ಸುದ್ದಿ

ಸಿನಿಮಾಗೆ ಎಂಟ್ರಿ ಕೊಟ್ಟ ಐ.ಪಿ.ಎಸ್. ಅಣ್ಣಾಮಲೈ. ಮೊದಲ ಚಿತ್ರಕ್ಕೆ ಅಣ್ಣಾಮಲೈ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ.

98

ಅಣ್ಣಾಮಲೈ ಅವರು ಅರಬ್ಬಿ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದ್ದು, ಈ ಸಿನಿಮಾ ಕೆನಡಾ ಮತ್ತು ಜರ್ಮನಿಯಲ್ಲಿ ನಡೆದ ಪ್ಯಾರಾ ಈಜು ಸ್ಪರ್ಧೆಯಲ್ಲಿ ಚಿನ್ನ ಹಾಗೂ ಕಂಚು ಗೆದ್ದು ಭಾರತಕ್ಕೆ ಕೀರ್ತಿಯನ್ನು ತಂದು ಕೊಟ್ಟಂತಹ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ, ಭಾರತದ ಹೆಮ್ಮೆ ಎನಿಸಿರುವ ಪ್ಯಾರಾ ಈಜುಪಟು ಕೆ.ಎಸ್.ವಿಶ್ವಾಸ್ ಅವರ ಜೀವನಾಧಾರಿತ ಸಿನಿಮಾ ಆಗಿದೆ. ಸಣ್ಣ ವಯಸ್ಸಿನಲ್ಲೇ ವಿದ್ಯುತ್ ಅವಘಡದಿಂದ ತನ್ನ ಕೈಗಳನ್ನು ಕಳೆದುಕೊಂಡರೂ, ಗುರಿ ಸಾಧನೆಯ ಛಲ ಬಿಡದೆ ಸಾಧಕೆನಾಗಿ ಮೆರದ ವಿಶ್ವಾಸ್ ಅವರ ಜೀವನಾಧಾರಿತ ಸಿನಿಮಾ ಅರಬ್ಬಿ ಮೂಲಕ ಅಣ್ಣಾಮಲೈ ಚಿತ್ರ ರಂಗ ಪ್ರವೇಶ ಮಾಡಲಿದ್ದಾರೆ ಎನ್ನಲಾಗಿದೆ.

ಕರ್ನಾಟಕದ ಸಿಂಗಂ ಎಂಬ ಹೆಸರಿನಿಂದ ಜನಪ್ರಿಯರಾಗಿದ್ದ ದಕ್ಷ ಐ.ಪಿ.ಎಸ್. ಅಧಿಕಾರಿ ಅಣ್ಣಾಮಲೈ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಅದೊಂದು ದೊಡ್ಡ ಶಾಕ್ ಎಂದೇ ಹೇಳಬಹುದು. ಆದರೆ ತಮ್ಮ ಕುಟುಂಬಕ್ಕೆ ಸಮಯ ನೀಡಬೇಕು, ಸಮಾಜ ಸೇವಾ ಕಾರ್ಯಗಳನ್ನು ಮಾಡಬೇಕೆಂಬ ಸದುದ್ದೇಶದಿಂದ ಅಣ್ಣಾ ಮಲೈ ಅವರು ರಾಜೀನಾಮೆ ನೀಡಿ ತಮ್ಮ ಊರಿಗೆ ಮರಳಿದ್ದರು. ಇದಾದ ನಂತರ ಅಣ್ಣಾಮಲೈ ಅವರು ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ ಕೂಡಾ ಹರಿದಾಡಿತ್ತು. ಆದರೆ ಇದೀಗ ಅಣ್ಣಾಮಲೈ ಅವರು ಚಿತ್ರರಂಗಕ್ಕೆ ಪ್ರವೇಶ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಸಿನಿಮಾದಲ್ಲಿ ಅಣ್ಣಾಮಲೈ ಅವರು ವಿಶ್ವಾಸ್ ಅವರ ಕೋಚ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅಲ್ಲದೆ ವಿಶ್ವಾಸ್ ಪಾತ್ರದಲ್ಲಿ ಸ್ವತಃ ವಿಶ್ವಾಸ್ ಅವರೇ ನಟಿಸುತ್ತಿದ್ದಾರೆ. ಇನ್ನು ಈ ಸಿನಿಮಾಕ್ಕಾಗಿ ಅಣ್ಣಾಮಲೈ ಅವರು ಪಡೆದ ಸಂಭಾವನೆ ಎಷ್ಟು ಎಂಬುದು ಮತ್ತಷ್ಟು ಆಸಕ್ತಿಕರವಾಗಿದೆ. ಏಕೆಂದರೆ ಅವರು ಈ ಸಿನಿಮಾದ ತಮ್ಮ ಪಾತ್ರಕ್ಕಾಗಿ 1 ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ಅಣ್ಣಾಮಲೈ ಅವರು ಸಿನಿಮಾದಲ್ಲಿ ನಟಿಸುವ ಸುದ್ದಿ, ಅವರ ಅಭಿಮಾನಿಗಳಲ್ಲಿ ಕುತೂಹಲವನ್ನು ಮೂಡಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ