ಸುದ್ದಿ

ನೀವು ಎಂದಾದರೂ ಗೂಗಲ್ ನೀಡಿರುವ ಚಾಲೆಂಜ್ ಆಡಿದ್ದಿರಾ;ಇಲ್ಲದಿದ್ದರೆ ಒಮ್ಮೆ ಆಡಿ ನೋಡಿ ಅದರಲ್ಲಿ ಸಿಗುತ್ತೆ ಬರೋಬ್ಬರಿ 10.76 ಕೋಟಿ,!

57

ಈಗಿನ ಕಾಲದಲ್ಲಿ ಗೂಗಲ್ ಬಳಸದೆ ಇರುವ ವ್ಯಕ್ತಿಯನ್ನು ಕಂಡುಹಿಡಿಯಲು ಸಾಧ್ಯವಾಗದು  ಏಕೆಂದರೆ ಪ್ರತಿಯೊಬ್ಬರೂ ತಮ್ಮದೇ ಆದ ಕೆಲಸ ಕಾರ್ಯಗಳನ್ನು ಮಾಡುವುದಕ್ಕೆ ಗೂಗಲ್ ಸಹಾಯ ಪಡೆಯುತ್ತಾರೆ.ಆಗೆಯೇ ಗೂಗಲ್ ನಮ್ಮ ನಿಮ್ಮೆಲ್ಲರ ಸಮಸ್ಯೆಗೆ ಪರಿಹಾರ ನೀಡುವುದು ಮಾತ್ರವಲ್ಲದೆ ಹಣವನ್ನು ಸಂಪಾದಿಸುವ ದಾರಿಯು ತೋರಿಸುತ್ತದೆ. ಐಟಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣತರಾಗಿದ್ದರೆ ಸರ್ಚ್ ಎಂಜಿನ್ ದೈತ್ಯ ಗೂಗಲ್ ನಿಮಗೊಂದು ಬಿಗ್ ಆಫರ್ ನೀಡಿದೆ. ಗೂಗಲ್ ನೀಡಿರುವ ಚಾಲೆಂಜ್ ಒಂದರಲ್ಲಿ ನೀವು ಗೆದ್ದರೆ ಬರೋಬ್ಬರಿ 10.76 ಕೋಟಿ ಬಹುಮಾನವನ್ನು ನಿಮ್ಮ ತೆಕ್ಕೆಗೆ ಹಾಕಿಕೊಳ್ಳಬಹುದಾಗಿದೆ.!ಹೌದು, ತನ್ನ ಬಳಕೆದಾರರ ಮಾಹಿತಿ ಸುರಕ್ಷತೆ ಮತ್ತು ಮೊಬೈಲ್ ಸುರಕ್ಷತೆಯನ್ನು ಮೇಲೆರಿಸುವ ಬಹುದೊಡ್ಡ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಲು ಕಂಪೆನಿ ಮುಂದಾಗಿದ್ದು, ಇದಕ್ಕಾಗಿ 10.76 ಕೋಟಿ ಹಣವನ್ನುಸ್ಪರ್ಧೆಯ ಮೂಲಕ ನೀಡುತ್ತಿದೆ.!

ಇದಕ್ಕೆ ನೀವು ಮಾಡಬೇಕಿರುವುದು ಇಷ್ಟೇ. ಗೂಗಲ್ ಒಡೆತನದ ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ಫೋನ್ ಅನ್ನು ಹ್ಯಾಕ್ ಮಾಡಬೇಕು. ಹೀಗೆ ಹ್ಯಾಕ್ ಮಾಡಿದ ಯಾರಿಗಾದರೂ ಕಂಪನಿಯು 1.5 ಮಿಲಿಯನ್ ಡಾಲರ್ ಅಥವಾ 10.76 ಕೋಟಿ ಹಣವನ್ನು ಪಾವತಿಸಲಿದೆ. ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಲ್ಲಿ ಅಂತರ್ನಿರ್ಮಿತ ಭದ್ರತೆ ಹೊಂದಿರುವ ಚಿಪ್ ಅನ್ನು ಪ್ರಬಲ ಚಿಪ್‌ಸೆಟ್ಎಂದು ಗುರುತಿಸಲಾಗಿದ್ದು, ಇದನ್ನು ಮತ್ತಷ್ಟು ಶಕ್ತಿಯುತವಾಗಿರುವ ನಿಟ್ಟಿನಲ್ಲಿ ಗೂಗಲ್ ಇಂತಹದೊಂದು ಚಾಜೆಂಜ್ ಗೆದ್ದವರಿಗೆ ಭಾರೀ ಬಹುಮಾನವನ್ನು ಸಹ ಪ್ರಕಟಿಸಿದೆ.

ಗೂಗಲ್ ಪಿಕ್ಸೆಲ್ ಸಾಧನಗಳಲ್ಲಿ ಕಂಡುಬರುವ ಎಂಟರ್‌ಪ್ರೈಸ್-ಗ್ರೇಡ್ ಸೆಕ್ಯುರಿಟಿ ಚಿಪ್ ಸಾಧನ ಮತ್ತು ಆಪರೇಟಿಂಗ್ ಸಿಸ್ಟಂನಲ್ಲಿ ಸೂಕ್ಷ್ಮ ಡೇಟಾವನ್ನು ಸುರಕ್ಷಿತವಾಗಿರಿಸಲು ನಿರ್ಮಿಸಲಾಗಿದೆ. ಇದನ್ನು ಗ್ರಾಹಕರ ಸುರಕ್ಷತೆಯನ್ನು ಹೆಚ್ಚು ಖಾತ್ರಿಗೊಳಿಸುವ ಪ್ರಬಲ ಸಾಧನ ಎಂದು ಕರೆಯಲಾಗಿದೆ. ಆದ್ದರಿಂದ ಇದನ್ನು ಹ್ಯಾಕ್ ಮಾಡಲು ಅಸಾಧ್ಯ ಎನ್ನುತ್ತಿವೆ ವರದಿಗಳು. ಆದರೆ, ಇಂತಹ ಸಮಸ್ಯೆಗಳನ್ನು ಸುಲಭವಾಗಿ ಎದುರಿಸುವ ತಜ್ಞರು ನಮ್ಮ ಮಧ್ಯದಲ್ಲೇ ಇರುತ್ತಾರೆ. ಗೂಗಲ್ ತಂತ್ರಜ್ಞಾನ ಕೂಡ ಅಂತಿಮವಲ್ಲ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ.

ಆಂಡ್ರಾಯ್ಡ್ ಓಎಸ್‌ ಡೆವಲಪರ್ ಆವೃತ್ತಿಗಳಲ್ಲಿನ ನ್ಯೂನತೆಗಳನ್ನು ಹ್ಯಾಕ್ ಮಾಡುವ ಅಥವಾ ಎತ್ತಿ ತೋರಿಸುವ ವ್ಯಕ್ತಿಗಳಿಗೆ ಗೂಗಲ್ ಪ್ರತಿವರ್ಷ ಬಗ್ ಬೌಂಟಿ ಕಾರ್ಯಕ್ರಮದಡಿಯಲ್ಲಿ ಬಹುಮಾನ ನೀಡುತ್ತಿದೆ. ಗೂಗಲ್ ತನ್ನ ಬಗ್ ಬೌಂಟಿ ಕಾರ್ಯಕ್ರಮವನ್ನು ಪ್ರಾರಂಭಿಸಿದಾಗಿನಿಂದ ಇಲ್ಲಿಯವರೆಗೂ 4 ಮಿಲಿಯನ್ ಡಾಲರ್‌ಗಳನ್ನು ಇಂತಹ ತಂತ್ರಜ್ಞರಿಗೆ ಪಾವತಿಸಿರುವುದಾಗಿ ತಿಳಿಸಿದೆ. ಭಾರತದ ಕೆಲ ಐಟಿ ತಂತ್ರಜ್ಞರು ಕೂಡ ಗೂಗಲ್ ನೂನ್ಯತೆಯನ್ನು ಎತ್ತಿ ತೋರಿಸಿ ಬಗ್ ಬೌಂಟಿ ಮೂಲಕ ಲಕ್ಷಾಂತಹ ಬಹುಮಾನ ಪಡೆದಿರುವುದನ್ನು ನಾವು ನೋಡಬಹುದು.

ವ್ಯಾಪಾರ ಹಾಗು ಉದ್ಯಮಗಳನ್ನು ನಡೆಸಲು ಬೇಕಿರುವ, ಅವಶ್ಯಕವಿರುವ ವೆಬ್ಸೈಟುಗಳು, ತಂತ್ರಾಂಶಗಳಲ್ಲಿ ಇರುವ ಅನೇಕ ಲೋಪ ದೋಷಗಳನ್ನು ಹುಡುಕಲು ಸಾಕಷ್ಟು ಖರ್ಚಾಗುತ್ತದೆ. ಹಲವು ತಂತ್ರಜ್ಞರ ಮೇಲೆ ಉದ್ಯಮಗಳು ಹಣ ಹೂಡಬೇಕಾಗುತ್ತದೆ. ಇದರಿಂದ ಖರ್ಚು ವಿಪರೀತ ಬರುತ್ತದೆ. ಕೆಲವೊಮ್ಮೆ ಅದೆಷ್ಟು ಖರ್ಚು ಮಾಡಿದರೂ ಎಲ್ಲ ಲೋಪ ದೋಷಗಳನ್ನು ಸರಿಪಡಿಸುವುದು ಎಷ್ಟೇ ತಜ್ಞರಿದ್ದರೂ ಸಾಧ್ಯವಾಗದ ಮಾತು ಎಂಬಂತಿರುತ್ತದೆ. ಹೀಗೆ ಇರುವಾಗ ಕಂಪೆನಿಗಳು “ಬಗ್ ಬೌಂಟಿ” ಎನ್ನುವ ಯೋಜನೆ ಮೊರೆ ಹೋಗುತ್ತಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational

    ಗ್ರೀನ್ ಟೀ ಆರೋಗ್ಯಕರ ಪ್ರಯೋಜನಗಳು

    ಗ್ರೀನ್ ಟೀ ಅನ್ನು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಬದಲಾಗುತ್ತಿರುವ ಜೀವನಶೈಲಿಯ ಪರಿಣಾಮದಿಂದಾಗಿ ಒತ್ತಡ ಹೆಚ್ಚಾಗುತ್ತಿದ್ದು, ಗ್ರೀನ್ ಟೀ ಕುಡಿಯುವ ಪ್ರವೃತ್ತಿ ವೇಗವಾಗಿ ಹೆಚ್ಚಾಗಿದೆ. ಪ್ರತಿದಿನ ನಿಗದಿತ ಪ್ರಮಾಣದ ಗ್ರೀನ್ ಟೀ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.  ಗ್ರೀನ್ ಟೀ ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದನ್ನು ಹಲವು ಸಂಶೋಧನೆಗಳು ಪತ್ತೆ ಹಚ್ಚಿವೆ. ಆದರೆ ಎಚ್ಚರ! ಅತಿಯಾದ ಗ್ರೀನ್ ಟೀ ಸೇವನೆ ನಿಮ್ಮ ದೇಹಕ್ಕೆ ಹಾನಿ ಉಂಟುಮಾಡಬಹುದು. ಆದ್ದರಿಂದ ನೀವು ಹೆಚ್ಚು ಟೀ…

  • ಜ್ಯೋತಿಷ್ಯ

    ದಿನ ಭವಿಷ್ಯ …..ಪಂಡಿತ್ ವಿಶ್ವರೂಪ ಆಚಾರ್ಯರವರಿಂದ..ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ

    ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ಹೊಸ ಕೆಲಸಗಳನ್ನು ಹುಡುಕುವವರಿಗೆ ಹೇರಳ ಅವಕಾಶಗಳು ದೊರೆಯಲಿವೆ. ದೈವಕೃಪೆಯಿಂದ ಶುಭಫಲ ಉಂಟಾಗುವುದು. ಸ್ನೇಹಿತರು ಸಹಾಯಕೋರಿ ಬರಲಿದ್ದು, ಸಾಧ್ಯವಾದಷ್ಟು ಮಟ್ಟಿಗೆ ನೆರವು ನೀಡಿ. ಹಣಕಾಸಿನ ಸ್ಥಿತಿಯು ಉತ್ತಮಗೊಳ್ಳುವುದು.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ…

  • ರೆಸಿಪಿ

    15 ನಿಮಿಷಗಳಲ್ಲಿ ಫಟಾಫಟ್ ‘ಎಗ್ ಪಲಾವ್’ ಮಾಡೋದು ಹೇಗೆ ಗೊತ್ತಾ..?

    ಬಾಯಲ್ಲಿ ನೀರೂರಿಸುವ ಖಾದ್ಯವೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದರಲ್ಲೂ ಫಟಾಫಟ್ ಎಂದು ತಯಾರಿಸಲಾಗುವ ಖಾದ್ಯಗಳು ನಮ್ಮ ಜಂಜಾಟಗಳಿಂದ ಕೂಡಿದ ಜೀವನ ಶೈಲಿಗೆ ಅತ್ಯಂತ ಸಹಕಾರಿ.ಅದರಲ್ಲೂ ಎಗ್ ಪಲಾವ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಕೇವಲ 15 ನಿಮಿಷಗಳಲ್ಲಿ ಎಗ್ ಪಲಾವ್ ಮಾಡಿ…

  • ಉದ್ಯೋಗ

    ಯುವ ಪರಿವರ್ತಕರಿಗಾಗಿ ಅರ್ಜಿ ಆಹ್ವಾನ

    ಬೆಂಗಳೂರು ನಿಮ್ಹಾನ್ಸ್‌ನ ಜನ ಆರೋಗ್ಯ ಕೇಂದ್ರದ ಎಪಿಡೀಮಿಯಾಲಜಿ ವಿಭಾಗದ ವತಿಯಿಂದ ಅನುಷ್ಠಾನಗೊಂಡಿರುವ ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯುವಜನತೆಗೆ ಸಂಬಂಧಿಸಿದ ವಿಷಯಗಳಿಗೆ ಗೌರವಧನ ಆಧಾರದ ಮೇಲೆ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ  ಯುವಜನತೆಗೆ ಸಂಬಂಧಿಸಿದ ವಿಷಯಗಳಿಗೆ ಗೌರವಧನ ಆಧಾರದ ಮೇಲೆ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ರಾಷ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ನಾನ ಸಂಸ್ದೆ (ನಿಮ್ಹಾನ್ಸ್) ಬೆಂಗಳೂರು ಇಲ್ಲಿ ತರಬೇತಿ…

  • ತಂತ್ರಜ್ಞಾನ

    ಪಾಡ್ ಕಾರ್ ಸೇವೆ ಈಗ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶೀಘ್ರದಲ್ಲೇ ಆರಂಭ..!ತಿಳಿಯಲು ಈ ಲೇಖನಓದಿ…

    ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಲೇ ಇದೆ. ಈ ನಡುವೆ ಹೊಸ ಹೊಸ ಸಾರಿಗೆ ವ್ಯವಸ್ಥೆಗಳನ್ನು ಪರಿಚಯಿಸಿದ್ರು ಟ್ರಾಫಿಕ್ ಸಮಸ್ಯೆ ಮಾತ್ರ ಯಾವುದೇ ಕಾರಣಕ್ಕೂ ಕಡಿಮೆಯಾಗುತ್ತಿಲ್ಲ.

  • ಜ್ಯೋತಿಷ್ಯ

    ರಾಘವೇಂದ್ರ ಸ್ವಾಮಿಯನ್ನು ನೆನೆಯುತ್ತಾ ಈ ದಿನದ ನಿಮ್ಮ ರಾಶಿಯಲ್ಲೇನಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(11 ಏಪ್ರಿಲ್, 2019) ನೀವು ಜೀವನವನ್ನು ಸಂತೋಷದಿಂದ ಅನುಭವಿಸಲು ಸಿದ್ಧವಾಗುತ್ತಿದ್ದ ಹಾಗೆ ನಿಮಗೆ ಸಂತೋಷ ಹಾಗೂ ಆನಂದ. ಇಂದು…