ಸುದ್ದಿ

ಗ್ರಾಹಕರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ನೀಡಿದ ಜಿಯೋ..!

41

ಚಾಲನೆಗೆ ಬಂದ ಕೆಲವೇ ತಿಂಗಳುಗಳಲ್ಲಿ ಆಕರ್ಷಕ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆದ ಜಿಯೋ ಇದೀಗ ತನ್ನ ಹೊರೆಯನ್ನ ತಗ್ಗಿಸಲು ಗ್ರಾಹಕರಿಗೆ ಶಾಕ್‌ ಕೊಡಲು ರೆಡಿಯಾಗಿದೆ. ಈಗಾಗಲೇ ದೇಶದ ಬಹುದೊಡ್ಡ ಟೆಲಿಕಾಂ ಸಂಸ್ಥೆಗಳಾದ ಏರ್‌ಟೆಲ್, ವೋಡಾಪೋನ್,ಐಡಿಯಾ ಬಾಕಿ ಮೊತ್ತವನ್ನು ಹಿಂದಿರುಗಿಸಲು ಗ್ರಾಹಕರಿಗೆ ಬರೆ ಎಳೆಯಲು ಮುಂದಾಗಿವೆ.

ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಹೊಂದಾಣಿಕೆಯ ಒಟ್ಟು ಆದಾಯ ಕುರಿತಾಗಿ ಏರ್‌ಟೆಲ್ ವೊಡಾಫೋನ್-ಐಡಿಯಾ ಸಂಸ್ಥೆಗಳು ಒಟ್ಟಾರೆ 92,000 ಕೋಟಿ ರುಪಾಯಿಯಷ್ಟು ಬಾಕಿ ಮೊತ್ತ ಹಾಗೂ ಬಡ್ಡಿ ಹಣವನ್ನು ಪಾವತಿಸಬೇಕಿದೆ.

ಇದೇ ಹಾದಿಯಲ್ಲಿ ಸಾಗುವ ಯೋಜನೆ ಹಾಕಿರುವ ಜಿಯೋ, ಏರ್‌ಟೆಲ್, ವೊಡಾಫೋನ್ ಕಂಪನಿಗಳು ಕರೆ ಹಾಗೂ ಡೇಟಾ ಬಳಕೆಗೆ ಹೊಸ ದರ ಘೋಷಣೆ ಬಳಿಕವಷ್ಟೇ ಜಿಯೋ ಕೂಡ ದರ ಏರಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ. ಮುಂದಿನ ಕೆಲವು ವಾರಗಳಲ್ಲಿ ದರ ಏರಿಕೆ ಖಚಿತ ಎಂದು ಜಿಯೋ ಕಂಪನಿ ಹೇಳಿದೆ.

ಈಗಾಗಲೇ ಸಂಪೂರ್ಣ ಉಚಿತವಿದ್ದ ವಾಯ್ಸ್ ಕರೆಗಳಿಗೆ ಅಕ್ಟೋಬರ್‌ನಿಂದ ನಿಮಿಷಕ್ಕೆ 6 ಪೈಸೆಯಂತೆ ಶುಲ್ಕ ಅನ್ವಯವಾಗಿದೆ. ಜಿಯೋ ಹೊರತುಪಡಿಸಿ ಬೇರೆ ನೆಟ್‌ವರ್ಕ್‌ಗೆ ಕರೆ ಮಾಡಿದರೆ ಪ್ರತಿ ನಿಮಿಷಕ್ಕೆ 6 ಪೈಸೆ ದರ ಪಾವತಿಸಬೇಕಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ