತ್ತು…

  • modi, ಉಪಯುಕ್ತ ಮಾಹಿತಿ

    ದೇಶವನ್ನು ಪ್ಲಾಸ್ಟಿಕ್ ತ್ಯಾಜ್ಯದಿಂದ ಮುಕ್ತಿಗೊಳಿಸಲು ಪ್ರಧಾನಿ ಮೋದಿಯ ಹೊಸ ಯೋಜನೆ..ಇದನ್ನೊಮ್ಮೆ ಓದಿ..!

    ಹೊಸದಿಲ್ಲಿ, ಮಹಾತ್ಮಾ ಗಾಂಧಿ ಅವರ 150ನೇ ಹುಟ್ಟುಹಬ್ಬದಂದು ಪ್ಲಾಸ್ಟಿಕ್‌ ತ್ಯಾಜ್ಯದ ವಿರುದ್ಧ ಮಹಾ ಆಂದೋಲನ ಆರಂಭಿಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಮನವಿ ಮಾಡಿದ್ದಾರೆ.  ದೇಶವನ್ನು ಪ್ಲಾಸ್ಟಿಕ್‌ ತ್ಯಾಜ್ಯ ಮುಕ್ತಗೊಳಿಸುವ ನಿಟ್ಟಿನಲ್ಲಿ ಅಂದಿನಿಂದ ಸ್ವಚ್ಛ ಭಾರತ ಮಾದರಿಯ ಆಂದೋಲನ ನಡೆಸುವಂತೆ ಕೇಳಿಕೊಂಡಿರುವ ಪ್ರಧಾನಿ, ಪ್ಲಾಸ್ಟಿಕ್‌ನ ಸುರಕ್ಷಿತ ವಿಲೇವಾರಿಗೆ ದೀಪಾವಳಿ ಒಳಗೆ ಹೊಸ ವಿಧಾನಗಳನ್ನು ಆವಿಷ್ಕರಿಸುವಂತೆ ನಗರಸಭೆಗಳು, ಸರಕಾರೇತರ ಸಂಘಟನೆಗಳು ಮತ್ತು ಕಾರ್ಪೊರೇಟ್‌ ವಲಯಕ್ಕೆ ಮನವಿ ಮಾಡಿದ್ದಾರೆ. ಪ್ಲಾಸ್ಟಿಕ್‌ನ್ನು ಒಂದೇ ಬಾರಿ ಬಳಸಿ ಎಸೆಯುವ ಆಭ್ಯಾಸವನ್ನು ಬಿಡುವ ಮೂಲಕ…

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ,ನಿಮ್ಮ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(12 ಡಿಸೆಂಬರ್, 2018) ನಿಮ್ಮ ಬದ್ಧತೆಗಳು ಮತ್ತುಆರ್ಥಿಕ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಸ್ನೇಹಿತರ ಸಮಸ್ಯೆಗಳು ನಿಮಗೆ ಕೆಟ್ಟದೆನಿಸುವಂತೆ ಮಾಡಬಹುದು. ಪ್ರಣಯ ಸಂಬಂಧದಲ್ಲಿ…

  • ಉಪಯುಕ್ತ ಮಾಹಿತಿ, ಸಂಬಂಧ

    ನೀವು ಯಾವ ವಯಸ್ಸಿನಲ್ಲಿ ಮದುವೆಯಾದ್ರೆ, ನಿಮ್ಗೆ ಆಗುವ ಲಾಭ ಏನು ಗೊತ್ತಾ?ತಿಳಿಯಲು ಈ ಲೇಖನ ಓದಿ..

    ಮದುವೆಯ ಪರ್‌ಫೆಕ್ಟ್‌ ವಯಸ್ಸು ಯಾವುದು ಎಂಬುದರ ಬಗ್ಗೆ ಯಾವಾಗಲೂ ಪ್ರಶ್ನೆ ಮೂಡುತ್ತದೆ? ಅದಕ್ಕೆ ಸರಿಯಾದ ಉತ್ತರ ಇಲ್ಲಿವರೆಗೆ ಸಿಕ್ಕಿಲ್ಲ. ಕೆಲವೊಂದು ಸರ್ವೆಗಳು ಮದುವೆಯಾಗಲು ಸರಿಯಾದ ವಯಸ್ಸು 29 ಎನ್ನುತ್ತಾರೆ. ಆದರೆ ಒಬ್ಬೊಬ್ಬರ ಮದುವೆ ಒಂದೊಂದು ವಯಸ್ಸಿನಲ್ಲಿ ಆಗುತ್ತದೆ. ಕೆಲವರು 20 ರಿಂದ 30 ವರ್ಷದೊಳಗೆ ಮದುವೆಯಾದರೆ, ಇನ್ನೂ ಕೆಲವರು 30 ರಿಂದ 40 ವರ್ಷದೊಳಗೆ ಮದುವೆಯಾಗುತ್ತಾರೆ.