ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಜೇಂದ್ರ ಸಿಂಗ್ ಹಾಗೂ ಅವರ ಪತ್ನಿ ಚಂಚಲ್ ಕೌರ್ ಮೂಲತಃ ರಾಜಸ್ಥಾನದ ಅಜ್ಮೇರ್ ನವರಾಗಿದ್ದು, ಈ ದಂಪತಿಗೆ 11 ವರ್ಷದ ಮಗನಿದ್ದಾನೆ. ರಾಜೇಂದ್ರ ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತ ಅವರ ಪತ್ನಿ ಚಂಚಲ್ ಸರ್ಕಾರಿ ಸ್ಟ್ಯಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇಬ್ಬರು ಇಂದೋರ್ ಬಳಿಯ ಹಳ್ಳಿಯೊಂದರಲ್ಲಿ ಒಂದೂವರೆ ಎಕರೆ ಜಮೀನು ಖರೀದಿಸಿದ್ದು ಅಲ್ಲಿ ಅವರು ತಮ್ಮ ಮಗ ಗುರುಭಕ್ಷ್ ಸಿಂಗ್‍ಗೆ ರೈತನಾಗಲು ತರಬೇತಿ ನೀಡುತ್ತಿದ್ದಾರೆ. ನಾವು ದೊಡ್ಡ ನಗರದಲ್ಲಿ ವಾಸಿಸುತ್ತಿರಬಹುದು. ಲಕ್ಷಗಟ್ಟಲೇ ಹಣವನ್ನು ಸಂಪಾದನೆ ಮಾಡುತ್ತಿರಬಹುದು. ದುಡ್ಡು ಇದ್ದರೆ ಏನಂತೆ ನಾವು ಶುದ್ಧ ಗಾಳಿ ಹಾಗೂ ನೀರಿಗಾಗಿ ಹಂಬಲಿಸುತ್ತೇವೆ. ಈ ನಡುವೆ ಮನೆಯೊಳಗೆ ಬಿಸಿಲು ಕೂಡ ಬರುವುದಿಲ್ಲ. ಹೀಗಿರುವಾಗ ಎಷ್ಟು ಸಂಪಾದನೆ ಮಾಡಿದರೂ ಪ್ರಯೋಜನ ಏನು? ಈ ಕಾರಣದಿಂದಾಗಿ ನಾವು ನಮ್ಮ ಮಗನಿಗೆ ಬೇರೆ ಜೀವನ ನೀಡಲು ನಿರ್ಧರಿಸಿ ಇಂದೋರ್ ನಲ್ಲಿ ಜಮೀನು ಖರೀದಿಸಿದ್ದೇವೆ ಎಂದು ದಂಪತಿ ತಮ್ಮ ನಿರ್ಧಾರದ ಬಗ್ಗೆ ತಿಳಿಸಿದ್ದಾರೆ.
ಈ ಬದಲಾವಣೆಯನ್ನು ಮಗ ಹೇಗೆ ಎದುರಿಸುತ್ತಾನೆ ಎಂದು ರಾಜೇಂದ್ರ ಹಾಗೂ ಚಂಚಲ್ ಚಿಂತಿಸುತ್ತಿದ್ದರು. ಆದರೆ ಗುರುಭಕ್ಷ್ ಈ ಹೊಸ ಜೀವನದಿಂದ ಖುಷಿಯಾಗಿದ್ದ. ಈಗ ಸಾವಯವ ಕೃಷಿಯಿಂದ ಹಿಡಿದು ಎಲ್ಲದರಲ್ಲೂ ಆತ ತನ್ನ ತಾಯಿಗೆ ಸಹಾಯ ಮಾಡುತ್ತಿದ್ದಾನೆ. ಊರಿನಲ್ಲಿ ಆತನಿಗೆ ಸಾಕಷ್ಟು ಸ್ನೇಹಿತರು ಪರಿಚಯವಾಗಿದ್ದು, ಗುರುಭಕ್ಷ್ ಅವರಿಗೆ ಸೋಲಾರ್ ಕುಕ್ಕಿಂಗ್ ಹಾಗೂ ಕೃಷಿ ವಿಧಾನಗಳನ್ನು ಕಲಿಸುತ್ತಾನೆ. ಜೊತೆ ಆಟವಾಡುವಾಗ ಅವರಿಂದಲೂ ಗುರುಭಕ್ಷ್ ಕಲಿಯುತ್ತಿದ್ದಾನೆ. ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳ ಶಿಕ್ಷಣ ಮತ್ತು ಜೀವನಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ. ಆದರೆ ಈ ಹಣವನ್ನು ಸಂಪಾದಿಸುವಾಗ ಅವರು ತಮ್ಮ ಮಕ್ಕಳಿಗೆ ಸಮಯವನ್ನು ನೀಡಲು ಸಾಧ್ಯವಾಗುತ್ತಿಲ್ಲ.
2016ರಲ್ಲಿ ಚಂಚಲ್ 90 ಸಾವಿರ ಸಂಬಳದ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ವಿಚಾರಕ್ಕೆ ಸಂಬಂಧಿಕರು ಹಾಗೂ ಸ್ನೇಹಿತರು “ಇದು ತಪ್ಪು ನಿರ್ಧಾರ” ಎಂದು ಹೇಳಿದರು. ಆದರೆ ಮಗನಿಗೆ ಆರೋಗ್ಯಕರ ಮತ್ತು ಸ್ವಚ್ಛ ಜೀವನವನ್ನು ನೀಡಲು ನಾನು ತೆಗೆದುಕೊಂಡ ನಿರ್ಧಾರ ಸರಿ ಎಂದು ಅವರಿಗೆ ಹೇಳಿದೆ ಎಂಬುದಾಗಿ ಚಂಚಲ್ ಹೇಳಿದರು. 2017ರಲ್ಲಿ ಚಂಚಲ್ ತಮ್ಮ ಮಗನ ಜೊತೆ ಇಂಧೋರ್ ಶಿಫ್ಟ್ ಆಗಿದ್ದಾರೆ. ಅಲ್ಲಿ ಸಾವಯವ ಕೃಷಿಯಲ್ಲಿ ಪದ್ಮಶ್ರೀ ಡಾ. ಜಾನಕ್ ಪಾಲ್ಟಾ ಅವರಿಂದ ತರಬೇತಿ ಪಡೆದಿದ್ದಾರೆ. ಜೊತೆಗೆ ಸೋಲಾರ್ ಕುಕ್ಕಿಂಗ್, ಸೋಲಾರ್ ಡ್ರೈಯಿಂಗ್ ಕಲಿತಿದ್ದಾರೆ.
ನಾವು ಯಾವಾಗಲೂ ನಮ್ಮ ಮಗನಿಗೆ ನೀನು ಯಾವುದೇ ರೇಸ್‍ನಲ್ಲಿ ಇಲ್ಲ. ನೀನು ಯಾರಿಂದಲೂ ಮುಂದೆ ಅಥವಾ ಹಿಂದಕ್ಕೆ ನಡೆಯಬೇಕಿಲ್ಲ. ಕೇವಲ ತನ್ನ ವೇಗದಲ್ಲಿ ನಡೆಯಬೇಕು ಎಂದು ಹೇಳುತ್ತಿರುತ್ತೇವೆ ಅಂತಾ ರಾಜೇಂದ್ರ ಹಾಗೂ ಚಂಚಲ್ ತಿಳಿಸಿದ್ದಾರೆ. ರಾಜೇಂದ್ರ ಹಾಗೂ ಚಂಚಲ್ ಅವರ ಮನೆಯಲ್ಲಿ ಸೋಲಾರ್ ಕುಕ್ಕಿಂಗ್ ಮೂಲಕ ಅಡುಗೆ ಮಾಡಲಾಗುತ್ತಿದೆ. ಅಲ್ಲದೆ ತಮ್ಮ ಜಮೀನಿನಲ್ಲಿ ಸಾವಯವ ರೀತಿಯಲ್ಲಿ ಬೆಳೆದ ತರಕಾರಿಗಳನ್ನು ಅಡುಗೆ ಮಾಡಲು ಉಪಯೋಗಿಸುತ್ತಾರೆ. ಚಂಚಲ್ ಒಬ್ಬರೇ ಎಲ್ಲವನ್ನು ನೋಡಿಕೊಳ್ಳುತ್ತಾರೆ. ರಾಜೇಂದ್ರ ಉದ್ಯೋಗದಿಂದಾಗಿ ಇಂದೋರ್ ಮನೆಯಲ್ಲಿ ಹೆಚ್ಚು ಸಮಯ ಇರುವುದಿಲ್ಲ. ಪತಿ ಮನೆಯಲ್ಲಿ ಇಲ್ಲದೇ ಇದ್ದರೂ ಚಂಚಲ್, ಗುರುಭಕ್ಷ್‍ಗೆ ವಿದ್ಯಾಭ್ಯಾಸದ ಜೊತೆಗೆ ಭವಿಷ್ಯದ ಮಾದರಿ ರೈತನಾಗಲು ಕೃಷಿ ತರಬೇತಿ ನೀಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಶಾಲಾ ಹಾಸ್ಟೆಲ್ವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತೆಲಂಗಾಣದಲ್ಲಿ ನಡೆದಿದೆ. ಪುಟ್ಟ ಮಕ್ಕಳಿರುವ ಶಾಲೆ, ಹಾಸ್ಟೆಲ್ಗಳಲ್ಲಿ ಎಷ್ಟು ಮುಂಜಾಗ್ರತೆ ವಹಿಸಿದರೂ ಸಾಲದು. ಹಾಗಿರುವಾಗ ಬೆಂಕಿ, ಶಿಥಿಲ ಕಟ್ಟಡಗಳ ಬಗ್ಗೆ ನಿಗಾ ಇಡಬೇಕಾಗಿರುವುದು ಆಡಳಿತ ಮಂಡಳಿಯ ಕರ್ತವ್ಯವಾಗಿದೆ. ಶಾಲಾ ಹಾಸ್ಟೆಲ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ 10 ವರ್ಷದ ವಿದ್ಯಾರ್ಥಿ ಬೆಂಕಿಯಲ್ಲೇ ಬೆಂದು ಮೃತಪಟ್ಟಿದ್ದಾನೆ. ತೆಲಂಗಾಣಾದ ಖಮ್ಮಮ್ನಲ್ಲಿ ಈ ಘಟನೆ ನಡೆದಿದೆ. ಬಾಲಕನಿಗೆ ಹಾಸ್ಟೆಲ್ನಿಂದ ಹೊರಬರಲು ಸಾಧ್ಯವಾಗದೆ ಮೃತಪಟ್ಟಿದ್ದಾನೆ. ಅಷ್ಟೇ ಅಲ್ಲದೆ ಹಾಸ್ಟೆಲ್…
ಸಾಮಾನ್ಯವಾಗಿ ಹಸುವಿನ ಹೊಟ್ಟೆ ಮೇಲೆ ಕಪ್ಪು-ಬಿಳುಪು ಬಣ್ಣವಿರುವ ನಾನಾ ರೀತಿಯ ಚಿತ್ರಗಳು ಕಾಣಸಿಗುತ್ತವೆ. ಇದೀಗ ಇಂತದ್ದೇ ಹಸುವಿನ ಹೊಟ್ಟೆ ಮೇಲೆ ತಾಯಿಯ ಮಡಿಲಿನಲ್ಲಿ ಮಗುವಿನ ಆರೈಕೆಯ ಚಿತ್ರವೊಂದು ಮೂಡಿ ಎಲ್ಲರ ಗಮನ ಸೆಳೆದಿದೆ. ಮೂಲತಃ ಕೃಷಿ ಜೊತೆಗೆ ಹೈನುಗಾರಿಕೆ ಮಾಡುವ ಜಾಧವ್ ಕುಟುಂಬ ನಾಲ್ಕು ವರ್ಷಗಳ ಹಿಂದೆ ಮಹಾರಾಷ್ಟ್ರದ ಮೀರಜ್ ಜಾನುವಾರು ಮಾರುಕಟ್ಟೆಯಿಂದ ಬಿಳಿ – ಕಪ್ಪು ಬಣ್ಣದ ಜರ್ಸಿ ಪ್ರಬೇಧದ ಹಸುವನ್ನು ತಂದಿದ್ದರು. ಕಳೆದ ಮೂರು ವರ್ಷಗಳಿಂದ ಹೊಟ್ಟೆಯ ಮೇಲೆ ಈ ರೀತಿ ಹಚ್ಚೆ ಮೂಡಲು ಆರಂಭವಾಗಿ…
ಪ್ರಸಿದ್ಧ ಟಿವಿ ರಿಯಾಲಿಟಿ ಶೋ ನಟಿ ಕಿಮ್ ಕರ್ದಾಶಿಯನ್ ಮೂರನೇ ಬಾರಿ ಅಮ್ಮನಾಗಿದ್ದಾಳೆ. ಬಾಡಿಗೆ ತಾಯಿ ಮೂಲಕ ಕಿಮ್ ಮನೆಗೆ ಸೋಮವಾರ ಮಗುವೊಂದರ ಆಗಮನವಾಗಿದೆ. ಮಗಳ ಸ್ವಾಗತಕ್ಕೆ ಕಿಮ್ ಹಾಗೂ ಆಕೆ ಪತಿ ಕೆನ್ನೆ ವೆಸ್ಟ್ ವಿಶೇಷ ತಯಾರಿ ನಡೆಸಿದ್ದಾರೆ.
ಕನ್ನಡ ಸಿನಿಮಾ ತಾರೆ ಮತ್ತು ಕಾಂಗ್ರೆಸ್ ಯುವ ನಾಯಕಿ ರಮ್ಯಾರವರು ತಮ್ಮ ಟ್ವಿಟ್ಟರ್’ನ ಟ್ವಿಟ್’ಗಳ ಮೂಲಕ ಪೇಚಿಗೆ ಸಿಲುಕುವುದು ಸಾಮಾನ್ಯ.
ಕೈ ತೋಟದಲ್ಲಿ ಬೆಳೆಯುವ ಘಮ ಘಮ ವೆನ್ನುವ “ಪುದೀನ ಸೊಪ್ಪು” ಅಡಿಗೆ ಮನೇಲಿ ಮಾತ್ರ ಸೀಮಿತ ಆಗದೇ ಆರೋಗ್ಯಕ್ಕೂ ತುಂಬಾ ಒಳ್ಳೇದು. ಏಷ್ಯಾದಲ್ಲಿ ಬೆಳೆದು ಪ್ರಪಂಚದಾದ್ಯಂತ ಬಳಾಕೆಯಾಗುತ್ತಾ ಇರೋ
ರೈಲ್ವೆ ಸಚಿವಾಲಯದ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ತನ್ನ ವೆಬ್ಸೈಟ್ https://icf.indianrailways.gov.in/ ನಲ್ಲಿ ಅಪ್ರೆಂಟಿಸ್ ಹುದ್ದೆಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಕಾರ್ಪೆಂಟರ್, ಎಲೆಕ್ಟ್ರಿಷಿಯನ್, ಫಿಟ್ಟರ್, ಮೆಷಿನಿಸ್ಟ್, ಪೇಂಟರ್, ವೆಲ್ಡರ್, ಎಂಎಲ್ಟಿ ರೇಡಿಯಾಲಜಿ, ಎಂಎಲ್ಟಿ ಪ್ಯಾಥಾಲಜಿ ಮತ್ತು ಪಾಸಾ ಮುಂತಾದ ವಿವಿಧ ವಹಿವಾಟುಗಳ ವಿರುದ್ಧ ಒಟ್ಟು 1000 ಖಾಲಿ ಹುದ್ದೆಗಳು ಲಭ್ಯವಿದೆ. ಅರ್ಹ ಅಭ್ಯರ್ಥಿಗಳು icf.indianrailways.gov.in ನಲ್ಲಿ ಐಸಿಎಫ್ನ ಅಧಿಕೃತ ಸೈಟ್ ಮೂಲಕ ಹುದ್ದೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅಪ್ರೆಂಟಿಸ್ ಆಕ್ಟ್- 1961 ರ ಅಡಿಯಲ್ಲಿ ತರಬೇತಿ…